ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಸರಪಟಾಕಿ ಹಚ್ಚಿ ಸಂಭ್ರಮಿಸುವಂತಹ ಸುದ್ದಿಯೊಂದು ಸಿಕ್ಕಿದೆ. ಕಳೆದೆರಡು ದಿನಗಳ ಹಿಂದೆ ಫ್ಲೈಟ್ ಏರಿ ಜಪಾನ್‌ಗೆ ಹಾರಿರೋ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ, ಅಲ್ಲಿನ ಮಾಧ್ಯಮಗಳಿಗೆ ನೀಡಿದ ಸಂದರ್ಶನವೊಂದರಲ್ಲಿ ವರ್ಲ್ಡ್ ಫೇಮಸ್ ಲವ್ವರ್ ಪ್ಲಸ್ ಕೋಸ್ಟಾರ್ ವಿಜಯ್ ದೇವರಕೊಂಡ ಬಗ್ಗೆ ಮಾತನಾಡಿದ್ದಾರೆ. ನಾನು ಮತ್ತು ವಿಜಯ್ ಇಬ್ಬರು ಒಟ್ಟಿಗೆ ಸಿನಿಮಾ ಮಾಡ್ತಾ, ಒಟ್ಟೊಟ್ಟಿಗೆ ಇಂಡಸ್ಟ್ರಿಯಲ್ಲಿ ಬೆಳೆದವರು. ನಾನು ಇವತ್ತು ಈ ಹಂತಕ್ಕೆ ಬೆಳೆದು ನಿಂತಿದ್ದೇನೆ, ಜೀವನದಲ್ಲಿ ಏನಾದರೂ ಅಚೀವ್ ಮಾಡಿದ್ದೇನೆ ಅಂದರೆ ಅದಕ್ಕೆ ವಿಜಯ್ ಕಾಂಟ್ರಿಬ್ಯೂಷನ್ ತುಂಬಾ ಇದೆ. ಸೋ, ವಿಜಯ್ ಹೇಳೋ ಮಾತನ್ನ ನಾನು ಕೇಳ್ತೀವಿ, ಅವರ ಮಾತುಗಳನ್ನ ಫಾಲೋ ಕೂಡ ಮಾಡ್ತೀನಿ ಎಂದಿದ್ದಾರೆ ನಟಿ ರಶ್ಮಿಕಾ.
ಅಷ್ಟಕ್ಕೂ, ವಿಜಯ್ ಮತ್ತು ರಶ್ಮಿಕಾ ನಡುವಿರೋದು ಬರೀ ಸ್ನೇಹಾನಾ ಅಥವಾ ಪ್ರೀತಿನೂ ಇದೆಯಾ? ಈ ಪ್ರಶ್ನೆಗೆ ಇಲ್ಲಿವರೆಗೂ ಉತ್ತರ ಸಿಕ್ಕಿಲ್ಲ. ಗೀತ ಗೋವಿಂದಂ ಹಾಗೂ ಡಿಯರ್ ಕಾಮ್ರೇಡ್ ಸಿನಿಮಾ ಮಾಡಿದಾಗಿಂದಲೂ ಈ ಜೋಡಿ ಮೇಲೆ ಎಲ್ಲರು ಕಣ್ಣಿಟ್ಟಿದ್ದಾರೆ. ಅಟ್ ದಿ ಸೇಮ್ ಟೈಮ್ ಇವರಿಬ್ಬರು ಕೂಡ ಆಗಾಗ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬೀಳ್ತಾರೆ. ಆಗೆಲ್ಲಾ ಜಸ್ಟ್ ಫ್ರೆಂಡ್ಸ್, ಜಸ್ಟ್ ಫ್ರೆಂಡ್ಸ್ ಅಂತೇಳಿಕೊಂಡು ಮೂ ಆಗ್ತಿರೋ ಲಿಲ್ಲಿ-ಬಾಬಿ, ಇತ್ತೀಚೆಗೆ ಎಂಗೇಜ್‌ಮೆಂಟ್ ಮಾಡಿಕೊಳ್ತಾರೆ ಅಂತ ಸುದ್ದಿಯಾಗಿದ್ದರು. ಇದೀಗ, ಸಾನ್ವಿ ಮತ್ತೊಮ್ಮೆ ವಿಜಯ್ ಬಗ್ಗೆ ಮಾತನಾಡೋ ಮೂಲಕ ಬಿಗ್ ಬ್ರೇಕಿಂಗ್ ನ್ಯೂಸ್ ಆಗಿದ್ದಾರೆ. ರೌಡಿಬಾಯ್ ಜೊತೆ ಸ್ಕ್ರೀನ್ ಶೇರ್ ಮಾಡೋದಕ್ಕೆ ನಾನು ಕೂಡ ಕಾತುರದಿಂದ ಕಾಯ್ತಿದ್ದೇನೆ ಅಂತೇಳೋ ಮೂಲಕ ಅಭಿಮಾನಿಗಳು ಸೂಪರ್ ಎಕ್ಸೈಟೆಡ್ ಆಗುವಂತೆ ಮಾಡಿದ್ದಾರೆ.
ಸದ್ಯ ರಶ್ಮಿಕಾ ಜಪಾನ್‌ನಲ್ಲಿದ್ದಾರೆ. ಕ್ರಂಚ್ ರೋಲ್ ಅನಿಮೆ ಅವಾರ್ಡ್ ಕಾರ್ಯಕ್ರಮಕ್ಕೆ ಸ್ಪೆಷಲ್ ಗೆಸ್ಟ್ ಆಗಿ ಹೋಗಿದ್ದಾರೆ. ಇಂಡಿಯಾದಿಂದ ಅಲ್ಲಿಗೆ ಹೋಗಿರುವ ಏಕೈಕ ಸ್ಟಾರ್ ಎನ್ನುವ ಖ್ಯಾತಿಗೂ ಪಾತ್ರವಾಗಿರೋ ಸಾನ್ವಿ, ಆವಾರ್ಡ್ ಕಾರ್ಯಕ್ರಮ ಮುಗಿಸಿ ಒಂದಿಷ್ಟು ಪೋಟೋಗಳನ್ನ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜಪಾನ್‌ಗೆ ಹೋಗ್ಬೇಕು ಅನ್ನೋದು ನನ್ನ ಬಾಲ್ಯದ ಕನಸಾಗಿತ್ತು. ಆ ಕನಸು ಕೊನೆಗೂ ಈಡೇರ್ತು ಎಂದಿರೋ ನ್ಯಾಷನಲ್ ಕ್ರಷ್, ಎಲ್ಲರನ್ನೂ ಇಲ್ಲಿ ಭೇಟಿಯಾಗುವುದು, ಇಷ್ಟೊಂದು ಪ್ರೀತಿ ಪಡೆಯುವುದು, ವಿಶೇಷವಾದ ಸ್ವಾಗತ ಪಡೆಯುವುದು. ಇಲ್ಲಿನ ಆಹಾರ, ಸ್ಥಳ, ಲವ್ಲಿ ಜನರು, ಎಲ್ಲವೂ ಅದ್ಭುತವಾಗಿದೆ ಎಂದು ಜಪಾನ್ ಕುರಿತು ನಟಿ ಸಂತಸ ವ್ಯಕ್ತಪಡಿಸಿದ್ದಾರೆ. ಧನ್ಯವಾದಗಳು ಜಪಾನ್. ಐ ಲವ್ ಯೂ. ನೀನು ನಿಜಕ್ಕೂ ಸ್ಪೆಷಲ್. ಇನ್ನೂ ನಾನು ಪ್ರತಿ ವರ್ಷವೂ ಇಲ್ಲಿಗೆ ಬರುತ್ತೇನೆ ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಎನಿವೇ ಸಾನ್ವಿ ಸಖತ್ ಶೈನ್ ಆಗ್ತಿದ್ದಾರೆ. ನ್ಯಾಷನಲ್ ಕ್ರಷ್ ಆಗಿದ್ದ ರಶ್ಮಿಕಾ ಈಗ ಇಂಟರ್‌ನ್ಯಾಷನಲ್ ಕಾರ್ಯಕ್ರಮಗಳಲ್ಲಿ ಮಿಂಚುತ್ತಿದ್ದಾರೆ. ಸದ್ಯ ರಶ್ಮಿಕಾ ಕೈಯಲ್ಲಿ ಪುಷ್ಪ 2, ರೈನ್‌ಬೋ, ಗರ್ಲ್‌ಫ್ರೆಂಡ್, ಅನಿಮಲ್ 2, ಧನುಷ್ (Dhanush) ಜೊತೆಗಿನ ಹೊಸ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಿವೆ. ಇದರ ಜೊತೆ ಆದಷ್ಟು ಬೇಗ ಡಿಯರ್ ಕಾಮ್ರೇಡ್ ಕಾಂಬೋ ಜೊತೆಯಾಗಲಿ. ಅವರಿಬ್ಬರ ಫ್ಯಾನ್ಸ್ ಥ್ರಿಲ್ಲಾಗುವಂತಹ ಸಮಾಚಾರ ಆದಷ್ಟು ಬೇಗ ಬರಲಿ ಅನ್ನೋದೇ ನಮ್ಮ ಆಶಯ