ಯಂಗ್ ಟೈಗರ್ ಜೊತೆ ಈ ಹಿಂದೆ ಹಲವಾರು ಜನ ಸೆಣಸಾಡಿದ್ದಾರೆ. ಇದೀಗ ಯಂಗ್ ಟೈಗರ್ ಜೊತೆ ಗುದ್ದಾಡೋದಕ್ಕೆ ಖುದ್ದು ರಾವಣನೇ ರೆಡಿಯಾಗಿದ್ದಾನೆ. ಈಗಾಗ್ಲೇ ಅಖಾಡದಲ್ಲಿ ಟೈಗರ್ ಹಾಗೂ ರಾವಣನ ಮುಖಾಮುಖಿಯಾಗಿದ್ದು, ಆ ಕುರಿತಾದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.
ಯಂಗ್ ಟೈಗರ್ ಜೊತೆ ರಾವಣನ ಕಾದಾಟ ಅಂದಾಗ ಕುತೂಹಲ ಕೆರಳುತ್ತೆ. ಒಂದಿಷ್ಟು ನಿರೀಕ್ಷೆಗಳು ಗರಿಗೆದರುತ್ತವೆ. ಮೊದಲಿಗೆ ರಾವಣ ಯಾರು ಅನ್ನೋ ಪ್ರಶ್ನೆ ಮೂಡುತ್ತೆ. ಹುಲಿ ಜೊತೆನೇ ಹೊಡೆದಾಡಿ ಆಸ್ಕರ್ ಕೊಳ್ಳೆಹೊಡೆದ ಯಂಗ್ ಟೈಗರ್ ಜೊತೆ, ಕಾಳಗ ನಡೆಸಲು ಬಂದ ಆ ರಾವಣನ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ನಿಮ್ನನ್ನೆಲ್ಲಾ ತುದಿಗಾಲಿನಲ್ಲಿ ನಿಲ್ಲಿಸುತ್ತೆ. ಆ ನಿಮ್ಮ ಕುತೂಹಲ ತಣಿಸಬೇಕು ಅಂದರೆ ಬಾಲಿವುಡ್ ನಟನ ಹೆಸರು ಹೇಳಲೇಬೇಕು. ಸೈಫ್ ಅಲಿಖಾನೇ ಯಂಗ್ ಟೈಗರ್ ಜೊತೆ ಸೆಣಸಾಡಲು ಬಂದಿರುವ ರಾವಣ ಎಂಬುದನ್ನ ಸ್ಪಷ್ಟಪಡಿಸ್ಬೇಕು.
ನಟ ಸೈಫ್ ಅಲಿಖಾನ್ಗೆ ರಾವಣ ಅಂತ ಯಾಕೆ ಕರೆಯುತ್ತಿದ್ದಾರೆ ಹೀಗೊಂದು ಪ್ರಶ್ನೆ ಕೆಲವರಲ್ಲಿ ಮೂಡುತ್ತೆ. ಅದಕ್ಕೆ ಉತ್ತರ ಆದಿಪುರುಷ್ ಸಿನಿಮಾ. ಯಸ್, ಈ ಸಿನಿಮಾದಲ್ಲಿ ಸೈಫ್ ರಾವಣನ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ಆದರೆ, ಸೈಫ್ ರಾವಣನಂತೆ ಕಾಣುತ್ತಿಲ್ಲ, ಲಂಕೆಯ ರಾವಣನಂತೆ ಸೈಫ್ನ ತೋರಿಸಿಲ್ಲ ಅಂತ ನೆಟ್ಟಿಗರು ನಿರ್ದೇಶಕ ಓಂ ರಾವತ್ನ ತರಾಟೆಗೆ ತೆಗೆದುಕೊಂಡಿದ್ದರು. ಇದೆಲ್ಲಾ ಹಳೆಯ ವಿಚಾರ. ತಾಜಾ ಸಮಾಚಾರ ಅಂದರೆ ಆದಿಪುರುಷ್ ರಿಲೀಸ್ ಗೂ ಮೊದಲೇ ಸೈಫ್ ಮತ್ತೊಂದು ಸೌತ್ ಸಿನಿಮಾಗೆ ಸಹಿ ಹಾಕಿದ್ದಾರೆ. ಎನ್ಟಿಆರ್ 30 ಸಿನಿಮಾದ ಮೂಲಕ ಮತ್ತೆ ಟಾಲಿವುಡ್ಗೆ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾರೆ.
ಆದಿಪುರುಷ್ ಚಿತ್ರದಲ್ಲಿ ಅಮರೇಂದ್ರ ಬಾಹುಬಲಿ ವಿರುದ್ಧ ರಾವಣನಾಗಿ ಹಲ್ಲಲ್ಲು ಕಡಿದ ಸೈಫ್, ಎನ್ಟಿಆರ್ 30 ಚಿತ್ರದಲ್ಲಿ ಯಂಗ್ ಟೈಗರ್ ಜೊತೆ ಖಳನಾಯಕನಾಗಿ ಕಾದಾಡಲಿದ್ದಾರೆ. ಈಗಾಗಲೇ ಶೂಟಿಂಗ್ ಅಖಾಡಕ್ಕೆ ಸೈಫ್ ಎಂಟ್ರಿಕೊಟ್ಟಿದ್ದು, ನಟ ಜೂನಿಯರ್ ಎನ್ಟಿಆರ್ ಹಾಗೂ ನಿರ್ದೇಶಕ ಕೊರಟಾಲ ಶಿವ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.
ಎನ್ಟಿಆರ್ 30 ಹೈವೋಲ್ಟೇಜ್ ಆ್ಯಕ್ಷನ್ ಸಿನಿಮಾ. ಕೊರಟಾಲ ಶಿವ ಈ ಚಿತ್ರವನ್ನು ಡೈರೆಕ್ಟ್ ಮಾಡ್ತಿದ್ದಾರೆ. ಜನತಾ ಗ್ಯಾರೇಜ್ ಸಿನಿಮಾದ ನಂತರ ಜೂನಿಯರ್ ಎನ್ಟಿಆರ್ ಹಾಗೂ ಕೊರಟಾಲ ಶಿವ ಮತ್ತೆ ಒಂದಾಗಿದ್ದು ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಆರ್ಆರ್ಆರ್ ಸಿನಿಮಾದಿಂದ ಗ್ಲೋಬಲ್ ಸ್ಟಾರ್ ಆಗಿ ತಾರಕ್ ಗುರ್ತಿಸಿಕೊಂಡಿರುವುದರಿಂದ ಎನ್ಟಿಆರ್30ಯತ್ತ ಇಡೀ ವಿಶ್ವಸಿನಿದುನಿಯಾವೇ ಕಣ್ಣರಳಿಸಿದೆ.
ಸದ್ಯಕ್ಕೆ ಎನ್ಟಿಆರ್-30 ಅಂತ ಕರೆಸಿಕೊಳ್ತಿರುವ ಈಚಿತ್ರಕ್ಕೆ ಇನ್ನೂ ಟೈಟಲ್ ಫೈನಲ್ ಆಗಿಲ್ಲ. ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತ ನೆರವೇರಿತ್ತು. ನಿರ್ದೇಶಕ ರಾಜಮೌಳಿ ಫಸ್ಟ್ ಕ್ಲಾಪ್ ಮಾಡಿದರೆ, ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ಅವರು ಕ್ಯಾಮರಾ ಸ್ವಿಚ್ ಆನ್ ಮಾಡುವ ಮೂಲಕ ಎನ್ಟಿಆರ್-30 ಚಿತ್ರಕ್ಕೆ ಚಾಲನೆ ನೀಡಿದ್ದರು. ಬಾಲಿವುಡ್ ನಟಿ ಜಾಹ್ನವಿ ಕಪೂರ್ ನಾಯಕಿಯಾಗಿ ಸಿನಿಮಾ ತಂಡ ಸೇರಿಕೊಂಡಿದ್ದರು. ಇದೀಗ, ಬಾಲಿವುಡ್ನಿಂದ ನಟ ಸೈಫ್ ಅಲಿಖಾನ್ ಜಾಯಿನ್ ಆಗಿದ್ದಾರೆ.
ಹೈದ್ರಬಾದ್ನಲ್ಲಿ ಶೂಟಿಂಗ್ ಭರದಿಂದ ಸಾಗ್ತಿದೆ. ಯುವಸುಧ ಆರ್ಟ್ಸ್ ಅಂಡ್ ಎನ್ಟಿಆರ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ, ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ಈ ಚಿತ್ರ ನಿರ್ಮಾಣಗೊಳ್ತಿದೆ. ಅನಿರುದ್ಧ್ ರವಿಚಂದ್ರನ್ ಸಂಗೀತ, ರತ್ನವೇಲು ಕ್ಯಾಮರಾ ಕೈಚಳಕ ಈ ಸಿನಿಮಾಗಿದ್ದು, ಏಪ್ರಿಲ್ 05- 2024ರಂದು ತೆರೆಗೆ ತರುವುದಕ್ಕೆ ಪ್ಲ್ಯಾನ್ ಮಾಡಲಾಗಿದೆ. ಈ ಚಿತ್ರದ ನಂತರ ಜೂನಿಯರ್ ಎನ್ಟಿರ್, ಕೆಜಿಎಫ್ ಕ್ಯಾಪ್ಟನ್ ಪ್ರಶಾಂತ್ ನೀಲ್ ಜೊತೆ ಕೈ ಜೋಡಿಸ್ತಿದ್ದಾರೆ. ಈಗಾಗ್ಲೇ ಎನ್ಟಿಆರ್ 31 ಟೈಟಲ್ನಲ್ಲಿ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಆ ಚಿತ್ರದ ಮೇಲೆಯೂ ನೂರೆಂಟು ನಿರೀಕ್ಷೆಯಿದೆ.