Darshan: ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ನಟನೆಯ ಸಿನಿಮಾ ಡೆವಿಲ್. ಮಿಲನ ಪ್ರಕಾಶ್ ನಿರ್ದೇಶನಲ್ಲಿ ಮೂಡಿ ಬರ್ತಿರುವ ಈ ಸಿನಿಮಾ ಮೇಲೆ ದಾಸನ ಭಕ್ತಗಣವೂ ಇನ್ನಿಲ್ಲದೆ ನಿರೀಕ್ಷೆ ಇಟ್ಟುಕೊಂಡಿದೆ. ಮೊನ್ನೆ ಮೊನ್ನೆಯಷ್ಟೇ ಸಿನಿಮಾ ಮೇಕಿಂಗ್ ಝಲಕ್ ತೋರಿಸಿ ಬಝ್ ಕ್ರಿಯೇಟ್ ಮಾಡಿದ್ದ ಚಿತ್ರತಂಡ ಇದೀಗ ಚಿತ್ರದ ನಾಯಕಿಯನ್ನು ಪರಿಚಯಿಸಿದೆ.
ಡೆವಿಲ್(Devil) ಸಿನಿಮಾ ಆರಂಭವಾದಗಿಂದಲೂ ಚಿತ್ರಕ್ಕ ನಾಯಕಿ ಯಾರು ಅನ್ನೋದು ಎಲ್ಲರ ಪ್ರಶ್ನೆಯಾಗಿತ್ತು. ಆ ಪ್ರಶ್ನೆಗೀಗ ಉತ್ತರ ಸಿಕ್ಕಿದೆ. ಚಿತ್ರತಂಡ ಕೊನೆಗೂ ನಾಯಕಿಯನ್ನ ಪರಿಚಯಿಸಿದೆ. ಕೇವಲ ಪರಿಚಯಿಸಿಲ್ಲ ಸ್ಪೆಷಲ್ ಸಾಲುಗಳನ್ನು ಬರೆದು ಆಹ್ವಾನ ಕೋರಿದೆ. ಅಂದ್ಹಾಗೆ ಡೆವಿಲ್‌ನಲ್ಲಿ ದರ್ಶನ್ ಜೋಡಿ ಆಗ್ತಿರುವ ನಟಿ ರಚನಾ ರೈ(Rachana Rai). ನೆಲದ ಪ್ರತಿಭೆಗೆ ಮನ್ನಣೆ, ಶುದ್ಧ ಕೌಶಲ್ಯಕ್ಕಾಗಿ ಗುರುತಿಸಲಾಗಿದೆ ಎಂದು ಬರೆದು ರಚನಾ ರೈರನ್ನು ಆಹ್ವಾನಿಸಿದೆ ಚಿತ್ರತಂಡ. ನಾಯಕಿ ಹೆಸರು ಅನೌನ್ಸ್ ಆಗುತ್ತಿದ್ದಂತೆ ಈಕೆ ಯಾರೂ ಎಂದು ಮಾಹಿತಿ ಕಲೆ ಹಾಕಲು ಆರಂಭಿಸಿದ್ದಾರೆ ಮಂದಿ.
ರಚನಾ ರೈ(Rachana Rai) ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿರುವ ಪ್ರತಿಭೆ. ತುಳು ಸಿನಿಮಾಗಳಲ್ಲೂ ಈಕೆ ಮಿಂಚಿದ್ದಾರೆ. ಪುತ್ತೂರು ಮೂಲದವರಾದ ಇವರು ಪತ್ರಿಕೋಧ್ಯಮ ಪದವಿ ಪಡೆದುಕೊಂಡಿದ್ದಾರೆ. ಬ್ಯಾಡ್ಮಿಂಡನ್ ಪ್ಲೇಯರ್ ಕೂಡ ಹೌದು. ಮಾಡೆಲಿಂಗ್ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟಿರುವ ಈಕೆ ಡೆವಿಲ್ ಅಖಾಡಕ್ಕೆ ಎಂಟ್ರಿ ಕೊಟ್ಟು ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ.
ಯಾವುದೋ ಸ್ಟಾರ್ ನಟಿ ಬರ್ತಾರೆ ಎಂಬ ನಿರೀಕ್ಷೆಗೆ ರಚನಾ ರೈ ಎಂಟ್ರಿ ಫುಲ್ ಸ್ಟಾಪ್ ಇಟ್ಟಿದೆ. ಕನ್ನಡಿಗರಿಗೆ ಮೊದಲ ಆಧ್ಯತೆ ಎನ್ನುವ ದರ್ಶನ್(Darshan) ಮಾತುಗಳು ಈ ಸಿನಿಮಾದಲ್ಲೂ ಪ್ರೂವ್ ಆಗಿದೆ. ಡೆವಿಲ್ ಎರಡನೇ ಹಂತ ಚಿತ್ರೀಕರಣ ಆರಂಭವಾಗಬೇಕಿದ್ದು, ಸದ್ಯದಲ್ಲೇ ದರ್ಶನ್ ಹಾಗೂ ನಾಯಕಿ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.