Rashmika Mandanna ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ(Rashmika Mandanna) ಟ್ರೋಲ್‌ಗೆ ಗುರಿಯಾಗಿದ್ದಾರೆ. ಅವರ ಪೋಸ್ಟ್ ಹಾಗೂ ಕ್ಯಾಪ್ಷನ್ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆಗೆ ಕಾರಣವಾಗಿದೆ. ಸದಾ ಟ್ರೋಲ್ ಹೈಕ್ಳಿಗೆ ಆಹಾರವಾಗೋ ರಶ್ಮಿಕಾ ಈ ಬಾರಿ ಟ್ರೋಲ್‌ಗೆ ಗುರಿಯಾಗಿದ್ದು ದೇಶದ ಬಗ್ಗೆ ಮಾತನಾಡಿದ್ದಕ್ಕೆ.
ಸಿನಿಮಾ ಕಾರಣಕ್ಕೋ, ಡ್ರೆಸ್ ಕಾರಣಕ್ಕೋ, ಯಾವುದೋ ಹೇಳಿಕೆ ಕಾರಣಕ್ಕೋ ಟ್ರೋಲ್‌ಗೆ ಗುರಿಯಾಗೋ ರಶ್ಮಿಕಾ(Rashmika Mandanna) ಫರ್ ದಿ ಫಸ್ಟ್ ಟೈಂ ರಾಜಕೀಯವಾಗಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ದೇಶದ ಪ್ರಗತಿ ಬಗ್ಗೆ ಮಾತನಾಡಿದಕ್ಕೆ ಟ್ರೋಲ್‌ಗೆ ಗುರಿಯಾಗಿದ್ದಾರೆ. ಪಕ್ಷವೊಂದರ ಪರ ಬ್ಯಾಟ್ ಬೀಸಿದ್ದಕ್ಕೆ ವಿರೋಧಕ್ಕೆ ಗುರಿಯಾಗಿದ್ದಾರೆ. ಹೌದು, ರಶ್ಮಿಕಾ ವರ್ಷದ ಆರಂಭದಲ್ಲಿ ಉದ್ಘಾಟನೆಗೊಂಡ ಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನವ ಶೇವಾ ಅಟಲ್ ಸೇತು ಬಗ್ಗೆ ಹೊಗಳಿ ಮಾತನಾಡಿದ್ದಾರೆ. ಜೊತೆಗೆ ದೇಶದ ಪ್ರಗತಿ ಬಗ್ಗೆ ಮೂಕವಿಸ್ಮಿತಳಾಗಿದ್ದೇನೆ ಅಂದಿದ್ದಾರೆ. ಇದುವೆ ಈಗ ಪರ ವಿರೋಧದ ಚರ್ಚೆಗೆ ಕಾರಣವಾಗಿದೆ.
ಎರಡು ಗಂಟೆಯಲ್ಲಿ ಮಾಡಬಹುದಾದ ಪ್ರಯಾಣವನ್ನು ಈ ಸೇತುವೆಯಿಂದಾಗಿ 20 ನಿಮಿಷದಲ್ಲಿ ಮಾಡುಬಹುದು. ಬಹುಶಃ ಕಳೆದ ಹತ್ತು ವರ್ಷದಲ್ಲಿ ದೇಶದ ಬೆಳವಣಿಗೆಯನ್ನು ನೋಡಿದ್ರೆ ಭಾರತ ಎಲ್ಲೂ ನಿಂತಿಲ್ಲ ಎಂದು ಭಾವಿಸುತ್ತೇನೆ. ಈ ಬೆಳವಣಿಗೆ ಅದ್ಭುತ ಎನಿಸುತ್ತದೆ. ಇದು ನನ್ನನ್ನು ನಿಜವಾಗಿಯೂ ಮೂಕಳನ್ನಾಗಿಸಿದೆ. ಭಾರತ ಅತ್ಯಂತ ಬುದ್ದಿವಂತ ದೇಶ ಎಂದು ನಾನು ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ ರಶ್ಮಿಕಾ. ಈ ವಿಡಿಯೋ ವೈರಲ್ ಆಗಿ ಟ್ರೋಲ್‌ಗೆ ಗುರಿಯಾಗಿಸಿದೆ.
ರಶ್ಮಿಕಾ(Rashmika Mandanna) ಈ ಮಾತಿಗೆ ಕಮೆಂಟ್ಸ್‌ಗಳ ಸುರಿಮಳೆಯಾಗುತ್ತಿದೆ. ಒಂದೇ ಆಂಗಲ್‌ನಲ್ಲಿ ದೇಶವನ್ನು ನೋಡಬೇಡ. ಮೂಲಭೂತ ಸೌಕರ್ಯದಿಂದ ಜನ ಅನುಭವಿಸುತ್ತಿರುವ ಸಮಸ್ಯೆಗಳತ್ತ ನೋಡು, ದೇಶದಲ್ಲಿರುವ ಅವ್ಯವಸ್ಥೆ, ಸೌಕರ್ಯದ ಕೊರತೆ ಇವುಗಳತ್ತಲೂ ನೋಡು ಎಂದು ರಶ್ಮಿಕಾಗೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಮುಂಬೈನಲ್ಲಿ ಹೋಲ್ಡೀಂಗ್ಸ್ ಕುಸಿದು 14 ಜನ ಸಾವನಪ್ಪಿದ್ದು, ಮುಂಬೈ ಸ್ಥಳೀಯ ರೈಲ್ವೇ ನಿಲ್ದಾಣದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಜನದಟ್ಟಣೆ ಇದೆಲ್ಲವನ್ನು ಆಕೆಗೆ ಜ್ಞಾಪಿಸಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.