ದೃಶ್ಯಬ್ರಹ್ಮ ಎಸ್. ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ (RRR) ಸಿನಿಮಾ ರಿಲೀಸ್ ಆಗಿ ಎರಡು ವರ್ಷವೇ ಕಳೀತು. ಆದರೆ, ಆರ್ಆರ್ಆರ್(RRR) ಚಿತ್ರದ ಕ್ರೇಜ್ ಮಾತ್ರ ಇನ್ನೂ ಕಮ್ಮಿಯಾಗ್ತಿಲ್ಲ. ಇದಕ್ಕೆ ತಾಜಾ ಸಾಕ್ಷಿ ಜಪಾನ್ ಅಂಗಳದಲ್ಲಿ ನಡೆದ ಆರ್ ಆರ್ ಆರ್ ಸಿನಿಮಾ ಸ್ಕ್ರೀನಿಂಗ್. ಯಸ್, ಜಪಾನ್ ನಲ್ಲಿ ತ್ರಿಬಲ್ ಆರ್ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗ್ತಿದೆ. ಬಿಗ್ ಸ್ಕ್ರೀನ್ ಮೇಲೆ ಫ್ರೀಡಂ ಫೈಟರ್ಗಳಾದ ಅಲ್ಲೂರಿ ಸೀತರಾಮ್ ಹಾಗೂ ಕೊಮರಮ್ ಭೀಮ್ ಕಥೆ ನೋಡಿ ಜಪಾನಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಅಲ್ಲಿನ ಜನರು ಆರ್ ಆರ್ ಆರ್(RRR) ಸಿನಿಮಾದ ಮೇಲೆ ತೋರಿಸ್ತಿರೋ ಪ್ರೀತಿ ಕಂಡು ಜಕ್ಕಣ್ಣ ಜಪಾನ್ಗೆ ಹಾರಿದ್ದಾರೆ. ಅಲ್ಲಿನ ಸಿನಿಮಾ ಅಭಿಮಾನಿಗಳ ಜೊತೆ ಸಂವಾದ ನಡೆಸಿದ್ದಾರೆ. ಆರ್ ಆರ್ ಆರ್ ಸಿನಿಮಾ ಬಗ್ಗೆ ಹಲವು ಇಂಟ್ರೆಸ್ಟಿಂಗ್ ವಿಷ್ಯಗಳನ್ನು ರಿವೀಲ್ ಮಾಡಿರುವ ಜಕ್ಕಣ್ಣ(S.S.Rajamouli)ತಮ್ಮ ಮುಂದಿನ ಪ್ರಾಜೆಕ್ಟ್ ಟೇಕಾಫ್ ಆಗುವ ಮ್ಯಾಟರ್ ಹಂಚಿಕೊಂಡಿದ್ದಾರೆ.
ನಿಮಗೀಗಾಗಲೇ ಗೊತ್ತಿರುವ ಹಾಗೇ ಜಕ್ಕಣ್ಣ (S.S.Rajamouli) ನೆಕ್ಸ್ಟ್ ಆಕ್ಷನ್ ಕಟ್ ಹೇಳ್ತಿರೋದು ಪ್ರಿನ್ಸ್ ಮಹೇಶ್ ಬಾಬುಗೆ.(Maheshbabu) ಫಸ್ಟ್ ಟೈಮ್ ಇಬ್ಬರು ಕೈ ಜೋಡಿಸಿದ್ದು ಮೌಳಿ ಹಾಗೂ ಮಹರ್ಷಿ ಜುಗಲ್ಬಂಧಿಯ ಸಿನಿಮಾ ಮೇಲೆ ನಿರೀಕ್ಷೆ ನೂರೆಂಟಿದೆ. ಅದರಲ್ಲೂ, ಆರ್ ಆರ್ ಆರ್ ಸಿನಿಮಾಗೆ ಆಸ್ಕರ್ ಅವಾರ್ಡ್ ಸಿಕ್ಕ ಮೇಲೆ ಭಾರತೀಯ ಚಿತ್ರರಂಗ ಮಾತ್ರವಲ್ಲ ವಿಶ್ವ ಸಿನಿದುನಿಯಾವೇ ದೃಶ್ಯಬ್ರಹ್ಮನ ಮುಂದಿನ ಸಿನಿಮಾ ಮೇಲೆ ಕಣ್ಣಿಟ್ಟಿದೆ. ಅಚ್ಚರಿ ಅಂದರೆ ಇಲ್ಲಿತನಕ ಮುಂದಿನ ಸಿನಿಮಾದ ಬಗ್ಗೆ ತುಟಿಕ್ ಪಿಟಿಕ್ ಎನ್ನದ ಮೌಳಿ ಸಾಹೇಬ್ರು, ಜಪಾನ್ ಅಂಗಳದಲ್ಲಿ ತಮ್ಮ ಅಪ್ಕಮ್ಮಿಂಗ್ ಚಿತ್ರದ ಕುರಿತು ಬಿಗ್ ಅಪ್ಡೇಟ್ ನೀಡಿದ್ದಾರೆ.
ಹೌದು, ಜಪಾನ್ ಆಡಿಯನ್ಸ್ ಮುಂದೆ ಆರ್ ಆರ್ ಆರ್ ಸಾರಥಿ ಪ್ರಿನ್ಸ್ (Maheshbabu) ಜೊತೆಗಿನ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ವರ್ಕ್ ಮುಗಿದಿದೆ. ಪ್ರಿಪ್ರೊಡಕ್ಷನ್ ಕೆಲಸಕ್ಕೆ ಕಿಕ್ಸ್ಟಾರ್ಟ್ ಕೊಟ್ಟಿದ್ದೇವೆ. ಸಿನಿಮಾದ ಪಾತ್ರವರ್ಗ ಇನ್ನೂ ಫೈನಲ್ ಆಗಿಲ್ಲ. ಆದ್ರೆ ನಾಯಕ ಯಾರೆಂಬುದು ಅಂತಿಮವಾಗಿದೆ. ಚಿತ್ರದ ನಾಯಕನ ಹೆಸರು ಮಹೇಶ್ ಬಾಬು (Maheshbabu). ತೆಲುಗು ನಟ. ಇಲ್ಲಿ ಬಹಳ ಜನಕ್ಕೆ ಆತ ಗೊತ್ತಿರಬಹುದು. ಆತ ಬಹಳ ಹ್ಯಾಂಡ್ಸಮ್. ಆದಷ್ಟು ಬೇಗ ನಾವು ಸಿನಿಮಾ ಮಾಡಿ ಮುಗಿಸುತ್ತೇವೆ. ಸಿನಿಮಾ ಬಿಡುಗಡೆ ಸಮಯದಲ್ಲಿ ಆತನನ್ನು ಇಲ್ಲಿಗೆ ಕರೆತಂದು ನಿಮಗೆ ಪರಿಚಯಿಸುತ್ತೇನೆ ಎಂದಿದ್ದಾರೆ.
SSR about #SSMB29
We've finished writing and are now in pre-production.
Only the, protagonist SuperStar @urstrulyMahesh , is confirmed and he's incredibly handsome.
Hoping to expedite the filming process and have him join us for promotion during the release #MBSSR pic.twitter.com/JZAx3oP6cu
— Mahesh Babu Trends ™ (@MaheshFanTrends) March 19, 2024
ಇತ್ತೀಚೆಗೆ ಇವರಿಬ್ಬರ ಕಾಂಬಿನೇಷನ್ನಲ್ಲಿ ಬರ್ತಿರೋ ಸಿನಿಮಾದ ಟೈಟಲ್ ಬಗ್ಗೆ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿತ್ತು. ಮಹರಾಜ್, ಚಕ್ರವರ್ತಿ ಈ ಎರಡರಲ್ಲಿ ಒಂದು ಟೈಟಲ್ ಫಿಕ್ಸಾಗೋ ಸಾಧ್ಯತೆಯಿದೆ ಎನ್ನಲಾಗಿತ್ತು. ಈ ಬಗ್ಗೆ ಮೌಳಿಗಾರು ಜಪಾನ್ನಲ್ಲಿ ಮಾತನಾಡಿಲ್ಲ. ಆದರೆ. ಟಿಟೌನ್ ಶ್ರೀಮಂತುಡು ಉರುಫ್ ಮಹೇಶ್ಬಾಬುಗೆ(Maheshbabu) ಮಹರಾಜ್ ಇಲ್ಲವೇ ಚಕ್ರವರ್ತಿ ಶೀರ್ಷಿಕೆಗಳು ಸ್ಯೂಟ್ ಆಗುತ್ತವೆ. ಅಚ್ಚರಿ ಅಂದರೆ ಹಿಂದ್ಯಾರು ತೋರಿಸಿರದ ಲೆವೆಲ್ಗೆ ಮಹರ್ಷಿನಾ ತೋರಿಸಬೇಕು ಅಂತ ದಿ ಗ್ರೇಟ್ ವಿಷನರಿ ಡೈರೆಕ್ಟರ್ ಎಸ್ ಎಸ್ ರಾಜಮೌಳಿ( ಹೊರಟು ನಿಂತಿದ್ದಾರೆ. ಅದಕ್ಕಾಗಿ 1000 ಕೋಟಿ ಬಂಡವಾಳ ಹೂಡಿಸುತ್ತಿದ್ದಾರಂತೆ. ಇಲ್ಲಿವರೆಗೂ ಇಷ್ಟೊಂದು ದುಬಾರಿ ಬಜೆಟ್ನಲ್ಲಿ ಯಾವೊಂದು ಇಂಡಿಯನ್ ಸಿನಿಮಾವೂ ನಿರ್ಮಾಣಗೊಂಡಿಲ್ಲ. ಇದೇ ಮೊದಲ ಭಾರಿಗೆ ಒಂದು ಸಾವಿರ ಕೋಟಿ ವೆಚ್ಚದಲ್ಲಿ ಮೌಳಿ ಹಾಗೂ ಮಹರ್ಷಿ ಜುಗಲ್ ಬಂದಿ ಚಿತ್ರ ತಯಾರಾಗ್ತಿದೆ.
ಅಂದ್ಹಾಗೇ, ಈ ಚಿತ್ರಕ್ಕೆ ಕಥೆ ಬರೆದಿರೋದು ಹೆಸರಾಂತ ಬರಹಗಾರರು ಹಾಗೂ ಮೌಳಿಯವರ ತಂದೆಯವರಾದ ವಿಜಯೇಂದ್ರ ಪ್ರಸಾದ್ (V. Vijayendra Prasad) ಅವರು. ಯಸ್, ಈಗಾಗಲೇ ಮಗನ ಸಿನಿಮಾಗಳಿಗೆ ಕಥೆ ಬರೆದುಕೊಟ್ಟು ಇಡೀ ಜಗತ್ತೇ ಹಿಂತಿರುಗಿ ನೋಡುವಂತೆ ಮಾಡಿರೋ ಮೌಳಿ ಫಾದರ್ ಈಗ ಮಹರ್ಷಿ ಸಿನಿಮಾಗೂ ಕಥೆ ಕೆತ್ತಿಕೊಟ್ಟಿದ್ದಾರೆ. ಆಫ್ರಿಕನ್ ಜಂಗಲ್ ಬ್ಯಾಕ್ಡ್ರಾಪ್ನಲ್ಲಿ ಸಿನಿಮಾ ಮೂಡಿಬರಲಿದ್ದು, ಇಂಡಿಯನ್ ಮೈಥಾಲಾಜಿನಾ ಬ್ಲೆಂಡ್ ಮಾಡಲಿದ್ದಾರಂತೆ. ಗ್ಲೋಬಲ್ ಟೆಕ್ನಾಲಜಿನ ಬಳಸಿಕೊಂಡು ಇಡೀ ಜಗತ್ತು ಬೆರಗುಗಣ್ಣಿನಿಂದ ನೋಡುವಂತಹ ಸಿನ್ಮಾ ಕಟ್ಟಿಕೊಡುವುದಕ್ಕೆ ಬಾಹುಬಲಿ ಸಾರಥಿ ಸಜ್ಜಾಗಿದ್ದಾರಂತೆ. ಹಿಂದ್ಯಾರು ಹೇಳಿರದ ಶೈಲಿಯಲ್ಲಿ ಸ್ಟೋರಿ ಟೆಲ್ಲಿಂಗ್ ಇರಲಿದ್ದು, ಈಗಾಗಲೇ ಪ್ರಿನ್ಸ್ ಜರ್ಮನಿಯಲ್ಲಿ ಬೀಡುಬಿಟ್ಟು ಪಾತ್ರಕ್ಕೋಸ್ಕರ ತಯ್ಯಾರಿ ನಡೆಸಿದ್ದಾರಂತೆ. ಒಟ್ನಲ್ಲಿ ಶ್ರೀಮಂತುಡು (Maheshbabu) ಜೊತೆ ಆರ್ ಆರ್ ಆರ್ ಸಾರಥಿಯ (S.S.Rajamouli) ಸಿನಿಮಾ ಶ್ರೀಮಂತವಾಗಿ ಮೂಡಿಬರಲಿದ್ದು, ಸದ್ಯ `SSMB29′ ಹೆಸರಲ್ಲಿ ಕರೆಯಲಾಗ್ತಿದೆ. ಜೂನ್ನಲ್ಲಿ ಅಖಾಡಕ್ಕೆ ಇಳಿಯಲು ಚಿತ್ರತಂಡ ಸರ್ವರೀತಿಯಲ್ಲೂ ಸನ್ನದ್ದಗೊಳ್ಳುತ್ತಿದೆ.