ಬಾಲಿವುಡ್ ಬಾಕ್ಸಾಫೀಸ್ ನಲ್ಲಿ ಅನಿಮಲ್ ಸುನಾಮಿ ಎಬ್ಬಿಸ್ತಿದೆ. ಕಿಂಗ್ ಖಾನ್ ರೆಕಾರ್ಡ್ ಗಳನ್ನು ಪುಡಿ ಪುಡಿ ಮಾಡುತ್ತಾ ರಣ್ಬೀರ್ ಕಪೂರ್ ಗಹಗಹಿಸ್ತಿದ್ದಾರೆ. ಕಳೆದ ಶುಕ್ರವಾರ ಬೆಳ್ಳಿಭೂಮಿಯಲ್ಲಿ ದರ್ಶನ ಕೊಟ್ಟ ರಣ್ಬೀರ್ ಹಾಗೂ ಸಂದೀಪ್ ರೆಡ್ಡಿ ವಾಂಗಾ ಕಾಂಬೋದ ಈ ಸಿನ್ಮಾ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಬೇಟೆಗಿಳಿದಿದೆ. ಸಿಂಪಲ್ ಕಥೆಗೆ ವೈಲೆನ್ಸ್ ಟಚ್ ಕೊಟ್ಟು ತೆರೆಮೇಲೆ ಸಂದೀಪ್ ಟೇಕಿಂಗ್, ರಣ್ಬೀರ್ ಆಕ್ಟಿಂಗ್, ರಶ್ಮಿಕಾ ಗ್ಲಾಮರ್ ರಂಗಿಗೆ ಪ್ರೇಕ್ಷಕ ಜೈಕಾರ ಹಾಕಿದ್ದಾನೆ. ಅದರ ಪ್ರತಿಫಲ ಅನಿಮಲ್ ಗಲ್ಲಾಪೆಟ್ಟಿಗೆಯಲ್ಲಿ ಝಣಝಣ ಕಾಂಚಾಣ ಎಣಿಸ್ತಿದ್ದಾನೆ.
ಅನಿಮಲ್ ಸಿನಿಮಾ ಜಸ್ಟ್ ಮೂರೇ ದಿನಕ್ಕೆ 400 ಕೋಟಿ ಕೊಳ್ಳೆ ಹೊಡೆದಿದೆ. ಶಾರುಖ್ ಖಾನ್ ಸಿನಿಮಾಗಳಾದ ಪಠಾಣ್ ಹಾಗೂ ಜವಾನ್ ರೆಕಾರ್ಡ್ ಗಳನ್ನು ಊಡೀಸ್ ಮಾಡ್ತಾ ಮುಂದೆ ಸಾಗ್ತಿರುವ ಅನಿಮಲ್ ಬಾಕ್ಸಾಫೀಸ್ ಕಿಂಗ್ ಅನ್ನೋದನ್ನು ಪ್ರೂವ್ ಮಾಡಿದೆ. ಅನಿಮಲ್ ನಡೆಸ್ತಿರುವ ದಾಖಲೆ ದಂಡಯಾತ್ರೆ ನೋಡ್ತಿದ್ರೆ 1000 ಕೋಟಿ ಕ್ಲಬ್ ಸೇರೋದು ಖಂಡಿತ ಅಂತಾ ಬಾಕ್ಸಾಫೀಸ್ ಪಂಡಿತರು ಲೆಕ್ಕಚಾರ ಹಾಕ್ತಿದ್ದಾರೆ.
ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದ ಸಂದೀಪ್ ರೆಡ್ಡಿ ವಾಂಗಾ ಮೊದಲ ಹೆಜ್ಜೆಯಲ್ಲಿ ಗೆಲುವಿನ ಸಿಕ್ಸರ್ ಬಾರಿಸಿದ್ದರು. ಆ ನಂತ್ರ ಇದೇ ಚಿತ್ರವನ್ನು ಕಬೀರ್ ಸಿಂಗ್ ಅಂತಾ ಬಾಲಿವುಡ್ ರಿಮೇಕ್ ಮಾಡಿದ್ರು. ಆದ್ರೆ ತೆಲುಗಿನಲ್ಲಿ ಸಿಕ್ಕ ಯಶಸ್ಸು ಫ್ಲಸ್ ಕಾಸು ಹಿಂದಿಯಲ್ಲಿ ದೊರೆಕಲಿಲ್ಲ. ಆಗಲೇ ಸಂದೀಪ್ ಅನಿಮಲ್ ಕಥೆಯನ್ನು ತೆಗೆದುಕೊಂಡು ಹೋಗಿ ರಣ್ಬೀರ್ ಮುಂದೆ ಒಪ್ಪಿಸಿಬಿಟ್ರು. ಸರಳವಾದ ಕಥೆಯನ್ನು ಸೊಗಸಾಗಿ ತೆರೆಗೆ ತಂದಿದ್ದಾರೆ. ಸ್ವಲ್ಪ ಲ್ಯಾಗ್ ಎನಿಸಿದ್ರೂ ಪರವಾಗಿಲ್ಲ ಅನ್ನುತ್ತಾ ಪ್ರೇಕ್ಷಕ ಅನಿಮಲ್ ಒಪ್ಪಿಕೊಂಡಿದ್ದಾನೆ. ಸಂದೀಪ್ ಹಾಗೂ ರಣ್ಬೀರ್ ಮುಖದಲ್ಲೀಗ ಗೆಲುವಿನ ನಗು ಕಾಣಿಸ್ತಿದೆ. ಅನಿಮಲ್ ಭರ್ಜರಿ ಕಮಾಯಿ ಕಲೆಕ್ಟ್ ಮಾಡ್ತಿರುವ ಈ ಸಮಯದಲ್ಲಿ ಅನಿಮಲ್ 2 ಸದ್ದು ಜೋರಾಗಿದೆ.