Challenging Star Darshan: ʻಕಾಟೇರʼ(Katera) ಮೂಲಕ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿರುವ ಚಾಲೆಂಜಿಗ್ ಸ್ಟಾರ್ ದರ್ಶನ್(Challenging Star Darshan) ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡಿದ್ರು. ಕ್ರಾಂತಿ, ಯಜಮಾನ ಸಿನಿಮಾಗಿಂತ ಕಾಟೇರ ಸಿನಿಮಾ ಅಕ್ಷರಶಃ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿತ್ತು. ಮಾಸ್ ಜೊತೆ ಕ್ಲಾಸ್ ಆಡಿಯನ್ಸ್ ಸೆಳೆದ ಸಿನಿಮಾ ದರ್ಶನ್ ಅಭಿಮಾನಿಗಳ ಮನ ತಣಿಸಿತ್ತು. ʻಕಾಟೇರʼ ನಂತರ ಯಾವ ಸಿನಿಮಾ ಎನ್ನುವಾಗಲೇ ʻಡೆವಿಲ್ʼ(Devil) ಎಂದ ದಾಸ ಈಗ ಡೆವಿಲ್ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಮಿಲನ ಪ್ರಕಾಶ್(Milana Prakash) ನಿರ್ದೇಶನದ ʻಡೆವಿಲ್ʼ(Devil) ಸಿನಿಮಾದಲ್ಲಿ ದಾಸ ನಟಿಸುತ್ತಿರೋದು ಎಲ್ಲರಿಗೂ ಗೊತ್ತಿರೋ ಸಂಗತಿ. ದರ್ಶನ್(Darshan) ಹುಟ್ಟುಹಬ್ಬಕ್ಕೆ ʻಡೆವಿಲ್ʼ ಪವರ್ ಫುಲ್ ಟೀಸರ್ ಬಿಡುಗಡೆಯಾಗಿ ಸಖತ್ ಸೌಂಡ್ ಮಾಡಿತ್ತು. ಡೆವಿಲ್ನಲ್ಲಿ ದಾಸನ ಸ್ಟೈಲಿಶ್ ಲುಕ್ ಕಂಡು ಭಕ್ತಗಣ ಸಖತ್ ಎಂಜಾಯ್ ಮಾಡಿತ್ತು. ಟೀಸರ್ ನಿಂದಲೇ ಹೊಸ ಧಮ್ಮು, ರಿದಮ್ಮು ಶುರು ಮಾಡಿರೋ ʻಡೆವಿಲ್ʼ ಸಿನಿಮಾ ಶೂಟಿಂಗ್ ಇಂದಿನಿಂದ ಆರಂಭವಾಗಿದೆ. ಬೆಂಗಳೂರಿನಲ್ಲಿ ಸಿನಿಮಾ ಫಸ್ಟ್ ಶೆಡ್ಯೂಲ್ ಚಿತ್ರೀಕರಣ ನಡೆಯುತ್ತಿದ್ದು, ದಾಸ ಶೂಟಿಂಗ್ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಕ್ಟೋಬರ್ ನಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದ್ದು ಅದರಂತೆ ಚಿತ್ರೀಕರಣವನ್ನು ಆರಂಭಿಸಿದೆ.
ಆಫ್ಟರ್ ಕಾಟೇರ ಯಾವ ನಿರ್ದೇಶಕರ ಜೊತೆ ದರ್ಶನ್(Darshan) ಸಿನಿಮಾ ಮಾಡ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಅದಕ್ಕೆಲ್ಲ ನಿರ್ದೇಶಕ ಮಿಲನ ಪ್ರಕಾಶ್(Milana Prakash) ತೆರೆ ಎಳೆದಿದ್ರು. ತಾರಕ್ ಸಿನಿಮಾ ನಂತರ ಇಬ್ಬರ ಕಾಂಬೋ ಮತ್ತೆ ಒಂದಾಗಿದೆ. ಮಿಲನ ಪ್ರಕಾಶ್ ಸಿನಿಮಾಗಳಲ್ಲಿ ಫ್ಯಾಮಿಲಿ ಸೆಂಟಿಮೆಂಟ್ ಎಲಿಮೆಂಟ್ ಇರುತ್ತೆ, ಆದ್ರೆ ಟೀಸರ್ ಝಲಕ್ ಡಿಫರೆಂಟ್ ಆಗಿದ್ದು ಕ್ಯೂರಿಯಾಸಿಟಿ ಮೂಡಿಸಿದೆ. ಇನ್ನು ಇವ್ರ ಸಿನಿಮಾಗಳಲ್ಲಿ ಹೀರೋ ಸಖತ್ ಸ್ಟೈಲಿಶ್ ಆಗಿ ಕಾಣಸಿಗುತ್ತಾರೆ. ಡೆವಿಲ್ ಕೂಡ ಅದಕ್ಕೆ ಹೊರತಾಗಿಲ್ಲ. ಈಗಾಗಲೇ ರಿವಿಲ್ ಆಗಿರುವ ದಾಸನ ಡೆವಿಲ್ ಲುಕ್ ಗಳು ಸಖತ್ ಸ್ಟೈಲಿಶ್ ಆಗಿದ್ದು, ಸಖತ್ ಯಂಗ್ ಆಗಿ ದರ್ಶನ್ ಕಾಣಿಸುತ್ತಿದ್ದಾರೆ. ಅದೇನೇ ಇರಲಿ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಮಾತ್ರ ಟೀಸರ್ ಕಣ್ತುಂಬಿಕೊಂಡಲಿಂದ ಡೆವಿಲ್ ಜಪ ಮಾಡ್ತಿರೋದಂತೂ ಸತ್ಯ.