ಸಲಾರ್, ಸೌತ್ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲ ಇಡೀ ವಿಶ್ವಸಿನಿದುನಿಯಾವೇ ಕಣ್ಣರಳಿಸಿ ಕಾಯ್ತಿರೋ ಸಿನಿಮಾ. ಅಮರೇಂದ್ರ ಬಾಹುಬಲಿ ಡಾರ್ಲಿಂಗ್ ಪ್ರಭಾಸ್ ಅಭಿನಯದ ಸಿನಿಮಾ ಅನ್ನೋದಕ್ಕಿಂತ ಹೆಚ್ಚಾಗಿ ಕೆಜಿಎಫ್ ಸೃಷ್ಟಿಕರ್ತ ಕೆತ್ತಿರೋ ಹೊಸ ಲೋಕ ಎನ್ನುವ ಕಾರಣಕ್ಕೆ ಸಲಾರ್ ನತ್ತ ಚಿತ್ರಜಗತ್ತಿನ ಚಿತ್ತ ನೆಟ್ಟಿದೆ. ಈಗಾಗಲೇ ʻಸಲಾರ್ʼ ಟೀಸರ್, ಟ್ರೇಲರ್ ಹಾಗೂ ಸಾಂಗ್ವೊಂದನ್ನು ನೋಡಿ ಬೆಚ್ಚಿಬೆರಗಾಗಿರೋ ಸಿನಿದುನಿಯಾ, ಸೆಕೆಂಡ್ ಟ್ರೇಲರ್ಗಾಗಿ ಕಣ್ಣರಳಿಸಿತ್ತು. ಫೈನಲೀ, ಇಂದು ʻಸಲಾರ್ʼ ಎರಡನೇ ಟ್ರೇಲರ್ ಬಿಡುಗಡೆಯಾಗಿದೆ. ಸಮಸ್ತ ಸಿನಿಮಾ ಪ್ರೇಮಿಗಳನ್ನ ಹುಚ್ಚೆಬ್ಬಿಸಿರೋ ಈ ಟ್ರೇಲರ್, ಭಾರತೀಯ ಚಿತ್ರರಂಗವನ್ನ ಮಾತ್ರವಲ್ಲ ಹಾಲಿವುಡ್ ಲೋಕವನ್ನೂ ಥಂಡಾ ಹೊಡೆಸಿದೆ.
ಯಸ್, ʻಸಲಾರ್ʼ ಸಿನಿಮಾದಲ್ಲಿ ಹಾಲಿವುಡ್ಗೆ ಸೆಡ್ಡು ಹೊಡೆಯುವಂತಹ ಆ್ಯಕ್ಷನ್ ಸೀಕ್ವೆನ್ಸ್ಗಳಿವೆ ಎಂಬ ಸುದ್ದಿಯೊಂದನ್ನ ಕೇಳಿದ್ವಿ. ಇದೀಗ, ಟ್ರೇಲರ್ ನೋಡಿದ್ಮೇಲೆ ಗೊತ್ತಾಗ್ತಿದೆ ʻಸಲಾರ್ʼ ಸಿನಿಮಾದ ಸಾಹಸ ದೃಶ್ಯಗಳು ಹಾಲಿವುಡ್ಗೆ ಸೆಡ್ಡು ಹೊಡೆಯೋದು ಮಾತ್ರವಲ್ಲ ಹಾಲಿವುಡ್ ಸಿನಿಮಾ ಮೀರಿಸುತ್ತೆ ಅಂತ. ಅಟ್ ದಿ ಸೇಮ್ ಟೈಮ್ ʻಸಲಾರ್ʼ ಸೌತ್ ಸಿನಿಮಾ ಅಂಗಳದಲ್ಲಿ ಮಾತ್ರವಲ್ಲ ವಿಶ್ವ ಸಿನಿದುನಿಯಾದಲ್ಲಿ ನಯಾ ಸಂಚಲನ ಮೂಡಿಸುವ ಎಲ್ಲಾ ಲಕ್ಷಣಗಳು ಕಾಣ್ತಿದೆ. ನೀಲ್ ಸೃಷ್ಟಿಸಿರೋ ನಯಾ ಲೋಕಕ್ಕೆ ಪ್ಯಾನ್ ಇಂಡಿಯಾ ಪ್ರೇಕ್ಷಕರು ಮಾತ್ರವಲ್ಲ ಪ್ಯಾನ್ ವರ್ಲ್ಡ್ ಮಂದಿ ಕೂಡ ಬಹುಪರಾಕ್ ಹಾಕೋದ್ರಲ್ಲಿ ನೋ ಡೌಟ್ ಅಂತ ರಿಲೀಸ್ ಆಗಿರೋ ಎರಡನೇ ಟ್ರೇಲರ್ ಹೇಳ್ತಿದೆ.
ಡಾರ್ಲಿಂಗ್ ಪ್ರಭಾಸ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್, ಶ್ರುತಿಹಾಸನ್, ಟಿನ್ನು ಆನಂದ್, ಜಗಪತಿ ಬಾಬು, ಶ್ರೀಯಾರೆಡ್ಡಿ, ಈಶ್ವರಿ ರಾವ್ ಸೇರಿದಂತೆ ಸ್ಟಾರ್ ನಟ-ನಟಿಯರ ಸಮಾಗಮ ಇಲ್ಲಾಗಿದೆ. ವಿಶೇಷ ಅಂದರೆ ʻಸಲಾರ್ʼ ನಲ್ಲಿ ಧಗಧಗಿಸಿರೋ ಅವಕಾಶ ಪ್ರಮೋದ್ ಅಲಿಯಾಸ್ ಪಂಜು, ಕೆಜಿಎಫ್ ಖ್ಯಾತಿಯ ಗರುಡ ರಾಮ್, ಮಧುಗುರುಸ್ವಾಮಿ ಸೇರಿದಂತೆ ಇನ್ನೂ ಹಲವು ಕನ್ನಡ ಕಲಾವಿದರಿಗೆ ಸಿಕ್ಕಿದೆ. ಸಲಾರ್ ಸಿನಿಮಾವನ್ನು ಬರೋಬ್ಬರಿ 400 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿದೆ ಎನ್ನಲಾಗ್ತಿದೆ. ಬರೋಬ್ಬರಿ 100 ಎಕರೆ ಜಾಗದಲ್ಲಿ ಕಲಾ ನಿರ್ದೇಶಕ ಶಶಿಕುಮಾರ್ ಹಾಕಿದ ಸೆಟ್ ನಲ್ಲಿ ವಾವ್ ಎನಿಸುವ ದೃಶ್ಯಗಳನ್ನು ಭುವನ್ ಗೌಡ ಸೆರೆಹಿಡಿದಿದ್ದಾರೆ. ಕೆಜಿಎಫ್ ಚಿತ್ರಕ್ಕಿಂತ ತಾಂತ್ರಿಕವಾಗಿ ಸಲಾರ್ ಐದು ಪಟ್ಟು ದೊಡ್ಡದು ಅಂತೇಳಿ ಸಿನಿದುನಿಯಾವನ್ನ ಶೇಕ್ ಶೇಕ್ ಮಾಡಿದ್ದಾರೆ.
ಇನ್ನೇನು ನಾಲ್ಕು ದಿನದಲ್ಲಿ ʻಸಲಾರ್ʼ ಲೋಕ ಬೆಳ್ಳಿಭೂಮಿ ಮೇಲೆ ಅನಾವರಣಗೊಳ್ಳುತ್ತೆ. ಖಾನ್ಸಾರ್ ಸಾಮ್ರಾಜ್ಯದ ಬಾಗಿಲು ತೆರೆಯುತ್ತೆ, ಅಲ್ಲಿ ಕುರ್ಚಿಗಾಗಿ ನಡೆಯುವ ಕದನ, ಕುಚಿಕು ಗೆಳೆಯರಿಬ್ಬರ ಹೋರಾಟದ ಕಥನ ಕಣ್ಮುಂದೆ ಕೇಕೆಹಾಕುತ್ತೆ. ಆ ಕ್ಷಣಕ್ಕೆ ನಾವು-ನೀವೆಲ್ಲರೂ ಸಾಕ್ಷಿಯಾಗೋದಕ್ಕೆ ಕೌಂಟ್ಡೌನ್ ಶುರುವಾಗಿದೆ. ಖಾನ್ಸಾರ್ ಕೆಂಪಾಗಬೇಕು ಅಂತ ಕಣ್ಣಲ್ಲೇ ಕೆಂಡ ಉಗುಳಿರೋ ಅಮರೇಂದ್ರ ಬಾಹುಬಲಿ, ಸೋಲಿನ ಸುಳಿಯಿಂದ ಹೊರಬರೋದು ಪಕ್ಕಾ ಎನ್ನುವ ಮಾತು ಈಗಾಗಲೇ ಕೇಳಿಬರುತ್ತಿದೆ. ನನ್ನ 21 ವರ್ಷದ ಸಿನಿ ಕರಿಯರ್ನಲ್ಲಿ ಪ್ರಶಾಂತ್ ನೀಲ್ ಬೆಸ್ಟ್ ಡೈರೆಕ್ಟರ್ ಅಂತ ಪ್ರಭಾಸ್ ಈಗಾಗಲೇ ಹೇಳಿಕೊಂಡಿದ್ದು ಆಗಿದೆ. ಇಂಟ್ರೆಸ್ಟಿಂಗ್ ಅಂದರೆ ದೃಶ್ಯಬ್ರಹ್ಮ ಜಕ್ಕಣ್ಣ ಬರೋಬ್ಬರಿ 10000 ಕೊಟ್ಟು ಸಲಾರ್ ಫಸ್ಟ್ ಟಿಕೆಟ್ ಖರೀದಿ ಮಾಡಿ ಅಮರೇಂದ್ರ ಬಾಹುಬಲಿಯ ಬಹುನಿರೀಕ್ಷಿತ ಸಿನಿಮಾಗೆ ಸಪೋಟ್ ಮಾಡಿದ್ದಾರೆ. ಮಾತ್ರವಲ್ಲ ಸಲಾರ್ ಟೀಮ್ನ ಸ್ಪೆಷಲ್ ಇಂಟರ್ ವ್ಯೂ ಮಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.
4k ಐಮ್ಯಾಕ್ಸ್ ಸಿನಿಮ್ಯಾಟಿಕ್ ವರ್ಷನ್ ನಲ್ಲಿ, ಡಿಸಿಟಿ ಥೀಮ್ ನಲ್ಲಿ ಸಲಾರ್ ಕ್ಯಾಪ್ಚರ್ ಮಾಡಲಾಗಿದೆ. ರವಿಬಸ್ರೂರ್ ಮ್ಯೂಸಿಕ್, ಭವನ್ ಗೌಡ ಸಿನಿಮಾಟೋಗ್ರಫಿ, ಶಿವಕುಮಾರ್ ಕಲಾನಿರ್ದೇಶನದಲ್ಲಿ ನೀಲ್ ಸಾಹೇಬ್ರು ಹೊಸ ಪ್ರಪಂಚ ಕಟ್ಟಿದ್ದಾರೆ. ಹೊಂಬಾಳೆ ಮಾಲೀಕರು ನೀರಿನಂತೆ ಹಣ ಚೆಲ್ಲಿದ್ದಾರೆ. ಇಂಟ್ರೆಸ್ಟಿಂಗ್ ಅಂದರೆ, ಫಾರ್ ದಿ ಫಸ್ಟ್ ಟೈಮ್ ಪ್ರಭಾಸ್ ಹಾಗೂ ಕಿಂಗ್ ಖಾನ್ ಶಾರುಖ್ ಮುಖಾಮುಖಿಯಾಗ್ತಿದ್ದಾರೆ. ಕೆಜಿಎಫ್ ಮುಂದೆ ಕಿಂಗ್ ಖಾನ್ ಜೀರೋ ಚಿತ್ರ ಮಕಾಡೆ ಮಲಗಿತ್ತು. ಇದೀಗ ಮತ್ತೊಮ್ಮೆ ಹೊಂಬಾಳೆ ಮಾಲೀಕರ ಸಲಾರ್ ಎದುರು ಬಾಕ್ಸ್ ಆಫೀಸ್ ಕಿಂಗ್ ಶಾರುಖ್ ಡಂಕಿ ಸೆಣಸಬೇಕಿದೆ. ಬಾಹುಬಲಿ ಬಂತರ ಸಾಲು ಸಾಲು ಸೋಲುಂಡಿರೋ ಪ್ರಭಾಸ್ ಬಾಲಿವುಡ್ ಬಾದ್ಷಾನ ಬೆಳ್ಳಿಭೂಮಿ ಅಂಗಳದಲ್ಲಿ ಬಗ್ಗುಬಡಿತಾರಾ? ಬಾಕ್ಸ್ ಆಫೀಸ್ನಲ್ಲಿ ಕಿಂಗ್ ಖಾನ್ ಹಿಂದಿಕ್ಕಿ ಇತಿಹಾಸ ಸೃಷ್ಟಿಸ್ತಾರಾ? ಡಿಸೆಂಬರ್ 22ರವರೆಗೆ ಕಾದುನೋಡಬೇಕು.