ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪಾ-2 ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಅಭಿಮಾನಿಗಳು ಪುಷ್ಪಾ-2 ರಿಲೀಸ್ ಗಾಗಿ ಕಾಯುತ್ತಿದ್ದಾರೆ. ಈ ಮಧ್ಯೆ ಅಲ್ಲು ಅರ್ಜುನ್ ಮೆಗಾ ಆಫರ್ ಒಂದನ್ನು ತಿರಸ್ಕರಿಸಿದ್ದಾರೆ. ಚಿತ್ರದಲ್ಲಿ ಬರುವ ಕೆಲವು ದೃಶ್ಯಗಳಲ್ಲಿ ಅಲ್ಲು ಅರ್ಜುನ್ ಸ್ಮೋಕ್ ಮತ್ತು ಮದ್ಯ ಸೇವನೆ ಮಾಡಲಿದ್ದಾರೆ. ಮದ್ಯ ಸೇವನೆ ಮತ್ತು ಸ್ಮೋಕಿಂಗ್ ವೇಳೆ ಪ್ರತಿಷ್ಠಿತ ಮದ್ಯ ಕಂಪನಿ ಹಾಗೂ ತಂಬಾಕು ಕಂಪನಿ ತನ್ನ ಲೇಬಲ್ ತೋರಿಸುವಂತೆ ಕೇಳಿಕೊಂಡಿತ್ತು. ಅದಕ್ಕಾಗಿ 10 ಕೋಟಿ ನೀಡುವುದಾಗಿ ಅಲ್ಲು ಅರ್ಜುನ್ ಹಾಗೂ ಸಿನಿಮಾ ತಂಡಕ್ಕೆ ತಿಳಿಸಿತ್ತು. ಆದರೆ ಇದನ್ನು ಅಲ್ಲು ಅರ್ಜುನ್ ನಯವಾಗಿಯೇ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.
ಸ್ಟಾರ್ ಡೈರೆಕ್ಟರ್ ಸುಕುಮಾರ್ ನಿರ್ದೇಶನದ Pushpa: The Rise 2021ರಲ್ಲಿ ತೆರೆಕಂಡು ಭರ್ಜರಿ ಹಿಟ್ ಆಗಿತ್ತು. ಬಾಕ್ಸ್ ಆಫೀಸ್ನಲ್ಲಿ ಚಿಂದಿ ಉಡಾಯಿಸಿದ್ದ ಈ ಚಿತ್ರವು ವಿಶ್ವದಾದ್ಯಂತ ಸಖತ್ ಸದ್ದು ಮಾಡಿತ್ತು. ಚಿತ್ರದಲ್ಲಿ ಅಲ್ಲು ಅರ್ಜುನ್ ಅಭಿನಯಕ್ಕೆ ರಾಷ್ಟ್ರೀಯ ಪ್ರಶಸ್ತಿ ಕೂಡ ಲಭಿಸಿದೆ. ಇದೀಗ ಚಿತ್ರದ ಪಾರ್ಟ್ ತಯಾರಿ ನಡೆಯುತ್ತಿದೆ. 500 ಕೋಟಿ ಬಂಡವಾಳದ Pushpa 2: The Rule ಚಿತ್ರವು 2024 ಆಗಸ್ಟ್ 15 ರಂದು ತೆರೆ ಕಾಣಲಿದೆ.