Sreleela:ʻಕಿಸ್ʼ(Kiss) ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟ ಚೆಂದದ ನಟಿ ಶ್ರೀಲೀಲಾ(Sreleela). ಇವರನ್ನು ಕಂಡು ಚಿತ್ರರಂಗಕ್ಕೆ ಚೆಂದದ ಚೆಲುವೆ ನಾಯಕಿಯಾಗಿ ಸಿಕ್ಕಳು ಎಂದು ಖುಷಿ ಪಡ್ತು ಗಾಂದೀನಗರ. ʻಕಿಸ್ʼ ಸಿನಿಮಾ ಹಿಟ್ ಆಗದಿದ್ರು ಶ್ರೀಲೀಲಾಗೆ ಚಿತ್ರರಂಗದಲ್ಲಿ ಫ್ಯೂಚರ್ ಇದೆ ಎಂದು ಎಲ್ಲರೂ ಭವಿಷ್ಯ ನುಡಿದಿದ್ರು. ಅದರಂತೆ ಅದೃಷ್ಟವೂ ಖುಲಾಯಿಸಿತು.
ಈ ಸಿನಿಮಾ ನಂತರ ʻಭರಾಟೆʼ, ʻಬೈ2ಲವ್ʼ ಸಿನಿಮಾಗಳಲ್ಲಿ ಶ್ರೀಲೀಲಾ(Sreleela) ನಟಿಸಿದ್ರು, ಈ ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸೌಂಡ್ ಮಾಡಲಿಲ್ಲ. ಆದ್ರೆ ಶ್ರೀಲೀಲಾ ಖ್ಯಾತಿಗೇನು ಭಂಗವಾಗಲಿಲ್ಲ. ಅಷ್ಟೋತ್ತಿಗಾಗಲೇ ಟಾಲಿವುಡ್ ಅಂಗಳದ ಕಣ್ಣು ಶ್ರೀಲೀಲಾ ಮೇಲೆ ಬಿದ್ದಿತ್ತು. ಸ್ಟಾರ್ ಸಿನಿಮಾಗಳ ಆಫರ್ ಒಂದಾದ ಮೇಲೆ ಒಂದು ಬರಲು ಶುರುವಾಯ್ತು. ಟಾಲಿವುಡ್ ಅಂಗಳಕ್ಕೆ ಕಾಲಿಟ್ಟ ಶ್ರೀಲೀಲಾ(Sreleela) ಅಲ್ಲಿಂದ ಹಿಂತಿರುಗಿ ನೋಡಿದ್ದಿಲ್ಲ.
ಟಾಲಿವುಡ್ ಸ್ಟಾರ್ಗಳಾದ ರಾಮ್ ಪೋತಿನೇನಿ, ನಿತಿನ್, ರವಿತೇಜ, ಬಾಲಯ್ಯ, ಮಹೇಶ್ ಬಾಬು(Mahesh Babu) ಜೊತೆ ಸ್ಕ್ರೀನ್ ಶೇರ್ ಮಾಡುವ ಮೂಲಕ ಶ್ರೀಲೀಲಾ ಖ್ಯಾತಿಯು ಹೆಚ್ಚಾಯ್ತು. ಎಲ್ಲೆಲ್ಲೂ ಶ್ರೀಲೀಲಾ ಕಾಣೋಕೆ ಶುರುವಾದ್ರು. ಶ್ರೀಲೀಲಾ ಸಿನಿಮಾ ಲೈನ್ ಅಪ್ ನೋಡಿ ನ್ಯಾಶನಲ್ ಕ್ರಶ್ ಮೀರಿಸುತ್ತಾಳೆ ಎಂಬ ಸುದ್ದಿಗಳು ಹರಿದಾಡೋಕೆ ಶುರುವಾದ್ವು. ಎಲ್ಲರ ಲೆಕ್ಕಾಚಾರದಂತೆ ಸ್ಟಾರ್ ಸಿನಿಮಾಗಳಲ್ಲಿ ಶ್ರೀಲೀಲಾ(Sreleela) ಬ್ಯುಸಿಯಾಗಿದ್ದಂತೂ ಸತ್ಯ. ಆದ್ರೆ ಕಿಸ್ ಬ್ಯೂಟಿಗೆ ನಟಿಸಿದ ಒಂದೂ ಸಿನಿಮಾದಲ್ಲೂ ಗೆಲುವಿನ ರುಚಿ ಸಿಗುತ್ತಿಲ್ಲ ಅನ್ನೋದು ಅಷ್ಟೇ ಸತ್ಯ.
ʻಪೆಲ್ಲಿ ಸಂದಡಿʼ, ʻಧಮಾಕʼ(Dhamaka), ʻಸ್ಕಂದ́, ʻಆದಿಕೇಶವʼ, ʻಎಕ್ಸ್ಟ್ರಾ ಆರ್ಡಿನರಿ ಮ್ಯಾನ್ʼ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಲೇ ಇಲ್ಲ. ಆದಾಗ್ಯೂ ʻಗುಂಟೂರು ಖಾರಂʼ(Guntur Kaaram) ಮೇಲೆ ಅಪಾರ ನಿರೀಕ್ಷೆಯಿತ್ತು ಆದ್ರೆ ಈ ಸಿನಿಮಾ ಕೂಡ ಹೇಳಿಕೊಳ್ಳೊ ರೇಂಜಿಗೆ ಸೌಂಡ್ ಮಾಡಲಿಲ್ಲ.
ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಶ್ರೀಲೀಲಾ ಫೇಮು ದಿನದಿಂದ ದಿನಕ್ಕೆ ಕುಸಿಯ ತೊಡಗಿದೆ. ಸದ್ಯ ʻಉಸ್ತಾದ್ ಭಗತ್ ಸಿಂಗ್ʼ ಸಿನಿಮಾ ಒಪ್ಪಿಕೊಂಡಿರುವ ಶ್ರೀಲೀಲಾ(Sreleela), ಚಿತ್ರಗಳ ಆಯ್ಕೆ ವಿಚಾರದಲ್ಲಿ ಕೊಂಚ ಬ್ರೇಕ್ ತೆಗೆದುಕೊಳ್ಳುವ ಸುದ್ದಿಗಳು ಹರಿದಾಡ್ತಿವೆ. ರಶ್ಮಿಕಾಳಂತೆ(Rashmika Mandanna) ಶ್ರೀಲೀಲಾ ಕೂಡ ಸ್ಟಾರ್ ಹೀರೋಯಿನ್ ಆಗಿ ಟಾಲಿವುಡ್ ಅಂಗಳದಲ್ಲಿ ಮೆರೆಯುತ್ತಾರೆ ಅನ್ನೋ ಲೆಕ್ಕಾಚಾರಗಳು ಸದ್ಯಕ್ಕಂತೂ ಹುಸಿಯಾಗಿದೆ.