Rashmika Mandanna: ಧನುಷ್(Danush) ನಾಯಕ ನಟನಾಗಿ ನಟಿಸುತ್ತಿರುವ ‘ಕುಬೇರ'(Kubera) ಸಿನಿಮಾ ಸಾಕಷ್ಟು ನಿರೀಕ್ಷೆಯನ್ನು ಕಾಲಿವುಡ್‌ನಲ್ಲಿ ಮೂಡಿಸಿದೆ. ಶೇಖರ್ ಕಮ್ಮುಲ ಆಕ್ಷನ್ ಕಟ್ ಹೇಳುತ್ತಿರುವ ʻಕುಬೇರʼ ಸಿನಿಮಾದಲ್ಲಿ ರಶ್ಮಿಕಾ Rashmika Mandanna) ಇದೇ ಮೊದಲ ಬಾರಿಗೆ ಧನುಶ್ ಜೊತೆ ತೆರ ಹಂಚಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಚಿತ್ರತಂಡ ರಶ್ಮಿಕಾ ಪಾತ್ರದ ಗ್ಲಿಂಪ್ಸ್ ಹಾಗೂ ಫಸ್ಟ್ ಲುಕ್ ಹಂಚಿಕೊಂಡಿದೆ
ಇದೀಗ ಚಿತ್ರತಂಡ ರಶ್ಮಿಕಾ(Rashmika Mandanna) ಅವರ ಫಸ್ಟ್ ಲುಕ್ ಮತ್ತು ಪಾತ್ರದ ಪರಿಚಯವನ್ನು ವಿಡಿಯೊ ಮೂಲಕ ಮೂಲಕ ಶೇರ್ ಮಾಡಿಕೊಂಡಿದೆ. ರಶ್ಮಿಕಾ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ರಶ್ಮಿಕಾ ಫಸ್ಟ್ ಲುಕ್ ಜತೆಗೆ ಕ್ಯಾರಕ್ಟರ್ ಗ್ಲಿಂಪ್ಸ್ ಕೂಡ ಚಿತ್ರತಂಡ ರಿವೀಲ್ ಮಾಡಿದೆ. ರಶ್ ಪಾತ್ರ ಸಖತ್ ಇಂಟ್ರಸ್ಟಿಂಗ್ ಆಗಿರಲಿದೆ ಎನ್ನುವುದನ್ನು ಕ್ಯಾರೆಕ್ಟರ್ ಗ್ಲಿಂಪ್ಸ್ ಹೇಳುತ್ತಿದೆ.
ಕುಬೇರ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ನಟ ನಾಗಾರ್ಜುನ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಿ ಈ ಚಿತ್ರ ತೆರೆ ಕಾಣಲಿದೆ. ದೇವಿ ಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.