ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಬಿಟೌನ್ ಹೀರೋ ರಣಬೀರ್ ಕಪೂರ್‌ಗೆ ಕಪಾಳಮೋಕ್ಷ ಮಾಡಿದ್ದರಂತೆ. ಹೀಗಂತ ನಾವ್ ಹೇಳ್ತಿರೋದಲ್ಲ ಸ್ವತಃ ಸಾನ್ವಿಯೇ ಹೇಳಿಕೊಂಡಿದ್ದಾರೆ. ರಣಬೀರ್ ಕೆನ್ನೆಗೆ ಬಾರಿಸಿ ಕೊನೆಗೆ ನಾನೇ ಕಣ್ಣೀರಿಟ್ಟುಬಿಟ್ಟೆ ಎಂತಲೂ ತಿಳಿಸಿದ್ದಾರೆ. ಅಷ್ಟಕ್ಕೂ, ರಶ್ಮಿಕಾ ಬಿಟೌನ್ ಹ್ಯಾಂಡ್ಸಮ್ ಹಂಕ್ ಕೆನ್ನೆಗೆ ಯಾಕ್ ಹೊಡೆದರು? ರಣಬೀರ್ ಕಪಾಳಮೋಕ್ಷ ಮಾಡಿಸಿಕೊಳ್ಳುವಂತಹದ್ದೇನ್ ಮಾಡಿದ್ರು? ಹೀಗೊಂದಿಷ್ಟು ಪ್ರಶ್ನೆಗಳು ಉದ್ಭವಿಸುತ್ತೆ. ಆ ಪ್ರಶ್ನೆಗೆ ಉತ್ತರ ಕೊಡಬೇಕು ಅಂದರೆ ಅಸಲಿ ಸತ್ಯ ಹರವಿಡ್ಬೇಕು.
ರಶ್ಮಿಕಾ-ರಣಬೀರ್ ಇಬ್ಬರು ಜೋಡಿಯಾಗಿ ʻಅನಿಮಲ್ʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ನಿಮಗೆಲ್ಲ ಗೊತ್ತೆಯಿದೆ. ಇವರಿಬ್ಬರ ಕಾಂಬಿನೇಷನ್ ವರ್ಕ್ ಆಯ್ತು. ಸ್ಕ್ರೀನ್ ಮೇಲೆ ಇಬ್ಬರ ಕೆಮಿಸ್ಟ್ರಿ ಭರ್ಜರಿಯಾಗಿಯೇ ಕ್ಲಿಕ್ ಆಯ್ತು. ಪ್ರೇಕ್ಷಕರ ಭರ್‌ಪೂರ್ ಪ್ರತಿಕ್ರಿಯೆಯ ಜೊತೆಗೆ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಬಂಗಾರದ ಬೆಳೆ ಬೆಳೀತು. ಬಿಗ್ ಬ್ರೇಕ್‌ಗಾಗಿ ಎದುರುನೋಡ್ತಿದ್ದ ಚಾಕೋಲೇಟ್ ಹೀರೋ ರಣಬೀರ್‌ಗೆ ಅನಿಮಲ್ ಹೆಸರು ತಂದುಕೊಡ್ತು. ಅಟ್ ದಿ ಸೇಮ್ ಟೈಮ್ ಬಿಟೌನ್‌ನಲ್ಲಿ ಸೆಟ್ಲ್ ಆಗೋಕೆ ಹಿಟ್ ಸಿನಿಮಾ ನಿರೀಕ್ಷೆಯಲ್ಲಿದ್ದ ನ್ಯಾಷನಲ್ ಕ್ರಷ್‌ಗೂ, ಸಂದೀಪ್ ರೆಡ್ಡಿ ವಾಂಗ ನಿರ್ದೇಶನದ ʻಅನಿಮಲ್ʼ ಕೈ ಹಿಡೀತು. ಬಹುಷಃ ಈ ಎಲ್ಲಾ ವಿಚಾರ ನಿಮಗೂ ಗೊತ್ತೆಯಿದೆ. ಆದರೆ, ಇತ್ತೀಚೆಗೆ ಈ ಸಿನಿಮಾದ ಎಕ್ಸ್‌ಪೀರಿಯನ್ಸ್ ಬಗ್ಗೆ ರಶ್ಮಿಕಾ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ರಣಬೀರ್‌ಗೆ ಕಪಾಳಮೋಕ್ಷ ಮಾಡಿದ ಘಟನೆಯನ್ನ ವಿವರಿಸಿದ್ದಾರೆ.
ಅಷ್ಟಕ್ಕೂ, ರಣಬೀರ್, ರಶ್ಮಿಕಾ ಕೈಯಲ್ಲಿ ಯಾಕ್ ಪೆಟ್ಟು ತಿಂದರು? ಅಂತಹದ್ದೇನ್ ಯಡವಟ್ಟು ಮಾಡಿದ್ರು? ಸಹಜವಾಗಿ ಈ ತರಹದ ಪ್ರಶ್ನೆಗಳು ಕಾಡೋದಕ್ಕೆ ಶುರುವಾಗುತ್ತವೆ. ಅದಕ್ಕೆ ಉತ್ತರ ಕೊಡಬೇಕು ಅಂದರೆ ʻಅನಿಮಲ್ʼ ಕಥೆ ಹೇಳಲೇಬೇಕು. ಯಸ್, ಅನಿಮಲ್ ಸಿನಿಮಾದಲ್ಲಿ ರಾಕ್‌ಸ್ಟಾರ್ ರಣಬೀರ್ ಹಾಗೂ ರಶ್ಮಿಕಾ ಮಂದಣ್ಣ ಗಂಡ-ಹೆಂಡ್ತಿಯಾಗಿ ಕಾಣಿಸಿಕೊಂಡಿದ್ದು ಅದೊಂದು ಸೀನ್‌ನಲ್ಲಿ ಗೀತಾಂಜಲಿ ಪಾತ್ರಧಾರಿ ರಶ್ಮಿಕಾ, ರಣವಿಜಯ್‌ಗೆ ಅಂದರೆ ರಣಬೀರ್ ಕೆನ್ನೆಗೆ ಬಾರಿಸೋ ಸಿಚ್ಯೂಯೇಷನ್ ಬರುತ್ತೆ. ಸಿನಿಮಾ ನೋಡಿದವರಿಗೆ ಕಪಾಳಮೋಕ್ಷದ ಸೀನ್ ಕಣ್ಮುಂದೆ ಬಂದಿರುತ್ತೆ. ಯಸ್, ಈ ಸೀನ್ ನ ನೆನಪು ಮಾಡಿಕೊಂಡಿರೋ ಸಾನ್ವಿ ರಣಬೀರ್ ಅವರಿಗೆ ಕಪಾಳಮೋಕ್ಷ ಮಾಡಿದ್ಮೇಲೆ ನಂಗೆ ಅಳುನಾ ತಡೆಯೋಕೆ ಆಗಿಲ್ಲ. ಸಿಂಗಲ್ ಟೇಕ್‌ನಲ್ಲಿ ಆ ಸೀನ್ ಮುಗಿಸಿಕೊಟ್ಟು ಫ್ರೇಮ್‌ನಿಂದ ಎಕ್ಸಿಟ್ ಆಗಿ ಜೋರಾಗಿ ಅತ್ತುಬಿಟ್ಟೆ. ಕೊನೆಗೆ ರಣಬೀರ್ ಅವರ ಬಳಿ ಹೋಗಿ ಏನು ಆಗಿಲ್ಲ ಅಲ್ಲವಾ ಆರಾಮಾಗಿದ್ದೀರಾ ಅಲ್ಲವಾ ವಿಚಾರಿಸಿದೆ ಎಂದಿದ್ದಾರೆ.
ಅಂದ್ಹಾಗೇ, ಇದೊಂದು ಸೀನ್‌ನಲ್ಲಿ ಕ್ರಷ್ಮಿಕಾ ಎಲ್ಲರ ಕಣ್ಣಂಚಲ್ಲೂ ನೀರು ತರಿಸಿದ್ದರು. ಸಿನಿಮಾ ಪ್ರೇಮಿಗಳು ಭಾವುಕರಾಗುವಂತೆ ಮಾಡಿದ್ದರು. ಇದೀಗ ಅದರ ಹಿಂದಿನ ಅವರ ಕಣ್ಣೀರ ಕಥೆ ಬಿಚ್ಚಿಟ್ಟಿದ್ದಾರೆ. ಸದ್ಯ, ರಶ್ಮಿಕಾ ಪುಷ್ಪ-2 ಚಿತ್ರದಲ್ಲಿ ಬ್ಯುಸಿಯಿದ್ದಾರೆ. ಈ ಚಿತ್ರದ ಬಗ್ಗೆಯೂ ಹಿಂಟ್ ಬಿಟ್ಟುಕೊಟ್ಟಿರೋ ಶ್ರೀವಲ್ಲಿ, ʻಪುಷ್ಪ ಪಾರ್ಟ್-2ʼ ಚಿತ್ರ ಮೊದಲ ಭಾಗಕ್ಕಿಂತ ದೊಡ್ಡದಾಗಿರಲಿದೆ ಎಂದಿದ್ದಾರೆ. ಇತ್ತೀಚೆಗೆಷ್ಟೇ ಸಾಂಗ್ ಶೂಟಿಂಗ್‌ನಲ್ಲಿ ಪಾಲ್ಗೊಂಡಿರುವುದಾಗಿ ತಿಳಿಸಿರೋ ಲಿಲ್ಲಿ, ಪುಷ್ಪ ಪಾರ್ಟ್-2 ಮೂಲಕ ಪ್ಯಾನ್ ಇಂಡಿಯಾ ಅಂಗಳದಲ್ಲಿ ಮತ್ತೊಮ್ಮೆ ಮೆರವಣಿಗೆ ಹೊರಡಲು ಉತ್ಸುಕರಾಗಿದ್ದಾರೆ. ಸದ್ಯ ರಶ್ಮಿಕಾ ಕೈಲಿ ಪುಷ್ಪ-2 ಸೇರಿದಂತೆ ರೈನ್‌ಬೋ, ಚಾವ, ದಿ ಗರ್ಲ್ ಫ್ರೆಂಡ್ ಸಿನಿಮಾಗಳಿವೆ. ಇದೆಲ್ಲದರ ಮಧ್ಯೆ ಫೆಬ್ರವರಿನಲ್ಲಿ ಲಿಲ್ಲಿ ಎಂಗೇಜ್ ಆಗುವ ಸುದ್ದಿಯಿದೆ. ರೌಡಿಬಾಯ್ ವಿಜಯ್ ಜೊತೆ ರಶ್ಮಿಕಾ ನಿಶ್ಚಿತಾರ್ಥ ನಡೆಯುವ ಮ್ಯಾಟರ್ ಲೀಕ್ ಆಗಿ ಕೇಕೆಹಾಕ್ತಿದೆ. ಆದರೆ, ಈ ಸುದ್ದಿನಾ ಲೈಗರ್ ಅಲ್ಲಗಳೆದಿದ್ದಾರೆ. ಆದರೂ ಫ್ಯಾನ್ಸ್ ಪ್ಲಸ್ ನೆಟ್ಟಿಗರು ಫೆಬ್ರವರಿ ತಿಂಗಳಿಗಾಗಿ ಎದುರುನೋಡ್ತಿದ್ದಾರೆ. ಪ್ರೇಮಿಗಳ ದಿನದಂದು ಇಬ್ಬರು ರಿಂಗ್ ಎಕ್ಸ್‌ಚೇಂಜ್ ಮಾಡಿಕೊಂಡು ಸರ್ ಪ್ರೈಸ್ ಕೊಡಬಹುದು ಎಂದು ಕಾಯುತ್ತಿದ್ದಾರೆ.