ಒಂದನ್ನು ದಕ್ಕಿಸಿಕೊಳ್ಳಬೇಕಾದ್ರೆ,ಇನ್ಯಾವುದೋ ಒಂದನ್ನು ತ್ಯಜಿಸಬೇಕೆಂದು ಹೇಳ್ತಾರೆ.ಅದು ನಟ ನಟಿಯರ ಪಾಲಿನ ದಿನದ ತ್ಯಾಗದ ವಿಷಯ. ಯಾಕಂದ್ರೆ ಫಿಟ್ ಅಂಡ್ ಫೈನ್ ಆಗಿ ತೆರೆಯಮೇಲೆ ಕಾಣಬೇಕು ಅಂದ್ರೆ ಅವ್ರು ಫುಡ್ ನಲ್ಲಿ ಕಾಂಪ್ರಮೈಸ್ ಆಗ್ಲೇಬೇಕು.ಜಿಮ್ ನಲ್ಲಿ ಬೆವರು ಇಳಿಸಿ,ತೂಕ ಮೈಂಟೈನ್ ಮಾಡ್ಲೇಬೇಕು. ಹೀಗೆ ಬರೋಬ್ಬರಿ ೧೨೦ ತೂಕವನ್ನ ಇಳಿಸಿಯೇ ಕಿರುತೆರೆ ನಟ ರಿತ್ವಿಕ್ ಇಂದು ನಾಯಕನಾಗಿ ಮಿಂಚುತ್ತಿದ್ದಾರೆ. ರಿತ್ವಿಕ್ ಅನ್ನೊದಕ್ಕಿಂತ ರಾಮಚಾರಿ ಅಂದ್ರೆ ಬೇಗ ಪರಿಚಿತ ಅನ್ಸುತ್ತೆ
ಯಸ್, ನಾವ್ ಹೇಳ್ತಿರೋದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯ ಪ್ರಮುಖ ಪಾತ್ರದಾರಿ ರಾಮಾಚಾರಿ ಬಗ್ಗೆ. ಈಗ ಫಿಟ್ ಎನಿಸೋ ರಿತ್ವಿಕ್ ಮೊದಲು ೧೨೦ ಕೆ.ಜಿ ತೂಕವಿದ್ದರಂತೆ. ರಂಗಭೂಮಿ ಹಿನ್ನಲೆ ಹೊಂದಿರುವ ನಟ ಆಡಿಷನ್ ಕೊಟ್ಟು ಅವಕಾಶ ಪಡೆದುಕೊಂಡಿದ್ದು ಹೇಗೆ? ನಿರ್ದೇಶಕರು ತೂಕ ಇಳಿಸಿಕೊಳ್ಳುವ ಚಾಲೆಂಜ್ ಹಾಕಿದ್ದು ಯಾಕೆ ಎಂಬ ಬಗ್ಗೆ ಹಾಗು ತಮ್ಮ ಯೂ ಟ್ಯೂಬ್ ಜರ್ನಿಯ ಬಗ್ಗೆ ಹಂಚಿಕೊಂಡಿದ್ದಾರೆ.
ಮೂಲತಃ ಮೈಸೂರಿವರಾದ ರಿತ್ವಿಕ್ ‘ಕೊರೋನಾ ಸಮಯದಲ್ಲಿ ಎಲ್ಲರಂತೆ ಸಮಯ ವ್ಯರ್ತ ಮಾಡುವುದು ಬೇಡ ಎಂದು ಯುಟ್ಯೂಬ್ ಚಾನೆಲ್ ಆರಂಭಿಸಿದರಂತೆ. ಅದ್ರಲ್ಲಿ ನಾಟಕ,ಸಿನೆಮಾಗಳ ಡೈಲಾಗ್ ಹೇಳಿ ಅಭಿನಯಿಸುತ್ತಾ ಅಪ್ಲೋಡ್ ಮಾಡುವುದಕ್ಕೆ ಶುರು ಮಾಡಿದ್ರಂತೆ. ಆರಂಭದಲ್ಲಿ ಕೇವಲ ಬಲ್ಬ್ ಹಾಕಿ ವಿಡಿಯೋ ಮಾಡಿದ್ರೆ, ಆಮೇಲೆ ಪೋನ್ ಲೈಟ್ ,ದಿನ ಕಳೆಯುತ್ತಿದ್ದಂತೆ ರಿಂಗ್ ಲೈಟ್ ಹಾಗೇಯೇ ಕೊಂಚ ಪೇಮಸ್ ಆಗ್ತಿದ್ದಂತೆ ಪ್ರೊಫೆಶನಲ್ ಲೈಟ್ ತೆಗೆದುಕೊಂಡು ನಟಿಸಲು ಆರಂಭಿಸಿದ್ರಂತೆ.ಅಲ್ಲಿಂದ ಗ್ರೀನ್ ಮ್ಯಾಟ್ ಹಾಕುವುದಕ್ಕೆ ಶುರು ಮಾಡಿ, ತಾವೇ ಸೆಟ್ ಕ್ರಿಯೇಟ್ ಮಾಡುವ ಮೂಲಕ ದಿನವೂ ಒಂದೊಂದೆ ಹೆಜ್ಜೆ ಇಟ್ಟು ದಿನ ಕಳೆಯುತ್ತಿದ್ದಂತೆ ಒಳ್ಳೆ ವಿಡಿಯೋ ಮಾಡಲು ಶುರು ಮಾಡಿದೆ’ ಎಂದು ರಿತ್ವಿಕ್ ಯುಟ್ಯೂಬ್ ಸಂದರ್ಶವೊಂದರಲ್ಲಿ ತಮ್ಮ ಮೊದಲ ಪ್ರಯತ್ನದ ಜರ್ನಿಯ ಬಗ್ಗೆ ಹೇಳಿಕೊಂಡಿದ್ದಾರೆ.
ನನ್ನ ವಿಡಿಯೋವನ್ನು ನಿರ್ದೇಶಕ ರಾಮ್‌ಜೀ ಸರ್ ನೋಡಿ ಅವರ ಟೀಮ್‌ಗೆ ಮೈಸೂರಿನ ಹುಡುಗ ಆಕ್ಟಿಂಗ್ ಚೆನ್ನಾಗಿ ಮಾಡುತ್ತಾನೆ ಕರೆ ಮಾಡಬೇಕು ಎಂದು ಹೇಳಿ ಬೇರೆ ಯಾವುದೋ ಸೀರಿಯಲ್‌ಗೆ ನನ್ನ ಆಡಿಷನ್ ಮಾಡಿದರು. ಆ ಸೀರಿಯಲ್‌ಗೆ ನನ್ನ ಪರ್ಸನಾಲಿಟಿ ಸೆಟ್ ಆಗಲ್ಲ ಹೀಗಾಗಿ ಮತ್ತೊಂದು ಆಡಿಷನ್ ಇದೆ ಮಿಸ್ಟರ್ ಆಂಡ್ ಮಿಸೆಸ್ ರಾಮಚಾರಿ ಎಂದು ಟೈಟಲ್ ಆಡಿಷನ್ ನಡೆಯುತ್ತಿದೆ ಬಂದು ಕೊಡು ಎಂದರು. ಈಗ ಇದು ರಾಮಚಾರಿ ಅಂತ ಟೈಟಲ್ ಚೇಂಜ್ ಮಾಡಲಾಗಿದೆ. ಆಡಿಷನ್ ಕೊಟ್ಟ ದಿನವೇ ಸೆಲೆಕ್ಟ್ ಆಗಿಬಿಟ್ಟಿ, ನನ್ನ ಜೀವನದ ಮೊದಲ ಆಡಿಷನ್‌ನಲ್ಲಿ ನಾನು ಸೆಲೆಕ್ಟ್ ಆದೆ ಎಂಬ ಖುಷಿಯಿದೆ.
‘ಧಾರಾವಾಹಿಗೆ ಸೆಲೆಕ್ಟ್ ಆದಾಗ ನಾನು 120 ಕೆಜಿ ತೂಕವಿದ್ದೆ ತುಂಬಾ ದಪ್ಪ ಇದ್ದೆ. ಬೇರೆ ಯಾವ ನಿರ್ದೇಶಕರಾಗಿದ್ದರೂ ನನ್ನ ರಿಜೆಕ್ಟ್ ಮಾಡ್ತಾಇದ್ದರು. ನಿನ್ನ ಕೈಯಲ್ಲಿ ಆಗುತ್ತೆ ಈ ಪಾತ್ರ ನೀನೇ ಮಾಡುತ್ತೀಯಾ ಜಿಮ್ ಸೇರಿಕೋ ಫೀಸ್ ಕೂಡ ನಾನೇ ಕೊಡುತ್ತೀನಿ ಎಂದು ರಾಮ್ ಜಿ ನನ್ನನ್ನು ಹುರಿದುಂಬಿಸಿದ್ರು.ಆ ನಂತ್ರ ನಾನು ಅವರ ನಂಬಿಕೆಯನ್ನ ಉಳಿಸಿಕೊಳ್ಳಲು ನಿರಂತರ ಶ್ರಮ ವಹಿಸಿದೆ. ಮೂರ್ನಾಲ್ಕು ತಿಂಗಳ ಜರ್ನಿಯಲ್ಲಿ ರಪ್ ಅಂತ 70 ಕೆಜಿ ತೂಕಕ್ಕೆ ಇಳಿಸಿಕೊಂಡೆ ಈ ಜರ್ನಿಯಲ್ಲಿ 45 ಕೆಜಿ ಲಾಸ್ ಆಯ್ತು. ಇನ್ನೂ ಸಣ್ಣಗಾಗುತ್ತಿರುವೆ ಜರ್ನಿ ನಡೆಯುತ್ತಿದೆ’ ಎಂದಿದ್ದಾರೆ ರಿತ್ವಿಕ್.
‘ರಾತ್ರಿ ಹಗಲು ಅನ್ನೋದು ಲೆಕ್ಕಿಸದೇ ಜಿಮ್ ನನ್ನ ಎರಡನೇ ಮನೆ ಎಂಬಂತೆ ಸಮಯ ಕಳೆಯುತ್ತಿದ್ದೆ. ತೂಕ ಕಡಿಮೆ ಯಾಗಿಸಿಕೊಂಡು ಪಾತ್ರಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಳ್ಳುವ ಗುರಿಹೊತ್ತು,ಸಕ್ಕರೆ,ಕೆಲ ತಿಂಡಿ ತಿನಿಸುಗಳನ್ನ ತ್ಯಜಿಸಿದ್ದೇನೆ. ಅಷ್ಟು ಪ್ರಯತ್ನ ಪಟ್ಟಿದ್ದಕ್ಕೆ ಇಂದು ನಾನು ಒಂದು ಹಂತಕ್ಕೆ ತಲುಪಿರುವೆ’ ಎಂದು ಹೆಮ್ಮೆಯಿಂದ ರಿತ್ವಿಕ್ ತಮ್ಮ ಜಿಮ್ ಜರ್ನಿಯ ಬಗ್ಗೆ ಮಾತನಾಡಿದ್ದಾರೆ. ಹೀಗೆ ತೂಕ ಲಾಸ್ ಮಾಡಿಕೊಂಡ ರಿತ್ವಿಕ್ ಸಧ್ಯ ರಾಮಾಚಾರಿಯಾಗಿ ಕಿರುತೆರೆ ಪ್ರೇಕ್ಷಕರ ಹಾರ್ಟ್ ಫೇವರೀಟ್ ಆಗೋದ್ರ ಜೊತೆಗೆ ಹುಡುಗೀರ ದಿಲ್ ಕದ್ದಿರೋದಂತೂ ಸತ್ಯ