Shah Rukh Khan: ಶಾರೂಕ್ ಖಾನ್(Shah Rukh Khan) ಅಭಿನಯದ ‘ಡಾನ್’, ‘ಡಾನ್-2’ ಸಿನಿಮಾಗಳು ಯಾರೆಗೆಲ್ಲ ಗೊತ್ತಿಲ್ಲ ಹೇಳಿ. ಫರಾನ್ ಅಕ್ತರ್ ನಿರ್ದೇಶನದಲ್ಲಿ ಬಂದ ಈ ಸಿನಿಮಾಗಳಲ್ಲಿ Anti-Hero ಆಗಿ ತೆರೆಮೇಲೆ ಮಿಂಚಿದ ಬಾದ್‌ಷಾ ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್‌ನಲ್ಲೂ ರೆಕಾರ್ಡ್ ಬರೆದಿದ್ರು. ಶಾರೂಕ್ ಇಮೇಜ್‌ಗೆ ಹೊಸ ಟಚ್ ನೀಡಿದ ಡಾನ್ ಅವತಾರವನ್ನು ಮತ್ತೊಮ್ಮೆ ತಾಳಲು ಕಿಂಗ್ ಖಾನ್ ರೆಡಿಯಾಗಿದ್ದಾರೆ. ಆದ್ರೆ ಈ ಅವತಾರ ‘ಡಾನ್’-3 ಸಿನಿಮಾಗಾಗಿ ಅಲ್ಲ.
ಹೌದು. ಬಾಲಿವುಡ್ ಬಾದ್‌ಷಾ ಮತ್ತೆ ಡಾನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ವಿಚಾರ ಬಿಟೌನ್ ಅಂಗಳದಲ್ಲಿ ಸಖತ್ ಬಝ್‌ನಲ್ಲಿದ್ರೆ, ಸುದ್ದಿ ಕೇಳಿ ಕಿಂಗ್‌ಖಾನ್ ಫ್ಯಾನ್ಸ್ Anti Hero ಆಗಿ ನೋಡಲು ಕಾತುರತೆ ವ್ಯಕ್ತಪಡಿಸುತ್ತಿದ್ದಾರೆ. ವಿಶೇಷ ಅಂದ್ರೆ ಈ ಐಕಾನಿಕ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿರೋದು ಬೇರೆಯಾರ ಸಿನಿಮಾಗಲ್ಲ ತನ್ನ ಮಗಳ ಸಿನಿಮಾದಲ್ಲಿ. ಶಾರೂಕ್(Shah Rukh Khan) ಪುತ್ರಿ ಸುಹಾನ ಖಾನ್ ‘ಕಿಂಗ್’(King) ಸಿನಿಮಾ ಮೂಲಕ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡೋಕೆ ಸಿದ್ದರಾಗಿದ್ದಾರೆ ಈ ಚಿತ್ರದಲ್ಲಿ ಶಾರೂಕ್ ಕೂಡ ಅಭಿನಯಿಸುತ್ತಿದ್ದು, ಡಾನ್ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿದ್ದಾರೆ.
ತಂದೆ, ಮಗಳ ಚಿತ್ರಕ್ಕೆ ಸುಜೋಯ್ ಘೋಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶಾರೂಕ್(Shah Rukh Khan) ತಮ್ಮ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಮೂಲಕ 200 ಕೋಟಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಆಕ್ಷನ್ ಪವರ್ ಪ್ಯಾಕ್ಡ್ ಸಿನಿಮಾ ಇದಾಗಿದೆ. ‘ಕಿಂಗ್’(King)ಚಿತ್ರತಂಡ ಪ್ರಿಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದ್ದು, ಮೇನಲ್ಲಿ ಚಿತ್ರೀಕರಣ ಆರಂಭವಾಗಲಿದೆ.