Rashmika Mandanna: ವಿಜಯ್ ದೇವರಕೊಂಡ(Vijay Deverakonda) ಹಾಗೂ ಮೃಣಾಲ್ ಠಾಕೂರ್(Mrunal Thkur) ಅಭಿನಯದ ಫ್ಯಾಮಿಲಿ ಸ್ಟಾರ್(Family Star) ಸಿನಿಮಾ ನಾಳೆ ತೆರೆ ಕಾಣುತ್ತಿದೆ. ದಿನದಿಂದ ದಿನಕ್ಕೆ ಈ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗುವುದರೊಂದಿಗೆ ಸಿನಿಮಾ ತಂಡದಿಂದ ಹೊರ ಬೀಳುತ್ತಿರುವ ಹೊಸ ವಿಚಾರಗಳು ಕ್ರೇಜ಼್ ಹೆಚ್ಚಿಸಿದೆ. ಸದ್ಯ ಚಿತ್ರತಂಡ ರಿವೀಲ್ ಮಾಡಿರೋ ನಯಾ ಸಮಾಚಾರವೊಂದು ಹೊರ ಬಿದ್ದಿದೆ. ಈ ಸುದ್ದಿ ಕೇಳಿ ರಶ್(Rashmika) ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ʻಗೀತ ಗೋವಿಂದಂʼ ಸಿನಿಮಾ ಖ್ಯಾತಿಯ ಪರಸುರಾಮ್ ನಿರ್ದೇಶನದ ಸಿನಿಮಾ ʻಫ್ಯಾಮಿಲಿ ಸ್ಟಾರ್ʼ(Family Star). ಪರಸುರಾಮ್, ವಿಜಯ್ ದೇವರಕೊಂಡ(Vijay Deverakonda) ಹಾಗೂ ರಶ್ಮಿಕಾ (Rashmika Mandanna) ಆತ್ಮೀಯರು ಕೂಡ. ಇದೇ ಆತ್ಮೀಯತೆಯಲ್ಲಿ ಸಿನಿಮಾದಲ್ಲಿ ರಶ್ಮಿಕಾಗೆ ಒಂದು ಪಾತ್ರ ನೀಡಲಾಗಿದೆ. ರಶ್ಮಿಕಾ ಗೆಸ್ಟ್ ಅಪಿಯರೆನ್ಸ್‌ನಲ್ಲಿ ಫ್ಯಾಮಿಲಿ ಸ್ಟಾರ್‌ನಲ್ಲಿ ಕಾಣಸಿಗಲಿದ್ದಾರೆ. ಚಿತ್ರತಂಡದಿಂದ ಹೊರಬಂದಿರುವ ಈ ಸುದ್ದಿ ಸಿನಿಮಾ ಮೇಲಿನ ಕ್ಯೂರಿಯಾಸಿಟಿಯನ್ನು ಹೆಚ್ಚಿಸಿದೆ.
ವಿಜಯ್ ದೇವರಕೊಂಡ(Vijay Deverakonda) ಹಾಗೂ ರಶ್ಮಿಕಾ(Rashmika Mandanna) ಜೋಡಿಗೆ ಅಪಾರ ಅಭಿಮಾನಿಗಳಿದ್ದು, ದೇವರಕೊಂಡ ಜೊತೆ ನ್ಯಾಶನಲ್ ಕ್ರಶ್‌ರನ್ನು ತೆರೆಮೇಲೆ ನೋಡುವ ಫ್ಯಾನ್ಸ್ ಆಸೆ ಕೊನೆಗೂ ನೆರವೇರಿದೆ. ಸಿನಿಮಾದಲ್ಲಿ ಯಾವ ಪಾತ್ರವನ್ನು ರಶ್ಮಿಕಾಗೆ ನೀಡಿದ್ದಾರೆ, ರಶ್ ಹೇಗೆ ಕಾಣಸಿಗಲಿದ್ದಾರೆ ಎಂಬ ಲೆಕ್ಕಾಚಾರ ಅಭಿಮಾನಿಗಳ ಮನದಲ್ಲಿ ಈಗಾಗಲೇ ನಡೆಯುತ್ತಿದೆ.
ʻಫ್ಯಾಮಿಲಿ ಸ್ಟಾರ್ʼ(Family Star) ನಾಳೆ ಅಂದ್ರೆ ಏಪ್ರಿಲ್ 5ರಂದು ಬಿಡುಗಡೆಯಾಗುತ್ತಿದೆ. ಈ ದಿನವೇ ರಶ್ಮಿಕಾ(Rashmika Mandanna)ಬರ್ತ್ ಡೇ, ಇತ್ತ ರಶ್ ಅಭಿನಯದ ಮಹಿಳಾ ಪ್ರಧಾನ ಚಿತ್ರ ʻಗರ್ಲ್‌ಫ್ರೆಂಡ್ʼ ಟೀಸರ್ ಕೂಡ ನಾಳೆ ಬಿಡುಗಡೆಯಾಗುತ್ತಿದೆ ನೆಚ್ಚಿನ ನಟಿಯ ಬರ್ತ್‌ಡೇ ಗೆ ಎರಡೆರಡು ಸರ್ಪ್ರೈಸ್ ಸಿಕ್ಕ ಖುಷಿಯಲ್ಲಿದ್ದಾರೆ ಅಭಿಮಾನಿಗಳು.