ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿಗೆ ಚಂದನವನದ ಒಂಟಿ ಸಲಗ ಸಾಥ್ ಕೊಡಲಿರುವ ಸುದ್ದಿಯೊಂದು ಗಂಧದಗುಡಿಯಲ್ಲಿ ಜೋರಾಗಿ ಕೇಳಿಬಂದಿತ್ತು. ಇದೀಗ ಆ ಸುದ್ದಿಗೆ ಸಾಕ್ಷ್ಯ ಸಿಕ್ಕಿದೆ. ಸ್ವತಃ ನಿಖಿಲ್ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಭೀಮನ ಜೊತೆಗಿರುವ ಫೋಟೋ ಶೇರ್ ಮಾಡುವ ಮೂಲಕ ಸಿನಿಮಾ ಸಮಾಚಾರವನ್ನ ಕನ್ಫರ್ಮ್ ಮಾಡಿದ್ದಾರೆ. ಲೈಕಾ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಪ್ರೊಡಕ್ಷನ್ ನಂಬರ್ 28 ಕುಟುಂಬಕ್ಕೆ ಅಧಿಕೃತವಾಗಿ ಸೇರ್ಪಡೆಯಾದ ಸ್ಯಾಂಡಲ್ ವುಡ್ ‘ಸಲಗ’ ಕರಿಚಿರತೆ ದುನಿಯಾ ವಿಜಯ್ ಅವರಿಗೆ ಸ್ವಾಗತ. ನಮ್ಮ ಸಿನಿಮಾದ ಪ್ರಮುಖ ಪಾತ್ರದಲ್ಲಿ ದುನಿಯಾ ವಿಜಯ್ ಅವರು ನಟಿಸುತ್ತಿದ್ದಾರೆ. ಅವರ ಜೊತೆ ನಾನು ತೆರೆಹಂಚಿಕೊಳ್ಳುತ್ತಿರುವುದು ಸಂತೋಷದ ವಿಚಾರ.ಹೀಗೊಂದು ಟ್ವೀಟ್ ಮಾಡಿದ್ದಾರೆ ನಟ ನಿಖಿಲ್ ಕುಮಾರ್ ಸ್ವಾಮಿ
ರೈಡರ್ ಸಿನಿಮಾ ನಂತರ ನಿಖಿಲ್ ಪ್ರೊಡಕ್ಷನ್ ನಂಬರ್ 28 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಯುವ ನಿರ್ದೇಶಕ ಲಕ್ಷ್ಮಣ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಲೈಕಾ ಬಂಡವಾಳ ಹೂಡ್ತಿರುವ ಮೊದಲ ಕನ್ನಡದ ಚಿತ್ರ ಇದಾಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯುವರಾಜನ ಸಿನಿಮಾ ತಯಾರಾಗ್ತಿದೆ. ಈ ಚಿತ್ರಕ್ಕೀಗ ಸ್ಯಾಂಡಲ್ವುಡ್ ಒಂಟಿಸಲಗ ಎಂಟ್ರಿಕೊಟ್ಟಿದ್ದು ನಿರೀಕ್ಷೆ ಹೆಚ್ಚಿದೆ. ಬಿಗ್ ಸ್ಕ್ರೀನ್ ಮೇಲೆ ಭೀಮ ಹಾಗೂ ಅಭಿಮನ್ಯು ಜುಗಲ್ ಬಂಧಿ ನೋಡೋದಕ್ಕೆ ಅಭಿಮಾನಿ ಬಳಗ ಹೀಗಿಂದಲೇ ಕಣ್ಣರಳಿಸಿದೆ.
ನಿಖಿಲ್ ಈ ಸಿನಿಮಾದ ಚಿತ್ರೀಕರಣ ಹೈ ಸ್ಪೀಡ್ನಲ್ಲಿ ನಡೆಯುತ್ತಿದೆ. ಹೈ ಬಜೆಟ್ನಲ್ಲಿ ನಿರ್ಮಾಣವಾಗ್ತಿರೋ ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟ ಕೋಮಲ್ ಕುಮಾರ್ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.. ಈಗ ದುನಿಯಾ ವಿಜಯ್ ಅಧಿಕೃತವಾಗಿ ಸಿನಿಮಾ ತಂಡ ಸೇರಿಕೊಂಡಿದ್ದಾರೆ. ಪ್ರಮುಖ ಪಾತ್ರ ಎಂದಷ್ಟೇ ಫಿಲ್ಮ್ ಟೀಮ್ ಮಾಹಿತಿ ಕೊಟ್ಟಿರುವುದರಿಂದ, ಜಯಮ್ಮನ ಮಗ ನಿಖಿಲ್ಗೆ ಸಾಥ್ ಕೊಡ್ತಾರಾ ಅಥವಾ ವಿಲನ್ನಾಗಿ ಎದುರಾಕಿಕೊಳ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಇತ್ತೀಚೆಗೆ ತೆಲುಗಿನ ‘ವೀರ ಸಿಂಹ ರೆಡ್ಡಿ’ ಸಿನಿಮಾದಲ್ಲಿ ನಂದಮೂರಿ ಬಾಲಕೃಷ್ಣ ಎದುರು ದುನಿಯಾ ವಿಜಯ್ ವಿಲನ್ ಪಾತ್ರ ಮಾಡಿ, ಟಾಲಿವುಡ್ ಪ್ರೇಕ್ಷಕರನ್ನ ಇಂಪ್ರೇಸ್ ಮಾಡಿದ್ರು.. ಹೀಗಾಗಿ ಈ ಸಿನಿಮಾದಲ್ಲಿ ದುನಿಯಾ ವಿಜಯ್ ವಿಲನ್ ಆಗಿ ಅಬ್ಬರಿಸಿರುತ್ತಾರಾ? ಕಾದುನೋಡಬೇಕು
ಇನ್ನೂ ದುನಿಯಾ ವಿಜಯ್ ಭೀಮ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ಧಾರೆ. ಭೀಮ ಚಿತ್ರಕ್ಕೆ ವಿಜಯ್ ಹೀರೋ ಅಷ್ಟೇ ಅಲ್ಲ, ಡೈರೆಕ್ಟರ್ ಕೂಡಾ ಹೌದು. ಸಲಗ ಚಿತ್ರದ ನಂತರ ವಿಜಯ್ ಅವರೇ ನಿರ್ದೇಶಿಸಿ ನಟಿಸಿರುವ ಭೀಮ ಚಿತ್ರದ ಹಾಡುಗಳು ಈಗಾಗಲೇ ಸೆನ್ಸೇಷನ್ ಸೃಷ್ಟಿಸಿವೆ. ಈ ಮಧ್ಯೆ ಭೀಮ ಅಭಿಮನ್ಯು ಪಕ್ಕದಲ್ಲಿ ನಿಂತು ಥಂಬ್ ಸಪ್ ಮಾಡಿದ್ದಾರೆ. ಲಕ್ಷ್ಮಣ್ ಹೊಸೆದಿರುವ ಕಥೆ ಕೇಳಿ ಥ್ರಿಲ್ಲಾಗಿರೋ ಜಾಕ್ಸನ್, ಜಾಗ್ವಾರ್ ಜೊತೆ ಅಖಾಡಕ್ಕಿಳಿದಿದ್ದಾರೆ. ಶೀಘ್ರದಲ್ಲೇ ಆ ಫೋಟೋವೂ ಫೀಲ್ಡಿಗಿಳಿಯಲಿದ್ದು ಅಲ್ಲಿವರೆಗೂ ಕುತೂಹಲದಿಂದ ಎದುರುನೋಡಬೇಕು.