Rishab Shetty: ʻಕಾಂತಾರʼ(Kantara) ಸಿನಿಮಾ ಮೂಲಕ ಅಪಾರ ಖ್ಯಾತಿ ಗಳಿಸಿರುವ ನಟ ರಿಷಭ್ ಶೆಟ್ಟಿ (Rishab Shetty). ಕನ್ನಡದಲ್ಲಿ ತೆರೆಕಂಡು ವರ್ಲ್ಡ್ ವೈಡ್ ಸಿನಿ ಪ್ರೇಕ್ಷಕರ ಮನ ಗೆದ್ದು ದಾಖಲೆಯ ಕಲೆಕ್ಷನ್ ಮಾಡಿರುವ ಸಿನಿಮಾ ʻಕಾಂತಾರʼ. ರಿಷಬ್ ಶೆಟ್ಟಿ ಈ ಚಿತ್ರದ ಮೂಲಕ ಭಾರತೀಯ ಸಿನಿ ಮಾರುಕಟ್ಟೆಯಲ್ಲಿ ಅಪಾರ ಖ್ಯಾತಿ ಗಳಿಸಿಕೊಂಡಿದ್ದಾರೆ. ಕಾಂತಾರ ಪ್ರಿಕ್ವೆಲ್ನಲ್ಲಿ ಬ್ಯುಸಿ ಇರುವ ನಟ ಈಗ ಫ್ಯಾಮಿಲಿ ಜೊತೆ ಜಾಲಿ ಮೂಡ್ಗೆ ಜಾರಿದ್ದಾರೆ.
ಕಾಂತಾರ ಪ್ರಿಕ್ವೆಲ್ ಕೆಲಸದಲ್ಲಿ ಬ್ಯುಸಿ ಇರುವ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ(Rishab Shetty) ಬಿಡುವಿನ ಸಮಯವನ್ನು ಕುಟುಂಬಕ್ಕೆ ಮೀಸಲಿಟ್ಟಿದ್ದಾರೆ. ಪತ್ನಿ, ಇಬ್ಬರು ಮುದ್ದಾದ ಮಕ್ಕಳೊಂದಿಗೆ ಮೃಗಾಲಯಕ್ಕೆ ಭೇಟಿ ನೀಡಿ ಬಿಡುವಿನ ಸಮಯವನ್ನ ಎಂಜಾಯ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ಹಂಚಿಕೊಂಡು ʻವೈಲ್ಡ್ ಅಡ್ವೆಂಚರರ್ಸ್ ವಿತ್ ಮೈ ಲಿಟ್ಲ್ ಎಕ್ಸ್ಪ್ಲೋರರ್ಸ್ʼ ಎಂದು ಕ್ಯಾಪ್ಷನ್ ನೀಡಿದ್ದಾರೆ.
ʻಕಾಂತಾರʼ(Kantara)ಪ್ರಿಕ್ವೆಲ್ ಮುಹೂರ್ತ ನೆರವೇರಿದ್ದು, ಬಿಗ್ ಬಜೆಟ್ನಲ್ಲಿ ಪ್ರಿಕ್ವೆಲ್ ಮೂಡಿ ಬರುತ್ತಿದೆ. ರಿಷಬ್ ಶೆಟ್ಟಿ ಹುಟ್ಟೂರಾದ ಕೆರಾಡಿಯಲ್ಲಿ ಬೃಹತ್ ಸೆಟ್ ನಿರ್ಮಾಣ ಮಾಡಲಾಗುತ್ತಿದೆ. ಪ್ರಿಪ್ರೊಡಕ್ಷನ್ ಕೆಲಸಗಳ ತಯಾರಿ ಜೋರಾಗಿ ನಡೆಯುತ್ತಿದ್ದು ಸದ್ಯದಲ್ಲೇ ಸಿನಿಮಾ ಶೂಟಿಂಗ್ ಆರಂಭವಾಗಲಿದೆ. ಇದರ ನಡುವೆ ಫ್ಯಾಮಿಲಿ ಜೊತೆ ಒಂದಷ್ಟು ಸಮಯ ಕಳೆದಿದ್ದಾರೆ ಡಿವೈನ್ ಸ್ಟಾರ್.