Yash: ಬಿಟೌನ್ ಅಂಗಳದ ಬಿಗ್ ಬಜೆಟ್ ಸಿನಿಮಾ ‘ರಾಮಾಯಣ’(Ramayana). ಸೆಟ್ಟೇರಿದ ದಿನದಿಂದ ಚಿತ್ರದ ಅಪ್ಡೇಟ್‌ಗಳ ಬಗ್ಗೆ ಸಿನಿಲೋಕದಲ್ಲಿ ಇನ್ನಿಲ್ಲದ ಕುತೂಹಲ. ಸದ್ಯಕ್ಕಂತೂ ‘ರಾಮಯಣ’ಕ್ಕೆ ರಾಮ, ಸೀತೆ ಯಾರು ಎನ್ನೋದಕ್ಕೆ ಉತ್ತರ ಸಿಕ್ಕಿದೆ ಆದ್ರೆ ರಾವಣ ಪಾತ್ರಕ್ಕೆ ಉತ್ತರ ಸಿಗುವ ಹೊತ್ತಲ್ಲಿ ‘ರಾಕಿಂಗ್’ ಸುದ್ದಿಯೊಂದು ಎಲ್ಲರ ಕಿವಿ ನಿಮಿರುವಂತೆ ಮಾಡಿದೆ.
‘ದಂಗಲ್’ ಸಿನಿಮಾ ಖ್ಯಾತಿಯ ನಿತೇಶ್ ತಿವಾರಿ ಸೂತ್ರಧಾರರಾಗಿರುವ ‘ರಾಮಾಯಣ’(Ramayana) ಸಿನಿಮಾದತ್ತ ಇಡೀ ಭಾರತೀಯ ಚಿತ್ರರಂಗದ ಕಣ್ಣು ನೆಟ್ಟಿದೆ. ದಿನಕ್ಕೊಂದು ಕುತೂಹಲವನ್ನು ಸೃಷ್ಟಿಸುತ್ತಿರುವ ಸಿನಿಮಾದಲ್ಲಿ ನ್ಯಾಶನಲ್ ಸ್ಟಾರ್ ಯಶ್(Yash) ರಾವಣ ಪಾತ್ರಕ್ಕೆ ಬಣ್ಣ ಹಚ್ಚುತ್ತಾರೆ ಎಂಬ ಸುದ್ದಿ ಸುದೀರ್ಘವಾಗಿ ಕೇಳಿ ಬಂದಿತ್ತು. ರಾಕಿ ಭಾಯ್ ಅಭಿಮಾನಿಗಳು ರಾವಣನಾಗಿ ಯಶ್ ಲುಕ್ ಕಲ್ಪನೆ ಮಾಡಿಕೊಳ್ಳುತ್ತಿರುವಾಗಲೇ ಬೆಳ್ಳಂಬೆಳಿಗ್ಗೆ ಯಶ್ ಬಿಗ್ ಸರ್ಪ್ರೈಸ್ ನೀಡಿ ಎಲ್ಲರ ಗಮನ ತಮ್ಮತ್ತ ಸೆಳೆದುಕೊಂಡಿದ್ದಾರೆ.
ಯಶ್(Yash) ರಾವಣ ಪಾತ್ರಕ್ಕೆ ಬಣ್ಣಹಚ್ಚೋದು ಬಹುತೇಕ ಡೌಟ್, ಹಾಗಂತ ಅಭಿಮಾನಿಗಳು ಬೇಸರವಾಗೋ ಪ್ರಮೇಯವೇ ಬೇಡ. ಅದಕ್ಕಿಂತ ದೊಡ್ಡ ಸಿಹಿ ಸುದ್ದಿ ನೀಡಿದ್ದಾರೆ ಯಶ್. ನಿರ್ಮಾಪಕನಾಗಿ ಬಿಗ್ ಬಜೆಟ್ ಸಿನಿಮಾ ಭಾಗವಾಗಲಿದ್ದಾರೆ. ಚಿತ್ರದ ನಿರ್ಮಾಪಕರಲೊಬ್ಬರಾಗಿ ನಮಿತ್ ಮಲ್ಹೋತ್ರ ಜೊತೆ ಕೈ ಜೋಡಿಸಿದ್ದಾರೆ. ರಾಕಿ ಭಾಯ್ ನೀಡಿರುವ ಟ್ವಿಸ್ಟ್ ಸದ್ಯ ಚಿತ್ರರಂಗದಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿದೆ.