Rajinikanth: ಸೌತ್ ಸಿನಿದುನಿಯಾದ ಸ್ಟಾರ್ ನಟಿ ಶೃತಿ ಹಾಸನ್(Shruri Haasan). ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಶೃತಿ ಇತ್ತೀಚೆಗೆ ತೆರೆಕಂಡ ‘ಸಲಾರ್’ ಸಿನಿಮಾ ಗೆಲವಿನ ಅಲೆಯಲ್ಲಿದ್ದಾರೆ. ಸೌತ್ ಸಿನಿದುನಿಯಾದಲ್ಲಿ ಮತ್ತೆ ಕಮಾಲ್ ಮಾಡುತ್ತಿರುವ ಈಕೆ ಇದೀಗ ಸೂಪರ್ ಸ್ಟಾರ್ ಸಿನಿಮಾಗೆ ಬಣ್ಣ ಹಚ್ಚುತ್ತಿದ್ದಾರೆ.
ತಲೈವಾ ಹಾಗೂ ನಿರ್ದೇಶಕ ಲೋಕೇಶ್ ಕನಕರಾಜ್(Lokesh Kanakaraj) ಕಾಂಬಿನೇಶನ್‌ನಲ್ಲಿ ಸಿನಿಮಾ ಬರ್ತಿರೋದು ಎಲ್ಲರಿಗೂ ಗೊತ್ತೆ ಇದೆ. ಇಬ್ಬರ ಕಾಂಬೋ ಸಿಕ್ಕಾಪಟ್ಟೆ ಕ್ರೇಜ಼್ ಕ್ರಿಯೇಟ್ ಮಾಡಿದೆ. ಇದು ರಜನಿ 171ನೇ ಸಿನಿಮಾ. ಸನ್ ಪಿಕ್ಚರ್ ನಿರ್ಮಾಣದಲ್ಲಿ ಬರ್ತಿರುವ ಈ ಸಿನಿಮಾ ಅಪ್ಡೇಟ್‌ಗಳ ಬಗ್ಗೆ ಕ್ಯೂರಿಯಸ್ ಆಗಿದೆ ಸೂಪರ್ ಸ್ಟಾರ್ ಭಕ್ತಗಣ. ಇದೀಗ ಲೇಟೆಸ್ಟ್ ಅಪ್ಡೇಟ್ ಹೊರಬಿದ್ದಿದ್ದು ನಟಿ ಶೃತಿ ಹಾಸನ್(Shruri Haasan) ರಜನಿಕಾಂತ್(Rajinikanth)ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಆದ್ರೆ ನಾಯಕಿಯಾಗಿ ಅಲ್ಲ ಬದಲಾಗಿ ರಜನಿ ಮಗಳ ಪಾತ್ರದಲ್ಲಿ ಸಲಾರ್ ಬೆಡಗಿ ನಟಿಸುತ್ತಿದ್ದಾರೆ.
ಸದ್ಯ ತಲೈವಾ 171 ಸಿನಿಮಾದಿಂದ ಹೊರಬಿದ್ದ ಲೇಟೆಸ್ಟ್ ಸಮಾಚಾರ ಸಿನಿಮಾ ಮೇಲಿನ ಕ್ಯೂರಿಯಾಸಿಟಿ ಹೆಚ್ಚಿಸಿದೆ. ಇನ್ನೂ ಏನಲ್ಲಾ ವಿಶೇಷತೆ ಇರಲಿದೆ ಎನ್ನುವುದರತ್ತ ಸಿನಿರಸಿಕರು ಗಮನ ಹರಿಸುತ್ತಿದ್ದಾರೆ. ಇತ್ತೀಚೆಗೆ ಶೃತಿ ಹಾಸನ್ ಅಭಿನಯದ ‘ಇನಿಮೆಲ್’ ಆಲ್ಬಂ ಸಾಂಗ್ ಕೂಡ ಸೂಪರ್ ಸಕ್ಸಸ್ ಕಂಡಿದೆ. ‘ಇನಿಮೆಲ್’ ಸಾಂಗ್‌ನಲ್ಲಿ ನಿರ್ದೇಶಕ ಲೋಕೇಶ್ ಕನಕರಾಜ್ ಶೃತಿ ಜೊತೆ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇದೀಗ ಲೋಕೇಶ್ ಕನಕರಾಜ್ ಚಿತ್ರದಲ್ಲಿ ಕಮಲ್ ಪುತ್ರಿ ಅಭಿನಯಿಸುತ್ತಿರೋದು ನಿರೀಕ್ಷೆ ಹೆಚ್ಚಿಸಿದೆ.