ಯಾವ ಸಿನಿಮಾ ಹಿಟ್ಟಾಗುತ್ತೋ, ಆ ಸಿನಿಮಾದ ನಿರ್ದೇಶಕರಿಗೆ, ನಟ-ನಟಿಯರಿಗೆ ಡಿಮ್ಯಾಂಡ್ ಹೆಚ್ಚಾಗೋದು ಸಹಜ. ಅದ್ರಂತೆ ಕಾಂತಾರ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ಟಾದ್ಮೇಲೆ ಡಿವೈನ್ ಸ್ಟಾರ್ ರಿಷಬ್ ಶೆಟ್ರಿಗೆ ಬೇಡಿಕೆ ಹೆಚ್ಚಾಯ್ತು. ಸೌತ್ ಮಾತ್ರವಲ್ಲ ನಾರ್ತ್ ಮಂದಿಯೂ ಕೂಡ ರೆಡ್ಕಾರ್ಪೆಟ್ ಹಾಕಿ ಪ್ಯಾನ್ ಇಂಡಿಯಾ ಪಟ್ಟಕ್ಕೇರಿ ಕುಳಿತ ರಿಷಬ್ಶೆಟ್ಟಿನಾ ಕರ್ಕೊಂಡು ಹೋಗೋದಕ್ಕೆ ಸ್ಕೆಚ್ ಹಾಕಿದ್ರು. ಆದರೆ, ಶೆಟ್ರು ಈ ಸಕ್ಸಸ್ ಪ್ಲಸ್ ಯಶಸ್ಸು ಎಲ್ಲಾ ಸಿಕ್ಕಿರೋದು ಕನ್ನಡಗರಿಂದ ಮತ್ತು ಕನ್ನಡ ಸಿನಿಮಾರಂಗದಿಂದ. ಹೀಗಿರುವಾಗ, ನಾನು ಏಕಾಏಕಿ ಚಿತ್ರರಂಗ ತೊರೆದು ಪರಭಾಷೆಗೆ ಹೋಗೋದು ಸರಿಯಿಲ್ಲ. ಅಲ್ಲಿ ಹೋಗಿ ಸಿನಿಮಾ ಮಾಡುವುದು ತರವಲ್ಲ ಎಂದು ಭಾವಿಸಿದ ಡಿವೈನ್ ಸ್ಟಾರ್, ನಾನು ಏನೇ ಮಾಡಿದ್ರೂ ಗಂಧದಗುಡಿಯಲ್ಲೇ ಮಾಡಬೇಕು, ಅದನ್ನ ವರ್ಲ್ಡ್ ವೈಡ್ ತಲುಪಿಸಬೇಕು ಎನ್ನುವ ನಿರ್ಧಾರಕ್ಕೆ ಬಂದರು. `ಕಾಂತಾರ ಪಾರ್ಟ್2′ ಮಾಡಲು ತೀರ್ಮಾನಿಸಿದ್ರು. ಇದಕ್ಕೆ ಹೊಂಬಾಳೆ ಸಂಸ್ಥೆ ಕೂಡ ಒಪ್ಪಿಗೆ ಸೂಚಿಸಿತು. ಕಾಂತಾರ ಸೀಕ್ವೆಲ್ ಅಲ್ಲ ಪ್ರೀಕ್ವೆಲ್ ಮಾಡೋದಾಗಿ ರಿಷಬ್ ಗಾರು ಪ್ಲಸ್ ನಿರ್ಮಾಪಕರು ಇಬ್ಬರು ಹೇಳಿಕೊಂಡಿದ್ದಾರೆ. ನೀವೆಲ್ಲರೂ ಎದುರುನೋಡ್ತಿರುವ ಕ್ಷಣಕ್ಕಾಗಿ ಹೊಂಬಾಳೆ ಮಾಲೀಕರು ಒಂದೊಳ್ಳೆ ಮುಹೂರ್ತ ನೋಡ್ತಿದ್ದಾರೆ.
`ಕಾಂತಾರ ಪಾರ್ಟ್2′ ಹೇಗಿರುತ್ತೆ ಎನ್ನುವ ಕುತೂಹಲದ ಜೊತೆಗೆ ಯಾವಾಗ ಸೆಟ್ಟೇರುತ್ತೆ ಎನ್ನುವ ಪ್ರಶ್ನೆ ಸಿನಿಮಾಪ್ರೇಮಿಗಳನ್ನ ಒಂಟಿಕಾಲಿನಲ್ಲಿ ನಿಲ್ಲಿಸಿದೆ. ರಿಷಬ್ ಹೋದಲ್ಲಿ ಬಂದಲ್ಲಿ ಸಿನಿಮಾ ಯಾವಾಗ ಶುರು ಎನ್ನುವ ಪ್ರಶ್ನೆ ಎದುರಾಗುತ್ತಿದ್ದು, ಮೊನ್ನೆ ಟೋಬಿ ಟ್ರೇಲರ್ ಲಾಂಚ್ ಸುದ್ದಿಗೋಷ್ಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈಗಾಗಲೇ ಕಥೆ ಬರೆದು ಮುಗಿಸಿದ್ದೇನೆ, ಸ್ಕ್ರಿಪ್ಟಿಂಗ್ ಹಂತದಲ್ಲೇ ಕಲಾವಿದರು ಹಾಗೂ ಶೂಟಿಂಗ್ ಲೋಕೇಷನ್ ಫೈನಲ್ ಮಾಡಿದ್ದೇನೆ. ಸದ್ಯ ಪ್ರಿಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಪ್ರೀಕ್ವೆಲ್ಗಾಗಿ ನಾನು ಹೇಗೆಲ್ಲಾ ಸಿದ್ದತೆ ನಡೆಸಿದ್ದೇನೆ ಅನ್ನೋದನ್ನ ನಾನು ಮೇಕಿಂಗ್ ಮೂಲಕವೇ ತೋರಿಸುತ್ತೇನೆ. ಆದರೆ, ಸಿನಿಮಾ ಮುಹೂರ್ತ ಯಾವಾಗ? ಎಲ್ಲಿ? ಹೇಗಿರುತ್ತೆ? ಎಷ್ಟು ಗ್ರ್ಯಾಂಡ್ ಆಗಿ ಲಾಂಚ್ ಆಗುತ್ತೆ? ಇದ್ಯಾವ ಪ್ರಶ್ನೆಗೂ ನನ್ನ ಬಳಿ ಉತ್ತರವಿಲ್ಲ. ಯಾಕಂದ್ರೆ, ಅದನ್ನ ಪ್ರೊಡಕ್ಷನ್ ಹೌಸ್ ನೋಡಿಕೊಳ್ಳುತ್ತೆ. ಹೊಂಬಾಳೆ ಸಂಸ್ಥೆಯೇ ಅಧಿಕೃತವಾಗಿ ಎಲ್ಲವನ್ನೂ ಘೋಷಣೆ ಮಾಡುತ್ತೆ. ಸೋ, ಅಲ್ಲಿವರೆಗೂ ಕುತೂಹಲದಿಂದ ಕಾದು ನೋಡಬೇಕು ಎಂದರು.
ಇದೇ ವೇಳೆ ಮಾತುಮುಂದುವರೆಸಿದ ರಿಷಬ್, ಶೂಟಿಂಗ್ ಇಷ್ಟೇ ದಿನದಲ್ಲಿ ಮುಗುಸ್ಬೇಕು ಅನ್ನೋ ಪ್ಲ್ಯಾನ್ ಏನು ಹಾಕಿಕೊಂಡಿಲ್ಲ. ಕಥೆ ಎಷ್ಟು ದಿನ ಡಿಮ್ಯಾಂಡ್ ಮಾಡುತ್ತೋ, ಅಷ್ಟು ದಿನ `ಕಾಂತಾರ-ಪ್ರೀಕ್ವೆಲ್’ ಕಥೆಯ ಚಿತ್ರೀಕರಣ ಸಾಗುತ್ತೆ. ಅಂದ್ಹಾಗೇ, ಪರಭಾಷೆಯಿಂದಲೂ ನಂಗೆ ಸಾಕಷ್ಟು ಆಫರ್ಸ್ ಬಂದಿವೆ, ಈಗ್ಲೂ ಬರುತ್ತಲೇ ಇವೆ. ಆದರೆ, ನನ್ನ ಮೊದಲ ಆದ್ಯತೆ ಕಾಂತಾರ-2. ಹೀಗಾಗಿ, ನನ್ನ ಸಿನಿಮಾಗೆ ಪ್ರಾಮುಖ್ಯತೆ ನೀಡುತ್ತಿದ್ದೇನೆ. ನೆಕ್ಸ್ಟ್ ಯಾವ್ ಸಿನಿಮಾ ಮಾಡ್ತೀನಿ? ಏನ್ ಕಥೆ ಗೊತ್ತಿಲ್ಲ. ಸದ್ಯಕ್ಕೆ ಕಾಡುಬೆಟ್ಟು ಶಿವಪ್ಪನಾಗಿ ಕಾಂತಾರ ಝೋನ್ನಲ್ಲಿ ಇರುವುದಾಗಿ ತಿಳಿಸಿದ್ದಾರೆ. ಒಟ್ನಲ್ಲಿ ಕಾಂತಾರ ಎನ್ನುವ ಮೂರಕ್ಷರದ ಮುತ್ತಿನಂತಹ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ರೀಚ್ ಆಗಿರೋ ಶೆಟ್ರು, ಈ ಭಾರಿ ಪ್ಯಾನ್ ವರ್ಲ್ಡ್ ರೀಚ್ ಆಗುವ ಮಹಾ ಪ್ಲ್ಯಾನ್ ಮಾಡಿದ್ದಾರೋ ಏನೋ ಗೊತ್ತಿಲ್ಲ. ಎನಿವೇ ಆಲ್ ದಿ ಬೆಸ್ಟ್ ಶೆಟ್ರೆ. ಕೀಪ್ ರಾಕಿಂಗ್ ಅಂಡ್ ಕೀಪ್ ಗ್ರೋಯಿಂಗ್.