ಇಡೀ ಚಿತ್ರಜಗತ್ತನ್ನೇ ಚಾತಕ ಪಕ್ಷಿಯಂತೆ ಕಾಯುವಂತೆ ಮಾಡಿದ್ದ `ಸಲಾರ್’ ಸಿನಿಮಾ ಇವತ್ತು ವಿಶ್ವದಾದ್ಯಂತ ತೆರೆಗಪ್ಪಳಿಸಿದೆ. ಭರ್ತಿ 15ಸಾವಿರ ಶೋಗಳನ್ನು ಏರ್ಪಡಿಸಲಾಗಿದ್ದು, ವಲ್ರ್ಡ್ ವೈಡ್ ಸಿನಿಮಾ ಪ್ರೇಕ್ಷಕರು ಹೈವೋಲ್ಟೇಜ್ ಆ್ಯಕ್ಷನ್ ಸಿನಿಮಾ `ಸಲಾರ್’ ಕಣ್ತುಂಬಿಕೊಂಡಿದ್ದಾರೆ. ಮಿಡ್ ನೈಟ್ ಶೋ ಸಿನಿಮಾ ನೋಡಿದವರು ಸೋಷಿಯಲ್ ಸಾಮ್ರಾಜ್ಯದಲ್ಲಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನ ಹಂಚಿಕೊಳ್ಳುತ್ತಿದ್ದಾರೆ. ನೆಟ್ಟಿಗರ ಪ್ರಕಾರ `ಸಲಾರ್’ ಚಿತ್ರದ ಹೀಗಿದೆ ನೋಡಿ
https://twitter.com/i/status/1737960905160241582
ಸಲಾರ್ ಸಿನಿಮಾ ಅತ್ಯುತ್ತಮವಾಗಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ಚಿತ್ರ ಆಕ್ಷನ್ ಮಾಸ್ಟರ್ ಪೀಸ್. ಪ್ರಭಾಸ್, ಸ್ಟೈಲ್, ಮಾಸ್ ಆಕ್ಷನ್, ಪಂಚ್ ಡೈಲಾಗ್ ಅಮೋಘʼʼʻʻಇದೊಂದು ಬ್ಲಾಕ್ ಬಸ್ಟರ್ ಸಿನಿಮಾ. ಪ್ರಭಾಸ್ ಅಭಿನಯ, ನೀಲ್ ನಿರ್ದೇಶನ ಉನ್ನತ ಮಟ್ಟದಲ್ಲಿದೆ. ದಿ ರೆಬೆಲ್ ಈಸ್ ಬ್ಯಾಕ್ʼʼ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ʻʻಮೂಲ ವಿಷಯವೆಂದರೆ ಪ್ರತಿ ನೋವು ಮತ್ತು ಅವಮಾನವನ್ನು ಸಹಿಸಿಕೊಳ್ಳುವ ಹಿಂಸಾತ್ಮಕ ವ್ಯಕ್ತಿ ಆತ. ಆದರೆ ಮಹಿಳೆಗೆ ಅವಮಾನವಾದರೆ ಅವನು ಸಹಿಸಲ್ಲ. ಈ ಥೀಮ್ ಬಹಳಷ್ಟು ಇಷ್ಟವಾಯ್ತುʼʼ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ
https://twitter.com/i/status/1737988687454175263
ʻʻಇಡೀ ಥಿಯೇಟರ್ ಬೆಚ್ಚಿಬಿದ್ದ ಈ ದೃಶ್ಯ ವಾವ್ ಎಂಬಂತೆ ಇತ್ತುʼʼ ಎಂದು ಮತ್ತೊಬ್ಬರು ವಿಡಿಯೊ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ ʻಇವತ್ತು ದಕ್ಷಿಣ ಭಾರತದಲ್ಲಿ ಹಬ್ಬ. ʼಡಂಕಿʼ ಖಂಡಿತ ಭಯ ಬೀಳೋದು ಗ್ಯಾರಂಟಿʼʼ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. “2 ಗಂಟೆ 55 ನಿಮಿಷದ ಸಿನಿಮಾದಲ್ಲಿ ಕೇವಲ ನಾಲ್ಕು ಫೈಟ್ ಗಳಿವೆ. ಹಾಗೆಯೇ ಸಿಕ್ಕಾಪಟ್ಟೆ ಡ್ರಾಮಾ ಇದೆ. ಆದರೂ ಇಡೀ ಡ್ರಾಮಾದಲ್ಲಿ ಒಂದೇ ಒಂದು ಬೇಸರ ಮೂಡಿಸುವ ದೃಶ್ಯವಿಲ್ಲ. ಈ ಸಿನಿಮಾದಲ್ಲಿರುವ ಫೈಟ್ಸ್ ಹಾಗೂ ಎಲಿವೇಷನ್ ಸೀನ್ಗಳು ಬೋರ್ ಹೊಡೆಸುವುದಿಲ್ಲ. ನಿಮ್ಮ ದುಡ್ಡಿಗೆ ಮೋಸವಿಲ್ಲ” ಎಂದು ಇನ್ನೊಬ್ಬ ನೆಟ್ಟಿಗರು ಹೇಳಿದ್ದಾರೆ.
2 hours 55 minutes runtime. Just 4 fights and lots of drama. Still not even a single dull moment because the whole drama is actually the setup and elevation for those 4 FANTASTIC fight sequences. 💥💥#Salaar is WORTH your penny. 😎 pic.twitter.com/EH940dp71t
— Cinema Madness 24*7 (@CinemaMadness24) December 21, 2023
”ಸಲಾರ್ ಸಿನಿಮಾದ ಪಾಸಿಟಿವ್ ಅಂಶಗಳು, ಆಕ್ಷನ್ ಸೀನ್ ಗಳು, ಕಲ್ಲಿದ್ದಲು ಗಣಿಯಲ್ಲಿ ಪ್ರಭಾಸ್ ಎಲೆವೇಷನ್ ಸೀನ್ ಗಳು, ಇಂಟರ್ವಲ್ ಹಾಗೂ ಕ್ಲೈಮ್ಯಾಕ್ಸ್ ಸೀನ್ ಗಳು ಅದ್ಭುತವಾಗಿವೆ. ಹಾಗೆಯೇ ನೆಗೆಟಿವ್ ಅಂಶಗಳು ಏನಂದ್ರೆ, ಹಾಡುಗಳಿಲ್ಲ. ಕೆಜಿಎಫ್ನಲ್ಲಿ ಇರುವಂತೆ ಒಂದಾದರೂ ಎಲೆವೆಷನ್ ಸಾಂಗ್ ಇರಬೇಕಿತ್ತು. ಹಿನ್ನೆಲೆ ಸಂಗೀತ ಕಿರಿಕಿರಿ ಮಾಡುತ್ತೆ. ಪ್ರಶಾಂತ್ ನೀಲ್ ಟ್ರೇಡ್ ಮಾರ್ಕ್ ಡೈಲಾಗ್ ಮಿಸ್ ಆಗಿದೆ” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
#SalaarReview
Positives
👉Action sequences
👉Elevation blocks like Coal mine,
👉Interval & Climax scenes💥💥Negatives
👉NO Songs. Films like #Salaar deserves atleast 1 elevation song like KGF
👉Meaningless Noisy BGM
👉Missed Trademark Prashanth Neel dialogues https://t.co/KWmahyTryd— Track BO (@TrackBO_) December 22, 2023