ಮೆಗಾಪ್ರಿನ್ಸ್ ರಾಮ್‌ಚರಣ್ ತೇಜಾ (ramcharan) ಹಾಗೂ ಬಾಲಿವುಡ್ ಬ್ಯೂಟಿ ಜಾಹ್ನವಿ ಕಪೂರ್ (Janhvi Kapoor) ಕಾಂಬಿನೇಷನ್‌ನಲ್ಲಿ ಬರುತ್ತಿರುವ ಹೊಸ ಸಿನಿಮಾದ ಮುಹೂರ್ತ ಇಂದು ಹೈದ್ರಬಾದ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಚಿತ್ರಕ್ಕೆ ಬುಚ್ಚಿಬಾಬು ಸನಾ (BuchiBabuSana)ಆಕ್ಷನ್‌ಕಟ್ ಹೇಳುತ್ತಿದ್ದು, ಮೆಗಾಸ್ಟಾರ್ ಚಿರಂಜೀವಿ, ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಡೈರೆಕ್ಟರ್ ಶಂಕರ್, ಎ.ಆರ್ ರೆಹಮಾನ್, ಪುಷ್ಪ ಡೈರೆಕ್ಟರ್ ಸುಕುಮಾರ್ ಸೇರಿದಂತೆ ಅನೇಕರು ಭಾಗಿಯಾಗಿ ಶುಭಹಾರೈಸಿದರು.
ಇಂಟ್ರೆಸ್ಟಿಂಗ್ ಅಂದರೆ ದೇವರ(Devara) ಚಿತ್ರದ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿ ಪ್ರವೇಶಿಸಿರೋ ಜಾಹ್ನವಿ ಕಪೂರ್(Janhvi Kapoor), ಯಂಗ್ ಟೈಗರ್ (Juniorntr) ಜೊತೆ ಬೆಳ್ಳಿಭೂಮಿ ಮೇಲೆ ದಿಬ್ಬಣ ಹೊರಡೋ ಮೊದಲೇ, ಮೆಗಾಪ್ರಿನ್ಸ್ (ramcharan) ಜೊತೆ ಮೆರವಣಿಗೆ ಹೊರಡೋ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಅಷ್ಟಕ್ಕೂ, ಇಂತಹ ಗೋಲ್ಡನ್ ಆಪರ್ಚುನಿಟಿ ಎಲ್ಲ ನಟಿಮಣಿಯರಿಗೂ ಕೈಗೆಟೋಕಿದಿಲ್ಲ. ಆದರೆ, ದಢಕ್ ಚೆಲುವೆ (Janhvi Kapoor) ಈ ವಿಚಾರದಲ್ಲಿ ಲಕ್ಕಿ ಕ್ವೀನ್ ಆಗಿದ್ದಾರೆ. ಮಗಧೀರನ ಜೊತೆ ಮಿರ ಮಿರ ಮಿಂಚೋದಕ್ಕೆ ಒಂಟಿಕಾಲಿನಲ್ಲಿ ನಿಂತ್ಕೊಂಡಿದ್ದಾರೆ.
ಆರ್‌ಸಿ-16 ಹೆಸರಲ್ಲಿ ಸೆಟ್ಟೇರಿರೋ ಈ ಸಿನಿಮಾಗೆ ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ (Mythri Movie Makers)ಬಂಡವಾಳ ಹೂಡ್ತಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ತಿರೋ ಈ ಸಿನಿಮಾದಲ್ಲಿ ನಮ್ಮ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್(Shivarajkumar) ಕೂಡ ಬಹುಮುಖ್ಯ ಪಾತ್ರ ನಿರ್ವಹಿಸ್ತಿದ್ದಾರೆ. ಎ.ಆರ್ ರೆಹಮಾನ್ ಸಂಗೀತ ಸಂಯೋಜನೆ ಸಿನಿಮಾಗಿದ್ದು, ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತಯಾರಾಗಲಿದೆ. ಸದ್ಯ ಗೇಮ್ ಚೇಂಜರ್ ಚಿತ್ರದಲ್ಲಿ ತೊಡಗಿಸಿಕೊಂಡಿರೋ ಚರಣ್ (ramcharan), ಶೀಘ್ರದಲ್ಲೇ ಬುಚ್ಚಿಬಾಬು(BuchiBabuSana) ಜೊತೆ ಅಖಾಡಕ್ಕೆ ಇಳಿಯಲಿದ್ದಾರೆ. ಚಿತ್ರಕ್ಕಾಗಿ ಯಾರೆಲ್ಲಾ ದುಡಿದು ದಣಿಯಲಿದ್ದಾರೆನ್ನುವ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.