ಈ ಹಿಂದೆ ಪರಿಸರ ಸಂರಕ್ಷಣೆಯ ಕುರಿತಂತೆ ಜನಜಾಗೃತಿ ಮೂಡಿಸುವ ಕಥಾಹಂದರ ಹೊಂದಿದ್ದ ‘ಸ್ವಚ್ಛ ಕರ್ನಾಟಕ’ ಎಂಬ ಸಿನಿಮಾವನ್ನು ನಿರ್ಮಿಸಿದ್ದ ಎಲ್. ರವಿಕಮಾರ್ ಇದೀಗ ಅಂಥದ್ದೇ ಮತ್ತೊಂದು ಸಾಮಾಜಿಕ ಸಂವೇದನೆಯ ಕಥಾಹಂದರದ ಸಿನಿಮಾ ನಿರ್ಮಾಣಕ್ಕೆ ಕೈಹಾಕಿದ್ದಾರೆ. ಜೊತೆಗೆ ತಾವೇ ಈ ಬಾರಿ ಈ ಸಿನಿಮಾದ ನಿರ್ಮಾಣದ ಜೊತೆಗೆ ನಿರ್ದೇಶನವನ್ನು ತಾವೇ ಮಾಡುತ್ತಿದ್ದಾರೆ.
ತಮ್ಮ ‘ಶಾಂತಿ ಪ್ರೊಡಕ್ಷನ್ಸ್’ ಬ್ಯಾನರ್ ಮೂಲಕ ‘ಕಲರ್ ಫುಲ್ ಕನಸುಗಳು’ ಎಂಬ ಚಿತ್ರವನ್ನು ಎಲ್. ರವಿಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಚಲನಚಿತ್ರವಾಗಲಿದ್ದು, ಇಂದಿನ ಯುವ ಜನಾಂಗದಲ್ಲಿ ಉದ್ಭವಿಸುವ ಆಸೆ, ಕನಸುಗಳನ್ನು ಆಧರಿಸಿ ಈ ಚಿತ್ರದ ಕಥೆ ನಡೆಯಲಿದೆ. ಹೀಗಾಗಿ ಸಿನಿಮಾದ ಕಥೆಗೆ ಅನ್ವಯವಾಗುವಂತೆ ‘ಕಲರ್ ಫುಲ್ ಕನಸುಗಳು’ ಎಂದು ಟೈಟಲ್ ಇಡಲಾಗಿದೆ ಎಂಬುದು ನಿರ್ಮಾಪಕ ಕಂ ನಿರ್ದೇಶಕ ಎಲ್. ರವಿಕುಮಾರ್ ಮಾತು.
ಅತಿ ಶೀಘ್ರದಲ್ಲೇ ‘ಕಲರ್ ಫುಲ್ ಕನಸುಗಳು’ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸುವ ಸಿದ್ದತೆಯನ್ನು ನಿರ್ಮಾಪಕರು ಮಾಡಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳ ಧ್ವನಿಮುದ್ರಣ ಕಾರ್ಯವನ್ನು ನಡೆಸಲಾಗಿದೆ. ಇಂದೂ ವಿಶ್ವನಾಥ್ ಹಾಗೂ ಪುನೀಶ್ ಕುಮಾರ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಹಾಗೂ ಶ್ರೀಧರ್ ಶೆಟ್ಟಿ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಚಿತ್ರಕ್ಕೆ ನಾಗೇಶ್ ಛಾಯಾಗ್ರಹಣ, ಶ್ರೀಧರ್ ಶೆಟ್ಟಿ ಸಂಭಾಷಣೆಯಿದೆ.