ದೃಶ್ಯಬ್ರಹ್ಮ ಪ್ರಶಾಂತ್ ನೀಲ್ ನಿರ್ದೇಶನದ, ಡಾರ್ಲಿಂಗ್ ಪ್ರಭಾಸ್ ನಟನೆಯ `ಸಲಾರ್’ ಸಿನಿಮಾ ಬ್ಲಾಕ್‍ಬಸ್ಟರ್ ಹಿಟ್ಟಾಗಿದ್ದು ನಿಮಗೆಲ್ಲ ಗೊತ್ತೆಯಿದೆ. ವಲ್ರ್ಡ್ ವೈಡ್ ಬಾಕ್ಸ್ ಆಫೀಸ್‍ನಲ್ಲಿ ಸುಮಾರು 700 ಕೋಟಿ ಗಳಿಕೆ ಕಂಡು, ವಿಶ್ವದಾದ್ಯಂತ ಬೆಳ್ಳಿತೆರೆ ಮೇಲೆ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಬಿಗ್ ಸ್ಕ್ರೀನ್ ಮೇಲೆ ಮೂರನೇ ವಾರವೂ ಭರ್ಜರಿ ಪ್ರದರ್ಶನ ಕಾಣ್ತಿದ್ದು `ಸಲಾರ್’ ಬಳಗವೆಲ್ಲ ಒಟ್ಟಿಗೆ ಕೂಡಿ ಸಂಭ್ರಮಿಸಿದೆ. `ಸಲಾರ್’ ಬ್ಲಾಕ್‍ಬಸ್ಟರ್ ಕೇಕ್ ಕತ್ತರಿಸೋ ಮೂಲಕ ದೊಡ್ಡ ಗೆಲುವಿನ ಯಶಸ್ಸನ್ನ ಆನಂದಿಸಿದೆ. ಆ ಸಂಭ್ರಮ-ಸಡಗರದ ಪಟಗಳನ್ನ ಹೊಂಬಾಳೆ ಸಂಸ್ಥೆ ತಮ್ಮ ಸೋಷಿಯಲ್ ಪುಟದಲ್ಲಿ ಹಂಚಿಕೊಂಡಿದೆ.
ಸಿಲ್ವರ್ ಸ್ಕ್ರೀನ್ ಮೇಲೆ `ಸಲಾರ್’ ಅಬ್ಬರ-ಆರ್ಭಟ ಜೋರಾಗಿರುವಾಗಲೇ `ಸಲಾರ್-2′ ಬಗ್ಗೆ ಬ್ರೇಕಿಂಗ್ ನ್ಯೂಸ್‍ಗಳು ಹೊರಬೀಳುತ್ತಿವೆ. ಇಂಗ್ಲೀಷ್ ವೆಬ್‍ಸೈಟ್ ಗೆ ನಿರ್ಮಾಪಕ ವಿಜಯ್ ಕಿರಗಂದೂರ್ ಸಂದರ್ಶನ ನೀಡಿದ್ದು, ಇನ್ನೂ ಕೆಲವೇ ದಿನಗಳಲ್ಲಿ `ಸಲಾರ್ 2′ ಸಿನಿಮಾ ಕೆಲಸ ಕೂಡ ಶುರು ಮಾಡಲಿದ್ದಾರಂತೆ ನಿರ್ದೇಶಕ ಪ್ರಶಾಂತ್ ನೀಲ್. ಈಗಾಗಲೇ ಸಲಾರ್ 2 ಸಿನಿಮಾದ ಸ್ಕ್ರಿಪ್ಟ್ ರೆಡಿಯಾಗಿದ್ದು, ಸಲಾರ್ ಸಿನಿಮಾಗಿಂತಲೂ ಸಲಾರ್ 2 ಇನ್ನೂ ಅದ್ಧೂರಿಯಾಗಿ ಇರಲಿದೆ ಎಂದು ವಿಜಯ್ ತಿಳಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಸಲಾರ್ 2 2025ರಲ್ಲಿ ಬಿಡುಗಡೆ ಆಗಲಿದೆ.
ಕೆಜಿಎಫ್ ಮಾಸ್ಟರ್‌ಮೈಂಡ್ ಪ್ರಶಾಂತ್ ನೀಲ್ ಹಾಗೂ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಕಾಂಬೋ ಕ್ಲಿಕ್ ಆಗಿದೆ. ಸೋಲಿನ ಸುಳಿಗೆ ಸಿಕ್ಕಿ ಒದ್ದಾಡಿದ್ದ ಡಾರ್ಲಿಂಗ್ ಪ್ರಭಾಸ್‌ಗೆ ಗೆಲುವು ದಕ್ಕಿದೆ. ಕೆಜಿಎಫ್‌ನಷ್ಟೇ ಮ್ಯಾಸೀವ್ ಹಿಟ್ ಕೊಡುವ ನೀಲ್‌ಕನಸು ನನಸಾಗಿದೆ. ಇತ್ತ ಹೊಂಬಾಳೆಯ ನಿರೀಕ್ಷೆ ಕೂಡ ನಿಜವಾಗಿದೆ. ರೆಕಾರ್ಡ್ ಬ್ರೇಕಿಂಗ್ ಬ್ಲಾಕ್‌ಬಸ್ಟರ್ ಸಲಾರ್‌ನಿಂದ ವಿಜಯ್ ಕಿರಗಂದೂರ್ ಖಜಾನೆ ಕೇಕೆ ಹೊಡೆಯುತ್ತಿದೆ. 270 ಕೋಟಿ ಬಂಡವಾಳ ಹೂಡಿ ಖಾನ್ಸಾರ್‌ಕೋಟೆ ಕಟ್ಟಿದ ಮಾಲೀಕರಿಗೆ ಹೆಸರು ದುಡ್ಡು ಕೀರ್ತಿ ಎಲ್ಲವೂ ದಕ್ಕಿದೆ. ಕೆಜಿಎಫ್, ಕಾಂತಾರ ನಂತರ ಸಲಾರ್‌ಸಿನಿಮಾದಿಂದನೂ ದೊಡ್ಡ ಮಟ್ಟದ ಗೆಲುವು ಕಂಡಿರೋ ಹೊಂಬಾಳೆ, ಮತ್ತಷ್ಟು ಪ್ಯಾನ್‌ಇಂಡಿಯಾ ಪ್ರಾಜೆಕ್ಟ್‌ಗಳತ್ತ ಚಿತ್ತ ನೆಟ್ಟಿದೆ. ಬಘೀರ, ಯುವ, ಟೈಸನ್, ರಘು ತಾತಾ, ಕಾಂತಾರ-1, ರಿಚರ್ಡ್‌ಆಂಟನಿ ಸೇರಿದಂತೆ ಹಲವು ಸಿನಿಮಾಗಳು ನಿರ್ಮಾಣದ ಹಂತದಲ್ಲಿವೆ. ಈ ವರ್ಷ ಒಂದೊಂದಾಗಿ ತೆರೆಗೆ ಬರಲು ಭರದಿಂದ ಸಜ್ಜಾಗುತ್ತಿವೆ