Rashmika Mandanna: ರಶ್ಮಿಕಾ ಮಂದಣ್ಣ..ಸೌತ್ ಸಿನಿರಂಗದ ಮೋಸ್ಟ್ ಬ್ಯುಸಿಯೆಸ್ಟ್ ನಟಿಮಣಿ. ಬಹುಬೇಗನೇ ಸ್ಟಾರ್ ಪಟ್ಟಕೇರಿದ ರಶ್, ನ್ಯಾಶನಲ್ ಕ್ರಶ್(National Crush) ಆಗಿ ಫೇಮಸ್. ʻಕಿರಿಕ್ ಪಾರ್ಟಿʼ ಎಂಬ ಒಂದೇ ಒಂದು ಸಿನಿಮಾ ರಶ್ ಸಿನಿ ಕೆರಿಯರ್ ಗತಿಯನ್ನೇ ಬದಲಿಸಿತು. ಕನ್ನಡ, ತಮಿಳು, ತೆಲುಗು, ಹಿಂದಿಯಲ್ಲಿ ಬಹು ಬೇಡಿಕೆ ಸೃಷ್ಟಿಸಿಕೊಂಡಿರುವ ಲೀಡಿಂಗ್ ಲೇಡಿ ಏಪ್ರಿಲ್ 5ಕ್ಕೆ 28ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.
ಏಪ್ರಿಲ್ 5ಕ್ಕೆ ನ್ಯಾಶನಲ್ ಕ್ರಶ್ ಹುಟ್ಟುಹಬ್ಬ ಅಂದೇ ರಶ್(Rashmika Mandanna) ಅಭಿನಯಿಸಿರುವ ಮೋಸ್ಟ್ ಎಕ್ಸ್ಪೆಕ್ಟೆಡ್ ʻಗರ್ಲ್ಫ್ರೆಂಡ್ʼ(Girlfriend) ಸಿನಿಮಾ ಟೀಸರ್ ಬಿಡುಗಡೆಯಾಗುತ್ತಿದೆ. ರಾಹುಲ್ ರವಿಂದ್ರನ್(Rahul Ravindran) ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರ ರಶ್ಮಿಕಾಗೆ ಸಖತ್ ಸ್ಪೆಶಲ್. ʻಗರ್ಲ್ಫ್ರೆಂಡ್ʼ(Girlfriend) ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ರಶ್ಮಿಕಾ ಲೀಡಿಂಗ್ ಲೇಡಿಯಾಗಿ ಈ ಸಿನಿಮಾದಲ್ಲಿ ಮಿಂಚಲಿದ್ದಾರೆ. ಇಲ್ಲಿವರೆಗೂ ಸೂಪರ್ ಸ್ಟಾರ್ಗಳ ಜೊತೆ ತೆರೆ ಹಂಚಿಕೊಂಡಿದ್ದ ನ್ಯಾಶನಲ್ ಕ್ರಶ್ ಇದೆ ಮೊದಲ ಬಾರಿಗೆ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದ್ದರಿಂದಲೇ ಈ ಸಿನಿಮಾ ರಶ್ ಅಂಡ್ ಅವ್ರ ಡೈ ಹಾರ್ಡ್ ಫ್ಯಾನ್ಸ್ಗೆ ವೆರಿ ಸ್ಪೆಶಲ್.
ರಶ್ ಹುಟ್ಟುಹಬ್ಬದಂದೇ ಈ ಸ್ಪೆಶಲ್ ಸಿನಿಮಾದ ಟೀಸರ್ ಬಿಡುಗಡೆ ಮಾಡಿ ಅವ್ರ ಅಭಿಮಾನಿಗಳಿಗೆ ಥ್ರಿಲ್ ನೀಡಲು ಚಿತ್ರತಂಡ ತೀರ್ಮಾನಿಸಿದೆ. ಹೆಸರಾಂತ ನಿರ್ಮಾಣ ಸಂಸ್ಥೆ ಗೀತಾ ಆರ್ಟ್ಸ್ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಈ ಸಿನಿಮಾವಲ್ಲದೇ 2024 ಕೂಡ ನ್ಯಾಶನಲ್ ಕ್ರಶ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ʻಕುಬೇರʼ ಸಿನಿಮಾದಲ್ಲಿ ಧನುಷ್ ಜೋಡಿಯಾಗಿರುವ ರಶ್ಮಿಕಾ(Rashmika Mandanna), ರೈನ್ ಬೋ, ಪುಷ್ಪ-2 ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.