ಬುಧವಾರ, ಜುಲೈ 2, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Samantha: ‘ಊ ಅಂಟಾವ ಮಾವ’ ಅಂತ ಕುಣಿಯುವಾಗ ಥರ ಥರ ನಡುಗಿದ್ದರಂತೆ ಸಮಂತಾ!

Vishalakshi Pby Vishalakshi P
18/03/2024
in Majja Special
Reading Time: 1 min read
Samantha: ‘ಊ ಅಂಟಾವ ಮಾವ’ ಅಂತ ಕುಣಿಯುವಾಗ ಥರ ಥರ ನಡುಗಿದ್ದರಂತೆ ಸಮಂತಾ!

Samantha:ಸೌತ್‌ ಸುಂದರಿ…ಮಹಾನಟಿ ಸಮಂತಾ (Samantha) ಪ್ರತಿದಿನವೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರ್ತಾರೆ. ಅದರಂತೇ, ಇವತ್ತು ಪುಷ್ಪ (Pushpa) ಸಿನಿಮಾದ ಸ್ಪೆಷಲ್‌ ಹಾಡಿನ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿ ಬಿಗ್‌ ಬ್ರೇಕಿಂಗ್‌ ನ್ಯೂಸ್‌ ಆಗಿದ್ದಾರೆ. ಯಸ್‌, ಸ್ಯಾಮ್‌ ಸಾಕಷ್ಟು ಭಾರಿ ಪುಷ್ಪ ಚಿತ್ರದ ಹಾಡಿನ ಬಗ್ಗೆ ಮಾತನಾಡಿದ್ದಾರೆ. ಆದರೆ, ಆ ಹಾಡನ್ನ ಚಿತ್ರೀಕರಣ ಮಾಡುವಾಗ ತನಗೆ ಕಂಫರ್ಟಬಲ್‌ ಇರಲಿಲ್ಲ ಮತ್ತು ತನ್ನ ಮೈಯೆಲ್ಲ ಥರ ಥರ ನಡುಗುತ್ತಿತ್ತು ಅನ್ನೋ ಸತ್ಯವನ್ನ ಇದೇ ಮೊದಲ ಭಾರಿಗೆ ಹೊರಹಾಕಿದ್ದಾರೆ. ಅರ್ರೇ ಇದೇನಿದು ಅಚ್ಚರಿ? ಸ್ಯಾಮ್‌ ಯಾಕ್‌ ಈ ರೀತಿ ಹೇಳ್ತಿದ್ದಾರೆ? ಶೂಟಿಂಗ್‌ ಸೆಟ್‌ನಲ್ಲಿ ಕಂಫರ್ಟಬಲ್‌ ಇರಲಿಲ್ಲ ಅಂದರೆ ಏನರ್ಥ? ಅಷ್ಟಕ್ಕೂ, ಸ್ಯಾಮ್‌ ಯಾಕೇ ಶೂಟಿಂಗ್‌ ಸೆಟ್‌ನಲ್ಲಿ ಥರ ಥರ ನಡುಗಿದ್ದರು? ಏನಾಗಿತ್ತು ಸ್ಯಾಮ್‌ಗೆ? ಹೀಗೆ ಒಂದಿಷ್ಟು ಅನುಮಾನ ಪ್ರಶ್ನೆಗಳು ಕಾಡೋದು ಸಹಜ. ಆ ಪ್ರಶ್ನೆಗೆ ಉತ್ತರ ಕೊಡಬೇಕು ಅಂದರೆ ಅಸಲಿ ಸತ್ಯ ಹರವಿಡ್ಲೇಬೇಕು.

ಪುಷ್ಪ (Pushpa) ಚಿತ್ರದ ‘ಊ ಅಂಟಾವ ಮಾವ’ ಹಾಡಿಗೆ ಮಜಿಲಿ (Samantha) ಮೈ ಚಳಿ ಬಿಟ್ಟು ಕುಣಿದಿದ್ದನ್ನ ನೀವೆಲ್ಲರೂ ನೋಡಿದ್ದೀರಿ. ನೀವಷ್ಟೇ ಯಾಕೇ ಇಡೀ ಚಿತ್ರಜಗತ್ತು ಕಣ್ಣನ್ನ ಊರಗಲ ಮಾಡ್ಕೊಂಡು ನೋಡಿದೆ. ಸ್ಟೈಲಿಷ್‌ ಸ್ಟಾರ್‌ ಅಲ್ಲು ಅರ್ಜುನ್‌ (Allu arjun) ಹಾಗೂ ಮನಂ ಚೆಲುವೆ (Samantha) ಕೆಮಿಸ್ಟ್ರಿ ಕಂಡು ಕುಂತ ಕುಂತಲ್ಲೇ ಬೆವತು ನೀರಾಗಿದೆ. ಆದರೆ, ಆ ಹಾಡನ್ನ ಚಿತ್ರೀಕರಿಸಿರುವಾಗ ಸಮಂತಾಗೆ ಮೈ ಮೈ ಯೆಲ್ಲಾ ನಡುಗಿ ಹೋಗಿದೆ. ಎದೆಯಲ್ಲಿ ನಡುಕದ ಜೊತೆಗೆ ಭಯ ಹುಟ್ಟಿದೆ. ಅಲ್ಲು ಪಕ್ಕದಲ್ಲಿ ನಿಂತು ಲೆಗ್‌ ಶೇಕ್‌ ಮಾಡುವಾಗ ಕಾಲುಗಳು ಕುಸಿದು ಕುಸಿದು ಬಿದ್ದಿವೆ. ಆದರೂ ಸ್ಯಾಮ್‌ (Samantha) ಸೊಂಟ ಬಳುಕಿಸೋದನ್ನ ನಿಲ್ಲಿಸಲಿಲ್ಲ. ಬನ್ನಿ ಜೊತೆ ನಡುಗಿಬಗ್ಗಿಸಿ ಕುಣಿಯೋದನ್ನ ಸ್ಟಾಪ್‌ ಮಾಡಲಿಲ್ಲ. ನನ್ನಿಂದ ಆಗಲ್ಲ ಈ ಸಾಂಗ್‌ಗೆ ಸ್ಟೆಪ್‌ ಹಾಕೋಕೆ ಅಂತ ಕ್ವಿಟ್‌ ಮಾಡಲಿಲ್ಲ. ಬದಲಾಗಿ, ಊ ಅಂಟಾವ ಸಾಂಗ್‌ನ ಚಾಲೆಂಜಿಂಗ್‌ ಆಗಿ ತಗೊಂಡ್ರು. ಅದೇನಾಗುತ್ತೋ ಆಗಲಿ ನೋಡೆಬಿಡೋಣ ಅಂತ ಸೀರೆನಾ ಸೊಂಟಕ್ಕೆ ಸಿಕ್ಕಿಸಿಕೊಂಡು ಪುಷ್ಪರಾಜ್‌ ಜೊತೆ ಕಣಕ್ಕಿಳಿದ್ರು. ಮುಂದಾಗಿದ್ದು ಮಹಾ ಇತಿಹಾಸ ಅಂದರೆ ಬಹುಷಃ ತಪ್ಪಾಗಲ್ಲ.

ಅಷ್ಟಕ್ಕೂ, ಆ ಸಾಂಗ್‌ ಚಿತ್ರೀಕರಣ ಮಾಡುವಾಗ ಸ್ಯಾಮ್‌ (Samantha) ನಡುಗಿದ್ಯಾಕೆ? ಈ ಪ್ರಶ್ನೆಗೆ ಉತ್ತರ ಕೊಡ್ಲೆಬೇಕು. ಆಗಷ್ಟೇ ಸ್ಯಾಮ್‌ ಪತಿ ಚೈತನ್ಯ ಜೊತೆ ಡಿವೋರ್ಸ್‌ ಘೋಷಿಸಿಕೊಂಡಿದ್ದರು. ಆ ಟೈಮ್‌ಗೆ ಪುಷ್ಪ ಟೀಮ್‌ ಸ್ಪೆಷಲ್‌ ಹಾಡಿಗೋಸ್ಕರ ಸ್ಯಾಮ್‌ನ ಅಪ್ರೋಚ್‌ ಮಾಡ್ತಾರೆ. ಹಾಡಿನಲ್ಲಿ ಸಿಕ್ಕಾಪಟ್ಟೆ ಬೋಲ್ಡ್‌ ಆಗ್ಬೇಕು ಎಂತಲೂ ಹೇಳ್ತಾರೆ. ಇದಕ್ಕೆ ಸ್ಯಾಮ್‌ ಏನೋ ಒಪ್ಕೊಂಡ್ರು, ಆದರೆ, ಸಮಂತಾ ಫ್ಯಾಮಿಲಿಯವ್ರು, ಕೆಲ ಆತ್ಮೀಯ ಸ್ನೇಹಿತರು ಐಟಂ ಸಾಂಗ್‌ ಮಾಡೋದು ಬೇಡ ಅಂತ ಸಲಹೆ ನೀಡ್ತಾರಂತೆ. ಆದರೆ, ಅವರೆಲ್ಲರ ಮಾತನ್ನ ದಿಕ್ಕರಿಸಿದ ಆಪಲ್‌ ಬ್ಯೂಟಿ ಸಮಂತಾ, (Samantha) ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ಹಾಡನ್ನ ಸವಾಲ್ವಾಗಿ ಸ್ವೀಕರಿಸೋಣ ಅಂತಲೇ ಊ ಅಂಟಾವ ಮಾವ ಹಾಡನ್ನ ಒಪ್ಪಿಕೊಂಡರಂತೆ.


ಈ ಬಗ್ಗೆ ಮುಕ್ತವಾಗಿ ಮಾತನಾಡಿರೋ ಸ್ಯಾಮ್‌(Samantha), ‘ನನ್ನ ಪಾಲಿಗೆ ಅದು ದೊಡ್ಡ ಸವಾಲಾಗಿತ್ತು. ಉ ಅಂಟಾವ ಹಾಡಿನ ಮೊದಲ ಶಾಟ್​ ತೆಗೆಯುವಾಗ ನಾನು ಭಯದಿಂದ ನಡುಗುತ್ತಿದ್ದೆ. ಯಾಕೆಂದರೆ, ಸೆಕ್ಸಿಯಾಗಿ ಕಾಣುವುದು ನನಗೆ ಹೊಂದುವಂಥದಲ್ಲ. ಆದರೆ ನಾನು ನನ್ನನ್ನು ಕಷ್ಟಕ್ಕೆ ನೂಕಿಕೊಂಡು, ಅದರ ವಿರುದ್ಧ ಹೋರಾಡಿ ಹೊರಬರುವ ವ್ಯಕ್ತಿತ್ವದವಳು’ ಅದರಂತೇ, ಚಾಲೆಂಜಿಂಗ್‌ ಆಗಿ ತಗೊಂಡು ಪುಷ್ಪ ಹಾಡಿಗೆ ಹೆಜ್ಜೆಹಾಕಿದೆ ಎಂದಿದ್ದಾರೆ. ಅಟ್‌ ದಿ ಸೇಮ್‌ ಟೈಮ್‌ ಮತ್ತೆ ಯಾವತ್ತೂ ಕೂಡ ಇಂತಹ ಬೋಲ್ಡ್‌ ಸಾಂಗ್‌ನಲ್ಲಿ ಕಾಣಿಸಿಕೊಳ್ಳೋದಿಲ್ಲ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ. ಸದ್ಯ ಮಜಿಲಿ ಫ್ಯಾಮಿಲಿ ಮ್ಯಾನ್‌ ತಂಡದ ಜೊತೆ ಸಿಟಾಡೆಲ್‌ ಎನ್ನುವ ವೆಬ್‌ಸೀರಿಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಮಯೋಸೈಟಿಸ್‌ ಖಾಯಿಲೆಗೆ ಸೆಡ್ಡು ಹೊಡೆದು ಗೆದ್ದುಬಂದಿರೋ ಮನಂ ಚೆಲುವೆ ಮತ್ತೆ ಸಿನಿಮಾಗಳು, ವೆಬ್‌ ಸಿರೀಸ್‌ಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. ಬಿಡುವಿನ ವೇಲೆ ಸೋಷಿಯಲ್‌ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಕನೆಕ್ಟ್‌ ಆಗ್ತಾರೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಮಲೆನಾಡ ಸೌಂದರ್ಯದ ನಡುವೆ ಮಂಕಾದ ‘ಕೆರೆಬೇಟೆ’

ಮಲೆನಾಡ ಸೌಂದರ್ಯದ ನಡುವೆ ಮಂಕಾದ ‘ಕೆರೆಬೇಟೆ’

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.