Ranbir Kapoor: ಬಾಲಿವುಡ್ ಸ್ಟಾರ್ ನಟ, ಕಪೂರ್ ಕುಟುಂಬದ ರಿಚ್ ಬಾಯ್ ರಣಬೀರ್ ಕಪೂರ್(Ranbir Kapoor). ʻಅನಿಮಲ್ʼ ಸಿನಿಮಾದ ಸಕ್ಸಸ್ ಖುಷಿಯಲ್ಲಿ ತೇಲುತ್ತಿರುವ ರಣಬೀರ್ ಪತ್ನಿ ಆಲಿಯಾ, ಮಗಳು ರಾಹಾ ಕಪೂರ್(Raha Kapoor) ಜೊತೆ ಜಾಲಿ ಮೂಡ್‌ನಲ್ಲಿದ್ದಾರೆ. ಇದೀಗ ಬಾಲಿವುಡ್ ಅಂಗಳದಲ್ಲಿ ಹೊಸ ಸುದ್ದಿ ಪಸರ್ ಆಗಿದ್ದು, ರಾಹಾ ಕಪೂರ್(Raha Kapoor) ಬಿಟೌನ್ ಅಂಗಳದ ರಿಚೆಸ್ಟ್ ಬೇಬಿ ಎನ್ನಲಾಗ್ತಿದೆ. ಇದಕ್ಕೆ ಕಾರಣ ರಣಬೀರ್ ಮಗಳಿಗಾಗಿ ನೀಡ್ತಿರೋ ವೆರಿ ಎಕ್ಸ್‌ಪೆನ್ಸೀವ್ ಗಿಫ್ಟ್.
ಮುಂಬೈನಾ ಬಾಂದ್ರಾದ ಹೃದಯ ಭಾಗದಲ್ಲಿ ದುಬಾರಿ ವೆಚ್ಚದ ಬಂಗಲೆಯನ್ನು ನಿರ್ಮಿಸುತ್ತಿದ್ದಾರೆ ರಣಬೀರ್ ಕಪೂರ್(Ranbir Kapoor). ನಿರ್ಮಾಣ ಹಂತದ ಬಂಗಲೆಯಲ್ಲಿ ರಣಬೀರ್, ಆಲಿಯಾ(Alia Bhat), ನೀತು ಕಪೂರ್(Neethu Kapoor) ರಾಹಾ ಕಪೂರ್ ಜೊತೆ ಕಾಣಿಸಿಕೊಂಡಿದ್ದಾರೆ. ಸುಮಾರು 250 ಕೋಟಿ ವೆಚ್ಚದ ಈ ದುಬಾರಿ ಬಂಗಲೆಗೆ ಮಗಳು `ರಾಹಾ’ ಹೆಸರು ಇಡುವುದರ ಜೊತೆಗೆ ರಾಹಾ(Raha) ಹೆಸರಲ್ಲೇ ಈ ಐಶಾರಾಮಿ ಬಂಗಲೆ ನಿರ್ಮಾಣ ಮಾಡುತ್ತಿದ್ದಾರೆ ರಣಬೀರ್- ಆಲಿಯಾ.
ಅತ್ಯಂತ ದುಬಾರಿ ಬೆಲೆಯ ಸೆಲೆಬ್ರಿಟಿ ಬಂಗಲೆ ಇದಾಗಿದ್ದು, ಸದ್ಯದ ಮಾಹಿತಿ ಪ್ರಕಾರ ಇದರ ದುಬಾರಿತನ ಶಾರೂಕ್ ಮನ್ನತ್(Mannat), ಬಿಗ್ ಬಿ ಜಲ್ಸಾ(Jalsa)ಗಿಂತ ಹೆಚ್ಚಿದೆ. ಇಂತಹ ಭವ್ಯ ಬಂಗಲೆಯನ್ನು ರಣಬೀರ್(Ranbir)- ಆಲಿಯಾ(Alia) ತಮ್ಮ ಒಂದು ವರ್ಷದ ಮುದ್ದು ಮಗುವಿಗೆ ನೀಡುತ್ತಿದ್ದು, ಈ ಮೂಲಕ ಬಿಟೌನ್ ಅಂಗಳದ ಅತ್ಯಂತ ಕಿರಿಯ ಹಾಗೂ ಅತ್ಯಂತ ಶ್ರೀಮಂತ ಮಗು ಎಂಬ ಕೀರ್ತಿ ತನ್ನದಾಗಿಸಿಕೊಂಡಿದ್ದಾಳೆ ರಾಹಾ ಕಪೂರ್.