ಬುಧವಾರ, ಜುಲೈ 2, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

raktha chandan mafia: ರಕ್ತ ಚಂದನಕ್ಕೆ ಯಾಕಿಂಥಾ ಬೇಡಿಕೆ?

Majja Webdeskby Majja Webdesk
15/02/2025
in Majja Special
Reading Time: 1 min read
raktha chandan mafia: ರಕ್ತ ಚಂದನಕ್ಕೆ ಯಾಕಿಂಥಾ ಬೇಡಿಕೆ?

-ರಕ್ತ ಚಂದನಕ್ಕಿದೆ ಅತ್ಯದ್ಭುತ ಶಕ್ತಿ!

-ಗಗನಸಖಿಯಾಗಿದ್ದಾಕೆ ಈಗ ರಕ್ತ ಚಂದನ ಸ್ಮಗ್ಲರ್!

 

ಕರ್ನಾಟಕ, ಆಂಧ್ರಪ್ರದೇಶ, ತಮಿಳು ನಾಡು ಸೇರಿದಂತೆ ಬಹುತೇಕ ರಾಜ್ಯಗಳನ್ನು ಆವರಿಸಿಕೊಂಡಿದ್ದ ರಕ್ತಚಂದನ ಮಾಫಿಯಾ ಕಂಪಿಸಿದೆ. ಈಗೊಂದಷ್ಟು ವರ್ಷಗಳಿಂದ ರಕ್ತ ಚಂದನ ಕಳ್ಳ ಸಾಗಾಟ ದಂಧೆಯ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ. ಈ ಮಾಫಿಯಾ ಡಾನ್ ಅನ್ನಿಸಿಕೊಂಣಡಿದ್ದ ಆಂದ್ರ ಪ್ರದೇಶದ ಲಕ್ಷ್ಮಣ ಎಂಬಾತ ವಿಶ್ವದ ಗಮನ ಸೆಳೆದಿದ್ದ. ಇಂಥಾ ಸ್ಮಗ್ಲಿಂಗ್ ಮಾಫಿಯಾದ ಮುಂಚೂಣಿಯಲ್ಲಿ ಮೆರೆಯೋದೇನಿದ್ದರೂ ಗಂಡಸರೇ. ಆದರೆ ಈಗ್ಗೆ ಎಂಟು ವರ್ಷಗಳ ಹಿಂದೆ ಸಂಗೀತಾ ಎಂಬಾಕೆಯನ್ನು ಬಂಧಿಸಿದ್ದ ಪೊಲೀಸರು ಆಕೆ ಅಂತಾರಾಜ್ಯ ರಕ್ತ ಚಂದನ ಮಾಫಿಯಾ ಡಾನ್ ಅಂದಾಗ ಎಲ್ಲರೂ ಅಚ್ಚರಿಗೊಂಡಿದ್ದರು. ಈಕೆ ರಕ್ತ ಚಂದನ ಸ್ಮಗ್ಲಿಂಗ್ ಮಾಡುತ್ತಾ ಅನೇಕ ಪ್ರಕರಣಗಳಲ್ಲಿ ಅಂತಾರಾಜ್ಯ ಪೊಲೀಸರ ಕಣ್ಣಿಗೇ ಮಣ್ಣೆರಚಿ ಕೋಟಿ ಕೋಟಿ ಹಣ ಹೊಡೆದಿದ್ದ ಪ್ರಳಯಾಂತಕಿ. ಸದ್ಯ ಜೈಲಿನಲ್ಲಿರುವ ಈಕೆಯನ್ನು ಹೊರ ತರಲು ಎಲ್ಲ ರೀತಿಯಿಂದಲೂ ಪ್ರಯತ್ನ ನಡೆಯುತ್ತಿದೆ. ಈಕೆಯ ಸ್ಟೋರಿ ನಿಜಕ್ಕೂ ಇಂಟರೆಸ್ಟಿಂಗ್ ಆಗಿದೆ. ಇದರ ಸುತ್ತಾ ರಕ್ತಚಂದನವೆಂಬ ಕೆಂಪು ಚಿನ್ನದ ಬೇಡಿಕೆಯ ಕಥನವೂ ಜಾಹೀರಾಗುತ್ತೆ.

ಪ್ರಳಯಾಂತಕರು


ರಕ್ತ ಚಂದನ ದಂಧೆಯ ನಿಜವಾದ ಡಾನ್ ಆಗಿದ್ದಾತ ಲಕ್ಷ್ಮಣ್ ಬಂಧನವಾದ ನಂತರ ದಂಧೆಯನ್ನು ನಿಭಾಯಿಸುತ್ತಿದ್ದ ಸಂಗೀತಾಳನ್ನು ಕೂಡಾ ೨೦೧೬ರಲ್ಲಿ ಬಂಧಿಸಲಾಗಿತ್ತು. ಆದರೆ, ಜಾಮೀನಿನ ಮೇಲೆ ಹೊರ ಬಂದ ಸಂಗೀತಾ ನಂತರ ತಲೆ ಮರೆಸಿಕೊಂಡು ದಂಧೆಯಲ್ಲಿ ಸಕ್ರಿಯಳಾಗಿದ್ದಳು. ಅನೇಕ ಬಾರಿ ವಾರೆಂಟ್ ಜಾರಿಗೊಂಡರೂ ಕೋರ್ಟಿಗೆ ಹಾಜರಾಗಿರಲಿಲ್ಲ. ಅರ್ಧಂಬರ್ಧ ಓದಿಕೊಂಡಿದ್ದ ಸಂಗೀತಾ ನಂತರ ಹೇಗೋ ಗಗನಸಖಿಯಾಗಿದ್ದಳು. ನಂತರ ಮಾಡೆಲಿಂಗ್, ಸಿನಿಮಾ ರಂಗಕ್ಕೂ ಎಂಟ್ರಿ ಕೊಟ್ಟಳು. ಆದರೆ ಹೀಗೆ ಅಡ್ಡಾಡಿಕೊಂಡಿದ್ದ ಈಕೆ ಕೋಲ್ಕತ್ತಾದಲ್ಲಿ ಮಣಿಪುರ ಮೂಲದ ಲಕ್ಷ್ಮಣ್ ಭೇಟಿಯಾಗಿ ಕೆಟ್ಟಳು. ಈ ಲಕ್ಷ್ಮಣ್ ಆಂಧ್ರದ ಕಡಪ, ಚಿತ್ತೂರು, ಕರ್ನೂಲ್‌ಗಳಲ್ಲಿ ರಕ್ತಚಂದನ ಸ್ಮಗ್ಲಿಂಗ್ ನಡೆಸುತ್ತಿದ್ದ. ಭಾರತದ ಆರು ರಾಜ್ಯUಳಿಗೆ ಹಾಗೂ ಚೀನಾ ಹಾಗೂ ಜಪಾನ್‌ಗೆ ತನ್ನ ವಹಿವಾಟು ವಿಸ್ತರಿಸಿದ್ದ. ಇಂಥವನ ಕೈ ಹಿಡಿದು ತಾನೂ ಸ್ಮಗ್ಲಿಂಗ್‌ಗಿಳಿದಿದ್ದ ಸಂಗೀತಾ ಮೇಲೆಯೂ ಹವಾಲ ಹಣ ರವಾನೆ, ಅಕ್ರಮ ಶಸ್ತ್ರಾಸ್ತ್ರ ಬಳಕೆ ಸೇರಿದಂತೆ ಅನೇಕ ಪ್ರಕರಣಗಳು ಜಡಿದುಕೊಂಡಿವೆ. ಈಕೆಯ ವಿರುದ್ಧ ಅನೇಕ ಸಲ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು.
ಈ ಸಂಬಂಧ ಹುಡುಕಾಟ ನಡೆಸಿದ್ದ ಪೊಲೀಸರಿಗೆ ಕೊನೆಗೂ ಕೋಲ್ಕತ್ತಾದಲ್ಲಿ ಸಂಗೀತಾ ಸಿಕ್ಕಿದ್ದಾಳೆ. ಈಗ ಜಾಲದಲ್ಲಿರುವ ಇನ್ನಷ್ಟು ದೊಡ್ಡ ಮಿಕಗಳನ್ನು ಬಲೆಗೆ ಕೆಡವಿಕೊಳ್ಳಲು ಚಿತ್ತೂರು ಪೊಲೀಸರು ಸಿದ್ಧರಾಗುತ್ತಿದ್ದಾರೆ. ಆದರೆ, ಸಂಗೀತಾ ವಿಚಾರಣೆ ನಡೆಸಲು ಕೋರ್ಟ್ ಅನುಮತಿ ಸಿಕ್ಕಿಲ್ಲ. ಆದರೂ ಸಂಗೀತಾ ಚಟರ್ಜಿ ಬಂಧನದ ಮೂಲಕ ಇಡೀ ರಕ್ತಚಂದನ ಸ್ಮಗ್ಲಿಂಗ್ ನೆಟ್ವರ್ಕ ಕಡಿದು ಬೀಳುವ ಎಲ್ಲ ಲಕ್ಷಣಗಳೂ ಇವೆ. ಹೀಗೆ ಇದೀಗ ಭಾರೀ ಸುದ್ದಿಯಲ್ಲಿರೋ ಲೇಡಿ ಸ್ಮಗ್ಲರ್ ಸಂಗೀತ ಚಟರ್ಜಿ ಮೂಲತಃ ಕೋಲ್ಕತ್ತಾದ ನೇತಾಜಿನಗರದವಳು. ಆಕೆ ಪದವಿ ಮುಗಿಸಿದ ಕೂಡಲೆ ಸಣ್ಣಪುಟ್ಟ ಟಿವಿ ಜಾಹೀರಾತುಗಳಲ್ಲಿ ಅಭಿನಯಿಸಲು ನಶುರಿವಿಟ್ಟಿದ್ದಳು. ಆ ಬಳಿಕ ಗಗನಸಖಿಯಾದಳು. ಒಂದಲ್ಲ ಒಂದು ದಿನ ಬಾಲಿವುಡ್ ನಟಿಯಾಗಬೇಕೆಂಬುದು ಆಕೆಯ ಮಹಾ ಕನಸು. ಆದರೆ ಆ ಕನ್ನಸು ಭಗ್ನವಾಯಿತು. ಯಾಕೆಂದರೆ ಈ ನಡುವೆಯೇ ದಂಧೆಕೋರ ಲಕ್ಷ್ಮಣ ಈಕೆಗೆ ಪರಿಚಯವಾಗಿ ಪ್ರೇಮಾಂಕುರವೂ ಆಗಿತ್ತು. ಈ ಪರಿಚಯ ಅನೇಕ ತಿರುವುಗಳನ್ನು ಪಡೆದು ಆಕೆ ಮಾಫಿಯಾ ಡಾನ್ ಆಗಿ ಬೆಳೆದದ್ದು ನಿಜಕ್ಕೂ ಅಚ್ಚರಿಯೇ. ಕೋಲ್ಕತ್ತಾದ ನಡೆದ ಒಂದು ಪಾರ್ಟಿಯಲ್ಲಿ ರಕ್ತಚಂದನ ಸ್ಮಗ್ಲರ್ ಎಂ. ಲಕ್ಷ್ಮಣ್ ಜತೆಗೆ ಸಂಗೀತಾ ಪರಿಚಯ ಬೆಳೆಯಿತು. ಅದಾಗಲೆ ಲಕ್ಷ್ಮಣ್ ತನ್ನ ಮೊದಲ ಪತ್ನಿಯಿಂದ ದೂರವಾಗಿದ್ದ ಕಾರಣ ಸಂಗೀತಾ ಹತ್ತಿರವಾದಳು. ಆಕೆ ಸಹ ಲಕ್ಷ್ಮಣ್ ಕೆಲಸಗಳಲ್ಲಿ ಭಾಗಿಯಾದಳು. ಒಂದು ಹಂತದಲ್ಲಿ ಆತನ ಆರ್ಥಿಕ ವ್ಯವಹಾರಗಳನ್ನೆಲ್ಲಾ ಆಕೆಯೇ ನೋಡಿಕೊಳ್ಳುತ್ತಿದ್ದಳು. ಇದಕ್ಕಾಗಿ ಒಟ್ಟು ಒಂಭತ್ತು ಬ್ಯಾಂಕ್ ಖಾತೆಗಳನ್ನು ಆಕೆ ನಿರ್ವಹಿಸುತ್ತಿದ್ದಳು. ಒಂದೊಂದು ಖಾತೆಯಿಂದ ಕೋಟ್ಯಂತರ ರೂಪಾಯಿಗಳನ್ನು ಆಕೆ ವರ್ಗಾಯಿಸುತ್ತಿದ್ದಳು.

ಸ್ಮಗ್ಲಿಂಗೇ ಬದುಕು


ಆಂಧ್ರಪ್ರದೇಶದ ಜತೆಗೆ ದೇಶದ ಇತರೆ ರಾಜ್ಯಗಳಲ್ಲಿ ಇರುವ ರಕ್ತಚಂದನವನ್ನು ಸ್ಮಗ್ಲಿಂಗ್ ಮಾಡುವುದು, ವಿದೇಶಗಳಿಗೆ ಕಳುಹಿಸುವುದು, ಹಣ ಮಾಡಿಕೊಳ್ಳುವುದು… ಈ ರೀತಿ ಇತ್ತು ಅವರ ವ್ಯವಹಾರ. ಈ ಕೆಲಸದಲ್ಲಿ ಸಂಗೀತಾ ಬ್ಯಾನರ್ಜಿ ಸಾಕಷ್ಟು ಹಣ ಮಾಡಿಕೊಂಡಳು. ಈ ದಂಧೆಯಲ್ಲಿ ಸಂಗೀತ ಅದ್ಯಾವ ಪರಿ ಕೊಬ್ಬಿ ಹೋದಳೆಂದರೆ, ಈಕೆಯ ಹೆಸರಲ್ಲಿ ನೂರು ಕೋಟಿವರೆಗೂ ಆಸ್ತಿ ಇರುವುದಾಗಿ ಪೊಲೀಸರಿಗೆ ಡೌಟು ಹೊಡೆಯಿತು. ಕೋಲ್ಕತ್ತಾದಲ್ಲಿನ ನೇತಾಜಿನಗರದಲ್ಲೇ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ನಾಲಕ್ಕು ಮನೆಗಳು ಆಕೆಗಿವೆ. ಇದೆಲ್ಲದರ ನಡುವೆ ಪೊಲೀಸರು ನಡೆಸಿದ ದಾಳಿಯಲ್ಲಿ ಆಕೆ ಸಿಕ್ಕಿಬಿದ್ದಿದ್ದಳು. ಆಕೆಯ ಮನೆ, ಖಾತೆಗಳನ್ನು ಪೊಲೀಸರು ಸೀಜ್ ಮಾಡಿದ್ದರು. ಆದರೆ ಹೇಗೋ ಬೇಲ್ ಪಡೆದು ಹೊರ ಬಂದಿದ್ದ ಸಂಗೀತ ಆ ನಬಂತರವೂ ಈ ಮಾಫಿಯಾವನ್ನೇ ಮುಂದುವರೆಸಿದ್ದರ ಪರಿಣಾಮವಾಗಿ ಸರಿಯಾಗಿಯೇ ತಗುಲಿಕೊಂಡಿದ್ದಳು.
ಅಂದಹಾಗೆ, ಹೀಗೆ ತಗುಲಿಕೊಂಡಿರುವ ಸಂಗೀತ ಚಟರ್ಜಿ ಮತ್ತು ಈಗೆರಡು ವರ್ಷದ ಹಿಂದಿನಿಂದ ಜೈಲಲ್ಲಿ ಕೊಳೆಯುತ್ತಿರುವ ಆಕೆಯ ಪತಿ ಲಕ್ಷ್ಮಣನೇ ಈ ದಂಧೆಯ ಡಾನ್‌ಗಳೆಂಬಂತೆ ಬಿಂಬಿತವಾಗುತ್ತಿದೆ. ಆದರೆ ಈ ದಂಧೆಗೆ ಒರಿಜಿನಲ್ಲಿ ಡಾನ್ ಒಬ್ಬನಿದ್ದಾನೆ. ಆತ ಈಗ್ಗೆ ಮೂರು ವರ್ಷಗಳಿಂದ ಭೂಗತನಾಗಿರುವ ಆಂಧ್ರ ಪ್ರದೇಶದ ಶೋಕೀವಾಲ ಮಸ್ತಾನ್ ವಾಲಿ. ವಿಪರೀತವಾದ ಹೆಣ್ಣುಗಳ ಹುಚ್ಚಿನ ಈತ ಭಾರೀ ಹಚ್ಚಿಕೊಂಡಿದ್ದು ನಟಿ ನೀತೂ ಅಗರ್ವಾಲ್ ಎಂಬಾಕೆಯನ್ನು. ಇಂಥಾ ಹೆಣ್ಣುಗಳನ್ನು ಕೆಡವಿಕೊಳ್ಳಲು ಸುಖಾ ಸುಮ್ಮನೆ ಕೋಟಿ ಸುರಿಯಲೂ ಸಿದ್ಧವಿರುವ ಈತ ನೀತೂಗಾಗಿಯೇ `ಪ್ರೇಮ ಪ್ರಣಯಂ’ ಎಂಬ ಚಿತ್ರವನ್ನು ಹಣ ಹೂಡಿ ಮಾಡಿದ್ದ. ಕೋಟಿ ಮೊತ್ತದ ಪ್ಲಾಟು ಖರೀದಸಿಸಿ ಆಕೆಯನ್ನಿಟ್ಟಿದ್ದ. ಬಳಿಕ ಈ ನೀತೂ ಕೂಡಾ ರಕ್ತಚಂದನ ದಂಧೆಯಲ್ಲಿ ಸಕ್ರಿಯಳಾಗಿ ಬಂಧನಕ್ಕೀಡಾಗಿದ್ದಳು. ಆ ನಂತರ ಬಿಡುಗಡೆಯಾದ ಬಳಿಕ ಮಸ್ತಾನ್ ಮತ್ತು ನೀತೂ ಇಬ್ಬರೂ ಈಗ ಭೂಗತರಾಗಿದ್ದಾರೆ.

ನಿಂಬೆ ಹಣ್ಣು ಮಾರುತ್ತಿದ್ದ


ಇಂಥಾ ಮಸ್ತಾನ್‌ನದ್ದು ಕೋಟಿಗಳಿಗೆ ಲೆಕ್ಕವಿಲ್ಲದ ವ್ಯವಹಾರ. ಈತ ಭೂಗತನಾದ ಬಳಿಕ ಅಸನ್ನು ಲಕ್ಷ್ಮಣ ಮತ್ತು ಸಂಗೀತಾ ಚಟರ್ಜಿಯೇ ನಿಭಾಯಿಸುತ್ತಿದ್ದರು. ಇದೀಗ ಭೂಗತನಾಗಿದ್ದರೂ ಬಹುಕೋಟಿ ಒಡೆಯನಾಗಿರೋ ಮಸ್ತಾನ್ ಒಂದು ಕಾಲದಲ್ಲಿ ಅಬ್ಬೇಪಾರಿಯಾಗಿದ್ದವನು. ಇಂಥವನು ರಕ್ತ ಚಂದನ ದಂಧೆಯ ಡಾನ್ ಆಗಿದ್ದು ರೋಚಕವೇ… ಅಷ್ಟಕ್ಕೂ ಈತ ಒಂದು ಕಾಲದಲ್ಲಿ ಆಂಧ್ರ ಪ್ರದೇಶದ ಪಟ್ಟಣಗಳಲ್ಲಿ ತಳ್ಳು ಗಾಡಿಯಲ್ಲಿ ನಿಂಬೆಹಣ್ಣು ಮಾರುತ್ತಿದ್ದವನು. ಆ ನಂತರ ಬೇರೆ ಬೇರೆ ಭಾಗಗಳಿಂದ ನಿಂಬೆಹಣ್ಣು ಖರೀದಿಸಿ ತಂದು ಮಾರಾಟ ಮಾಡುವ ಕೆಲಸವನ್ನು ಈತ ಶುರುವಿಟ್ಟುಕೊಂಡಿದ್ದ.
ಇಂಥಾ ಮಸ್ತಾನ್ ನನಿಂಬೆ ಹಣ್ಣು ಖರೀದಿ ಮಾಡಲು ಹಳ್ಳಿಗಳಿಗೆ ಹೋಈಗುವಾಗ ಅದೊಮ್ಮೆ ತಿರುಪತಿ ಸಮೀಪದ ಕಾಡಿನಲ್ಲಿ ಈತನಿಗೆ ರಕ್ತಚಂದನ ಮರಗಳನ್ನು ಕಡಿದು ಸಾಗಾಟ ಮಾಡುವ ಗುಂಪೊಂದು ಪರಿಚಯವಾಗಿತ್ತು. ಅಸಾಗುತ್ತಲೇ ನಿಂಬೆಹಣ್ಣು ವ್ಯಾಪಾರ ಬಿಟ್ಟಿ ಈ ಮಾಫಿಯಾಕ್ಕಿಳಿದ ಮಸ್ತಾನ್ ಕೋಟಿ ಕೋಟಿ ಬಾಚಿಕೊಂಡ. ಹೀಗೆ ಯಾವ ಪರಿ ಕಾಸು ಮಾಡಿಕೊಂಡನೆಂದರೆ ಈ ಹಿಂದೆ ಕರ್ನೂಲಿನಿಂಣದ ವೈಎಸ್ಸಾರ್ ಕಾಂಗ್ರೆಸ್ ಪಕ್ಷದಿಂದ ಸಂಸದನಾಗಲು ಹೊರಟು ಗೋತಾ ಹೊಡೆದಿದ್ದ.ಈಗ ಈ ದಂಧೆಯ ಸಂಗೀತಾ ಚಟರ್ಜಿ ತಗುಲಿಕೊಂಡಿರೋದರಿಂದ ಮಸ್ತಾನ್ ಅಲಿಯ ಸುಳಿವು ಸಿಗುವುದೇನೂ ಕಜ್ಷಟವಲ್ಲ. ಆತನನ್ನು ಅಂದರ್ ಮಾಡಿದರೆ ರಕ್ತ ಚಂದನ ಮಾಫಿಯಾಕ್ಕೊಂದು ಬ್ರೇಕ್ ಹಾಕಲಾದೀತೇನೋ…

ರಕ್ತಚಂದನಕ್ಕೆ ಯಾಕಿಷ್ಟು ಬೇಡಿಕೆ?


ಅಪರೂಪದ ಸಸ್ಯವೆನಿಸಿರುವ ರಕ್ತಚಂದನದ ಮರ ಕಂಡವರು ವಿರಳ. ಚೆನ್ನಾಗಿ ಬಲಿತ ಮರದ ಕೊರಡನ್ನು ತೇದರೆ ರಕ್ತದಂತೆ ಕೆಂಪಾದ ಗಂಧ ಬರುವುದು ಇದರ ವಿಶೇಷತೆ. ವೈಜ್ಞಾನಿಕವಾಗಿ ಟೆರೋಕಾರ್ಪಸ್ ಸನ್‌ಥಾಲಿನಸ್ ವರ್ಗಕ್ಕೆ ಸೇರಿದ ಈ ಚಂದನ, ದಕ್ಷಿಣ ಭಾರತದ ಆಂಧ್ರ ಮತ್ತು ಕರ್ನಾಟಕದಲ್ಲಿ ಮಾತ್ರ ಸಿಗುತ್ತದೆ. ಭಾರತೀಯ ಮೂಲದ ಈ ಮರ ತನ್ನ ಉಡಿಯಲ್ಲಿ ಔಷಧಿಯುಕ್ತ ಅಂಶವನ್ನು ಇಟ್ಟುಕೊಂಡಿದೆ. ಈ ಮರದ ತೊಗಟೆಯನ್ನು ಸ್ವಲ್ಪ ಗೀರಿದರೆ ಕೆಂಪು ದ್ರವ ಬರುತ್ತದೆ. ಕ್ಷಣಾರ್ಧದಲ್ಲಿಯೇ ಆ ಭಾಗವೆಲ್ಲಾ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಹೀಗಾಗಿ ಇದಕ್ಕೆ ರಕ್ತಚಂದನ ಅಥವಾ ಕೆಂಪುಚಂದನ ಎಂಬ ಹೆಸರು ಬಂದಿದೆ.
ಕೆಂಪುಚಂದನದಲ್ಲಿ ಔಷಧಿ ಅಂಶ ಇರುವುದರಿಂದ ಮುಖದ ಮೊಡವೆ ನಿವಾರವಣೆಗೆ ಹಾಗೂ ಕಾಂತಿವರ್ಧಕವಾಗಿಯೂ ಬಳಸಲಾಗುತ್ತದೆ. ಮರದ ಚಕ್ಕೆಯನ್ನು ನುಣ್ಣಗೆ ಅರೆದು ಪುಡಿಯನ್ನು ಮುಖಕ್ಕೆ ಲೇಪನ ಮಾಡಿಕೊಳ್ಳುವುದರಿಂದ ಮುಖ ಕಾಂತಿಯನ್ನೂ ಹೆಚ್ಚಿಸುತ್ತದೆ. ಅಲ್ಲದೆ ಗಿಡದ ಭಾಗಗಳನ್ನು ಔಷಧ ರೂಪದಲ್ಲಿ ಸೇವಿಸುವುದರಿಂದ ಒಳ್ಳೆಯದೆಂಬ ಬಲವಾದ ನಂಬಿಕೆಯೂ ಇದೆ. ಬಾಹುಬಲಿಯ ಮಸ್ತಕಾಭಿಷೇಕದ ಸಂದರ್ಭದಲ್ಲಿ ರಕ್ತಚಂದನವನ್ನು ಕೊಡಗಳಲ್ಲಿ ಅಭಿಷೇಕ ಮಾಡಲಾಗುತ್ತದೆ. ಎಳೆಯ ಮಗುವಿನ ಮೈಗೆ ದಿನಾ ಚಂದನ ಲೇಪಿಸಿ ಬಳಿಕ ಸ್ನಾನ ಮಾಡಿಸುವ ಪದ್ಧತಿಯಿದೆ. ಇದರಿಂದ ಅನೇಕ ಚರ್ಮರೋಗಗಳು ಕಾಣೆಯಾಗಿ ಚರ್ಮ ಕಾಂತಿಯುಕ್ತವಾಗುತ್ತದೆ. ಆಯುರ್ವೇದದಲ್ಲಿ ಅದರ ಅನೇಕ ಔಷಧೋಪಯೋಗಗಳ ವಿವರಗಳಿವೆ.
ಸರಿಯಾಗಿ ಬೆಳೆದರೆ ಮರ ಬರೋಬ್ಬರಿ ಎಂಟು ಮೀಟರ್ ಎತ್ತರವಾಗುತ್ತದೆ. ಇಪ್ಪತ್ತು ವರ್ಷಗಳಲ್ಲಿ ಕಟಾವಿಗೆ ಬರುತ್ತದೆ. ಮೊದಲ ಮೂರೇ ವರ್ಷದಲ್ಲಿ ಐದು ಮೀಟರ್ ಎತ್ತರವಾಗುವ ಮರ, ಅನಂತರ ಎತ್ತರವಾಗದೆ ದಪ್ಪವಾಗುತ್ತ ಬೆಳೆಯುತ್ತದೆ. ಶ್ರೀಗಂಧಕ್ಕಿಂತ ಮೂರು ಪಟ್ಟು ಬೆಲೆ ಅಧಿಕವಿದ್ದರೂ ಸರ್ಕಾರ ಶ್ರೀಗಂಧದ ಕೃಷಿಗೇ ಅಧಿಕ ಆದ್ಯತೆ ನೀಡಿದೆ. ಇಪ್ಪತ್ತು ವರ್ಷ ಸಾಕಿದರೆ ಒಂದೊಂದು ಮರವೂ ಲಕ್ಷಾಂತರ ರೂ. ಆದಾಯ ತರಬಲ್ಲುದು. ಆಂಧ್ರ ಪ್ರದೇಶದ ಕಡಪಾ ಮತ್ತು ಉತ್ತರ ಕರ್ನಾಟಕದ ಕೆಲವು ಭಾಗದಲ್ಲಿ ಮಾತ್ರ ಅಲ್ಪ ಪ್ರಮಾಣದಲ್ಲಿ ಈ ಮರಗಳು ಕಾಣಸಿಗುತ್ತವೆ. ಮಂಡ್ಯದ ಹುಲಿಕೆರೆ ಲೋಯರ್ ಟನಲ್, ಮಳವಳ್ಳಿ ತಾಲೂಕಿನ ಬಸವನಬೆಟ್ಟ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಶೆಟ್ಟಹಳ್ಳಿಯ ಅರಣ್ಯ ಪ್ರದೇಶಗಳಲ್ಲಿ ರಕ್ತಚಂದನ ಮರಗಳು ಹೆಚ್ಚಾಗಿವೆ. ಮಲೇಷಿಯಾ, ಚೀನಾ ಮತ್ತು ಜಪಾನ್‌ನಲ್ಲಿ ಇದಕ್ಕೆ ವಿಪರೀತ ಬೇಡಿಕೆ ಇದೆ. ರಕ್ತಚಂದನವನ್ನು ಅಣುವಿಕಿರಣ ಕ್ರಿಯೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದರಲ್ಲಿ ಥೋರಿಯಂ ಅಂಶ ಇರುವುದು ಇದಕ್ಕೆ ಕಾರಣ. ಆದರೆ, ಎಲ್ಲಕ್ಕಿಂತ ಮುಖ್ಯವಾಗಿ ಆಯುರ್ವೇದ ಔಷಧ, ಸುಗಂಧ ದ್ರವ್ಯ ತಯಾರಿಕೆಯಲ್ಲಿ ಮತ್ತು ಸಂಗೀತ ವಾದ್ಯಗಳ ತಯಾರಿಕೆಯಲ್ಲೂ ಬಳಸಲಾಗುತ್ತದೆ.
ಶ್ರೀಗಂಧ ಮತ್ತು ಬೀಟೆ ಮರದ ನಂತರ ರಕ್ತಚಂದನ ಮರಕ್ಕೂ ಈಗ ಕುತ್ತು ಬಂದಿದೆ. ಮಾರುಕಟ್ಟೆಯಲ್ಲಿ ಬೆಲೆ ಮತ್ತು ಬೇಡಿಕೆ ಹೆಚ್ಚಾಗಿರುವುದರಿಂದ ಮರಗಳ್ಳರು ಇದೀಗ ರಕ್ತಚಂದನ ಮರಗಳತ್ತ ವಕ್ರದೃಷ್ಟಿ ಬೀರಿದ್ದಾರೆ. ಮಾರುಕಟ್ಟೆಯಲ್ಲಿ ಶ್ರೀಗಂಧ ಮತ್ತು ಬೀಟೆ ಮರ ಹೊರತು ಪಡಿಸಿದರೆ ರಕ್ತಚಂದನ ಮರಕ್ಕೆ ಹೆಚ್ಚಿನ ಬೆಲೆ ಮತ್ತು ಬೇಡಿಕೆ ಎರಡೂ ಇದೆ. ಶ್ರೀಗಂಧದ ಮರದ ತುಂಡು ಕೆಜಿಗೆ ೩ ರಿಂದ ೫ ಸಾವಿರ ರುಪಾಯಿ ಇದೆ. ಬೀಟೆ ಮರದ ತುಂಡು ಅಡಿಗೆ ೩ ರಿಂದ ೪ ಸಾವಿರ ರೂ.ಗಳಿದೆ. ಇನ್ನು ರಕ್ತಚಂದನ ಮರದ ತುಂಡು ಕೆಜಿ ಮತ್ತು ಅಡಿ ಲೆಕ್ಕದಲ್ಲಿಯೂ ಮಾರಾಟವಾಗುತ್ತದೆ. ರಕ್ತಚಂದನ ಅಡಿಗೆ ೩ ರಿಂದ ೪ ಸಾವಿರ ರೂಪಾಯಿ ಮೌಲ್ಯವಿದೆ. ರಕ್ತಚಂದನ ಮರವನ್ನು ದೇವರ ವಿಗ್ರಹ, ಔಷಧಕ್ಕೂ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಈ ಮರದಿಂದ ತಯಾರಿಸಲಾದ ದೇವರ ವಿಗ್ರಹಗಳಿಗೆ ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ನೆರೆಯ ರಾಜ್ಯಗಳಲ್ಲಿ ಹೆಚ್ಚಿನ ಬೇಡಿಕೆಯಿದೆ.

ರಕ್ತ ಚಂದನದ ಖದರ್


ರಕ್ತ ಚಂದನ ಕಳ್ಳ ಸಾಗಾ ಎಂಬುದೀಗ ಬಹು ಕೋಟಿ ದಂಧೆಯಾಗಿದೆ. ಯಾವ ವಸ್ತುವಿನಿಂದ ನಾಬನಾ ರೀತಿಯ ಉಪಯೋಗವಾಗುತ್ತೊ ಅದಕ್ಕೆ ಲಕ್ಷ ಕೋಟಿಗಳ ಲೆಕ್ಕದಲ್ಲಿ ಬೆಲೆ ಬರೋದು ಮಾಮೂಲು. ಹಾಗಿದ್ದ ಮೇಲೆ ಇದೀಗ ದೇಶಾದ್ಯಂತ ಹಬ್ಬಿಕೊಂಡಿರುವ ಮಾಫ:ಇಯಾ ಮೂಲವಾಗಿರುವ ರಕ್ತ ಚಂದನ ನಾನಾ ಗುಣಗಳನ್ನು ಒಳಗೊಂಡಿದೆ. ಒಂದು ಬಗೆಯಲ್ಲಿ ಅಂತೇಢನಿಲ್ಲ, ಬೇರೆ ಬೇರೆ ಸ್ವರೂಪಗಳಲ್ಲಿ ರಕ್ತ ಚಂದನದ ಕಮಾಲುಗಳಿದ್ದಾವೆ. ಅದರಲ್ಲಿಯೂ ವಿಶೇಷವಾಗಿ ವೈದ್ಯಕೀಯವಾಗಿಯೂ ರಕ್ತ ಚಂದನದ ಗುಣಗಳು ಗಮನೀಯ ಮಟ್ಟದಲ್ಲಿವೆ.
ಇದನ್ನು ಸಸ್ಯ ಶಾಸ್ತ್ರೀಯವಾಗಿ ಸ್ಪೆರೋಕಾರ್ಪಸ್ ಸ್ಯಾಂಟಲೀನಸ್ ಅಂತ ಗುರುತಿಸಲಾಗುತ್ತೆ. ಕಣ್ಣಿಗೆ ಸಂಬಂಧಿಸಿದ ಕಾಯಿಲೆಗಳು, ಲೈಂಗಿಕ ಸಮಸ್ಯೆಗಳು ಸೇರಿದಂತೆ ನಾನಾ ಕಾಯಿಲೆಗಳಿಗೂ ಮದ್ದಾಗಬಲ್ಲ ಗುಣ ರಕ್ತ ಚಂದನಕ್ಕಿದೆ. ಫ್ಯಾಬೆಸಿ ಎಂಬ ಸಸ್ಯ ಸಂಕುಲಕ್ಕೆ ಸೇರಿದ ರಕ್ತ ಚಂದನದ ಔಷದೀಯ ಸಾಧ್ಯತೆಗಳ ಬಗ್ಗೆ ಈ ಕ್ಷಣಕ್ಕೂ ನಾನಾ ದಿಕ್ಕಿನಲ್ಲಿ ಸಂಶೋಧನೆಗಳು ನಡೆಯುತ್ತಿದ್ದಾವೆ. ಇಂಥಾ ಸಂಶೋಧನೆಗಳು ನಡೆದಷ್ಟೂ ರಕ್ತ ಚಂದನದ ಔಷಧೀಯ ಗುಣಗಳು ಜಾಹೀರಾಗುತ್ತಲೇ ಇದ್ದಾವೆ. ಹೀಗೆ ಹೊಸಾ ಸಾಧ್ಯತೆಗಳು ತೆರೆದುಕೊಂಡಾಗೆಲ್ಲ ರಕ್ತ ಚಂದನದ ಬೆಲೆ ಮತ್ತಷ್ಟು ದುಬಾರಿಯಾಗುತ್ತಿದೆ. ಹೀಗೆ ಬೇಡಿಕೆ, ಕಾಸು ಹೆಚ್ಚಾದಂತೆಲ್ಲ ಇದರ ಕಳ್ಳ ಸಾಗಾಟ ಕೂಡಾ ಅವ್ಯಾಹತವಾಗಿ ನಡೆಯಲಾರಂಭಿಸಿದೆ.

ವಾರ್ಷಿಕ 3 ಸಾವಿರ ಕೋಟಿ!


ರಕ್ತಚಂದನದ ಕಿಮ್ಮತ್ತು ಈ ದೇಶಕ್ಕೆ ಗೊತ್ತಾಗಿ ಬಹಳಷ್ಟು ಕಾಲವೇ ಕಳೆದಿದೆ. ಅಗಾಧ ಔಷಧೀಯ ಗುಣಗಳನ್ನು ಹೊಂದಿರುಉವ ರಕ್ತಚಂದನ ತೊಂಬತ್ತರ ದಶಕದಲ್ಲಿಯೇ ಮಾಫಿಯಾ ಚಟುವಟಿಕೆಗಳಿಗೆ ಮಾರಣವಾಗಿತ್ತು. ತೊಂಭತ್ತರ ದಶಕದಲ್ಲಿಯೇ ಗಂಗಿರೆಡ್ಡಿ ಎಂಬ ಭೂಗತ ಡಾನ್ ಒಬ್ಬ ಈ ಮಾಫಿಯಾದ ಅಧಿಪತಿಯಾಗಿದ್ದ. ಈ ದಂಧೆಯ ಮೂಲಕವೇ ಸಾವಿರಾರು ಕೋಟಿ ಕಿಮ್ಮತ್ತಿನ ಆಸ್ತಿಪಾಸ್ತಿ ಮಾಡಿಕೊಂಡಿದ್ದ. ಅಷ್ಟಕ್ಕೂ ರಕ್ತ ಚಂದನ ಭಾರತದ ಕೆಲವೇ ಕೆ ಭಾಗಗಳಲ್ಲಿ ಮಾತ್ರ ಬೆಳೆಯುವಂಥಾ ಸಸ್ಯ. ಆಂಧ್ರ ಪ್ರದೇಶದಲ್ಲಿದು ವ್ಯಾಪಕವಾಗಿ ಬೆಳೆಯುತ್ತೆ. ಇನ್ನುಳಿದಂತೆ ಕರ್ನಾಟಕ, ಕೇರಳ, ತಮಿಳು ನಾಡಿನ ಭೂಭಾಗಗಳಲ್ಲಿಯೂ ಹುಲುಸಾಗಿ ಬೆಳೆಯುತ್ತೆ. ಇದೀಗ ಮಾಫಿಯಾ ಸ್ವರೂಪ ಪಡೆದುಕೊಂಡು, ಅದರ ವಹಿವಾಟು ತಾರಕಕ್ಕೇರಿದೆ. ಅದರ ವಾರ್ಷಿಕ ವ್ಯವಹಾರದ ಲೆಕ್ಕ ಕೇಳಿದರೆ ಎಂಥವರಿಗೂ ಅಚ್ಚರಿಯಾಗುತ್ತೆ.
ಈವರೆಗೂ ಈ ಮಾಫಿಯಾವನ್ನು ಮಟ್ಟ ಹಾಕಲು ನಮ್ಮ ಪೊಲೀಸ್ ಇಲಾಖೆ ಟೊಂಕ ಕಟ್ಟಿ ನಿಂತಿದೆ. ಒಂದಷ್ಟು ಸಲ ದಂಧೆಕೋರರ ದೇಹಕ್ಕೆ ಬುಲೆಟ್ಟು ನುಗ್ಗಿಸಿ ನೆಲಕ್ಕೆ ಕೆಡವಲಾಗಿದೆ. ಆದರೂ ಇದಕ್ಕೆ ಹೊಸಾ ಹೊಸಾ ಡಾನುಗಳುಉ ಹುಟ್ಟಿಕೊಳ್ಳುತ್ತಿದ್ದಾರೆ. ಈವರೆಗೆ ಅಧಿಕಾರಿಗಳು ಈ ಮಾಫಿಯಾದ ವಾರ್ಷಿಕ ವಹಿವಾಟಿನ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಅದರನ್ವಯ ಹೇಳೋದಾದರೆ, ಇದರ ವಾರ್ಷಿಕ ವ್ಯವಹಾರ ಏನಿಲ್ಲವೆಂದರೂ ಮೂರು ಸಾವಿರ ಕೋಟಿ ಮೀರುತ್ತದೆ. ಇಷ್ಟೊಂದುಉ ದೊಡ್ಡ ಮಟ್ಟದ ವ್ಯವಹಾರವನ್ನ ಮಟ್ಟ ಹಾಕೋದು ತುಸು ಕಷ್ಟದ ವಿಚಾರವೆಂಬುದರಲ್ಲಿ ಅಚ್ಚರಿಯೇನಿಲ್ಲ.
ಇದು ಹೇಳಿಕೇಳಿ ಭಾರತದಂಥೇ ಕೆಲವೇ ಕೆಲ ದೇಶಗಳ ಸೀಮಿತವಾದ ಭೂ ಪ್ರದೇಶಗಳಲ್ಲಿ ಬೆಳೆಯುವಂಥಾ ಸಸ್ಯ. ಇಂಥಾ ಸಸ್ಯಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿ ಭಯಾನಕ ಬೇಡಿಕೆ ಇದೆ. ಆದ್ದರಿಂದಲೇ ರಕ್ತ ಚಂದನಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆ ಸೃಷ್ಟಿಯಾಗಿದೆ. ಇದರ ಬೆಲೆ ಭಾರತದೊಳಗೆ ಕೆಜಿಗೆ ಹದಿನೈದು ಸಾವಿರದಷ್ಟು ಇದೆ. ಆದರೆ ವಿದೇಶಿ ಮಾರುಕಟ್ಟೆಯಲ್ಲಿ ಇಪ್ಪತೈದರಿಂದ ಮೂವತ್ತು ಸಾವಿರ ರೂಪಾಯಿಗಳ ವರೆಗೂ ಇದೆ. ಆದ್ದರಿಂದಲೇ ಈ ಕಳ್ಳ ಸಾಗಾಣೆದಾರರು ನೇರವಾಗಿ ವಿದೇಶಗಳಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಈ ಮೂಲಕ ಭಾರತದ ರಕ್ತ ಚಂದನ ಮಾಫಿಯಾಕ್ಕೆ ವಿದೇಶದ ಲಿಂಕೂ ಸಿಕ್ಕಿಬಿಟ್ಟಿದೆ.
ಭಾರತದಲ್ಲಿ ರಕ್ತ ಚಂದನವನ್ನು ನಾನಾ ಹೆಸರುಗಳಿಂದ ಕರೆಯಲಾಗುತ್ತೆ. ಕೆಂಪುಹೊನ್ನೆ ಮುಂತಾದ ಸ್ಥಳೀಯ ಹೆಸರುಗಳಿದ್ದಾವೆ. ಒಂದು ಕಾಲದಲ್ಲಿ ಕಾಡೊಳಗೆ ಹುಲುಸಾಗಿ ಬೆಳೆದುಕೊಂಡಿದ್ದ ರಕ್ತಚಂದನವನ್ನೀಗ ಬೇರನ್ನೂ ಬಿಕಡದೆ ದೋಚಲಾಗಿದೆ. ಕೇವಲ ಔಷಧಿಗಳಿಗೆ ಮಾತ್ರವಲ್ಲದೇ ಪ್ರತಿಮೆ, ಪುತ್ಥಳಿ, ವಿಗ್ರಹಗಳ ತಯಾರಿಗೂ ಕೂಊಡಾ ಇದರ ಬಳಕೆ ಶ್ರೇಷ್ಠ ಎಂಬ ನಂಬಿಕೆ ಇದೆ. ವಿಷಕಾರಿ ಜಂತುಗಳ ಕಡಿತದಿಂದ ಮೊದಲ್ಗೊಂಡು, ಕುಷ್ಠ ರೋಗದ ವರೆಗೂ ಮದ್ದಾಗಬಲ್ಲ ವಿಶೇಷವಾದ ಶಕ್ತಿ ಈ ರಕ್ತ ಚಂದನಕ್ಕಿದೆ. ಚೈನಾ, ಮಲೇಶಿಯಾ ಜಪಾನ್ ನಂಥಾ ದೇಶಗಳಲ್ಲಿಯೂ ರಕ್ತ ಚಂದನದಿಂದ ಮಾಡಿದ ವಿಗ್ರಹಗಳಿಗೆ ಭಾರೀ ಬೇಡಿಕೆ ಇದೆ. ಈ ಕಾರಣದಿಂದಲೇ ವಿದೇಶದಲ್ಲಿಯೂ ಕೂಡಾ ಇದರ ಉಪ ಸ್ಮಗ್ಲರ್ ಗಳು ಹುಟ್ಟಿಕೊಂಡಿದ್ದಾರೆ.

Tags: \#raktachandan#rakthachandansmagling#smaglingmafia

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
insects: ಕೀಟಗಳ ಲೋಕದಲ್ಲಿ ಏನೇನಾಗ್ತಿದೆ ಗೊತ್ತಾ?

insects: ಕೀಟಗಳ ಲೋಕದಲ್ಲಿ ಏನೇನಾಗ್ತಿದೆ ಗೊತ್ತಾ?

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.