ಆಧುನೀಕತೆಯ ಭರಾಟೆಯಲ್ಲಿ ಕಾಡುಮೇಡು, ನದಿ, ಕೆರೆಗಳೆಲ್ಲ ನಮ್ಮೆಲ್ಲರ ಅತಿಯಾಸೆಗೆ ಬಲಿಯಾಗುತ್ತಿವೆ. ಇದೆಲ್ಲದರಿಂದಾಗಿ ಈ ಪ್ರಕೃತಿಯ ಮೇಲಾಗುತ್ತಿರುವ, ಮುಂದಾಗಬಹುದಾದ ಅನಾಹುತಕಾರಿ ಪರಿಣಾಮಗಳ ಬಗ್ಗೆ ಬಹುತೇಕರಿಗೆ ಕಿಂಚಿತ್ತೂ ಅರಿವಿದ್ದಂತಿಲ್ಲ. ಈಗಂತೂ ಈ ಜನಗತ್ತಿನ ಒಟ್ಟಾರೆ ಅರಣ್ಯ ಪ್ರದೇಶಗಳಲ್ಲಿ ಕಾಲು ಭಾಗದಷ್ಟೂ ಕೂಡಾ ಉಳಿದುಕೊಂಡಿಲ್ಲ. ಅಷ್ಟೊಂದು ದೊಡ್ಡ ಪ್ರಮಾಣದೆಲ್ಲಿ ವಿಶ್ವಾದ್ಯಾಂತ ಕಾಡಿನ ಹನನ ನಡೆದಿದೆ. ಈವತ್ತಿಗೆ ನಮ್ಮ ರಾಜ್ಯದ ನಾನಾ ಭಾಗಗಳಲ್ಲಿ ಆಗಾಗ ಚಿgಚಿve ಮತ್ತು ಹುಲಿಗಳು ನಾಡಿಗೇ ನುಗ್ಗಿ ದಾಂಧಲೆ ಎಬ್ಬಿಸುತ್ತಿರೋ ವಿಚಾರ ಮಾಮೂಲೆಂಬಂತಾಗಿದೆ. ಅದರಲ್ಲಿಯೂ ಕೃಷಿ ಭೂಮಿಗೆ ನುಗ್ಗಿ ಬೆಳೆಗಳನ್ನು ಹಾಳುಉಗೆಡಹುವ ಆನೆಗಳ ಪುರಾಣವಂತೂ ಮಾಮೂಲಿ ಸುದ್ದಿಯಲ್ಲೇ ಮಾಮಾಲಿಯಾಗಿ ಬಿಟ್ಟಿದೆ!
ಹೀಗೆ ನಾಡಿಗೆ ನುಗ್ಗುವ ಆನೆಗಳನ್ನು ನಾಗರಿಕ ಸಮಾಜ ವಿಲನ್ನುಗಳಂತೆ ಬಿಂಬಿಸುತ್ತೆ. ಆನೆಗಳು ಮಾನವೀಯತೆ ಇಲ್ಲದೆ ಮನುಷ್ಯರ ಮೇಲೆ ದಾಳಿ ನಡೆಸಿ ಜೀವ ಬಲಿ ತೆಗೆದುಕೊಳ್ಳುತ್ತಿದೆ ಎಂಬರ್ಥದಲ್ಲಿ ಪ್ರಹಾರವೂ ನಡೆಯುತ್ತದೆ. ಹಾಗಾದರೆ ಆನೆ ಅನ್ನೋದು ಅಷ್ಟೊಂದು ನಿರ್ಧಯಿ ಪ್ರಾಣಿಯಾ? ನಿಜಕ್ಕೂ ಅದಕ್ಕೆ ಹತ್ಯೆ ಮಾಡುವಂಥಾ ಕ್ರೌರ್ಯದ ಮುಖ ಇದೆಯಾ? ಆನೆ ಯಾಕೆ ಅಷ್ಟೊಂದು ಕ್ರೂರಿಯಾಗಿ ವರ್ತಿಸುತ್ತೆ? ಇಂಥಾ ಪ್ರಶ್ನೆಗಳನ್ನಿಟ್ಟುಕೊಂಡು ತಲಾಶಿಗಿಳಿದರೆ ಈ ಮನುಷ್ಯ ಜಗತ್ತಿನ ನಾನಾ ಕ್ರೌರ್ಯಗಳು ಅನಾವರಣಗೊಳ್ಳುತ್ತವೆ. ಹಾಗೆ ನೋಡಿದರೆ, ಕಾಡಿನಲ್ಲಿದ್ದರೂ ಕಲಲೂಡಾ ಆನೆಯಷ್ಟುಉ ಮನುಷ್ಯರಿಗೆ ಹೊಂದಿಕೊಳ್ಳುವ ಭಾವಜೀವಿಗಳು ಪ್ರಾಣಿಗಳಲ್ಲಿ ಮತ್ಯಾವುವೂ ಇರಲಿಕ್ಕಿಲ್ಲ. ಆದರೆ ನಿರ್ದಯಿ ಮನು೮ಷ್ಯ ಮಾತ್ರ ಅವುಗಳನ್ನು ತನ್ನಿಷ್ಟಕ್ಕೆ ಬಳಸಿಕೊಂಡು ಕೊಡ ಬಾರದ ಕಾಟ ಕೊಟಿದ್ದಾನೆ. ಈಗಲೂಈ ಕೊಡುತ್ತಿದ್ದಾನೆ. ಇದೆಲ್ಲದರ ಫಲವಾಗಿ ಆನೆಗಳ::ಎಂಬ ದೈತ್ಯ ಪ್ರಾಣಿಗಳು ಮನಸಲ್ಲಿ ಮಗುಉತನವನ್ನಿಟ್ಟುಕೊಂಡುಜ ಕಾಡಲ್ಲಿಯೂ ಇರಲಾರದೆ೩, ನಾಡಿನಲ್ಲಿಯಾಊ ಬಾಳಲಾರದೆ ನಾನಾ ಪಡಿಪಾಟಲು ಪಡುತ್ತಿದ್ದಾವೆ!
ಸೆನ್ಸಿಟಿವ್ ಆನೆ!
ಅದೆಂಥಾ ಧೈರ್ಯಶಾಲಿಗಳೇ ಆಗಿದ್ದರೂ ಅವರನ್ನು ತನ್ನ ಗಾತ್ರದ ಮೂಲಕವೇ ಅಳ್ಳೆ ಅದುರಿಸಿಕೊಳ್ಳುವಂತೆ ಮಾಡೋ ತಾಖತ್ತಿರೋ ಪ್ರಾಣಿ ಆನೆ. ತನ್ನ ಗಾತ್ರದಷ್ಟೇ ಅಗಾಧವಾದ ಶಕ್ತಿಯನ್ನೊಳಗೊಂಡಿರೋ ಆನೆ ರೊಚ್ಚಿಗೆದ್ದಿತೆಂದರೆ ಕಂಟ್ರೋಲು ಮಾಡೋದು ಕಷ್ಟ. ಕಾಡಾನೆಗಳ ಕಥೆ ಹಾಗಿರಲಿ; ಸಾಕಿದ ಆನೆಗಳೂ ಕೂಡಾ ಮದವೇರಿ ಅಬ್ಬರಿಸೋ ಪರಿ ಭೀಕರವಾಗಿರುತ್ತೆ. ಇಂಥಾ ರೌದ್ರಾವತಾರಗಳ ಹೊರತಾಗಿ ಆನೆಯಷ್ಟು ಪಾಪದ, ಸೆನ್ಸಿಟಿವ್ ಆದ ಪ್ರಾಣಿ ಮತ್ತೊಂದಿರಲಾರದು. ಬಹುಶಃ ಆನೆಯೊಂದಿಗೆ ನಿಕಟ ನಂಟು ಹೊಂದಿರುವವರನ್ನು ಹೊರತಾಗಿಸಿದರೆ ಮತ್ಯಾರಿಗೂ ಅದೆಷ್ಟು ಸೆನ್ಸಿಟಿವ್ ಪ್ರಾಣಿ ಎಂಬುದರ ಅರಿವಿರಲು ಸಾಧ್ಯವಿಲ್ಲ.
ಮನುಷ್ಯರು ಪ್ರತೀ ಭಾವನೆಗಳನ್ನೂ ವ್ಯಕ್ತ ಪಡಿಸುತ್ತಾರೆ. ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ಸ್ಪಂದಿಸೋ ಶಕ್ತಿಯೂ ಮನುಷ್ಯರಿಗಿದೆ. ಯಾರಾದರೂ ಸತ್ತಾಗ, ಸೂತಕ ಆವರಿಸಿಕೊಂಡಾಗ ನಾವು ಮರುಗುತ್ತೇವೆ. ದುಃಖಿಸುತ್ತೇವೆ. ನಾಯಿಯಂಥಾ ಪ್ರಾಣಿಗಳನ್ನು ಹೊರತಾಗಿಸಿದರೆ ಮತ್ಯಾವ ಪ್ರಾಣಿಗಳೂ ಅಂಥಾ ಶಕ್ತಿ ಹೊಂದಿಲ್ಲ ಎಂದೇ ನಾವು ಭಾವಿಸುತ್ತೇವೆ. ಆದರೆ ಆ ವಿಚಾರದಲ್ಲಿ ದೈತ್ಯ ಗಾತ್ರದ ಆನೆ ನಾಯಿಯನ್ನೂ ಮೀರಿಸುತ್ತೆ. ವಿಶೇಷ ಅಂದ್ರೆ ಅದು ಸಹವರ್ತಿ ಆನೆಗಳು ಸತ್ತಾಗ ಮಾತ್ರವಲ್ಲದೇ ತಮ್ಮ ಸುತ್ತಲ ಯಾವುದೇ ಪ್ರಾಣಿಗಳು, ಮನುಷ್ಯರು ಸತ್ತಾಗಲೂ ದುಃಖಿಸೋ ಗುಣ ಹೊಂದಿವೆಯಂತೆ.
ಆನೆಗಳ ಚಲನವಲನ, ಅವುಗಳ ಮನಸ್ಥಿತಿಯನ್ನು ಸಾಕಷ್ಟು ವರ್ಷಗಳ ಕಾಲ ಅಧ್ಯಯನಕ್ಕೊಳಪಡಿಸಿದವರೇ ಈ ವಿಚಾರವನ್ನು ಅನುಮೋದಿಸ್ತಾರೆ. ಅಂದಹಾಗೆ ಅಂಥಾ ಸೂತಕದ ಸಂದರ್ಭದಲ್ಲಿ ಅವುಗಳ ವರ್ತನೆ ಬದಲಾಗುತ್ತೆ. ಆ ದುಃಖವನ್ನವು ತಮ್ಮದೇ ರೀತಿಯಲ್ಲಿ ಹೊರ ಹಾಕುತ್ತವೆ. ಕೆಲವೊಮ್ಮೆ ಅವುಗಳ ಕಣ್ಣುಗಳಲ್ಲಿ ಧಾರಾಕಾರವಾಗಿ ಕಣ್ಣೀರು ಜಿನುಗುತ್ತೆ. ಅಂಥಾದ್ದೊಂದು ಸೆಂಟಿಮೆಂಟ್ ಇಲ್ಲದೇ ಹೋಗಿದ್ದರೆ ಆನೆ ಹುಲು ಮಾನವರ ಅಂಕೆಗೆ ಸಿಗಲು ಸಾಧ್ಯವೇ ಇರುತ್ತಿರಲಿಲ್ಲ. ಅದಷ್ಟು ಅಗಾಧ ಗಾತ್ರದ, ಅಷ್ಟೇ ಶಕ್ತಿಯ ಆನೆಯನ್ನು ಸಣಕಲು ಮಾವುತ ಕಂಟ್ರೋಲು ಮಶಾಡ್ತಾನೆಂದರೆ ಅದು ಆತನ ಶಕ್ತಿ ಖಂಡಿತಾ ಅಲ್ಲ. ಅದು ಆನೆಗಿರೋ ಭಾವುಕ ಮನಸ್ಥಿತಿಯ ಪರಿಣಾಮವಷ್ಟೆ!
ಮೌನ ರೋಧನೆ
ವಿಶ್ವದಾದ್ಯಂತ ಕೊರೋನಾ ವೈರಸ್ ಜನರನ್ನೆಲ್ಲ ಭೀತಿಗೀಡುಮಾಡಿತ್ತು. ಇಡೀ ಜಗತ್ತಿನ ವ್ಯಾಪಾರ ವಹಿವಾಟು ಸೇರಿದಂತೆ ಎಲ್ಲವೂ ಅಯೋಮಯ ಸ್ಥಿತಿಗೆ ಬಂದು ನಿಂತಿತ್ತು. ಇನ್ನೂ ಒಂದಷ್ಟು ಕಾಲ ಇದೇ ರೀತಿ ಮುಂದುವರೆದರೆ ಜಾಗತಿಕ ಅರ್ಥವ್ಯವಸ್ಥೆಯನ್ನೆಲ್ಲ ಮತ್ತೆ ಹೊಸದಾಗಿ ಕಟ್ಟಿ ನಿಲ್ಲಿಸುವ ಸವಾಲೆದುರಾಗೋದರಲ್ಲಿ ಯಾವ ಸಂಶಯವೂ ಇಲ್ಲ. ಅಂದುಕೊಂಡಿದ್ದವರಿಗೆಲ್ಲ ಅದೇ ನಿಜವಾಗಿ ಎದುರಾದಂತಾಗಿದೆ. ಇದೆಲ್ಲದರಿಂದಾಗಿ ಅಮೆರಿಕದಂಥಾ ಸ್ಥಿತಿವಂತ ದೇಶಗಳಲ್ಲಿಯೇ ನಿರುದ್ಯೋಗ ಪ್ರಮಾಣದಲ್ಲಿ ಏರುಗತಿ ಕಾಣಿಸಿಕೊಂಡಿದೆ. ಇದರ ಬಿಸಿ ಎಂಥಾದ್ದಿದೆಯೆಂದರೆ ಥಾಯ್ಲೆಂಡಿನ ಆನೆಗಳಿಗೂ ನಿರುದ್ಯೋಗದ ಬಾಧೆ ಶುರುವಾಗಿತ್ತು. ಅದುವೇ ಆ ಮೂಕ ಜೀವಿಗಳಿಗೆ ಮತ್ತೆ ತಮ್ಮ ತವರು ಸೇರಿ ಸ್ವಚ್ಛಂದವಾಗಿರುವ ಭಾಗ್ಯವನ್ನೂ ಕರುಣಿಸಿತ್ತು.
ಥಾಯ್ಲೆಂಡಿನಲ್ಲಿ ಆನೆಗಳನ್ನು ಪಳಗಿಸಿಕೊಂಡು ನಾನಾ ಕೆಲಸ ಕಾರ್ಯಗಳಿಗೆ, ಸರ್ಕಸ್ಸಿನಂಥಾ ಮನೋರಂಜನಾತ್ಮಕ ಚಟುವಟಿಕೆಗಳಿಗೆ ಒಗ್ಗಿಸಿಕೊಳ್ಳುತ್ತಾ ಬರಲಾಗುತ್ತಿದೆ. ಅದು ಪ್ರವಾಸೋದ್ಯಮದ ಭಾಗವಾಗಿಯೂ ಅಲ್ಲಿ ಚಾಲನೆಯಲ್ಲಿದೆ. ಆದರೆ ಏಕಾಏಕಿ ಲಾಕ್ಡೌನ್ ಶುರುವಾದ್ದರಿಂದಾಗಿ ಥಾಯ್ಲೆಂಡಿನ ಆನೆ ಮಾಲೀಕರು ಕಂಗಾಲಾಗಿದ್ದಾರೆ. ವ್ಯವಹಾರ ಚಾಲೂ ಆಗಿದ್ದಾಗ ಆನೆಗಳನ್ನು ಹೇಗೋ ಸಂಭಾಳಿಸಬಹುದು. ಕೊರೋನಾದಿಂದಾಗಿ ಎಲ್ಲವೂ ಸ್ತಬ್ಧಗೊಂಡಿರುವಾಗ ಜನರೇ ಹೊಟ್ಟೆ ಪಾಡಿಗೆ ಪರದಾಡುವಂತಾಗಿದೆ. ಹಾಗಿರುವಾಗು ಟನ್ನುಗಟ್ಟಲೆ ಆಹಾರ ಒದಗಿಸಿ ಆನೆಗಳ ಹೊಟ್ಟೆ ತುಂಬಿಸೋದು ಮಾಲೀಕರ ಪಾಲಿಗೆ ದೊಡ್ಡ ತಲೆನೋವಾಗಿ ಬಿಟ್ಟಿತ್ತು.
ಆನೆಗಳನ್ನು ದಿನನಿತ್ಯ ಆಹಾರ ಹಾಕಿ ಸಲಹೋದು ಸಾಮಾನ್ಯದ ಸಂಗತಿಯಲ್ಲ. ಅದಕ್ಕೆ ಸರಿಯಾಗಿ ಆನೆಗಳನ್ನು ಬಳಸಿಕೊಂಡು ಮಾಡಲಾಗುತ್ತಿದ್ದ ಎಲ್ಲ ವಹಿವಾಟುಗಳಿಗೂ ಕೊರೋನಾ ಬ್ರೇಕು ಹಾಕಿರೋದರಿಂದಾಗಿ ಮಾಲೀಕರು ಕಂಗಾಲಾಗಿದ್ದರು. ಬೇರೆ ನಿರ್ವಾಹವಿಲ್ಲದೇ ಒಂದಷ್ಟು ದಿನ ಪ್ರಯತ್ನಿಸಿದರೂ ಅವುಗಳ ಹೊಟ್ಟೆ ತುಂಬಿಸಲಾಗದ ಸ್ಥಿತಿ ನಿರ್ಮಾಣಗೊಂಡಿತ್ತು. ಇದರಿಂದಾಗಿ ತಿಂಗಳೊಳಗೆ ಆನೆಗಳೆಲ್ಲ ಬಡಕಲೆದ್ದಾಗ ಬೇರೆ ದಾರಿ ಕಾಣದೆ ಯಾವ ಕಾಡಿನಿಂದ ಅವುಗಳನ್ನು ಹಿಡಿದು ತರಲಾಗಿತ್ತೋ ಅದೇ ಕಾಡುಗಳಿಗೆ ವಾಪಾಸು ಬಿಟ್ಟು ಬರುವ ಆಲೋಚನೆಗೆ ಮಾಲೀಕರೆಲ್ಲ ಬಂದಿದ್ದರು.
ಮರಳಿ ಕಾಡಿಗೆ
ಅದರ ಫಲವಾಗಿಯೇ ಕೊರೋನಾ ಕಾಲಘಟ್ಟದಲ್ಲಿ ಆನೆಗಳ ಹಿಂಡನ್ನು ಮತ್ತೆ ಕಾಡಿಗೆ ಬಿಟ್ಟು ಬರುವ ಕಾರ್ಯ ಥಾಯ್ಲೆಂಡಿನಲ್ಲಿ ಚಾಲಿಗೆ ಬಂದಿತ್ತು. ನೂರಾರು ಕಿಲೋಮೀಟರುಗಟ್ಟಲೆ ನಡೆದೇ ಕ್ರಮಿಸಿ ಅವುಗಳನ್ನು ತವರಿಗೆ ಸೇರಿಸಲಾಗಿತ್ತು. ಅದೇನೇ ಬುದ್ಧಿ ಕಲಿಸಿ, ಬೇಕಾದಂತೆ ಮೇವು ಹಾಕಿದರೂ, ಮೃಷ್ಟಾನ್ನವನ್ನೇ ಮುಂದಿಟ್ಟರೂ ಆನೆಗಳ ಪಾಲಿಗೆ ಕಾಡಿನ ಸ್ವಾತಂತ್ರ್ಯ, ಖುಷಿ ಸಿಗಲು ಸಾಧ್ಯವಿಲ್ಲ. ಆದರೆ ಮನುಷ್ಯರ ಲಾಭದಾಸೆಯಿಂದ ಎಷ್ಟೋ ಆನೆಗಳು ಇಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ತವರಿನ ನಂಟು ಕಡಿದುಕೊಂಡು ಬದುಕುತ್ತಿದ್ದವು. ಅವುಗಳಿಗೆಲ್ಲ ಕೊರೋನಾ ವೈರಸ್ ಬಿಡುಗಡೆ ಕಲ್ಪಿಸಿತ್ತು. ಆ ಆನೆಗಳೆಲ್ಲ ಮತ್ತೆ ಕಾಡು ಸೇರಿ ಹಾಯಾಗಿ ಅಡ್ಡಾಡಲಾರಂಭಿಸಿದ್ದರೂ ಇದೀಗ ಮತ್ತೆ ಅವುಗಳನ್ನು ಹಿಡಿದು ತಂದು ಕಾಟ ಕೊಡುವ ಕಾರ್ಯ ಮುಂದುವರೆದಿದೆ.
ಇದೆಲ್ಲವನ್ನೂ ನೋಡುತ್ತಿದ್ದರೆ ಈ ಕೊರೋನಾ ಮನುಷ್ಯನ ದುರಾಸೆಯಿಂದಾದ ಅಸಮತೋಲನವನ್ನು ಕೊರೋನಾ ವೈರಸ್ ರೂಪದಲ್ಲಿ ಸರಿಪಡಿಸಿಕೊಳ್ಳುತ್ತಿದೆಯೇನೋ ಅನ್ನಿಸೋದರಲ್ಲಿ ಅಚ್ಚರಿಯೇನಿಲ್ಲ. ಈ ವೈರಸ್ನಿಂದಾಗಿ ಮನುಷ್ಯರ ಪಾಲಿಗೆ ಥರ ಥರದ ಗಂಡಾಂತರಗಳು ಬಂದೆರಗಿವೆ. ಆದರೆ ಅದೇ ಹೊತ್ತಲ್ಲಿ ಪ್ರಕೃತಿಗೆ ವರವನ್ನೂ ನೀಡಿವೆ. ಪರಿಸರವೀಗ ತಿಂಗಳೊಪ್ಪತ್ತಿನಲ್ಲಿಯೇ ಮಾಲಿನ್ಯವನ್ನೆಲ್ಲ ನೀಗಿಕೊಂಡು ನಳನಳಿಸುತ್ತಿವೆ. ಅದೆಷ್ಟೋ ಕೆರೆಕಟ್ಟೆಗಳು, ಗುರುತೇ ಇರದಂತೆ ಮಾಯವಾಗಿದ್ದ ಜಲಮೂಲಗಳು, ನದಿ ತೊರೆಗಳೆಲ್ಲ ಸ್ವಯಂಶುದ್ಧಿಯಾಗಿವೆ. ಹರುಕು ಚಾಪೆಯಂತಾಗಿದ್ದ ಓಝೋನ್ ಪದರಕ್ಕೂ ತಂತಾನೇ ತೇಪೆ ಬಿದ್ದಿದೆ. ಅದೆಲ್ಲದರ ಜೊತೆಗೆ ಮೂಕಪ್ರಾಣಿಗಳ ಮೌನ ರೋಧನೆಗೂ ಮುಕ್ತಿ ಸಿಕ್ಕಂತಾಗಿತ್ತು.
ಅದೆಂಥಾ ಕ್ರೌರ್ಯ
ಆಧುನಿಕ ಜಗತ್ತಿನ ಜನರಲ್ಲಿರೋ ತೋರಿಕೆ, ಆಡಂಬರಗಳ ಅಬ್ಬರದ ಮುಂದೆ ದೇವರೂ ಮಂಕಾಗಿ ಮೂಲೆ ಸೇರಿದಂತಿದೆ. ಗೌಜು ಗದ್ದಲದಲ್ಲಿಯೇ ದೇವರನ್ನು ತಲುಪುವ ತೆವಲಿನಿಂದಾಗಿ ಧಾರ್ಮಿಕ ಪರಂಪರೆಯೆಂಬುದು ಸರಿಪಡಿಸಲಾರದಷ್ಟು ಊನಗೊಂಡಿದೆ. ಮನದೊಳಗಿನ ಪ್ರಾರ್ಥನೆಯನ್ನು ಡಿಜೆ ಸೌಂಡಿನ ಮೂಲಕವೇ ಪರಮಾತ್ಮನಿಗೆ ತಲುಪಿಸೋ ಮೂರ್ಖತನಕ್ಕೆ ಬಹುತೇಕರು ಶರಣಾಗಿದ್ದಾರೆ. ದೇವಸ್ಥಾನ, ಮಸೀದಿ, ಚರ್ಚುಗಳ ವಾತಾವರಣವೆಲ್ಲವೂ ಈ ಮಾತಿಗೆ ಪೂರಕವಾದ ವಾತಾವರಣವನ್ನೇ ಸೃಷ್ಟಿಸಿಕೊಂಡಿದೆ. ಭಕ್ತಿಯ ತೆಕ್ಕೆಗೆ ಬಿದ್ದ ಮನುಷ್ಯ ದೈವತ್ವ ಪಡೆದುಕೊಳ್ಳಬೇಕು, ಸಕಲ ಜೀವರಾಶಿಗಳನ್ನೂ ಮಾತೃತ್ವ ಧರಿಸಿಕೊಂಡು ಸೋಕಬೇಕೆಂಬ ಸೂಕ್ಷ್ಮತೆ ಮರೆಯಾಗಿ ಭಕ್ತಿಯ ಹೆಸರಲ್ಲಿ ಕ್ರೌರ್ಯ ಮೆರೆಯೋ ಮತಿಹೀನ ಮನಸ್ಥಿತಿಗಳೇ ವಿಜೃಂಭಿಸುತ್ತಿವೆ.
ಇಂಥಾ ಮನುಷ್ಯನ ವಿಕೃತಿ, ರಕ್ಕಸ ಪ್ರವೃತ್ತಿ ಎಂಥಾದ್ದಿರುತ್ತದೆ ಎಂಬುದಕ್ಕೆ ಶ್ರೀಲಂಕಾದಲ್ಲಿ ಧರಾಶಾಯಿಯಾದ ಆನೆಯೊಂದರ ಮೂಕ ರೋಧನೆಗಿಂತಲೂ ಬೇರೆ ಉದಾಹರಣೆ ಬೇಕಿಲ್ಲವೇನೋ… ಇಲ್ಲಿ ಪ್ರತೀ ವರ್ಷವೂ ಪೆರೆಹಾರ ಎಂಬೊಂದು ಉತ್ಸವ ನಡೆಯುತ್ತದೆ. ಅದು ಬೌದ್ಧ ಪರಂಪರೆಯದ್ದೊಂದು ಹಬ್ಬ. ಈ ಹಬ್ಬದಲ್ಲಿ ಅದ್ದೂರಿಯಾದ ಉತ್ಸವ ನಡೆಯುತ್ತೆ. ಇದು ಹತ್ತು ದಿನಗಳ ಕಾಲ ಮುಂದುವರೆಯುತ್ತದೆ. ಇದರನ್ವರ ಅರವತ್ತು ಆನೆಗಳ ಮೆರವಣಿಗೆಯೂ ನಡೆಯುತ್ತೆ. ಆ ಅರವತ್ತೂ ಆನೆಗಳನ್ನೂ ಕೂಡಾ ನಮ್ಮ ಮೈಸೂರು ದಸರಾ ಮಾದರಿಯಲ್ಲಿಯೇ ಸಂಭಾಳಿಸಲಾಗುತ್ತದೆ. ಈ ಅರವತ್ತು ಆನೆಗಳ ಪೈಕಿ ತಿಕಿರಿ ಎಂಬ ಎಪ್ಪತ್ತು ವರ್ಷದ ಆನೆಯೂ ಸೇರಿಕೊಂಡಿದೆ.
ರಾಕ್ಷಸ ಮನಃಸ್ಥಿತಿ
ಈ ಉತ್ಸವದಲ್ಲಿ ಹತ್ತು ದಿನಗಳ ಕಾಲ ಅದೆಷ್ಟೋ ಕಿಲೋಮೀಟರುಗಳಷ್ಟು ಹಾದಿಯನ್ನು ಈ ಅರವತ್ತು ಆನೆಗಳು ಕ್ರಮಿಸಬೇಕಾಗುತ್ತದೆ. ಹೇಳಿಕೇಳಿ ಇದು ಬೌದ್ಧ ಧರ್ಮದ ಉತ್ಸವ. ಯಾರಿಗೂ ಕೆಡುಕು, ನೋವುಂಟುಮಾಡಬಾರದೆಂಬ ಬುದ್ಧನ ಈ ಉತ್ಸವದಲ್ಲಿ ಈ ಬಾರಿ ನಡೆದದ್ದು ಮನುಷ್ಯತ್ವವೇ ಸತ್ತಂಥಾ ಘಟನೆ. ಈ ತಿಕಿರಿ ಎಂಬ ಎಪ್ಪತ್ತು ವರ್ಷದ ಆನೆಯಿದೆಯಲ್ಲಾ? ಅದೇನು ಉಳಿಕೆ ಆನೆಗಳಂತೆ ಮೈ ಕೈ ತುಂಬಿಕೊಂಡು ತೊನೆಯುತ್ತಿರಲಿಲ್ಲ. ತೀರಾ ಆನೆ ಎಂಬ ಕಲ್ಪನೆಯೆ ತದ್ವಿರುದ್ಧವಾಗಿ ಅಸ್ಥಿಪಂಜರದ ಮೂಳೆಗಳ್ನ್ನು ಸಲೀಸಾಗಿ ಲೆಕ್ಕ ಹಾಕುವಷ್ಟರ ಮಟ್ಟಿಗೆ ಬಡಕಲಾಗಿತ್ತು. ಮಲಗಿದರೆ ಎದ್ದು ನಿಲ್ಲಲು ಮಾವುತನ ಸಹಾಯ ಪಡೆಯುವಂಥಾ ನಿಸ್ತೇಜ ಸ್ಥಿತಿಯಲ್ಲಿದ್ದ ಈ ಆನೆಯನ್ನು ಈ ಬಾರಿಯ ಉತ್ಸವದಲ್ಲಿ ಮೆರವಣಿಗೆಗೆ ಬಳಸಿಕೊಳ್ಳಲಾಗಿತ್ತು!
ಈ ಬಡಕಲು ಆನೆಗೆ ರಂಗಾದ ಡಿಸೈನುಗಳ ಶಾಮಿಯಾನ ಹೊದ್ದಿಸಿ, ಅದರ ಮೇಲೊಬ್ಬ ಅವಿವೇಕಿಯನ್ನು ಕೂರಿಸಿ ಈ ಉತ್ಸವವನ್ನು ಚಾಲೂ ಮಾಡಲಾಗಿತ್ತು. ಆದರೆ ಕಾಯಿಲೆಯಿಂದ ಬಸವಳಿದಿದ್ದ ಆ ಆನೆ ಮೆರವಣಿಗೆಯ ಮಧ್ಯೆಯೇ ಕುಸಿದು ಬಿದ್ದಿತ್ತು. ಈ ಗಾಬರಿಯಲ್ಲಿ ಆ ಆನೆಗೆ ಹೊದ್ದಿಸಿದ್ದ ಪೋಶಾಕು ಕಳಚುತ್ತಲೇ ಅದರ ಕರಣಾಜನಕ ಸ್ಥಿತಿ ಜನಸಾಮಾನ್ಯರೆದುರು ಅನಾವರಣಗೊಂಡಿತ್ತು. ಈ ಅನಾರೋಗ್ಯಪೀಡಿತ ಆನೆಗಳನ್ನು ಮೆರವಣಿಗೆಗೆ ಬಳಸಿಕೊಂಡು ಹಿಂಸೆ ನೀಡಿದ ರಕ್ಕಸ ಮನಸ್ಥಿತಿಯವರ ವಿರುದ್ಧ ಶ್ರೀಲಂಕೆಯ ಪ್ರಜ್ಞಾವಂತರು ಸಾಮಾಜಿಕ ಜಾಲತಾಣಗಳ ಮೂಲಕ ಕಿಡಿ ಕಾರಿದ್ದಾರೆ. ಆ ಆನೆಯ ಶೋಚನೀಯ ಸ್ಥಿತಿ ಕಂಡು ಮರುಗುತ್ತಲೇ ಜನ ರೊಚ್ಚಿಗೆದ್ದಿದ್ದಾರೆ.
ಯಾರಿಗೂ ಯಾವ ತೊಂದರೆಯನ್ನೂ ಕೊಡಬಾರದೆಂಬುದು ಬುದ್ಧವಾಣಿ. ಇಂಥಾ ಬುದ್ಧನ ಉತ್ಸವದಲ್ಲಿ ಅನಾರೋಗ್ಯಪೀಡಿತ ಆನೆಗೆ ನೀಡಿರೋ ತೊಂದರೆ ಮನಷ್ಯತ್ವ ಇರುವ ಯಾರನ್ನೋ ಆದರೂ ಕಂಗಾಲು ಮಾಡಿ ಹಾಕುತ್ತದೆ. ಆ ಜನರಿಗೆ ಕೊಂಚ ಮನುಷ್ಯತ್ವ ಇದ್ದಿದ್ದರೂ ತಿಕಿರಿ ಆನೆಗೆ ಚಿಕಿತ್ಸೆ ಕೊಡಿಸುವತ್ತ ಗಮನ ಹರಿಸುತ್ತಿದ್ದರು. ಆದರೆ ಅವರು ಮೆರವಣಿಗೆಗೆ ತಂದು ನಿಲ್ಲಿಸಿ ಹಿಂಸಿಸಿದ್ದಾರೆ. ಆ ಮೆರವಣಿಗೆಯಲ್ಲಿಯೇ ಕುಸಿದು ಬಿದ್ದ ತಿಕಿರಿ ಇನ್ನೂ ಮೇಲಕ್ಕೆದ್ದಿಲ್ಲ. ಅದಿರುವ ಸ್ಥಿತಿ ನೋಡಿದರೆ ಮತ್ತೆ ಮೇಲೇಳಬಹುದೆಂಬ ನಂಬಿಕೆಯೂ ಉಳಿದಿಲ್ಲ. ಅಂತೂ ಭಕ್ತಿಯ ಹೆಸರಲ್ಲಿ ಬೂಟಾಟಿಕೆ ಪ್ರದರ್ಶಿಸೋ ಈ ಜನರಿಗೆ ಬುದ್ಧನೇ ಎದ್ದು ಬಂದು ಎದೆಗೊದ್ದರೂ ಬಿದ್ಧಿ ಬರುವುದು ಕಷ್ಟವಿದೆ!