ಶನಿವಾರ, ಜುಲೈ 5, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಕಿಕ್ಕೇರಿಸುತ್ತಿದೆ ಉಪ್ಪಿ ʻಯುಐʼ ಅಂಗಳದಿಂದ ಹೊರಬಂದ ʻಟ್ರೋಲ್‌ʼ ಹಾಡು!

Vishalakshi Pby Vishalakshi P
04/03/2024
in Majja Special
Reading Time: 1 min read
ಕಿಕ್ಕೇರಿಸುತ್ತಿದೆ ಉಪ್ಪಿ ʻಯುಐʼ ಅಂಗಳದಿಂದ ಹೊರಬಂದ ʻಟ್ರೋಲ್‌ʼ ಹಾಡು!

ಬುದ್ದಿವಂತ ಉಪ್ಪಿ ಸೃಷ್ಟಿಸಿರೋ ʻಯುಐʼ ಲೋಕದಿಂದ ಮೊದಲ ಹಾಡು ಬಿಡುಗಡೆಯಾಗಿದೆ. ʻಚೀಪ್‌ ಚೀಪ್‌ʼ ಏನದು.. ? ದೊಡ್ಡದು..ಚಿಕ್ಕದು… ಯಾರದ್ದು? ಅಂತ ತಿಳಿದುಕೊಳ್ಳೋಕೆ ಸಮಸ್ತ ಸಿನಿಮಾ ಪ್ರೇಮಿಗಳು ಎದುರುನೋಡ್ತಿದ್ದರು. ಆದರೆ, ಸೂಪರ್‌ ರಂಗ ಟ್ರೋಲ್‌ ಸಾಂಗ್‌ನ ರಿಲೀಸ್‌ ಮಾಡಿ ಚಮಕ್‌ ಕೊಟ್ಟಿದ್ದಾರೆ. ಟ್ರೋಲ್‌ ಆಗುತ್ತೆ ಇದು ಟ್ರೋಲ್‌ ಆಗುತ್ತೆ, ಇನ್ಸ್ಟಾದಲ್ಲಿ ತುಂಬಾ ರೀಲ್ಸ್‌ ಆಗುತ್ತೆ, ಕೆಲಸ ಇಲ್ಲದವರಿಗೆ ಟೈಂಪಾಸ್‌ ಆಗುತ್ತೆ ಹೀಗೊಂದು ಗೀತೆಯನ್ನ ಟ್ರೋಲ್‌ ಹಾಡಿನ ಮೂಲಕ ಕಟ್ಟಿಕೊಟ್ಟಿದ್ದಾರೆ.

ನರೇಶ್‌ ಕುಮಾರ್‌ ಎಚ್‌ ಎನ್‌ ಕ್ಯಾಚಿ ಲಿರಿಕ್ಸ್‌, ಅಜನೀಶ್‌ ಲೋಕನಾಥ್‌ ಮ್ಯೂಸಿಕ್‌, ಐಶ್ವರ್ಯ ರಂಗರಾಜನ್‌, ಹರ್ಷಿಕಾ ದೇವನಾಥ್‌, ಅನುಪ್‌ ಭಂಡಾರಿ, ಅಜನೀಶ್‌ ಲೋಕನಾಥ್‌ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡು ಕಲಾಭಿಮಾನಿಗಳಿಗೆ ಸಖತ್‌ ಕಿಕ್‌ ಕೊಡ್ತಿದೆ. ಇಂಟ್ರೆಸ್ಟಿಂಗ್‌ ಅಂದರೆ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆದ ಬೆಳ್ಳುಳ್ಳಿ ಕಬಾಬ್‌, ಕರಿಮಣಿ ಮಾಲೀಕ, ಹೆಂಗೆಂಗ್‌ ಪುಂಗ್ಲಿ, ಜೋಡೆತ್ತು, ಆಲ್‌ರೈಟ್‌ ಮುಂದಕ್ಕೆ ಹೋಗೋಣ, ನಿಖಿಲ್‌ ಎಲ್ಲಿದ್ದೀಯಪ್ಪ, ನಾನು ನಂದಿನಿ ಪಿಜಿನಲ್ಲಿರ್ತೀನಿ, ಡೋಲೋ 650 ಮಾತ್ರೆ.. ಬಿಸಿ ರಾಗಿ ಇಟ್ಟು ಹೀಗೆ ಹಲವು ಟ್ರೆಂಡಿಂಗ್‌ ಪದಗಳನ್ನ ಬಳಕೆ ಮಾಡಿಕೊಳ್ಳಲಾಗಿದೆ. ಇಮ್ರಾನ್‌ ಸರ್ದಾರಿಯಾ ಕೊರಿಯಾಗ್ರಫಿ ಈ ಹಾಡಿಗಿದ್ದು ಏಕ್‌ ಲವ್‌ ಬ್ಯೂಟಿ ರೀಷ್ಮಾ ನಾಣಯ್ಯ ಸಖತ್ತಾಗೆ ಕುಣಿದಿದ್ದಾರೆ.

ಯುಐ ಸ್ಯಾಂಡಲ್‍ವುಡ್ ಸಿನಿಮಾ ಪ್ರೇಮಿಗಳು ಮಾತ್ರವಲ್ಲ ಸೌತ್ ಸಿನಿಮಾ ಪ್ರೇಕ್ಷಕರು ಕಣ್ಣರಳಿಸಿರೋ ಸಿನಿಮಾ. ಕಬ್ಜ ಚಿತ್ರದ ನಂತರ ಸೌತ್-ನಾರ್ತ್ ತುಂಬೆಲ್ಲಾ ನಯಾ ಮೇನಿಯಾ ಕ್ರಿಯೇಟ್ ಮಾಡಿರೋ ಉಪ್ಪಿ ಈಗ ತಮ್ಮದೇ ನಿರ್ದೇಶನದ ನಟನೆಯ `ಯುಐ’ ಮೂಲಕ ಸಂಚಲನ ಮೂಡಿಸಲು ಹೊರಟಿದ್ದಾರೆ. ಉಪ್ಪಿ-2 ಆದ್ಮೇಲೆ ಬರೋಬ್ಬರಿ ಎಂಟು ವರ್ಷಗಳು ಡೈರೆಕ್ಷನ್‍ನಿಂದ ದೂರ ಉಳಿದಿದ್ದರು. ಇದೀಗ `ಯುಐ’ ಮೂಲಕ ಮತ್ತೆ ಡೈರೆಕ್ಟರ್ ಹ್ಯಾಟ್ ತೊಟ್ಟು ಅಖಾಡಕ್ಕಿಳಿದಿದ್ದಾರೆ. ಟೈಟಲ್‍ನಿಂದನೇ ಈ ಸಿನಿಮಾ ದೊಡ್ಡಮಟ್ಟದಲ್ಲಿ ಸೌಂಡ್ ಮಾಡಿತ್ತು. ಅನಂತರ ಟೀಸರ್‌ನಿಂದ ಸೆನ್ಸೇಷನ್‌ ಕ್ರಿಯೇಟ್‌ ಮಾಡಿತ್ತು. ಇದೀಗ ಟ್ರೋಲ್‌ ಸಾಂಗ್‌ ಹಲ್‍ಚಲ್ ಎಬ್ಬಿಸುತ್ತಿದೆ.

ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‍ಟೈನರ್ಸ್ ಸಹಭಾಗಿತ್ವದಲ್ಲಿ `ಯುಐ’ ನಿರ್ಮಾಣಗೊಂಡಿದ್ದು, ಕೆ.ಪಿ. ಶ್ರೀಕಾಂತ್, ಜಿ.ಮನೋಹರನ್ ಕೋಟಿ ಕೋಟಿ ಬಂಡವಾಳ ಹೂಡಿದ್ದಾರೆ. ರಿಯಲ್ ಸ್ಟಾರ್ ಉಪ್ಪಿ ಜೊತೆಗೆ ರೀಷ್ಮಾ ನಾಣಯ್ಯ, ನಿಧಿ ಸುಬ್ಬಯ್ಯ, ಮುರುಳಿ ಶರ್ಮಾ, ಇಂದ್ರಜಿತ್ ಲಂಕೇಶ್. ಪ್ರಶಾಂತ್ ಸಂಬರ್ಗಿ ಸೇರಿದಂತೆ ಇತರರು ಪಾರ್ತವರ್ಗದಲ್ಲಿದ್ದಾರೆ. ಮಾಜಿ ಪೋರ್ನ್ ಬ್ಯೂಟಿ ಸನ್ನಿ ಸ್ಯಾಂಡಲ್‍ವುಡ್‍ಗೆ ಮತ್ತೆ ಬಂದಿದ್ದಾರೆ. ಸೂಪರ್ ರಂಗನ ಜೊತೆಗೆ ಸನ್ನಿಲಿಯೋನ್ ಸೊಂಟ ಬಳುಕಿಸಿದ್ದಾರೆ. ಪ್ರಜ್ವಲ್ ಕ್ಯಾಮರಾ ಕೈಚಳಕ, ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ರಿಯಲ್ ಸ್ಟಾರ್ ಯುಐ ಜಗತ್ತು ಪ್ರೇಕ್ಷಕರನ್ನ ಹಾಲಿವುಡ್ ಲೋಕಕ್ಕೆ ಕರೆದೊಯ್ಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಸೌತ್-ನಾರ್ತ್‍ಗೆ ಮಾತ್ರವಲ್ಲ ಇಡೀ ಜಗತ್ತಿಗೆ ಉಪ್ಪಿಯ ಬುದ್ದಿವಂತಿಕೆ ಏನು?ಸಿನಿಮಾ ಚಾಕಚಕ್ಯತೆ ಎಂತಹದ್ದು ಅನ್ನೋದು ಯುಐ ಮೂಲಕ ತಿಳಿಯಲಿದೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಅದ್ದೂರಿಯಾಗಿ ನಡೀತು ಅಮೂಲ್‌ ಬೇಬಿ ಪತ್ನಿ ಸಿರಿ ಸೀಮಂತ!

ಅದ್ದೂರಿಯಾಗಿ ನಡೀತು ಅಮೂಲ್‌ ಬೇಬಿ ಪತ್ನಿ ಸಿರಿ ಸೀಮಂತ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.