ವಿಶ್ವ ಸಿನಿದುನಿಯಾವೇ ಕಣ್ಣರಳಿಸಿದ್ದ ಸಮಯ ಬಂದೇ ಬಿಡ್ತು. ಇನ್ನೇನು ಕೆಲವೇ ಕೆಲವು ಗಂಟೆಗಳಲ್ಲಿ ಕೆಜಿಎಫ್ ಮಾಂತ್ರಿಕನ ಕಣ್ಣಲ್ಲಿ ಅರಳಿದ ಹೊಸ ಲೋಕ `ಸಲಾರ್’ ಪ್ರಪಂಚವನ್ನ ಕಣ್ತುಂಬಿಕೊಳ್ಳಬಹುದು. ಈ ಕ್ಷಣಕ್ಕಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತವರು ಟಿಕೆಟ್ ಬುಕ್ ಮಾಡಿಕೊಂಡು ಒಂಟಿಕಾಲಿನಲ್ಲಿ ನಿಂತಿದ್ದಾರೆ. ಅಚ್ಚರಿ ಅಂದರೆ `ಸಲಾರ್’ ಟಿಕೆಟ್ಗಳು ಹೈದ್ರಬಾದ್ ಬಿರಿಯಾನಿಗಿಂತ ಜೋರಾಗಿ ಸೋಲ್ಡ್ ಔಟ್ ಆಗಿವೆ. ಡಿಸೆಂಬರ್ 20, 2023ರ ಅಂತ್ಯದ ವೇಳೆಗೆ, ದೇಶದಾದ್ಯಂತ ಒಟ್ಟು 30.25 ಲಕ್ಷ ಟಿಕೆಟ್ಗಳು ಮಾರಾಟವಾಗಿವೆ. ಅದರ ಡಿಟೇಲ್ಸ್ ಈ ಕೆಳಕಂಡಂತಿದೆ.
ಆಂಧ್ರಪ್ರದೇಶ: 13.25 ಲಕ್ಷ
ಕರ್ನಾಟಕ: 3.25 ಲಕ್ಷ
ಉತ್ತರ ಭಾರತ: 5.25 ಲಕ್ಷ
ನಿಜಾಮ್ (ತೆಲಂಗಾಣ): 6 ಲಕ್ಷ
ತಮಿಳುನಾಡು: 1 ಲಕ್ಷ
ಕೇರಳ: 1.5 ಲಕ್ಷಈ ಅಂಕಿಅಂಶಗಳು ದೇಶದ ಪ್ರಮುಖ ಮಲ್ಟಿಪ್ಲೆಕ್ಸ್ಗಳಾದ ಪಿವಿಆರ್,ಐನಾಕ್ಸ್ ಮತ್ತು ಸಿನಿಪೋಲಿಸ್ ಹೊರತುಪಡಿಸಿ ನೀಡಲಾಗಿದೆ. ಮಲ್ಟಿಪ್ಲೆಕ್ಸ್ಗಳನ್ನು ಲೆಕ್ಕಿಸದೆ ‘ಸಲಾರ್’ ಈ ಸಾಧನೆಯನ್ನು ಮಾಡಿರುವುದು ಅದ್ಬುತ ಎಂದು ಸಿನಿ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.