Ramayana: ‘ರಾಮಾಯಣ’(Ramayana) ಬಿಟೌನ್ ಅಂಗಳದ ಬಹು ನಿರೀಕ್ಷಿತ ಸಿನಿಮಾ. ಎಲ್ಲೇ ಹೋದ್ರು ರಾಮಾಯಣ ಸಿನಿಮಾದ್ದೇ ಸುದ್ದಿ, ದಿನಕ್ಕೊಂದು ತರಹೇವಾರಿ ಸುದ್ದಿಗಳು ಈ ಸಿನಿಮಾದ ಸುತ್ತ ತಳುಕು ಹಾಕಿಕೊಂಡಿರುತ್ತೆ. ಇದೀಗ ಈ ಚಿತ್ರಕ್ಕೆ ಹಾಲಿವುಡ್ ಸಂಗೀತ ನಿರ್ದೇಶಕರು ಎಂಟ್ರಿ ಕೊಡ್ತಾರೆ ಎಂಬ ಪುಕಾರು ಎದ್ದಿದೆ.
‘ರಾಮಾಯಣ’(Ramayana) ಬಿಗ್ ಬಜೆಟ್ನಲ್ಲಿ ನಿರ್ಮಾಣವಾಗ್ತಿರೋ ಸಿನಿಮಾ. ಈ ಚಿತ್ರದ ಸ್ಟಾರ್ ಕಾಸ್ಟ್ ಕೂಡ ಸೂಪರ್ ಸ್ಟಾರ್ಗಳಿಂದ ಕೂಡಿದೆ. ರಣಬೀರ್ ಕಪೂರ್(Ranbir Kapoor) ಚಿತ್ರದಲ್ಲಿ ರಾಮನ ಅವತಾರ ತಾಳಲಿದ್ದು, ಸೌತ್ ಸಿನಿ ದುನಿಯಾದ ಸೆನ್ಸೇಷನ್ ಸ್ಟಾರ್ಗಳೆಲ್ಲ ಈ ಸಿನಿಮಾದ ಭಾಗವಾಗಲಿದ್ದಾರೆ ಎಂಬ ಸುದ್ದಿಯಿದೆ. ಭಾರತೀಯ ಸಂಗೀತ ಮಾಂತ್ರಿಕ ಎ. ಆರ್. ರೆಹಮಾನ್(A.R.Rahman) ಈಗಾಗಲೇ ಈ ಸಿನಿಮಾ ತಂಡ ಸೇರಿಕೊಂಡಿದ್ದಾರೆ. ಇದೀಗ ಹಾಲಿವುಡ್ ಸಂಗೀತ ದಂತಕಥೆ, ಎರಡು ಆಸ್ಕರ್ ಅವಾರ್ಡ್ಗೆ ಮುತ್ತಿಕ್ಕಿರುವ ಹ್ಯಾನ್ಸ್ ಝಿಮ್ಮರ್(Hans Zimmer) ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗ್ತಿದೆ.
‘ದಿ ಲಯನ್ ಕಿಂಗ್’, ‘ಇಂಟರ್ಸ್ಟೆಲ್ಲಾರ್’, ‘ಡ್ಯೂನ್’ ಸಿನಿಮಾಗಳ ಖ್ಯಾತಿಯ ಹ್ಯಾನ್ಸ್ ಝಿಮ್ಮರ್(Hans Zimmer) ತಮ್ಮ ಅದ್ಭುತ ಸಂಗೀತದಿಂದ ಅಪ್ರತಿಮ ಖ್ಯಾತಿ ಗಳಿಸಿದವರು. ಒಂದುವೇಳೆ ರೆಹಮಾನ್ ಹಾಗೂ ಹ್ಯಾನ್ಸ್ ಝಿಮ್ಮರ್ ಕಾಂಬಿನೇಶನ್ ಒಂದಾದ್ರೆ ‘ರಾಮಾಯಣ'(Ramayana) ಮ್ಯೂಸಿಕ್ ಅಧ್ಬುತವನ್ನೇ ಸೃಷ್ಟಿಸಲಿದೆ ಅನ್ನೋದು ಸಿನಿ ಪಂಡಿತರ ಅಭಿಪ್ರಾಯ.