ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ಕಿರುತೆರೆ ನಟಿ ಸಾನ್ಯಾ ಅಯ್ಯರ್ ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸಿನಿಮಾ, ನಟನೆಗೆ ಸಂಬಂಧಿಸಿದ್ದಕ್ಕಿಂತ ಹೆಚ್ಚಾಗಿ, ಬೇರೆ ವಿಚಾರಗಳಿಗೆ ಸದ್ದು ಮಾಡುತ್ತಿರುತ್ತಾರೆ.
ಇತ್ತೀಚಿಗಷ್ಟೇ ಬಾಲಿವುಡ್‌ನ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಅವರಿಂದ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಆ ಫೋಟೋಗಳನ್ನು ಒಂದೊಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಹಿಂದೆ ಬಿಳಿ ಬಣ್ಣದ ಕಾಸ್ಟ್ಯೂಮ್‌ನಲ್ಲಿ ಕಂಗೊಳಿಸಿದ್ದರು. ಈ ಬಾರಿ ಹಳದಿ ಹಾಗೂ ಬಿಳಿ ಬಣ್ಣದ ಕಾಂಬಿನೇಷನ್ ದಿರಿಸಿನಲ್ಲಿ ಮಿಂಚಿದ್ದಾರೆ. ಈ ಫೋಟೋಗಳಿಗೆ ಕೆಲವು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಕಾಲೆಳೆದಿದ್ದಾರೆ. ಬಾಡಿ ಶೇಮಿಂಗ್ ಮಾಡಿದ್ದಾರೆ.
ಫೋಟೋದಲ್ಲಿ ಸಾನ್ಯಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದು,`ನಾನು ನನಗೆ ಹೇಗೆ ಬೇಕೋ ಹಾಗೆ ಇರುತ್ತೇನೆ. ಯಾರ ಅಭಿಪ್ರಾಯವೂ ನನಗೆ ಏನೂ ಪೇ ಮಾಡೋದಿಲ್ಲ. ಅದಕ್ಕೇನೆ ನಾನು ಹೊಳೆಯುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಗರಂ ಆದಂತೆ ಕಾಣಿಸುತ್ತದೆ. ಕೆಲವರು ಬರ್ತಾ ಬರ್ತಾ ಉರ್ಫಿ ಆಗ್ತಿದ್ದೀರಿ ಎಂದರೆ, ಇನ್ನು ಕೆಲವರು ಫೈರ್ ಎಮೋಜಿ ಕಮೆಂಟ್ ಮಾಡಿದ್ದಾರೆ. ಕೆಲವರು ಹಾರ್ಟ್ ಎಮೋಜಿ ಒತ್ತಿ ಪ್ರೀತಿ ತೋರಿಸಿದ್ದಾರೆ. ಇವರ ಮಧ್ಯೆ ಆ ಒಬ್ಬ ಹುಡುಗ `ನಿನ್ನ ಫೋಟೋಗಳೇನು ನಮ್ಮ ಇಎಂಐ ಪೇ ಮಾಡಲ್ಲ ಬಿಡು’ ಎಂದು ಟಕ್ಕರ್ ಕೊಟ್ಟಿದ್ದಾನೆ.
ಆದರೆ ಇದ್ಯಾವುದಕ್ಕೂ ಸಾನ್ಯ ಕೇರ್ ಮಾಡುತ್ತಿಲ್ಲ. ಸಾನ್ಯ ಅಯ್ಯರ್ ಕೊಂಚ ಬೋಲ್ಡ್ ಆಗಿಯೇ ಇದ್ದಾರೆ. ಅಷ್ಟೇ ಧೈರ್ಯವಂತೆ ಅಂದ್ರು ತಪ್ಪಿಲ್ಲ. ಯಾರ ಮುಲಾಜಿಗೂ ಬೀಳದ ಗಟ್ಟಿಗಿತ್ತಿ. ಬಿಗ್ ಬಾಸ್ ಮನೆಯಲ್ಲಿ ಸಾನ್ಯ ಅಯ್ಯರ್ ಹೇಗಿದ್ರು ಅನ್ನೋದು ಗೊತ್ತೇ ಇದೆ. ಅದರಂತೆ ಅಲ್ಲಿಂದ ಬಂದ್ಮೇಲೆ ಸಾನ್ಯ ಅಯ್ಯರ್ ಹೊಸ ರೀತಿಯ ಫೋಟೋ ಶೂಟ್ ಮಾಡಿಸಿದ್ದಾರೆ.
ಪುಟ್ಟಗೌರಿ ಖ್ಯಾತಿಯ ಸಾನ್ಯಾ ಅಯ್ಯರ್ ಬಿಗ್‌ಬಾಸ್ ನಲ್ಲಿ ಗಮನ ಸೆಳೆದ ಸ್ಪರ್ಧಿ. ರೂಪೇಶ್ ಶೆಟ್ಟಿ ಹಾಗೂ ಇವರ ನಡುವೆ ಏನೋ ನಡೆಯುತ್ತಿದೆ ಎನ್ನುವುದು ಬಿಗ್ ಬಾಸ್ ಮನೆಯಲ್ಲಿದ್ದವರು ಅನುಮಾನವಾಗಿತ್ತು. ಇಬ್ಬರೂ ಯಾವಾಗಲೂ ಒಟ್ಟಿಗೆ ಇರುತ್ತಿದ್ದುದು, ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುತ್ತಿದ್ದುದು ಇದಕ್ಕೆ ಇನ್ನಷ್ಟು ಪುಷ್ಠಿ ನೀಡಿತ್ತು. ಈ ಗಾಸಿಪ್‌ಗಳಿಗೆ ಸಾನ್ಯಾ ಸ್ಪಷ್ಟನೆ ನೀಡಿದ್ದರು. ರೂಪೇಶ್ ಮತ್ತು ತಮ್ಮ ನಡುವೆ ಅಂಥದ್ದೂ ಏನೂ ಇಲ್ಲ, ನಾವು ಜಸ್ಟ್ ಫ್ರೆಂಡ್ಸ್ ಎಂದು ಹೇಳುವ ಮೂಲಕ ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಏನೇ ಪ್ರಯತ್ನಿಸಿದರೂ, ಅವರುಗಳ ನಡೆ ಮಾತ್ರ ಹಲವು ಅನುಮಾನಗಳನ್ನು ಬಿತ್ತಿದೆ.