ಅರೆಬರೆ ಬಟ್ಟೆ ತೊಟ್ಟು ಸುಂದರ ದೇಹಸಿರಿಯನ್ನ ಪ್ರದರ್ಶನ ಮಾಡ್ತಾ, ಆಗಾಗ ಕಾಂಟ್ರವರ್ಸಿಯಲ್ ಸ್ಟೇಟ್‍ಮೆಂಟ್‍ಗಳನ್ನ ಕೊಡ್ತಾ ಸುದ್ದಿಯಲ್ಲಿರುವ ಬಾಲಿವುಡ್‍ನ ಹಾಟ್‍ಬ್ಯೂಟಿ ಶೆರ್ಲಿನ್ ಚೋಪ್ರಾ ಈಗ ಇಡೀ ಸಿನಿದುನಿಯಾ ಬೆಚ್ಚಿಬೀಳುವ ಹೇಳಿಕೆಯೊಂದನ್ನ ನೀಡಿದ್ದಾರೆ. ಕೆಲ ನಿರ್ದೇಶಕರಿಗೆ ನನ್ನ ಬ್ರೆಸ್ಟ್ ಮೇಲೆನೇ ಕಣ್ಣು. ಸೈಜ್ ಎಷ್ಟು, ಒಂದು ಚಾನ್ಸ್ ಕೊಡ್ತೀಯಾ, ಒಂದೇ ಒಂದು ಸಲ ನಿನ್ನ ಸ್ತನ ಮುಟ್ಟಿನೋಡಬಹುದಾ ಅಂತ ಕೇಳಿದ ನಿರ್ದೇಶಕರು ಒಬ್ಬಿಬರಲ್ಲ ಎನ್ನುವ ಮೂಲಕ ಬಿಟೌನ್ ಅಖಾಡ ಧಗಧಗಿಸುವಂತೆ ಮಾಡಿದ್ದಾರೆ.
ಬಹುಷಃ ನಿಮ್ಮೆಲ್ಲರಿಗೂ ನೆನಪಿರಬಹುದು 2012ರ ಸಮಯದಲ್ಲಿ ಶೆರ್ಲಿನ್ ಒಂದು ಸ್ಪೋಟಕ ಹೇಳಿಕೆ ಕೊಟ್ಟಿದ್ದಳು. ಹಣಕ್ಕಾಗಿ ಹಲವರ ಜೊತೆ ಮಲಗಿರುವುದಾಗಿ ಹೇಳಿಕೊಂಡಿದ್ದಳು. ಕಷ್ಟಪಡದೇ ದುಡ್ಡು ಸಿಗುತ್ತೆ ಅಂದರೆ ಯಾಕ್ ಬಿಡಲಿ ಮಲಗ್ತೀನಿ ಅಂತೇಳುವ ಮೂಲಕ ಸಂಚಲನ ಸೃಷ್ಟಿಸಿದ್ದಳು. ಆದ್ರೀಗ ಆ ಹೇಳಿಕೆಗೆ ಸ್ಪಷ್ಟನೆ ಕೊಡುವ ಕೆಲಸ ಮಾಡಿದ್ದಾಳೆ. ಪ್ರಭಾವಿ ರಾಜಕಾರಣಿಯೊಬ್ಬರ ಮಗ ಪ್ರೀತಿಯ ಹೆಸರಲ್ಲಿ ನನ್ನನ್ನು ನಂಬಿಸಿ ಮೋಸ ಮಾಡಿದ. ಔಟಿಂಗ್, ಡೇಟಿಂಗ್ ಎಂದು ಕರೆದೊಯ್ದು ಕಾಮದ ಆಟಕ್ಕೆ ಬಳಸಿಕೊಂಡ. ಆರಂಭದಲ್ಲಿ ನಾನು ಅದನ್ನ ಪ್ರೀತಿಯಂದೇ ಭಾವಿಸಿದ್ದೆ. ಕೊನೆ ಕೊನೆಗೆ ಆ ರಾಜಕಾರಣಿ ಮಗನ ಮುಖವಾಡ ಬಯಲಾಯ್ತು. ಆ ಸಮಯದಲ್ಲಿ ನಾನು ಕೊಟ್ಟ ಹೇಳಿಕೆಯನ್ನ ತಿರುಚಿ ದುಡ್ಡಿಗಾಗಿ ಹಾಸಿಗೆ ಹಂಚಿಕೊಂಡಿದ್ದೇನೆಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇದು ಶೆರ್ಲಿನ್ ಚೋಪ್ರಾ ಹೊಸವರಸೆಯಾ ಅಥವಾ ನಿಜವಾಗಲೂ ಆತನಿಂದ ಮೋಸ ಹೋದಳಾ ಗೊತ್ತಿಲ್ಲ.
ಸದ್ಯ ಶೆರ್ಲಿನ್ ಪೌರುಷ್ಪುರ ಅನ್ನೋ ವೆಬ್‍ಸೀರಿಸ್‍ನಲ್ಲಿ ನಟಿಸಿದ್ದಾಳೆ. ಅದರ ರಿಲೀಸ್ ಭಾಗವಾಗಿ ಎಲ್ಲೆಡೆ ಪ್ರಮೋಷನ್ ಮಾಡುತ್ತಿದ್ದು, ಹಳೆಯ ರಿಲೇಷನ್‍ಶಿಪ್, ಓಲ್ಡ್ ಕೇಸ್‍ಗಳಿಗೆ ಸ್ಪಷ್ಟನೆ ಕೊಡುವ ಕೆಲಸ ಮಾಡ್ತಿದ್ದಾಳೆ. ಅಟ್ ದಿ ಸೇಮ್ ಟೈಮ್ ನಿರ್ದೇಶಕರ ಕರಾಳ ಮುಖ ಬಿಚ್ಚಿಡುವ ಧೈರ್ಯ ತೋರಿದ್ದಾಳೆ. ಬಹುತೇಕ ಪರ್ತಕರ್ತರು ನನ್ನನ್ನು ಪ್ರಶ್ನೆ ಮಾಡಿದ್ದಾರೆ. ನೀವು ಬ್ರೆಸ್ಟ್ ಸರ್ಜರಿ ಮಾಡಿಸಿಕೊಂಡಿದ್ದೀರಾ ಎಂದು ಕೇಳಿದ್ದಾರೆ. ಅದೇ ರೀತಿ ನಿರ್ದೇಶಕರು ಕೂಡ ಬ್ರೆಸ್ಟ್ ಸೈಜ್ ಬಗ್ಗೆ ಕೇಳಿದ್ದಿದೆ. ಕೆಲ ನಿರ್ದೇಶಕರಂತೂ ಸೈಜ್ ಎಷ್ಟು, ಒಂದೇ ಒಂದು ಸಲ ಮುಟ್ಟೋದಕ್ಕೆ ಅವಕಾಶ ಕೊಡ್ತೀಯಾ ಅಂತಲೂ ಕೇಳಿದ್ದಾರೆ. ಅವರೆಲ್ಲರಿಗೂ ನಾನು ನಿಮಗೆ ಮದುವೆ ಆಗಿಲ್ಲವಾ? ಮಕ್ಕಳು ಇಲ್ಲವಾ ಎಂದು ಕೇಳಿದರೆ ಇದ್ದರೇನಂತೆ ಎಂದು ಹೇಳಿದವರೇ ಹೆಚ್ಚು ಎಂದಿದ್ದಾರೆ ಶೆರ್ಲಿನ್.
ಏನೇ ಇದ್ದರೂ ಓಪನ್ನಾಗಿ ಹೇಳಿಕೊಳ್ಳುವ ಶೆರ್ಲಿನ್ ಸದ್ಯಕ್ಕೆ ಬ್ರೆಸ್ಟ್ ಸೈಜ್ ಬಗ್ಗೆ ನಿರ್ದೇಶಕರು ಪ್ರಶ್ನೆ ಮಾಡಿದ್ದರು ಎನ್ನುವ ಬಾಂಬ್ ಸಿಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಆ ನಿರ್ದೇಶಕರು ಯಾರು? ಏನು ಅನ್ನೋದನ್ನ ಬಟಾಬಯಲು ಮಾಡ್ತಾರೋ ಏನೋ ಗೊತ್ತಿಲ್ಲ. ಯಾಕಂದ್ರೆ, ಈಗಾಗ್ಲೇ ಸಾಕಷ್ಟು ಜನ ನಟಿಮಣಿಯರು ಕಾಸ್ಟಿಂಗ್ ಕೌಚ್ ಕರಾಳತೆಯನ್ನ ಬಯಲು ಮಾಡಿದ್ದಾರೆ. ಯಾರಿಂದ ನೋವು ಅನುಭವಿಸಿದ್ದಾರೋ ಅವರ ಕರಾಳ ಮುಖವನ್ನ ಜಗಜ್ಜಾಹೀರು ಮಾಡಿದ್ದಾರೆ. ಅವರ ಸಾಲಿಗೆ ಶೆರ್ಲಿನ್ ಸೇರುತ್ತಾರೋ ಅಥವಾ ವಿವಾದಾತ್ಮಕ ಹೇಳಿಕೆ ಕೊಟ್ಕೊಂಡು ಬಜಾರ್‍ನಲ್ಲಿ ಯಾವಾಗ್ಲೂ ಸುದ್ದಿಯಲ್ಲಿರಲು ಬಯಸ್ತಾರೋ ಆ ಮುಂಬೈಗೆ ಗೊತ್ತು.