Rashmika Mandanna: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ(Rashmika Mandanna) ಸದಾ ಸುದ್ದಿಯಲ್ಲಿರುವ ನಟಿ. ಸಿನಿಮಾ, ಸ್ಟೇಟ್‌ಮೆಂಟ್, ಫೋಟೋಸ್, ಬಾಯ್ ಫ್ರೆಂಡ್ ಹೀಗೆ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುವ ಕಿರಕ್ ಬೆಡಗಿ. ಗಂಗಂ ಗಣೇಶ್ ಪ್ರಿರಿಲೀಸ್ ಈವೆಂಟ್‌ನಲ್ಲಿ ಭಾಗಿಯಾದ ರಶ್ ತಮ್ಮ ಫೇವರೇಟ್ ಕೋ ಸ್ಟಾರ್ ಯಾರೆಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಬೇಬಿ ಸಿನಿಮಾ ಸಕ್ಸಸ್ ನಂತರ ಟಾಲಿವುಡ್ ಅಂಗಳದಲ್ಲಿ ಬ್ಯುಸಿಯಾಗಿರೋ ಆನಂದ್ ದೇವರಕೊಂಡ(Anand deverakonda) ಕೈಯಲ್ಲಿ ಹಲವು ಸಿನಿಮಾಗಳಿವೆ. ನಾಯಕ ನಟನಾಗಿ ನಟಿಸಿರುವ ಗಂಗಂ ಗಣೇಶ್ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು ಈ ಚಿತ್ರದ ಪ್ರಿರಿಲೀಸ್ ಈವೆಂಟ್‌ಗೆ ಅತಿಥಿಯಾಗಿ ರಶ್ಮಿಕಾ ಮಂದಣ್ಣ(Rashmika Mandanna) ಆಗಮಿಸಿದ್ರು. ಇದೇ ವೇಳೆ ಆನಂದ್ ದೇವರಕೊಂಡ ಒಂದಿಷ್ಟು ರ್ಯಾಪಿಡ್ ಫೈರ್ ಪ್ರಶ್ನೆ ಕೇಳಿ ನ್ಯಾಶನಲ್ ಕ್ರಶ್ ಬ್ಲಶ್ ಆಗುವಂತೆ ಮಾಡಿದ್ದಾರೆ. ನಿಮ್ಮ ಫೇವರೇಟ್ ಕೋ ಸ್ಟಾರ್ ಯಾರೆಂದು ಆನಂದ್ ದೇವರಕೊಂಡ ಕೇಳಿದ ಪ್ರಶ್ನೆಗೆ ರಶ್ಮಿಕಾ(Rashmika Mandanna) ನೀನು ನನ್ನ ಫ್ಯಾಮಿಲಿ ನೀನೇ ನನ್ನ ಇಕ್ಕಟ್ಟಿಕೆ ಸಿಲುಕಿಸಿದ್ರೆ ಹೇಗೆ ಅಂತ ಹೇಳಿದ್ದಾರೆ. ರೌಡಿ ಬಾಯ್ ತಮ್ಮ ಫೇವರೇಟ್ ಕೋ ಸ್ಟಾರ್ ಎಂದಿದ್ದಾರೆ ನ್ಯಾಶನಲ್ ಕ್ರಶ್. ರಶ್ಮಿಕಾ ಹೀಗೆ ಹೇಳುತ್ತಿದಂತೆ ದೇವರಕೊಂಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ರಶ್ಮಿಕಾ ಹಾಗೂ ವಿಜಯ ದೇವರಕೊಂಡ(Vijay Deverakonda) ಗೀತ ಗೋವಿಂದಂ ಹಾಗೂ ಡಿಯರ್ ಕಾಮ್ರೆಡ್ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಇಬ್ಬರು ಪ್ರೀತಿಯಲ್ಲಿದ್ದಾರೆಂದು ಹಲವು ವರ್ಷಗಳಿಂದ ಟಾಲಿವುಡ್ ಅಂಗಳದಲ್ಲಿ ಸುದ್ದಿ ಕೇಳಿ ಬರ್ತಾನೆ ಇದೆ. ರೂಮರ್ಡ್ ಕಪಲ್ ಮಾತ್ರ ಈ ಬಗ್ಗೆ ಇಲ್ಲಿವರೆಗೆ ಪ್ರತಿಕ್ರಿಯೆ ನೀಡಿಲ್ಲ. ಇದೀಗ ಹಲವು ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿರುವ ರಶ್ ಅವರೆಲ್ಲರನ್ನು ಬಿಟ್ಟು ವಿಜಯ್ ದೇವರಕೊಂಡ ತಮ್ಮ ಪೇವರೇಟ್ ಕೋ ಸ್ಟಾರ್ ಎಂದಿರೋದು ಅಚ್ಚರಿ ಮೂಡಿಸಿದೆ.