Vijay Deverakonda: ವಿಜಯ್ ದೇವರಕೊಂಡ(Vijay Deverakonda) ಹುಟ್ಟುಹಬ್ಬದಂದು ಎರಡು ಸಿನಿಮಾ ಅನೌನ್ಸ್ ಆಗಿದೆ. ಎರಡೂ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾಗಳು. ಸೋಲಿನ ಸುಳಿಯಲ್ಲಿ ಸಿಲುಕಿರುವ ವಿಜಯ್ ದೇವರಕೊಂಡ ಗೆಲುವಿಗಾಗಿ ಹಪಹಪಿಸುತ್ತಿದ್ದಾರೆ. ಅದಕ್ಕಾಗಿ ತನ್ನ ಲಕ್ಕಿ ಹೀರೋಯಿನ್‌ನನ್ನೇ ಮುಂದಿನ ಸಿನಿಮಾಗೆ ನಟಿಯಾಗಿ ಕರೆಸಿಕೊಳ್ಳೋ ತೀರ್ಮಾನ ಮಾಡಿದ್ದಾರೆ.
ಆ ಲಕ್ಕಿ ನಟಿ ಬೇರೆ ಯಾರು ಅಲ್ಲ ದೇವರಕೊಂಡ ಆಪ್ತೆ, ರೂಮರ್ ಗರ್ಲ್ ಫ್ರೆಂಡ್ ರಶ್ಮಿಕಾ ಮಂದಣ್ಣ(Rashmoka Mandanna). ಹೌದು ತಮ್ಮ ಮುಂದಿನ ಹೊಸ ಸಿನಿಮಾಗೆ ರಶ್ಮಿಕಾ ನಾಯಕಿಯಾಗಬೇಕು ಅನ್ನೋದು ನಿರ್ದೇಶಕರ ಮುಂದೆ ವಿಜಯ್ ದೇವರಕೊಂಡ ಬೇಡಿಕೆಯಂತೆ. ಇದು ಸದ್ಯ ಟಾಲಿವುಡ್ ಅಂಗಳದ ಲೇಟೆಸ್ಟ್ ಸಮಾಚಾರ. ಗೀತ ಗೋವಿದಂ ಸಿನಿಮಾದಲ್ಲಿ ಮೋಡಿ ಮಾಡಿದ ಈ ಜೋಡಿ ಡಿಯರ್ ಕಾಮ್ರೆಡ್‌ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಾಣಲಿಲ್ಲ. ಫ್ಯಾಮಿಲಿ ಸ್ಟಾರ್‌ನಲ್ಲಿ ಮತ್ತೆ ಒಂದಾಗೋ ಮಾತುಗಳು ಕೇಳಿ ಬಂದ್ರು ಲಾಸ್ಟ್ ಮುಮೆಂಟ್‌ನಲ್ಲಿ ಸೀತಾ ರಾಮಂ ಬೆಡಗಿ ಮೃಣಾಲ್ ಆಯ್ಕೆಯಾದ್ರು.
ಟ್ಯಾಕ್ಸಿವಾಲ ಸಿನಿಮಾ ನಿರ್ದೇಶಕ ರಾಹುಲ್ ಸಂಕ್ರಿತ್‌ಯನ್ ರೌಡಿ ಬಾಯ್‌ಗೆ ಹಿಸ್ಟಾರಿಕ್ ಕಥೆಯೊಂದನ್ನು ರೆಡಿ ಮಾಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದಲ್ಲಿ ಈ ಸಿನಿಮಾ ಅದ್ದೂರಿಯಾಗಿ ಮೂಡಿ ಬರಲಿದೆ. ಇದೇ ಚಿತ್ರಕ್ಕೆ ನ್ಯಾಶನಲ್ ಕ್ರಶ್ ವಿಜಯ್(Vijay Deverakonda) ಜೋಡಿಯಾಗಲಿದ್ದಾರೆ ಎನ್ನಲಾಗ್ತಿದೆ. ವಿಜಯ್ ಕೂಡ ರಶ್ ಜೊತೆಯಾಗಲೇಬೇಕು ಎನ್ನುತ್ತಿದ್ದಾರಂತೆ. ಟಿಟೌನ್ ಅಂಗಳದಲ್ಲಿ ಹರಿದಾಡ್ತಿರೋ ಈ ಸುದ್ದಿಗೆ ಚಿತ್ರತಂಡ ಏನ್ ಹೇಳುತ್ತೆ ಕಾದು ನೋಡ್ಬೇಕು
ಯುವ ನಿರ್ದೇಶಕ ರವಿ ಕಿರಣ್ ಕೊಲ್ಲ ಸಿನಿಮಾಗೂ ವಿಜಯ್(Vijay Deverakoda) ಅಸ್ತು ಎಂದಿದ್ದು, ಈ ಚಿತ್ರವನ್ನು ದಿಲ್ ರಾಜು ನಿರ್ಮಾಣ ಮಾಡುತ್ತಿದ್ದಾರೆ. ಎರಡು ಸಿನಿಮಾದ ಪೋಸ್ಟರ್‌ಗಳು ವಿಶೇಷವಾಗಿದ್ದು, ರೋಮ್ಯಾಂಟಿಂಕ್ ಜಾನರ್ ಬಿಟು ಆಕ್ಷನ್ ಹೀರೋ ಆಗುವತ್ತ ದೇವರಕೊಂಡ ಆಲೋಚಿಸಿದ್ದಾರೆ ಎನ್ನೋದು ಪೋಸ್ಟರ್ ನೋಡಿದಾಕ್ಷಣ ತಿಳಿಯುತ್ತಿದೆ.