ರಿಚರ್ಡ್ ಆಂಟನಿಯಾಗಿ ಶೆಟ್ರು (Rakshit Shetty) ಯಾವಾಗ ಕಣಕ್ಕಿಳಿಯುತ್ತಾರೆ ಅಂತ ಕನ್ನಡ ಕಲಾಭಿಮಾನಿಗಳು ಕಣ್ಣರಳಿಸಿರೋ ಹೊತ್ತಲ್ಲೇ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ರು (Rakshit Shetty) ಹಿಂದಿ ಪ್ರೇಕ್ಷಕರಿಗೆ ಮನರಂಜನೆ ನೀಡಲು ಹೊರಟು ನಿಂತಿರೋ ಸುದ್ದಿ ಹೊರಬಿದ್ದಿದೆ. ಹಾಗಂತ, ಶೆಟ್ರು ಬಾಲಿವುಡ್‌ಗೆ ಜಿಗಿಯುತ್ತಿಲ್ಲ ಬದಲಾಗಿ ಶೆಟ್ರ (Rakshit Shetty) ಸಕ್ಸಸ್‌ಫುಲ್ ʻಸಪ್ತಸಾಗರದಾಚೆ ಎಲ್ಲೋ ಸೈಡ್ ಬಿʼ (Sapta Sagaradaache Ello – Side B) ಸಿನಿಮಾ ಹಿಂದಿಯಲ್ಲಿ ತೆರೆಕಾಣ್ತಿದೆ. ಅದು ಓಟಿಟಿ ವೇದಿಕೆಯಲ್ಲಿ ಅನ್ನೋದು ಇಂಟ್ರೆಸ್ಟಿಂಗ್ ಸಮಾಚಾರ್.
ಯಸ್, ಹೇಮಂತ್ ರಾವ್ ನಿರ್ದೇಶಿಸಿದ್ದ, ರಕ್ಷಿತ್ ಶೆಟ್ಟಿ(Rakshit Shetty) ನಟಿಸಿ, ನಿರ್ಮಿಸಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಥಿಯೇಟರ್ ಹಾಗೂ ಒಟಿಟಿ ಎರಡರಲ್ಲೂ ಮೆಚ್ಚುಗೆ ಪಡೆದಿದೆ. ಈಗಾಗಲೇ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ Sapta (Sagaradaache Ello – Side B) ಚಿತ್ರ ದಕ್ಷಿಣದ ಭಾಷೆಗಳಲ್ಲಿ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಣೆಗೆ ಲಭ್ಯವಿದೆ. ಇದೀಗ ಹಿಂದಿ ವರ್ಷನ್ ಬಿಡುಗಡೆ ಮಾಡಲು ತಯಾರಿ ನಡೆಸಿದ್ದು, ಶೀಘ್ರದಲ್ಲೇ ಪ್ರದರ್ಶನಗೊಳ್ಳಲಿದೆಯಂತೆ. ಸದ್ಯ, ಹೀಗೊಂದು ಸುದ್ದಿ ಹೊರಬಿದ್ದಿದ್ದು, ಹಿಂದಿ ಪ್ರೇಕ್ಷಕರು ಪ್ಲಸ್ ಶೆಟ್ರ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ರಕ್ಷಿತ್ ಶೆಟ್ಟಿ (Rakshit Shetty) ಜೊತೆ, ರುಕ್ಮಿಣಿ ವಸಂತ್, ಚೈತ್ರಾ ಆಚಾರ್ ಮುಖ್ಯ ಭೂಮಿಕೆ ನಿರ್ವಹಿಸಿದ್ದಾರೆ. ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ರಮೇಶ್ ಇಂದಿರ, ಗೋಪಾಲ್ ಕೃಷ್ಣ ದೇಶಪಾಂಡೆ ಮೊದಲಾದವರು ನಟಿಸಿದ್ದಾರೆ.