ಮಂಗಳವಾರ, ಜುಲೈ 1, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

rubella disease: ಎಚ್ಚರ ತಪ್ಪಿದರೆ ದಾಂಗುಡಿಯಿಟ್ಟು ಕಾಡುತ್ತೆ ದಡಾರ!

Majja Webdeskby Majja Webdesk
29/03/2025
in Lifestyle, Majja Special
Reading Time: 1 min read
rubella disease: ಎಚ್ಚರ ತಪ್ಪಿದರೆ ದಾಂಗುಡಿಯಿಟ್ಟು ಕಾಡುತ್ತೆ ದಡಾರ!

-ಮಾರಣಾಂತಿಕ ಕಾಯಿಲೆಯ ಬಗ್ಗೆ ವ್ಯಾಪಕ ಅಪಪ್ರಚಾರ!

-ಬೇಸಿಗೆಯಲ್ಲೇ ಬಂದೆರಗೋ ಡೆಡ್ಲಿ ವೈರಸ್!

ರಾಜ್ಯಾದ್ಯಾಂತ ದಡಾರ-ರುಬೆಲ್ಲಾ ಎಂಬ ಗಂಭೀರ ರೋಗ ಹರಡಿಕೊಂಡಿದೆ ಇದರ ನಿರ್ಮೂಲನೆಗಾಗಿ ಸರ್ಕಾರ ಸಮರೋಪಾದಿಯಲ್ಲಿ ಉಚಿತವಾಗಿ ಲಸಿಕೆ ಹಾಕುವ ಯೋಜನೆಯನ್ನು ಹಮ್ಮಿಕೊಂಡಿದೆ. ಇದರ ಔಷಧಿಯನ್ನು ಟೆಂಡರ್ ಮೂಲಕ ಖರೀದಿಸುವಂತೆ ಕೆಲವು ಸಂಸ್ಥೆಗಳಿಗೆ ಸರ್ಕಾರ ಆಹ್ವಾನ ನೀಡಿತ್ತು. ಟೆಂಡರ್ ಸಿಗದೆ ಇರುವ ಖಾಸಗಿ ಕಂಪನಿಗಳು ದಡಾರ-ರುಬೆಲ್ಲಾ ಲಸಿಕೆ ವಿರುದ್ಧ ಅಪಪ್ರಚಾರ ಸಾರಿದವು. ಇದರ ಪರಿಣಾಮವಾಗಿ ಉಡುಪಿ ಕುಂದಾಪುರ, ಭಟ್ಕಳ್, ಹುಬ್ಬಳಿ, ಧಾರವಾಡ ನಗರಗಳಲ್ಲಿ ಜನ ಭಯಭೀತರಾಗಿ ಲಸಿಕೆಯನ್ನು ಹಾಕಿಸಿಕೊಳ್ಳುವುದಕ್ಕೆ ಹಿಂದೇಟು ಹಾಕತೊಡಗಿದರು.
ಅದರಲ್ಲೂ ಒಂದು ಜನಾಂಗದವರು ಈ ಲಸಿಕೆಯಿಂದ ಸಂತಾನ ಶಕ್ತಿ ತ್ತದೆಂಬಂಥಾ ಸುದ್ದಿಯನ್ನು ನಂಬಿ ಕೊಂಡಿದ್ದರು. ಕೇಂದ್ರ ಸರ್ಕಾರಂದು ಸಮುದಾಯವನ್ನು ದುರ್ಬಲಗೊಳಿಸಲು ಈ ಲಸಿಕೆ ಹಾಕುತ್ತಿದೆ. ದಯವಿಟ್ಟು ಯಾರು ಲಸಿಕೆಯನ್ನು ಹಾಕಿಸಿಕೊಳ್ಳಬೇಡಿ ಎಂಬಂತೆ ವಾಟ್ಸ್‌ಪ್ ಮತ್ತು ಫೇಸ್‌ಬುಕ್‌ಗಳಲ್ಲಿ ಸಂದೇಶವನ್ನು ಹರಿಯ ಬಿಟ್ಟು ಜನ ಕಂಗಾಲಾಗುವಂತೆ ಮಾಡಿದವು. ಜನರು ಇದರಿಂದ ಗೊಂದಲಕ್ಕೀಡಾಗಿ ಲಸಿಕೆ ಹಾಕುವುದನ್ನೇ ತಿರಸ್ಕರಿಸಿದರು. ಇದೊಂದು ಮೂಢನಂಬಿಕೆ ಹೇಗೆ ಹರಡಿತು ಏನೋ ಗೊತ್ತಾಗಲಿಲ್ಲಾ ಆದರೂ ಜನ ಸರ್ಕಾರದ ಯೋಜನೆಯನ್ನು ಹಾಳು ಮಾಡುವುದಕ್ಕೆ ಇಂತಹ ಕುತಂತ್ರಗಳನ್ನು ಹೆಣೆಯೋದು ಸಾಮಾನ್ಯವಾಗಿದೆ.

ಅಪಪ್ರಚಾರದ ಭರಾಟೆ


ಸಾಮಾಜಿಕ ಜಾಲತಾಣಗಳನ್ನು ನಂಬುವುದರಲ್ಲಿ ಸದಾ ಮುಂದು ಸಾಮಾಜಿಕ ಕಳಕಳಿಯನ್ನು ಮರೆತವರು ರಾಜಕೀಯ ಹುನ್ನಾರದಿಂದ ಜನತೆಯ ಮನಶಾಂತಿಯನ್ನು ಕದಡುವುದು ಯಾವ ನ್ಯಾಯ? ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಇತರೆ ಪಕ್ಷಗಳು ಈ ಯೋಜನೆಯನ್ನು ಬೆಂಬಲಿಸಬೇಕಾಗಿತ್ತು, ದುರಾದೃಷ್ಟವೆಂದರೆ ವಿರೋಧ ಪಕ್ಷಗಳು ಇದರ ವಿರುದ್ಧ ಅಪಪ್ರಚಾರ ಮಾಡುತ್ತಿವೆ. ರಾಜಕೀಯ ನಾಯಕರೆ ಕಂಡ ಕಂಡಲ್ಲಿ ಇದರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ದಡಾರ್ ಲಸಿಕೆ ವಿರುದ್ಧ ಮಾತನಾಡಿ ತಮ್ಮ ಅಜ್ಞಾನವನ್ನು ಪ್ರದರ್ಶಿಸುತ್ತಿದ್ದಾರೆ. ಸಿದ್ಧರಾಮಯ್ಯನವರ ಸರ್ಕಾರದ ಯೋಜನೆಗಳನ್ನು ಹಾಳುಗೆಡುವುತ್ತಿದ್ದಾರೆ. ಸಾಮಾಜಿಕ ಜಾಲತಾನಗಳಲ್ಲಿ ಸಂಧೇಶಗಳನ್ನು ಬಿಡುವ ಮನಸ್ಥಿತಿಯನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಅರಿಯಬೇಕು. ಒಂದು ಜನಾಂಗದ ಭಾವನೆಗಳಿಗೆ ದಕ್ಕೆ ತರುವುದು ಸಾಮಾಜಿಕ ಐಕ್ಯತೆಯನ್ನು ಹಾಳುಗೆಡುವುದು ತರವಲ್ಲ. ಈ ವದಂತಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯಾದಂತ ಹರಡಿದೆ.
ನಮ್ಮ ರಾಜ್ಯದ ಜನರು ರುಬೆಲ್ಲಾ ಮತ್ತು ದಡಾರ್ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಹಿಂಜರಿಯುತ್ತಿದ್ದಾರೆ. ಜನರಲ್ಲಿ ತಪ್ಪು ಕಲ್ಪನೆಯನ್ನು ಹುಟ್ಟು ಹಾಕುತ್ತುರುವ ಸಾಮಾಜಿಕ ಜಾಲತಾನಗಳು ಇಂತಹ ಕೆಲಸವನ್ನು ಮಾಡಬಾರದು ಸಾಮಾಜಿಕ ಜಾಲತಾನಗಳು ಜನರಿಗೆ ಒಳ್ಳೆಯ ಸಂಧೆಶಗಳನ್ನು ರವಾನಿಸಬೇಕು. ಜನರಲ್ಲಿ ಅನಗತ್ಯ ಆತಂಕವನ್ನು ಹುಟ್ಟಿಸಬಾರದು. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳನ್ನು ಬಳಸುವವರು ಪ್ರಜ್ಞಾವಂತರು ಬುದ್ಧಿವಂತರು ಆಗಿರುತ್ತಾರೆ. ಅವರು ಇಂತ ಸಂಧೇಶಗಳನ್ನು ರವಾನಿಸಬಾರದು ಅವುಗಳನ್ನು ಗ್ರೂಪ್‌ಗಳಲ್ಲಿ ಶೇರ್ ಮಾಡಿಕೊಳ್ಳಬಾರದು. ಸಾರ್ವಜನಿಕರಲ್ಲಿ ಒಳ್ಳೆಯ ಸಂಧೇಶಗಳನ್ನು ಬಿತ್ತುವುದಕ್ಕೆ ಇರುವ ಜಾಲತಾಣಗಳು ದಾರಿ ತಪ್ಪಿಸಬಾರದು. ದಡಾರ್-ರುಬೆಲ್ಲಾ ರೋಗಗಳಿಗೆ ಲಸಿಕೆ ಹಾಕಿಸುವುದನ್ನು ಸಾರ್ವಜನಿಕರು ಮರೆಯಬಾರದು ಇದರಿಂದ ಯಾವುದೆ ಅಪಾಯವಿಲ್ಲ. ಔಷದಿ ಕಂಪನಿಗಳು ಮಾಡುವ ಈ ಹುಣ್ಣಾರವನ್ನು ನಂಬಬೇಡಿ ರುಬೆಲ್ಲಾ-ದಡಾರ್ ರೋಗಗಳು ನಿಮ್ಮ ಮಕ್ಕಳಿಗೆ ಮಾರಕ ಕಾಯಿಲೆಗಳಾಗಿವೆ. ಇವುಗಳಿಂದ ನಿಮ್ಮ ಮಕ್ಕಳನ್ನು ರಕ್ಷಿಸಲು ಸರ್ಕಾರ ಯೋಜನೆ ಜಾರಿಗೆ ತಂದಿದೆ ಎಂಬುದನ್ನು ಮರೆಯಬಾರದು.

ದಡಾರ ಅಂದ್ರೇನು?


ಹಾಗಾದರೆ, ಈ ದಡಾರ ಅಂದರೇನು? ಅದು ನಿಜಕ್ಕೂ ಅಷ್ಟೊಂದು ಮಾರಣಾಂತಿಕ ಕಾಯಿಲೆಯಾ? ನಮ್ಮ ದೇಶದಲ್ಲಿ ಈ ಕಾಯಿಲೆಯ ಸ್ಥಿತಿಗತಿ ಹೇಗಿದೆ? ಇಂಥಾ ಹತ್ತಾರು ಪ್ರಶ್ನೆಗಳು ಕಾಡುತ್ತವೆ. ಈ ನಿಟ್ಟಿನಲ್ಲಿ ಹೇಳೋದಾದರೆ, ದಡಾರ ಒಂದು ಸಾಂಕ್ರಾಮಿಕ ರೋಗ. ಪ್ಯಾರೊಮಿಕ್ಸ್ ಎಂಬ ವೈರಸ್ ಈ ರೋಗಕ್ಕೆ ಕಾರಣ. ಪಾರಾಮಿಕ್ಸೋ ಗುಂಪಿಗೆ ಸೇರಿದ ಮೋರ್ಬಿಲಿ ಎಂಬ ವೈರಸ್ ಗಳಿಂದ ಉದ್ಭವಿಸುವ ದಡಾರವನ್ನು ವೈದ್ಯಕೀಯ ಪರಿಭಾಷೆಯಲ್ಲಿ ಮೀಸಲ್ಸ್ ಅಂತ ಕರೆಯುತ್ತಾರೆ. ಈ ಕಾಯಿಲೆ ಬಹುವಾಗಿ ಮಕ್ಕಳನ್ನು ಕಾಡುತ್ತದೆ. ಅತ್ಯಂತ ವೇಗತರವಾದ ಸಾಂಕ್ರಾಮಿಕವಾಗಿ ಹರಡಿ ತೀವ್ರ ಸ್ವರೂಪ ಪಡೆದು ಕಾಡುತ್ತದೆ. ಆದರೆ ಇದು ಆರು ತಿಂಗಳ ಒಳಗಿನ ಹಸುಗೂಸುಗಳನ್ನು ಬಾಧಿಸೋದಿಲ್ಲ. ಐದರಿಂದ ಎಂಟು ವರ್ಷ ವಯಸ್ಸಿನ ಮಕ್ಕಳನ್ನು ಹೆಚ್ಚಾಗಿ ಕಾಡುವ ಈ ರೋಗ ಬೇಸಿಗೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಈ ಕಾಯಿಲೆಯ ರೋಗ ಲಕ್ಷಣಗಳನ್ನು ಮೊದಲೇ ಪತ್ತೆ ಮಾಡಿದರೆ ಕಣ್ಣಾಲಿಗಳ ಉರಿಯೂತ ಹಾಗೂ ಬೆಳಕನ್ನು ನೋಡಲಾಗದಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಮತ್ತೆ ಕೆಲ ಮಕ್ಕಳಲ್ಲಿ ಜ್ವರ ಮತ್ತು ಕೆಮ್ಮು ತೀವ್ರವಾಗಿ ಉಲ್ಬಣಿಸುತ್ತದೆ. ಇದಾಗಿ ಒಂದೆರಡು ದಿನಗಳಲ್ಲೇ ಮಗುವಿನ ಬಾಯಿಯ ಒಳಭಾಗದಲ್ಲಿ ಬಿಳಿಯ ಚುಕ್ಕೆಯಿರುವ ಕೆಂಪು ಗುಳ್ಳೆಗಳು ಗುಂಪು ಗುಂಪಾಗಿ ಕಾಣಿಸಿಕೊಳ್ಳುತ್ತವೆ. ಐದು ದಿನಗಳ ಬಳಿಕ ಮಗುವಿನ ಮುಖ ಕುತ್ತಿಗೆಗಳ ಮೇಲೆ ಗುಳ್ಳೆಗಳು ಕ್ರಮೇಣ ಕೈ, ಎದೆ, ಹೊಟ್ಟೆ, ತೊಡೆ, ಕಾಲುಗಳ ವರೆಗೂ ಹರಡುತ್ತವೆ. ಇಂಥಾ ಹಂತದಲ್ಲಿ ಕಾಪ್ಲಿಕ್ಸ್ ಸ್ಪಾಟ್ ಗಳು ಮಾಯವಾಗುತ್ತವೆ. ಶರೀರದಾದ್ಯಂತ ಮೂಡಿರುವ ಗುಳ್ಳೆಗಳ ಸಂಖ್ಯೆ ಅತಿಯಾಗಿದ್ದರೆ ವ್ಯಾಧಿಯ ತೀವ್ರತೆಯೂ ಅತಿಯಾಗಿರುತ್ತದೆ. ಸಾಮಾನ್ಯವಾಗಿ ಈ ಗುಳ್ಳೆಗಳು ಮುಂದಿನ ಕೆಲವೇ ದಿನಗಳಲ್ಲಿ ಮಾಯವಾಗಲು ಆರಂಭಿಸುತ್ತವೆ. ಈ ಹಂತದಲ್ಲಿ ಹೆಚ್ಚುಕಮ್ಮಿಯಾದರೆ ಅನಾಹುತವಾದರೂ ಅಚ್ಚರಿಯೇನಿಲ್ಲ.

ಹರಡುವ ಪರಿ

ಈ ದಡಾರ ಎಂಬುದು ನಾನಾ ಥರದಲ್ಲಿ ಒಬ್ಬರಿಂದೊಬ್ಬರಿಗೆ ಹಬ್ಬಿಕೊಳ್ಳುತ್ತದೆ. ದಡಾರ ರೋಗಪೀಡಿತ ಮಕ್ಕಳ ಜೊಲ್ಲಿನ ಕಣಗಳಿಂದ, ರೋಗಿಯೊಂದಿಗೆ ನೇರ ಸಂಪರ್ಕವಿರುವ ವ್ಯಕ್ತಿಗಳಿಂದ ಈ ವೈರಸ್ ಇತರರಿಗೆ ಹಬ್ಬಿಕೊಳ್ಳುತ್ತದೆ. ಸಾಮಾನ್ಯವಾಗಿ ರೋಗನಿರೋಧಕ ಶಕ್ತಿ ಹೊಂದಿರುವವರ ಶರೀgಕ್ಕೆ ಪ್ರವೇಶ ಪಡೆದ ಈ ವೈರಸ್ ಅಷ್ಟೇನೂ ಪರಿಣಾಮ ಬೀರುವುದಿಲ್ಲ. ಶರೀರದಾದ್ಯಂತ ಉದ್ಭವಿಸಿದ ಗುಳ್ಳೆಗಳು ಸ್ಪಷ್ಟವಾಗಿ ಗೋಚರಿಸುವ ಸಂದರ್ಭದಲ್ಲಿ, ಮಕ್ಕಳಲ್ಲಿ ತೀವ್ರ ಜ್ವರ ಹಾಗೂ ಕೆಮ್ಮಿನೊಂದಿಗೆ ದೇಹದ ಎಲ್ಲಾ ಭಾಗಗಳಲ್ಲೂ ಅಸಹನೀಯ ತುರಿಕೆ ಕಾಡುತ್ತದೆ. ಅಂತಿಮ ಹಂತದಲ್ಲಿ ಜ್ವರ ಹಾಗೂ ಕೆಮ್ಮುಗಳು ಕಡಿಮೆಯಾಗುತ್ತಾ ಬಂದಂತೆಯೇ, ಶರೀರದ ಮೇಲೆ ಮೂಡಿದ ಗುಳ್ಳೆಗಳು ಬಾಡುತ್ತಾ ಬಂದು ಕೊನೆಗೆ ಈ ಭಾಗದ ಚರ್ಮದ ಮೇಲ್ಪದರ ನಿಧಾನವಾಗಿ ಎದ್ದುಬರುತ್ತದೆ. ಆ ನಂತರ ವಾಸಿಯಾಗುತ್ತದೆ.

ಈ ದಡಾರ ಹಾಗೆ ಬಂದು ಹೀಗೆ ಹೋಗುವ ಕಾಯಿಲೆಯಲ್ಲ. ದಡಾರ ಒಂದು ಬಾರಿ ಬಾಧಿಸಿದ ಮಕ್ಕಳಲ್ಲಿ ವೈರಸ್ ಗಳ ದುಷ್ಪರಿಣಾಮಗಳಿಂದ ಅನೇಕ ಸಮಸ್ಯೆಗಳು ಉದ್ಭವಿಸಿವ ಸಾಧ್ಯತೆಗಳಿವೆ. ದಡಾರದಿಂದಾಗಿ ಉರಿಯೂತಕ್ಕೊಳಗಾದ ಕಣ್ಣಾಲಿಗಳಿಗೆ ಹಾಗೂ ಕಿವಿಗಳಿಗೆ ಬಾಧಿಸಬಹುದಾದ ಇತರ ಸೋಂಕುಗಳು, ಗಂಭೀರ ತೊಂದರೆಗಳಿಗೂ ಕಾರಣವಾಗಬಹುದು. ಇದಲ್ಲದೇ ಚಿಕ್ಕಮಕ್ಕಳಲ್ಲಿ ಬೇರೆ ಬೇರೆ ತೆರನಾದ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಇನ್ನೂ ಕೆಲ ಮಕ್ಕಳಲ್ಲಿ ತೀವ್ರತೆರನಾದ ಬಾಯಿಹುಣ್ಣು, ಮಲವಿಸರ್ಜನೆಯ ತೊಂದರೆಗಳು ಬಾಧಿಸಬಹುದು. ಕ್ಷಯ ರೋಗ ಪೀಡಿತ ಮಗುವಿಗೆ ದಡಾರ ಬಂದರಂತೂ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕಾಗುತ್ತದೆ.

ಎಚ್ಚರಿಕೆಯ ಕ್ರಮಗಳು

ದಡಾರ ಬಾಧಿಸಿದಾಗ ಒಂದಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಅದರ ಪರಿಣಾಮಗಳಿಂದ ಪಾರಾಗಬಹುದಾಗಿದೆ. ದಡಾರ ರೋಗಿಯ ಬಾಯಲ್ಲಿ, ಮೂಗಿನಲ್ಲಿ, ಗಂಟಲ ದ್ರವದಲ್ಲಿ ದಡಾರದ ಭೀಕರ ವೈರಸ್ಸುಗಳಿರುತ್ತವೆ. ದಡಾರ ಪೀಡಿತರು ಸೀನಿದಾಗ, ಕೆಮ್ಮಿದಾಗ ಹೊರಗಿನ ಪರಿಸರಕ್ಕೆ ವೈರಸ್ ಗಳು ಸುತ್ತೆಲ್ಲ ಪಸರಿಸಿ ಬೇರೆಯವರ ದೇಹ ಸೇರಿಕೊಳ್ಳುತ್ತದೆ. ಉಸಿರಾಟದ ಮೂಲಕ ರೋಗಾಣುಗಳು ದೇಹ ಪ್ರವೇಶಿಸಿ ಗಂಭೀರ ಸಮಸ್ಯೆಗಳಿಗೆ ಎಡೆ ಮಾಡಿ ಕೊಡುತ್ತವೆ. ಅತ್ಯಂತ ಸೂಕ್ಷ್ಮ ರೀತಿಯಲ್ಲಿ ಈ ವೈರಸ್ಸುಗಳು ಹಬ್ಬಿಕೊಳ್ಳುತ್ತವೆ. ಇನ್ನುಳಿದಂತೆ ದಡಾರ ಸೋಂಕು ಉಂಟಾದ ಮಗುವನ್ನು ಕೂಡಾ ಅತ್ಯಂತ ಎಚ್ಚರದಿಂದ ನೋಡಿಕೊಳ್ಳಬೇಕಾಗುತ್ತದೆ.
ದಡಾರ ಬಂದ ಮಗುವನ್ನು ಆದಷ್ಟು ಮನೆಯಲ್ಲಿಯೇ ಇಟ್ಟುಕೊಂಡು ಚಿಕಿತ್ಸೆ ಕೊಟ್ಟರೆ ಅದು ಇತರೇ ಮಕ್ಕಳಿಗೂ ಹಬ್ಬೋದನ್ನು ತಪ್ಪಿಸಬಹುದು. ದಡಾರ ಇರುವ ಮಗುವನ್ನು ಶಾಲೆಗೆ ಕಳಿಸಿದರೆ ಬೇರೆ ಮಕ್ಕಳಿಗೂ ಕೂಡಾ ರೋಗ ಅಂಟುವ ಸಾಧ್ಯತೆಗಳಿದ್ದಾವೆ. ಈ ದಡಾರ ಬಾಧಿಸುವ ಮುನ್ನಾ ದಿನ ಜ್ವರ ಬರುತ್ತದೆ. ಮುಖದ ಮೇಲೆ ಕಾಣಿಸಿಕೊಳ್ಳುವ ಗುಳ್ಳೆಗಳು ಕ್ರಮೇಣ ಇತರೇ ಭಾಗಗಳಿಗೂ ಹಬ್ಬಿಕೊಳ್ಳುತ್ತವೆ. ಮೊದಲು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಈ ಸೋಂಕಾಈಗ ವಯಸ್ಕರನನೂ ಕಾಡುತ್ತಿದೆ. ಇದಕ್ಕೆ ಯಾವುದೇ ರೀತಿಯ ನಿರ್ದಿಷ್ಟ ಔಷಧಗಳಿಲ್ಲ. ಮುನ್ನೆಚ್ಚರಿಕಾ ಲಸಿಕೆ ಮೂಲಕ ಸಾಧ್ಯತೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು.

ಭೀಕರ ದಡಾರ!
ಈ ದಡಾರದ ಪರಿಣಾಮ ವಿಶ್ವದ ನಾನಾ ದೇಶಗಳಲ್ಲಿಯೂ ವ್ಯಾಪಿಸಿಕೊಂಡಿದೆ. ನಮ್ಮ ದೇಶದ ವಿಒಚಾರದಲ್ಲಿ ಹೇಳೊದಾದರೆ, ಇದರಿಂದ ಪ್ರತೀ ವರ್ಷ ಲಕ್ಷ ಮಕ್ಕಳು ಬಲಿಯಾಗುತ್ತಿದ್ದಾರೆ. ಲಸಿಕೆ ಅಭಿಯಾನದ ತಾರೀಕು ಹಾಗೂ ಜಾಗ ಎಲ್ಲಾ ಅರ್ಹ ಮಕ್ಕಳಿಗೆ ಶಾಲೆ, ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿರುವ ಆರೋಗ್ಯ ಉಪಕೇಂದ್ರ, ಅಂಗನವಾಡಿ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯದ ಆರೋಗ್ಯ ಕೇಂದ್ರ ಹಾಗೂ ಇತರ ಸರಕಾರಿ ಆಸ್ಪತ್ರೆಗಳಲ್ಲಿ ದಡಾರ ಲಸಿಕೆ ಕೊಡಲಾಗುತ್ತದೆ. ಆರೋಗ್ಯ ಕಾರ್ಯಕರ್ತರು ಲಸಿಕೆಯ ಬಗ್ಗೆ ಮುಂಚಿತವಾಗಿಯೇ ಅರಿವು ಮೂಡಿಸುತ್ತಾರೆ. ದಡಾರ ಲಸಿಕೆ ಅತ್ಯಂತ ಸುರಕ್ಷಿತವಾಗಿದೆ. ಸದರಿ ಲಸಿಕೆ ವಿಶ್ವದಾದ್ಯಂತ ಅನೇಕ ರಾಷ್ಟ್ರಗಳಲ್ಲಿ ಬಳಕೆಯಲ್ಲಿದೆ. ಈ ಮೂಲಕವೇ ಅದೆಷ್ಟೋ ಮಕ್ಕಳು ದಡಾಎದಿಂದ ಜೀವ ಉಳಿಸಿಕೊಂಡಿವೆ. ಭಾರತ ಸರಕಾರ ಅತ್ಯಂತ ವ್ಯವಸ್ಥಿತವಾಗಿ ದಡಾರ ಲಸಿಕೆ ಹಾಕುತ್ತಿದೆ. ಹದಿನೈದು ವರ್ಷದ ಎಲ್ಲ ಮಕ್ಕಳು ಈ ಅಭಿಯಾನದಲ್ಲಿ ಪಡೆದ ಲಸಿಕೆಯನ್ನು ಹೆಚ್ಚುವರಿ ಪೂರಕ ಡೋಸ್ ಎಂದು ಪರಿಗಣಿಸಬೇಕು. ಯಾವುದೇ ರೀತಿಯಲ್ಲಿಯೂ ನಿರ್ಲಕ್ಷ್ಯ ಮಾಡದೆ ಮಕ್ಕಳಿಗೆ ಆಯಾ ಕಾಲಕ್ಕೆ ದಡಾರ ಲಸಿಕೆ ಕೊಡುವುದು ಖಡ್ಡಾಯ.
ಆಗಾಗ ಅದೇಕೋ ಈ ಲಸಿಕೆಯ ಬಗ್ಗೆ ಸುಖಾಸುಮ್ಮನೆ ಕಪೋಲ ಕಲ್ಪಿತವಾದ ಸುದ್ದಿಗಳು ನ್ಮ್ಮ ದೇಶದಲ್ಲಿ ಹಬ್ಬಿಕೊಳ್ಳುತ್ತವೆ. ಆದರೆ ಆ ಬಗೆಗಿನ ಸತ್ಯಾಸತ್ಯತೆಗಳನ್ನು ಪೋಶಕರೆಲ್ಲರೂ ಗಮನಿಸಬೇಕಿದೆ. ಸುಖಾ ಸುಮ್ಮನೆ ಹಬ್ಬಿಕೊಳ್ಳುವ ಇಂಥಾ ಸುಳ್ಳು ಸುದ್ದಿಗಳಿಗೇನಾದರು ಕಿವಿ ಕೊಟ್ಟು ನಿಮ್ಮ ಮಕ್ಕಳಿಗೆ ದಡಾರ ನಿರೋಧಕ ಲಸಿಕೆ ಹಾಕಿಸದೇ ಹೋದರೆ ನಿಜಕ್ಕೂ ಮುಂದಿನ ದಿನಗಳಲ್ಲಿ ಭಯಾನಕವಾದ ಪರಿಸ್ಥಿತಿಗಳು ಎದುರಾಗುತ್ತವೆ. ಈಗಂತೂ ಸಾಮಾಜಿಕ ಜಾಲತಾಣಗಳ ಮೂಲಕ ಇಂಥಾ ಸುಳ್ಳು ಸುದ್ದಿಗಳನ್ನು ಹಬ್ಬಿಸಿ, ಜೀವದ ಜೊತೆ ಚೆಲ್ಲಾಟವಾಡೋ ಕೆಲಸ ಅವ್ಯಾಹತವಾಗಿ ನಡೆಯುತ್ತಿದೆ. ಆನಸಾಮಾನ್ಯರು ಅದನ್ನು ಕಡೆಗಣಿಸಿ ದಡಾರ ಲಸಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

Tags: #rubella#rubelladisease#rubellavirus

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
padmashri thulasi gowda: ಹಸಿರಿಗಾಗಿ ಉಸಿರು ಮುಡಿಪಾಗಿಟ್ಟಿದ್ದ ವೃಕ್ಷಮಾತೆ ತುಳಸಿ ಗೌಡ!

padmashri thulasi gowda: ಹಸಿರಿಗಾಗಿ ಉಸಿರು ಮುಡಿಪಾಗಿಟ್ಟಿದ್ದ ವೃಕ್ಷಮಾತೆ ತುಳಸಿ ಗೌಡ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.