Sai Pallavi: ದಕ್ಷಿಣ ಭಾರತದ ಖ್ಯಾತ ನಟ ಸಾಯಿ ಪಲ್ಲವಿ(Sai Pallavi). ‘ಪ್ರೇಮಂ’ ಮೂಲಕ ಮಲರ್ ಆಗಿ ಪ್ರೇಕ್ಷಕರ ಮನದಂಗಳಕ್ಕೆ ಇಳಿದ ನಟಿ ನಂತರ ಸೌತ್ ಸಿನಿ ರಂಗದಲ್ಲಿ ಸೃಷ್ಟಿಸಿದ್ದು ಮ್ಯಾಜಿಕ್. ಫಿದಾ ಸಿನಿಮಾ ಮೂಲಕ ಮತ್ತಷ್ಟು ಮನಸ್ಸಿಗೆ ಹತ್ತಿರವಾದ ನಟಿ. ನಟನೆ, ಡ್ಯಾನ್ಸ್, ಪರ್ಸನಾಲಿಟಿ ಎಲ್ಲದರಲ್ಲೂ ಬಲು ಆಫ್ತ ಎನಿಸುವ ವ್ಯಕ್ತಿತ್ವ. ತಮ್ಮದೇ ಆದ ಫ್ಯಾನ್ ಬೇಸ್ ಹೊಂದಿರುವ ಈಕೆ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.
ಸಾಯಿ ಪಲ್ಲವಿ(Sai Pallavi) ನಟಿಯರ ಸಾಲಲ್ಲಿ ಬಹಳ ಭಿನ್ನವಾಗಿ ನಿಲ್ಲುವ ವ್ಯಕ್ತಿತ್ವ, ಅದಕ್ಕೆ ಅಭಿಮಾನಿಗಳು ಆಕೆಯನ್ನು ಅಷ್ಟು ಇಷ್ಟ ಪಡುತ್ತಾರೆ. ತನ್ನ ಸಿಂಪ್ಲಿಸಿಟಿ, ಸಿಂಪಲ್ ಲುಕ್‌ನಿಂದಲೇ ಜನಪ್ರಿಯತೆ ಗಳಿಸಿರುವ ಈಕೆ ಜನಪ್ರಿಯ ನಟಿ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸಾಯಿ ಪಲ್ಲವಿಗೆ ‘ತಂಡೆಲ್’(Thandel) ಚಿತ್ರತಂಡದಿಂದ ವಿಶೇಷ ಉಡುಗೊರೆ ಸಿಕ್ಕಿದೆ.
ನಾಗ ಚೈತನ್ಯ(Naga Chaitanya) ನಟಿಸುತ್ತಿರುವ ಮೋಸ್ಟ್ ಎಕ್ಸ್‌ಪೆಕ್ಟೆಡ್ ಪ್ಯಾನ್ ಇಂಡಿಯಾ ಸಿನಿಮಾ ತಂಡೆಲ್. ಚಿತ್ರದಲ್ಲಿ ಸಾಯಿ ಪಲ್ಲವಿ(Sai Pallavi) ನಾಯಕಿ. ಶೂಟಿಂಗ್ ಸಮಯದ ಕೆಲವು ಮೆಮೊರೇಬಲ್ ಮುಮೆಂಟ್ ಹಾಗೂ ಸಾಯಿ ಪಲ್ಲವಿ ಹಿಂದಿನ ಸಿನಿಮಾಗಳ ಝಲಕ್ ಒಟ್ಟಿಗೆ ಸೇರಿಸಿ ಸ್ಪೆಷಲ್ ವೀಡಿಯೋವೊಂದನ್ನು ಚಿತ್ರತಂಡ ರಚಿಸಿದೆ. ಈ ಮೂಲಕ ನಟಿ ಸಾಯಿ ಪಲ್ಲವಿಗೆ ಶುಭ ಕೋರಿದೆ ಚಿತ್ರತಂಡ. ಸ್ಪೆಷಲ್ ವೀಡಿಯೋ ವೈರಲ್ ಆಗಿದ್ದು, ಮೆಚ್ಚುಗೆ ಗಳಿಸಿಕೊಂಡಿದೆ.
ಭಾರತೀಯ ಚಿತ್ರರಂಗ ಕಣ್ಣರಳಿಸಿ ನೋಡುತ್ತಿರುವ ರಾಮಾಯಣ(Ramayana) ಸಿನಿಮಾದಲ್ಲಿ ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಇದಲ್ಲದೇ ಇನ್ನೂ ಎರಡ್ಮೂರು ಬಿಗ್ ಪ್ರಾಜೆಕ್ಟ್ ಫಿದಾ ನಟಿಯ ಕೈಯಲ್ಲಿದ್ದು. ಈ ವರ್ಷ ತಂಡೆಲ್(Thandel) ಮೂಲಕ ರಂಜಿಸಲು ಬರ್ತಿದ್ದಾರೆ.