ಕಿರುತೆರೆ ಲೋಕದ ಕ್ಯೂಟ್ ಜೋಡಿಗಳ ಪೈಕಿ ಸಾಗರ್ ಬಿಳಿಗೌಡ ಹಾಗೂ ಸಿರಿರಾಜು ಕೂಡ ಸೇರಿಕೊಳ್ತಾರೆ. ಈ ದಂಪತಿ ಇತ್ತೀಚೆಗೆ ಗುಡ್‌ನ್ಯೂಸ್ ಕೊಟ್ಟಿದ್ದರು. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಸಿಹಿಸುದ್ದಿನಾ ತಮ್ಮ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಂಡಿದ್ದರು. ಇದೀಗ ಅದ್ದೂರಿಯಾಗಿ ಸೀಮಂತ ಕಾರ್ಯ ನೆರವೇರಿಸಿ ವಿಡಿಯೋ ಹಂಚಿಕೊಂಡಿದ್ದಾರೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಸಿರಿ ಸೀಮಂತ ಶಾಸ್ತ್ರವನ್ನ ಗ್ರ್ಯಾಂಡ್ ಆಗಿಯೇ ಮಾಡಿದ್ದಾರೆ ನಟ ಸಾಗರ್ ಬಿಳಿಗೌಡ
ಕಳೆದ ವರ್ಷ ಅಂದರೆ ಜನವರಿ 26 2023 ರಂದು ಸಾಗರ್-ಸಿರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ವರ್ಷ ಆರಂಭದಲ್ಲಿ ಸಿಹಿ ಸುದ್ದಿ ಕೊಟ್ಟಿದ್ದಾರೆ. “ಪವಾಡಗಳಿಗೂ ಸಮಯ ಹಿಡಿಯುತ್ತದೆ” ಅಂದಿರೋ ಈ ಜೋಡಿ ಮುದ್ದು ಕಂದನ ಆಗಮನಕ್ಕಾಗಿ ಕಣ್ಣರಳಿಸಿದೆ. ಇಬ್ಬರ ಮನೆಯಲ್ಲೂ ಸಂತಸ-ಸಂಭ್ರಮ ಮನೆಮಾಡಿದ್ದು ಮಗು ಬರುವಿಕೆಗಾಗಿ ಕಾತುರದಿಂದ ಕಾಯ್ತಿದ್ದಾರೆ. ಸದ್ಯ ಸೀಮಂತದ ವಿಡಿಯೋ ಹಂಚಿಕೊಂಡಿರೋ ಸಾಗರ್ ಹಾಗೂ ಸಿರಿ “ತಾಯ್ತನದ ಸೌಂದರ್ಯ” ಎಂದು ಟ್ವೀಟ್ ಮಾಡಿದ್ದಾರೆ. ಈ ವಿಡಿಯೋಗೆ ಇಬ್ಬರ ಫ್ಯಾನ್ಸ್, ಲೈಕ್ಸ್, ಕಮೆಂಟ್ಸ್ ಮಾಡುತ್ತಾ ಒಳ್ಳೆದಾಗಲಿ ಅಂತ ಶುಭಹಾರೈಸ್ತಿದ್ದಾರೆ.
ಇನ್ನೂ ನಟ ಸಾಗರ್ ಬಿಳಿಗೌಡ ಕಿನ್ನರಿ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಪದಾರ್ಪಣೆ ಮಾಡಿ, ಬಳಿಕ ಉದಯ ಟಿವಿಯಲ್ಲಿ ಮನಸಾರೆ ಧಾರಾವಾಹಿಯಲ್ಲಿ ನಟಿಸಿ, ಇದೀಗ ಸತ್ಯ ಧಾರಾವಾಹಿಯಲ್ಲಿ ನಾಯಕ ಕಾರ್ತಿಕ್ ಅಲಿಯಾಸ್ ಅಮೂಲ್ ಬೇಬಿ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಸಾಗರ್ ಪತ್ನಿ ಸಿರಿ ರಾಜು ಮಾಡೆಲ್ ಕಮ್ ನಟಿಯಾಗಿದ್ದು ಸ್ವಂತ ಬಿಸಿನೆಸ್ ಮಾಡ್ತಿದ್ದಾರೆ.