ShivaRajkumar: ಉತ್ತರಕಾಂಡ ಡಾಲಿ ಧನಂಜಯ್(Dhananjaya) ಅಭಿನಯದ ಬಹು ನಿರೀಕ್ಷಿತ ಸಿನಿಮಾ. ರತ್ನನ್ ಪ್ರಪಂಚ ಸಿನಿಮಾ ನಂತರ ಮತ್ತೆ ಡಾಲಿ ರೋಹಿತ್ ಪದಕಿ ಜೊತೆ ಕೈ ಜೋಡಿಸಿದ್ದಾರೆ. ಈ ಬಾರಿ ರೋಹಿತ್ ಸೆಂಟಿಮೆಂಟ್ ಹಾದಿ ಬಿಟ್ಟು ಮಾಸ್ ಸಬ್ಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವಣ್ಣ ಆಗಮನ ಈ ಚಿತ್ರಕ್ಕೆ ಪವರ್ ನೀಡಿದೆ.
‘ಉತ್ತರಕಾಂಡ’(Uttarakaanada) ಸಿನಿಮಾ ಸಾಕಷ್ಟು ಕ್ಯೂರಿಯಾಸಿಟಿ ಮೂಡಿಸಿದೆ. ಸ್ಯಾಂಡಲ್ ವುಡ್ ನಟ-ನಟಿಯರ ದಂಡು ಈ ಚಿತ್ರದಲ್ಲಿದೆ. ಗಬ್ರು ಸತ್ಯನಾಗಿ ಮಿಂಚಲು ರೆಡಿಯಾಗಿರೋ ಡಾಲಿ ಬಳ್ಳಾರಿಯಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಚಿತ್ರತಂಡವನ್ನು ಶಿವರಾಜ್ ಕುಮಾರ್(Shiva Rajkumar) ಸೇರಿಕೊಂಡಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಶಿವಣ್ಣ ಒಂದಿಷ್ಟು ರಿಲ್ಯಾಕ್ಸ್ ಬಳಿಕ ಶೂಟಿಂಗ್‌ನಲ್ಲಿ ತೊಡಗಿಸಿಕೊಳ್ಳಲು ರೆಡಿಯಾಗಿದ್ದಾರೆ. ಅದರಂತೆ ಉತ್ತರಕಾಂಡ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲು ಇಂದು ಬೆಳಗಾವಿಗೆ ಹೋಗಿದ್ದಾರೆ. ಟಗರು, ಬೈರಾಗಿ ನಂತರ ಶಿವಣ್ಣ ಡಾಲಿ ಒಟ್ಟಿಗೆ ನಟಿಸುತ್ತಿರುವ ಮೂರನೇ ಸಿನಿಮಾ ಇದಾಗಿದೆ.
ಮಲಯಾಳಂ ಖ್ಯಾತ ನಟ ವಿಜಯ್ ಬಾಬು(Vijay Babu), ‘ಟೋಬಿ’, ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಖ್ಯಾತಿಯ ಚೈತ್ರಾ.ಜೆ.ಆಚಾರ್(Chaithra J Achar), ದಿಗಂತ್, ರಂಗಾಯಣ ರಘು, ಐಶ್ವರ್ಯ ರಾಜೇಶ್, ಉಮಾಶ್ರೀ, ಗೋಪಾಲಕೃಷ್ಣ ದೇಶಪಾಂಡೆ, ಯೋಗರಾಜ್ ಭಟ್ ಸೇರಿದಂತೆ ದೊಡ್ಡ ಸ್ಟಾರ್ ತಾರಾಗಣ ಚಿತ್ರದಲ್ಲಿದೆ.