ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಸಧ್ಯ ಏಕಕಾಲದಲ್ಲಿ ಕಾಲಿವುಡ್ ನ ಎರಡು ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ.ಹೌದು ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಹಾಗು ಧನುಷ್ ನಟನೆಯ ಕ್ಯಾಪ್ಟನ್ ಮಿಲ್ಲರ್ ಸಿನೆಮಾದಲ್ಲಿ ವಿಶೇಷ ಪಾತ್ರಗಳಲ್ಲಿ ಶಿವಣ್ಣ ನಟಿಸಲಿದ್ದಾರೆ ಅನ್ನೋ ಅಂತೆ ಕಂತೆಗಳು ಸುದ್ದಿ ಮಾಡಿದ್ದವು.
ಆದ್ರೆ ಈಗ ಈ ಸುದ್ದಿಗಳಿಗೆ ಇಂಬು ನೀಡುವಂತೆ ಕ್ಯಾಪ್ಟನ್ ಮಿಲ್ಲರ್ ಚಿತ್ರದ ಕೆಲವು ಸ್ಟಿಲ್ಸ್ ಗಳು ಸೋರಿಕೆಯಾಗಿವೆ. ಅಷ್ಟೇ ಅಲ್ಲ ಜೊತೆಗೆ ಶಿವಣ್ಣ ನ ಪಾತ್ರದ ಕುರಿತು ಸ್ವತಃ ಶಿವಣ್ಣನ ಹೇರ್ವಸ್ಟೈಲರ್ ತುಟಿ ಬಿಚ್ಚಿದ್ದಾರೆ.
ಎಸ್ ರಜನಿಕಾಂತ್ ನಾಯಕನಾಗಿರುವ ಹಾಗು ಮತ್ತೊಂದು ಸಿನಿಮಾದಲ್ಲಿ ರಜನಿ ಅಳಿಯ ಧನುಷ್ ನಾಯಕನಾಗಿರುವ ಎರಡೂ ಚಿತ್ರಗಳು ಶೂಟಿಂಗ್ ನಡೆಯುತ್ತಿದ್ದು, ಎರಡಲ್ಲೂ ಶಿವಣ್ಣ ಪಾಲ್ಗೊಂಡಿದ್ದಾರೆ ಎಂಬ ಬಗ್ಗೆ ಚಿತ್ರರಂಗದಲ್ಲಿ ಗುಸು ಗುಸು ಇತ್ತು. ಆದ್ರೆ ಚಿತ್ರತಂಡ ಈ ಬಗ್ಗೆ ಗೌಪ್ಯತೆ ಕಾಪಾಡಿಕೊಂಡು ಬಂದಿತ್ತು.
ಆದರೆ, ಆಕಸ್ಮಿಕ ಎನ್ನುವಂತೆ ಧನುಷ್ ಜೊತೆ ಮಾಡುತ್ತಿದ್ದ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಕೆಲವು ವಿಷಯಗಳು ಲೀಕ್ ಆಗಿವೆ. ಅಂದರೆ, ಶಿವರಾಜ್ ಕುಮಾರ್ ಅವರಿಗೆ ಕೇಶವಿನ್ಯಾಸ ಮಾಡುತ್ತಿರುವ ರಾಜು ಎನ್ನುವವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪಾತ್ರ ಮತ್ತು ಸಿನಿಮಾದ ಕಥೆಯನ್ನೂ ಅವರು ಬಿಟ್ಟುಕೊಟ್ಟಿದ್ದಾರೆ.
ಫೋಟೋದಲ್ಲಿರುವ ಶಿವಣ್ಣ ನ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಕಾಡು ಜನರು ಮತ್ತು ಬ್ರಿಟಿಷ್ ರ ನಡುವಿನ ಹೋರಾಟದ ಕಥೆಯನ್ನು ಕ್ಯಾಪ್ಟನ್ ಮಿಲ್ಲರ್ ನಲ್ಲಿ ಹೇಳುತ್ತಿದ್ದಾರಂತೆ ನಿರ್ದೇಶಕರು. ಈ ಸಿನಿಮಾದಲ್ಲಿ ಕಾಡು ಜನರ ಪಾತ್ರದಲ್ಲಿ ಶಿವಣ್ಣ ಮತ್ತು ಧನುಷ್ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಧನುಷ್ ಅಣ್ಣನ ಪಾತ್ರದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದಾರೆಂದು ಹೇಳಲಾಗ್ತಿದೆ. ಒಟ್ನಲ್ಲಿ ಶಿವಣ್ಣ ಸ್ಯಾಂಡಲ್ ವುಡ್ ನಲ್ಲಂತೂ ಬ್ಯುಸಿ ನಟ ಎಂಬುದು ಗೊತ್ತಿತ್ತು. ಈಗ ಕಾಲಿವುಡ್ ನಲ್ಲೂ ಏಕಕಾಲಕ್ಕೆ ಎರೆಡೆರೆಡು ಚಿತ್ರಗಳಲ್ಲಿ ಬ್ಯುಸಿ ಇರುವ ಮೂಲಕ ಕಮಾಲ್ ಮಾಡ್ತಿದ್ದಾರೆ.