Sara Ali khan: ಬಿಟೌನ್ ಅಂಗಳದಲ್ಲಿ ಅಫೈರ್ ಸುದ್ದಿಗಳಿಗೇನು ಕಮ್ಮಿಯಿಲ್ಲ. ನಟ-ನಟಿಯರು ಬ್ಯಾಚುಲರ್ ಆಗಿರುವವರೆಗೆ ಅವರೊಂದಿಗೆ ಒಂದಿಷ್ಟು ಹೆಸರುಗಳು ಗಿರಕಿ ಹೊಡೆಯುತ್ತಲೇ ಇರುತ್ತೆ. ಈ ಸುದ್ದಿಗಳು ಬಿಸಿ ಬಿಸಿ ಕಜ್ಜಾಯದಂತೆ ಬಿಕರಿ ಕೂಡ ಆಗುತ್ತೆ. ಸದ್ಯ ಬಾಲಿವುಡ್ ಅಂಗಳದ ಲೇಟೆಸ್ಟ್ ಸುದ್ದಿ ಸೈಫ್ ಮಗಳತ್ತ ಕಣ್ಣು ಹೊರಳಿಸುವಂತೆ ಮಾಡಿದೆ. ಹಾಗಂತ ಇದು ಡೇಟಿಂಗ್ ಸುದ್ದಿಯಲ್ಲ ಎಂಗೇಜ್ ಆದ ಸುದ್ದಿ.
ಬಿಟೌನ್ ಸ್ಟಾರ್ ನಟ ಸೈಫ್ ಮೊದಲ ಮಡದಿ ಮಗಳು ಸಾರಾ ಅಲಿ ಖಾನ್(Sara Ali khan). ನಟಿಯಾಗಿ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಈಕೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗಿದೆ. ವೀರ್ ಪಹಾರಿಯ(Veer pahariya) ಜೊತೆ ಸಾರಾ ಎಂಗೇಜ್ ಆಗಲಿದ್ದಾರೆ ಎಂಬ ಪುಕಾರು ಎಲ್ಲೆಡೆ ಹಬ್ಬಿದೆ. ವೀರ್ ಪಹಾರಿಯಾ ಬೇರಾರು ಅಲ್ಲ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಮೊಮ್ಮಗ. ಸಾರಾ, ವೀರ್ ಜೊತೆಗಿರುವ ಫೋಟೋಸ್ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ಮದುವೆ ವಿಚಾರವೇ ಸಖತ್ ಚರ್ಚೆಯಲ್ಲಿದೆ. ಇಬ್ಬರೂ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆವ ಎಂಬ ಅಂತೆ ಕಂತೆ ಸುದ್ದಿ ಸಖತ್ ಆಗಿ ಸೇಲ್ ಆಗ್ತಿದೆ.
ಇಂಟ್ರಸ್ಟಿಂಗ್ ವಿಚಾರವೊಂದು ಇದರ ನಡುವೆ ಗಮನ ಸೆಳೆಯುತ್ತಿದೆ. ಸುಶೀಲ್ ಕುಮಾರ್ ಶಿಂಧೆ ಮತ್ತೊಬ್ಬ ಮೊಮ್ಮಗ ಶಿಖರ್ ಪಹಾರಿಯಾ. ಈತ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್(Jahvi Kapoor) ಜೊತೆ ಡೇಟಿಂಗ್‌ನಲ್ಲಿದ್ದಾನೆ. ಪ್ರೀತಿಯ ಬಲೆಯಲ್ಲಿ ಬಿದ್ದಿರುವ ಇಬ್ಬರು ಮದುವೆಯಾಗಲಿದ್ದಾರೆ ಎಂಬ ಸೂಚನೆಯನ್ನು ಖುದ್ದು ಜಾಹ್ನವಿಯೇ ನೀಡಿದ್ದಾರೆ. ಇದೀಗ ಸಾರಾ ಅಲಿ ಖಾನ್ ಹೆಸರು ಕೂಡ ಸುಶೀಲ್ ಕುಮಾರ್ ಶಿಂಧೆ ಮತ್ತೊಬ್ಬ ಮೊಮ್ಮಗನೊಂದಿಗೆ ತಳುಕು ಹಾಕಿಕೊಂಡಿದ್ದು, ಇಬ್ಬರೂ ಒಂದೇ ಮನೆಯ ಸೊಸೆಯಾಗಲಿದ್ದಾರಾ ಎಂಬ ಲೆಕ್ಕಾಚಾರವೂ ಜೋರಾಗಿದೆ.
ಸಾರಾ ಅಲಿ ಖಾನ್(Sara Ali Khan) ಹೆಸರು ಈ ಹಿಂದೆ ಕ್ರಿಕೆಟಿಗ ಶುಭ್ ಮನ್ ಗಿಲ್, ನಟ ಸುಶಾಂತ್ ಸಿಂಗ್ ರಜಪೂತ್, ಕಾರ್ತಿಕ್ ಆರ್ಯನ್, ಹರ್ಷವರ್ಧನ್ ಕಪೂರ್ ಸೇರಿದಂತೆ ಹಲವು ನಟರೊಂದಿಗೆ ತಳುಕು ಹಾಕಿಕೊಂಡಿತ್ತು. ಇದೀಗ ಬಿಟೌನ್ ಬ್ಯುಸಿ ನಟಿ ಮದುವೆ ಸುದ್ದಿ ಗುಲ್ಲೆದ್ದಿದ್ದು, ಯಾವುದು ನಿಜ, ಯಾವುದು ಸುಳ್ಳು ಅನ್ನೋದು ಬೆಳಕಿಗೆ ಬರಬೇಕಾಗಿದೆ.