ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮಹಾನಟಿಯಾಗಿ ಮೆರೆಯುತ್ತಿರುವ ನಾಯಕಿಯರ ಪೈಕಿ ಸಮಂತಾ ರುತ್ ಪ್ರಭು ಕೂಡ ಒಬ್ಬರು. ಸ್ಟಾರ್ ನಾಯಕಿಯಾಗಿ, ಬಹುಬೇಡಿಕೆಯ ನಟಿಯಾಗಿ ದಶಕಗಳ ಕಾಲ ಬೆಳ್ಳಿತೆರೆಯನ್ನಾಳುವ ಅವಕಾಶ ಎಲ್ಲರಿಗೂ ದಕ್ಕೋದಿಲ್ಲ. ಆದರೆ, ಸ್ಯಾಮ್‌ಗೆ ಒಂದು ದಶಕ ಪೂರೈಸಿ ಬೆಳ್ಳಿಭೂಮಿ ಅಂಗಳದಲ್ಲಿ ಮುನ್ನಗುವ ಸುವರ್ಣಾವಕಾಶ ಸಿಕ್ಕಿದೆ. ಈಗಲೂ ಬೇಡಿಕೆ ಕಳೆದುಕೊಳ್ಳದೇ ಡಿಮ್ಯಾಂಡಿಂಗ್ ಹೀರೋಯಿನ್ನಾಗಿ ಬಿಗ್ ಸ್ಕ್ರೀನ್ ಮೇಲೆ ಮಿಂಚುತ್ತಿರುವ ಆಪಲ್ ಬ್ಯೂಟಿ, ಚಿತ್ರರಂಗಕ್ಕೆ ಬಂದು 14 ವರ್ಷ ಪೂರೈಸಿದ್ದಾರೆ. ಯಸ್, ಇವತ್ತಿಗೆ ಸ್ಯಾಮ್ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟು 14 ವರ್ಷ ಕಳೀತು. ಹದಿನೈದನೇ ವಸಂತಕ್ಕೆ ಕಾಲಿಟ್ಟಿರೋ ಖುಷಿಯಲ್ಲಿರುವ ಸೌತ್ ಸುಂದರಿಗೆ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ. ಲೇಡಿ ಸೂಪರ್ ಸ್ಟಾರ್ ನಯನತಾರಾ ಸೇರಿದಂತೆ ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್-ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು ಸಮಂತಾಗೆ ಶುಭಕೋರುತ್ತಿದ್ದಾರೆ.
ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೇ ಸ್ಯಾಮ್ ತಮಿಳು ಚಿತ್ರದ ಮೂಲಕ ಬಣ್ಣ ಹಚ್ಚಿದವರು. ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ವಿನ್ನೈತಾಂಡಿ ವರುವಾಯಾ ಚಿತ್ರದಲ್ಲಿ ಸಣ್ಣದೊಂದು ಪಾತ್ರಕ್ಕೆ ಜೀವತುಂಬಿ ಸಿನಿಮಾ ಲೋಕ ಪ್ರವೇಶಿಸಿದರು. ಅದೇ ವರ್ಷವೇ ನಾಯಕನಟಿಯಾಗಿ ಇಂಟ್ರುಡ್ಯೂಸ್ ಆದರು. ʻಯೇ ಮಾಯೆ ಚೇಸಾವೆʼ ಸಿನಿಮಾದಲ್ಲಿ ಅಕ್ಕಿನೇನಿ ನಾಗಚೈತನ್ಯಗೆ ಜೋಡಿಯಾಗಿ ನಟಿಸಿದರು. ಅಲ್ಲಿಂದ ಶುರುವಾದ ಸ್ಯಾಮ್ ಸಿನಿಜರ್ನಿ ಖುಷಿ ಖುಷಿಯಾಗಿ ʻಖುಷಿʼ ಸಿನಿಮಾವರೆಗೂ ಬಂದಿದೆ. ಕಳೆದ ಹದಿನಾಲ್ಕು ವರ್ಷದಲ್ಲಿ ಸಮಂತಾ 50 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಯಾಗಿ ಅಭಿನಯಿಸಿದ್ದಾರೆ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆಯಾಗಿ ನಟಿಯಾಗಿ ಮಿಂಚಿ ಇಂದಿಗೂ ಅದೇ ಚಾರ್ಮ್‌ನ, ಕ್ರೇಜ್‌ನ ಉಳಿಸಿಕೊಂಡಿದ್ದಾರೆ. ಫ್ಯಾಮಿಲಿ ಮ್ಯಾನ್ 2 ವೆಬ್‌ಸೀರಿಸ್ ಹಾಗೂ ಪುಷ್ಪ ಹಾಡಿನ ಮೂಲಕ ಎಲ್ಲೆಡೆ ಜನಪ್ರಿಯಗೊಂಡಿರೋ ಮನಂ ಚೆಲುವೆ, ಈಗ ಅಮೇರಿಕನ್ ಟಿವಿ ಸೀರಿಸ್ ಸಿಟಾಡೆಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ
ಸ್ಯಾಮ್ ಪ್ರೊಫೆಷನಲ್ ಲೈಫೇನೋ ಸೂಪರ್ ಆಗಿದೆ. ಆದರೆ, ಪರ್ಸನಲ್ ಲೈಫ್‌ನಲ್ಲಿ ಎಡವಿದ್ದಾರೆ. ಅದ್ಯಾವ ಕೆಟ್ಟ ಕಣ್ಣು ಬಿತ್ತೋ ಏನೋ ಗೊತ್ತಿಲ್ಲ ಮಜಿಲಿ ಸಂಸಾರದಲ್ಲಿ ಬಿರುಗಾಳಿ ಎದ್ದು ದಾಂಪತ್ಯ ಜೀವನ ಕಡಿದುಕೊಳ್ಳುವಂತಾಯ್ತು. ಈ ಕ್ಷಣಕ್ಕೂ ಸ್ಯಾಮ್ ಹಾಗೂ ಚೈ ಇಬ್ಬರು ಒಂದಾಗಬೇಕು ಅಂತ ಆಸೆಯ ಕಣ್ಣುಗಳಿಂದ ಅವರಿಬ್ಬರ ಫ್ಯಾನ್ಸ್ ಎದುರುನೋಡ್ತಿದ್ದಾರೆ. ಆ ದಿವ್ಯಕ್ಷಣವನ್ನ ಆ ದೇವರು ಸೃಷ್ಟಿ ಮಾಡ್ತಾನೋ, ಆ ಮುದ್ದು ಜೋಡಿನಾ ಮತ್ತೆ ಒಂದು ಮಾಡ್ತಾನೋ ಏನೋ ಗೊತ್ತಿಲ್ಲ. ಬಟ್, ಇಬ್ಬರು ಬೇರೆಯಾದರೂ ಕೂಡ ಒಂಟಿಯಾಗಿಯೇ ಜೀವನ ಮಾಡ್ತಿದ್ದಾರೆ. ಹೀಗಾಗಿ, ದೂರದಲ್ಲೆಲ್ಲೋ ಮಿಣುಕು ದೀಪವೊಂದು ಪ್ರಜ್ವಲಿಸಿದಂತೆ ಮುಂದೊಂದು ದಿನ ಮತ್ತೆ ಒಂದಾಗುವ ಭರವಸೆಯಂತೂ ಅಭಿಮಾನಿಗಳಲ್ಲಿದೆ.
ಸದ್ಯ, ಸ್ಯಾಮ್ ಫ್ಯಾನ್ಸ್ ಜೊತೆ ಕನೆಕ್ಟೆಡ್ ಇದ್ದಾರೆ. ತಮ್ಮದೇ ಯೂಟ್ಯೂಬ್ ಚಾನಲ್‌ನಲ್ಲಿ ಹೆಲ್ತ್ ಪಾಡ್‌ಕಾಸ್ಟ್ ಆರಂಭಿಸಿದ್ದು, ತಮ್ಮ ಜೀವನದ ಏಳು-ಬೀಳನ್ನ, ಕಷ್ಟ-ಸುಖಗಳನ್ನ ಅಲ್ಲಿ ಶೇರ್ ಮಾಡಿಕೊಳ್ತಿದ್ದಾರೆ. ಈ ಮಧ್ಯೆ ಮಲೇಷಿಯಾಗೆ ಹಾರಿರೋ ಮಜಿಲಿ, ಹಾಲಿಡೇನಾ ಸಖತ್ ಎಂಜಾಯ್ ಮಾಡ್ತಿದ್ದಾರೆ. ಅಲ್ಲಿಂದ ಸ್ಯಾಮ್ ಹಂಚಿಕೊಂಡಿರೋ ಬಿಕಿನಿ ಫೋಟೋ, ಪಡ್ಡೆಹೈಕ್ಳ ಹಾರ್ಟ್ ಟೆಂಪ್ರೇಚರ್‌ನ ಜಾಸ್ತಿ ಮಾಡಿದೆ. ಮೊದಲೇ ಬಿಸಿಲಿನ ಹಬೆತೆ ತಡೆಯೋಕೆ ಆಗ್ತಿಲ್ಲ, ಅಂತದ್ರಲ್ಲಿ ಈ ಯಶೋಧೆ ಹಿಂಗ್ ಮಾಡಬಹುದಾ ಅಂತ ಕಮೆಂಟ್ ಮಾಡುತ್ತಲೇ, ಕಣ್ತುಂಪು ಮಾಡಿಕೊಳ್ತಿದ್ದಾರೆ ಪಡ್ಡೆಹುಡುಗರು