ಗಂಧದಗುಡಿಯ ಅವನೇ ಶ್ರೀಮನ್ನಾರಾಯಣ ಉರುಫ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ಶ್ರೀರಾಮನ ದರ್ಶನ ಪಡೆದಿದ್ದಾರೆ. ತಮ್ಮ ಗೆಳೆಯರ ಬಳಗದ ಜೊತೆ ಅಯೋಧ್ಯೆಗೆ ಭೇಟಿಕೊಟ್ಟಿರುವ ಕರ್ಣ, ಬಾಲರಾಮನ ಸನ್ನಿಧಿಯಲ್ಲಿ ದಿವ್ಯಸಮಯ ಕಳೆದು ಸಂಭ್ರಮಿಸಿದ್ದಾರೆ. ಸ್ನೇಹಿತರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಶೆಟ್ರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅಂದ್ಹಾಗೇ, ಶೆಟ್ರು (Rakshit Shetty) ಆಗಾಗ ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತಾರೆ. ಇತ್ತೀಚೆಗೆ ಕರಾವಳಿಯ ಕಾರ್ಣಿಕದ ಬಬ್ಬು ಸ್ವಾಮಿ ದೈವದ ನೇಮೋತ್ಸವದಲ್ಲಿ ರಕ್ಷಿತ್ ಪಾಲ್ಗೊಂಡಿದ್ದರು. ಸಿನಿಮಾ ಕೆಲಸಗಳಿಗೆ ಬ್ರೇಕ್ ಕೊಟ್ಟು ಕೋಲದಲ್ಲಿ ಭಾಗಿಯಾಗಿದ್ದರು. ಅಲೆವೂರು ಜೋಡು ರಸ್ತೆಯಲ್ಲಿ ನಡೆದ 118ನೇ ನೇಮೋತ್ಸವದಲ್ಲಿ ಪಾಲ್ಗೊಂಡು, ಪೂಜೆ ನೆರವೇರಿಸಿ ಪ್ರಸಾದ ಸ್ವೀಕರಿಸಿದ್ದರು. ಇದೀಗ ಶ್ರೀರಾಮನ ದರ್ಶನ ಪಡೆದಿದ್ದಾರೆ.
ಸದ್ಯ ಶೆಟ್ರು (Rakshit Shetty) ರಿಚರ್ಡ್ ಆಂಟನಿ ಸಿನಿಮಾದ ತಯಾರಿಯಲ್ಲಿದ್ದಾರೆ. ಬರೋಬ್ಬರಿ 10 ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿರೋ ಸಿಂಪಲ್ ಸ್ಟಾರ್, ಉಳಿದವರು ಕಂಡಂತೆ ಚಿತ್ರದ ಸೀಕ್ವೆಲ್ನ ರಿಚರ್ಡ್ ಆಂಟನಿ ಮೂಲಕ ಪ್ರೇಕ್ಷಕರ ಮುಂದಿಡಲು ರೆಡಿಯಾಗಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ಈ ಸಿನಿಮಾ ಶುರು ಆಗ್ಬೇಕಿತ್ತು. ಆದರೆ, ಅದ್ಯಾವ ಕಾರಣಕ್ಕಾಗಿ ಡಿಲೇ ಆಗ್ತಿದೆಯೋ ತಿಳಿದಿಲ್ಲ. ಈ ಚಿತ್ರದ ನಿರ್ಮಾಣದ ಜವಬ್ದಾರಿನಾ ಹೊಂಬಾಳೆ ಸಂಸ್ಥೆ (hombalefilms) ಹೊತ್ತುಕೊಂಡಿತ್ತು. ಆದ್ರೀಗ, ಈ ಸಿನಿಮಾದಿಂದ ಹೊಂಬಾಳೆ ಹಿಂದೆ ಸರಿದಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಅಷ್ಟಕ್ಕೂ, ಈ ಸುದ್ದಿ ನಿಜಾನಾ ಸುಳ್ಳಾ ಗೊತ್ತಿಲ್ಲ. ಹೀಗೊಂದು ಖಬರ್ ಮಾತ್ರ ಗಾಂಧಿನಗರದಲ್ಲಿ ಗಹಗಹಿಸ್ತಿದೆ. ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿ ಅಂದರೆ ಇದೇ ಮಾರ್ಚ್ 28ಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ನಿರ್ದೇಶಿಸಿ, ನಟಿಸಿದ್ದ ‘ಉಳಿದವರು ಕಂಡಂತೆ’ ಸಿನಿಮಾ ತೆರೆಕಂಡು 10 ವರ್ಷ ಆಗಲಿದೆ. ಆ ಹಿನ್ನೆಲೆಯಲ್ಲಿ ‘ರಿಚರ್ಡ್ ಆಂಟನಿ’ ಸಿನಿಮಾಗೆ ಅದೇ ದಿನ ಮುಹೂರ್ತ ಮಾಡೋದಕ್ಕೆ ಸರ್ವರೀತಿಯಲ್ಲೂ ತಯಾರಿ ನಡೆಸುತ್ತಿದ್ದಾರೆನ್ನುವ ಸುದ್ದಿ ಕೇಳಿಬರ್ತಿದೆ.