ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಪಾಲಿಗೆ 2023 ಒಂಥರಾ ಲಕ್ಕಿ ಇಯರ್. ಯಾಕೆಂದರೆ, ಸತತ ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ ಖಾನ್ಗೆ ಈ ವರ್ಷ ‘ಪಠಾಣ್’ ಮತ್ತು ‘ಜವಾನ್’ ಸಿನಿಮಾದಿಂದ ಗೆಲುವು ಸಿಕ್ಕಿದೆ. ಇವೆರಡೂ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ 1000+ ಕೋಟಿ ರೂ. ಹಣ ಗಳಿಸಿವೆ. ಇದೇ ವರ್ಷ ಅವರು ಹ್ಯಾಟ್ರಿಕ್ ಬಾರಿಸಲು ಸಜ್ಜಾಗಿದ್ದಾರೆ. ಇದೇ ತಿಂಗಳ 21ರಂದು ಬಾದ್ ಷಾ ನಟನೆಯ ‘ಡಂಕಿ’ ತೆರೆಗೆ ಬರಲು ಸಜ್ಜಾಗಿದೆ. ವಿಶೇಷವೆಂದರೆ, ‘ಪಠಾಣ್’ & ‘ಜವಾನ್’ ಸಿನಿಮಾದಲ್ಲಿ ಭರಪೂರ ಆ್ಯಕ್ಷನ್ ಮೂಲಕ ಧಮಾಕ ಎಬ್ಬಿಸಿದ್ದ ಶಾರುಖ್ ‘ಡಂಕಿ’ ಸಿನಿಮಾದಲ್ಲಿ ಎಮೋಷನ್ ಮೂಲಕ ಮೋಡಿ ಮಾಡಲು ಬರ್ತಿದ್ದಾರೆ.
‘ಡಂಕಿ’- ಡ್ರಾಪ್ 1 ಹೆಸರಿನಲ್ಲಿ ಟೀಸರ್ ರಿಲೀಸ್ ಮಾಡಲಾಗಿತ್ತು. ಆನಂತರ ಮೊದಲ ಸಾಂಗ್ ರಿಲೀಸ್ ಆಗಿತ್ತು. ಈಗ ಎರಡನೇ ಸಾಂಗ್ ರಿಲೀಸ್ ಆಗಿದೆ. ಈ ಹಾಡಿನಲ್ಲಿ ಹೆಚ್ಚು ಎಮೋಷನ್ಸ್ಗೆ ಒತ್ತು ನೀಡಲಾಗಿದೆ. ಸ್ನೇಹ, ಪ್ರೀತಿ ಎಲ್ಲವೂ ‘ಡಂಕಿ’ ಸಿನಿಮಾದಲ್ಲಿ ಹೆಚ್ಚಾಗಿ ಇರಲಿದೆ ಎಂಬುದಕ್ಕೆ ಈ ಹಾಡು ಸಾಕ್ಷಿಯಾಗಿದೆ. `ನಿಕ್ಲೆ ಥೆ ಕಭಿ ಹಮ್ ಘರ್ ಸೆ..’ ಹಾಡಿಗೆ ಜಾವೇದ್ ಅಖ್ತರ್ ಅವರು ಸಾಹಿತ್ಯ ಬರೆದಿದ್ದು, ಪ್ರೀತಮ್ ಸಂಗೀತ ಸಂಯೋಜಿಸಿದ್ದಾರೆ. ಸೋನು ನಿಗಮ್ ಅವರ ಕಂಠಸಿರಿಯಿಂದಾಗಿ ಹಾಡಿನ ಶ್ರೀಮಂತಿಕೆ ಹೆಚ್ಚಿದೆ. ಈ ಮೆಲೋಡಿ ಸಾಂಗ್ ಭಾರೀ ಸದ್ದು ಮಾಡ್ತಿದೆ. ಇಂತಹ ಸಮಯದಲ್ಲಿ ಸಾಹಿತಿ ಜಾವೇದ್ ಇಂಟ್ರೆಸ್ಟಿಂಗ್ ವಿಷ್ಯ ರಿವೀಲ್ ಮಾಡಿದ್ದಾರೆ.
ಜಾವೇದ್ ಹಾಗೂ ಶಾರುಖ್ ಜೋಡಿಯ ಹಾಡುಗಳು ಹಿಟ್ ಲೀಸ್ಟ್ ಸೇರಿವೆ. ಬಹಳ ವರ್ಷಗಳ ನಂತ್ರ ಕಿಂಗ್ ಖಾನ್ ಚಿತ್ರಕ್ಕೆ ಜಾವೇದ್ ಸಾಹಿತ್ಯ ಬರೆದಿದ್ದಾರೆ. ಅದಕ್ಕೆ ರಾಜ್ ಕುಮಾರ್ ಹಿರಾನಿ ಕಾರಣ. ಅವ್ರು ಹಾಡು ಬರೆಯುವಂತೆ ನನ್ನ ಬಳಿಕ ಅಪ್ರೋಚ್ ಆದರು. ಮೊದಲು ಸಂಗೀತ ರಚಿಸಿ ಬಳಿಕ ಸಾಹಿತ್ಯ ಎಣೆಯಲಾಗುತ್ತದೆ. ಆದ್ರೆ ಡಂಕಿ ಸಿನಿಮಾದ ನಿಕ್ಲೆ ಥೆ ಕಭಿ ಹಮ್ ಘರ್ ಸೆ ಹಾಡಿಗೆ ಮೊದಲು ಸಾಹಿತ್ಯ ಬರೆದು ಆ ನಂತ್ರ ಮ್ಯೂಸಿಕ್ ಕಂಪೋಸ್ ಮಾಡಲಾಯಿತು. ಸಂಗೀತ ನಿರ್ದೇಶಕ ಪ್ರೀತಂ ನನ್ನ ಸಾಹಿತ್ಯಕ್ಕೆ ಸೊಗಸಾದ ಸಂಗೀತ ನೀಡಿದ್ದಾರೆ ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ.
ಶಾರುಖ್ ಖಾನ್ ಜೊತೆಗೆ ಬೊಮನ್ ಇರಾನಿ, ತಾಪ್ಸಿ ಪನ್ನು, ವಿಕ್ಕಿ ಕೌಶಲ್, ವಿಕ್ರಮ್ ಕೊಚ್ಚರ್ ಮತ್ತು ಅನಿಲ್ ಗ್ರೋವರ್ ಡಂಕಿ ಸಿನಿಮಾದ ತಾರಾಬಳಗದಲ್ಲಿದ್ದಾರೆ. JIO ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಮತ್ತು ರಾಜ್ಕುಮಾರ್ ಹಿರಾನಿ ಫಿಲ್ಮ್ಸ್ ಪ್ರಸ್ತುತಿ, ರಾಜ್ಕುಮಾರ್ ಹಿರಾನಿ ಮತ್ತು ಗೌರಿ ಖಾನ್ ನಿರ್ಮಿಸಿದ್ದಾರೆ. ಅಭಿಜತ್ ಜೋಷಿ, ರಾಜ್ಕುಮಾರ್ ಹಿರಾನಿ ಮತ್ತು ಕನಿಕಾ ಧಿಲ್ಲೋನ್ ಬರೆದಿದ್ದಾರೆ, ಡಂಕಿ ಡಿಸೆಂಬರ್ 2023 ರಲ್ಲಿ ಬಿಡುಗಡೆಯಾಗಲಿದೆ.