`ಜೈಲರ್’ ಬ್ಲಾಕ್ಬಸ್ಟರ್ ಹಿಟ್ಟಾಗಿದ್ದೇ ಆಗಿದ್ದು ಬಾಬಾ ಬಗ್ಗೆ ಬ್ಲಾಕ್ ಬಸ್ಟರ್ ಬ್ರೇಕಿಂಗ್ ನ್ಯೂಸ್ಗಳೇ ಹೊರಬೀಳುತ್ತಿವೆ. ದಿನಕ್ಕೊಂದು ವಿಚಾರವಾಗಿ ಸೂಪರ್ ಸ್ಟಾರ್ ರಜನಿಕಾಂತ್ ಸಿನಿದುನಿಯಾದಲ್ಲಿ ಸಖತ್ ಸುದ್ದಿಯಾಗ್ತಿದ್ದಾರೆ. ಸಕ್ಸಸ್ನ ನೆತ್ತಿಗೇರಿಸಿಕೊಳ್ಳದೇ, ಒಂದು ಸಿನಿಮಾದ ಜನಪ್ರಿಯತೆಗೆ ಅಂಟಿಕೂರದೇ, ಮೈಕೊಡವಿಕೊಂಡು ಅಖಾಡಕ್ಕಿಳಿಯೋ ಪಡೆಯಪ್ಪ ಈಗ ಸಂಭಾವನೆ ವಿಚಾರವಾಗಿ ವಲ್ರ್ಡ್ ವೈಡ್ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ತಮ್ಮ ಮುಂದಿನ ಸಿನಿಮಾಗೆ ದುಬಾರಿ ಸಂಭಾವನೆ ಪಡೆಯೋ ಮೂಲಕ ಏಷಿಯಾದ ಹೈಯೆಸ್ಟ್ ಪೇಯ್ಡ್ ಆ್ಯಕ್ಟರ್ ಎನಿಸಿಕೊಳ್ತಿದ್ದಾರೆ. ಹಾಗಾದ್ರೆ, ರಜನಿ ಪಡೆಯುತ್ತಿರುವ ಸಂಭಾವನೆ ಎಷ್ಟು? ಅದ್ಯಾವ ಸಿನಿಮಾಗೆ ಅಷ್ಟೊಂದು ರೆಮ್ಯೂನರೇಷನ್ನ ಜೇಬಿಗಿಳಿಸ್ತಿದ್ದಾರೆ. ಆ ಕುರಿತಾದ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ
ರಜನಿಕಾಂತ್… ಭಾರತೀಯ ಚಿತ್ರರಂಗದ ಮೊದಲ ಸೂಪರ್ ಸ್ಟಾರ್. ಆಲ್ ಓವರ್ ಇಂಡಿಯಾ ಮಾತ್ರವಲ್ಲ ಜಗತ್ತಿನ ಮೂಲೆ ಮೂಲೆಯಲ್ಲಿ ಪ್ರಖ್ಯಾತಿ ಹೊಂದಿದ್ದಾರೆ. ಸ್ಟೈಲ್, ಮ್ಯಾನರಿಸಂ, ಆಟಿಟ್ಯೂಡ್, ಲುಕ್, ಮಾತ್ರವಲ್ಲ ಅಭಿನಯದಿಂದ ಹಾಗೂ ವ್ಯಕ್ತಿತ್ವದಿಂದ ಕೋಟ್ಯಾಂತರ ಮಂದಿಯ ಹೃದಯ ಗೆದ್ದಿದ್ದಾರೆ. ರಜನಿ ಅನ್ನೋ ಈ ಮೂರಕ್ಷರದ ಹೆಸರು ಕೇಳಿದರೆ ಸಿನಿಮಾ ಪ್ರೇಮಿಗಳು ಕೈ ಎತ್ತಿ ಮುಗಿಯುತ್ತಾರೆ. ಅವ್ರನ್ನ ಮನಸ್ಸಲ್ಲಿಟ್ಕೊಂಡು ಆರಾಧಿಸೋದು ಮಾತ್ರವಲ್ಲ ಅವರಿಗೋಸ್ಕರ ಗುಡಿಕಟ್ಟಿ ಪೂಜಿಸೋ ಅದೆಷ್ಟೋ ಮಂದಿ ಭಕ್ತರು ನಮ್ಮ ನಿಮ್ಮ ನಡುವೆ ಇದ್ದಾರೆ. ಇಂತಿಪ್ಪ ಅಭಿಮಾನಿ ದೇವರುಗಳನ್ನು ಸಂಪಾದಿಸಿರುವ ಪಡೆಯಪ್ಪ, 72 ವರ್ಷ ವಯಸ್ಸಾಗಿದ್ರೂ ಕೂಡ ದಣಿವರಿಯದೇ ದುಡಿಯುತ್ತಿದ್ದಾರೆ. ಸಿನಿಮಾ ಪ್ರೇಮಿಗಳನ್ನು ರಂಜಿಸೋದಕ್ಕೆ ಇಳಿವಯಸ್ಸಿನಲ್ಲೂ ಹೊಸ ಹುರುಪು, ಹುಮ್ಮಸ್ಸಿನಿಂದ ಕೆಲಸ ಮಾಡ್ತಿದ್ದಾರೆ. ಭರ್ತಿ 50 ವರ್ಷಗಳಿಂದ ಕಲಾಸರಸ್ವತಿಯ ಸೇವೆ ಮಾಡುತ್ತಾ, ನಾನಾ ಅವತಾರವೆತ್ತುತ್ತಾ, ಕಲಾಭಿಮಾನಿಗಳಿಗೆ ಹಬ್ಬದೂಟ ಬಡಿಸುತ್ತಿರುವ ಶಿವಾಜಿ ಈಗ 170ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಹೌದು, `ಜೈಲರ್’ ಸಿನಿಮಾದ ನಂತರ ರಜನಿ `170′ ಚಿತ್ರದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಪಡೆಯಪ್ಪನ ಜಾಗದಲ್ಲಿ ಬಹುಷಃ ಬೇರೆ ಯಾರಾದ್ರೂ ಸೂಪರ್ ಸ್ಟಾರ್ ಇದ್ದಿದ್ದರೆ, `ಜೈಲರ್’ ನಂತಹ ದೊಡ್ಡ ಸಕ್ಸಸ್ ನೋಡಿದ್ದರೆ ಸ್ಮಾಲ್ ಬ್ರೇಕ್ ತಗೊಂಡಿರೋರು ಅನ್ಸುತ್ತೆ. ಆದರೆ, ಬಾಬಾ ಮತ್ತೆ ಮೈಕೊಡವಿಕೊಂಡು ಅಖಾಡಕ್ಕಿಳಿದಿದ್ದಾರೆ. ಜೈ ಭೀಮ್ ಖ್ಯಾತಿಯ ನಿರ್ದೇಶಕ ಟಿಜೆ ಜ್ಞಾನವೇಲ್ ಕಲ್ಪನೆಯ ಕಥೆಗೆ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಕೇರಳ ಹಾಗೂ ಮುಂಬೈ ಅಂಗಳದಲ್ಲಿ ಫಸ್ಟ್ ಷೆಡ್ಯೂಲ್ಡ್ ಶೂಟಿಂಗ್ ಕಂಪ್ಲೀಟ್ ಆಗಿದೆ.
ಭರ್ತಿ 33 ವರ್ಷಗಳ ನಂತರ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಒಂದಾಗಿದ್ದಾರೆ. ಹಮ್' ಸಿನಿಮಾದ ನಂತರ ಸ್ಕ್ರೀನ್ ಶೇರ್ ಮಾಡಿರೋ ಈ ಇಬ್ಬರು ದಿಗ್ಗಜರು ನಯಾ ಹವಾ ಎಬ್ಬಿಸೋದಕ್ಕೆ ಹೊರಟು ನಿಂತಿದ್ದಾರೆ. ಹೀಗಿರುವಾಗಲೇ ರಜನಿ ಸಂಭಾವನೆ ವಿಚಾರ ಸಿನಿದುನಿಯಾದಲ್ಲಿ ಸುಂಟರಗಾಳಿ ಎಬ್ಬಿಸಿದೆ.
ತಲೈವರ್ 171′ ಗೋಸ್ಕರ ಶಿವಾಜಿ 260 ರಿಂದ 280 ಕೋಟಿ ಪಡೆಯುತ್ತಿದ್ದಾರೆಂಬ ಸುದ್ದಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.
ಅಂದ್ಹಾಗೇ, ತಲೈವಾ ಒಂದು ಸಿನಿಮಾಗೆ 100ಕೋಟಿಗೂ ಕಮ್ಮಿ ಮುಟ್ಟಲ್ಲ ಅನ್ನೋದು ನಿಮ್ಮೆಲ್ಲರಿಗೂ ಗೊತ್ತೆಯಿದೆ. ಬಾಬಾ ಮೇಲೆ ನಂಬಿಕೆಯಿಟ್ಟು ಬಂಡವಾಳ ಹೂಡೋ ನಿರ್ಮಾಪಕರು ಹಾಕಿದ ಬಜೆಟ್ಗಿಂತ 10 ಪಟ್ಟು ಲಾಭ ನೋಡಿದ್ದು ಇದೆ. ಒಮ್ಮೊಮ್ಮೆ ಲಾಸ್ ಆಗಿದ್ದು ಇದೆ. ಲಾಭ ಬಂದಾಗ ಕೈ ಎತ್ತಿ ಕೊಟ್ಟವರು ಇದ್ದಾರೆ. ನಷ್ಟ ಆದಾಗ ಬಾಷಾ ಬಳಿ ಹೋಗಿ ಹಣ ವಾಪಾಸ್ ಕೇಳಿದವರು ಇದ್ದಾರೆ. ಅದ್ಯಾಕೋ ಏನೋ ಗೊತ್ತಿಲ್ಲ ರೋಬೋ 2.0 ನಂತರ ಪೆಟ್ಟಾ, ದರ್ಬಾರ್, ಅಣ್ಣಾತೆ ಹೀಗೆ ಸಾಲು ಸಾಲು ಸಿನಿಮಾಗಳು ನೆಲಕಚ್ಚಿದವು. ಸೂಪರ್ ಸ್ಟಾರ್ ಗೆ ಗೆಲುವು ಮರೀಚಿಕೆಯಾಗೋಯ್ತು. ಇನ್ನೇನು ತಲೈವಾ ಹವಾ ಮುಗೀತು ಎನ್ನುವ ಹೊತ್ತಿಗೆ `ಜೈಲರ್’ ಜಯಭೇರಿ ಬಾರಿಸಿತು. ಪಡೆಯಪ್ಪ ಹಳೆಯ ಫಾರ್ಮ್ಗೆ ಮರುಳವಂತಾಯ್ತು. ಟೈಗರ್ ಮುತ್ತುವೇಲ್ ಪಾಂಡಿಯನ್ ಅಬ್ಬರ-ಆರ್ಭಟದಿಂದ ಮತ್ತೊಮ್ಮೆ ಲೈಮ್ ಲೈಟ್ಗೆ ಬರುವಂತಾಗಿದ್ದು ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್ಗಳು ಲೈನಪ್ ಆಗ್ತಿವೆ. ಮಗಳು ಐಶ್ವರ್ಯ ನಿರ್ದೇಶನದ ಲಾಲ್ ಸಲಾಂ ನಡುವೆ ತಲೈವಾ 170 ಚಿತ್ರದ ಶೂಟಿಂಗ್ ನಡೀತಿದೆ. ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ `ತಲೈವರ್-171′ ಸಿನಿಮಾ ಅನೌನ್ಸ್ ಆಗಿದೆ. ಈ ಸಿನಿಮಾಗೆ ರಜನಿ 260 ರಿಂದ 280 ಕೋಟಿ ಸಂಭಾವನೆ ಪಡೆಯುತ್ತಿರೋದೆಂದು ಹೇಳಲಾಗ್ತಿದೆ.
ಬಹುಷಃ ಈ ಸುದ್ದಿ ನಿಜ ಆಗಿದ್ದರೂ ಆಗಿರಬಹುದು. `ಜೈಲರ್’ ನಂತರ ಪಡೆಯಪ್ಪನ ಕಾಲ್ ಶೀಟ್ ಪಡೆದಿರೋ ಸನ್ ಪಿಕ್ಚರ್ಸ್ ದುಬಾರಿ ಸಂಭಾವನೆ ನೀಡಿರಬಹುದು. ಹೌದು, `ಜೈಲರ್’ ಚಿತ್ರ ಮ್ಯಾಸೀವ್ ಹಿಟ್ಟಾಯ್ತು ಅಂತ ರಜನಿಗೆ 100 ಕೋಟಿ ಸಂಭಾವನೆ ಕೊಟ್ಟು, ಲಾಭದಲ್ಲೂ ಶೇರ್ ಕೊಟ್ಟು, ದುಬಾರಿ ಕಾರು ಗಿಫ್ಟ್ ಮಾಡಿರುವ ಸನ್ ಪಿಕ್ಚರ್ಸ್ ಸಂಸ್ಥೆ `ತಲೈವರ್-171′ ಚಿತ್ರಕ್ಕೆ 250 ಕೋಟಿ ರೆಮ್ಯೂನರೇಷನ್ ನೀಡಿದ್ದರು ನೀಡಿರಬಹುದು. ಸದ್ಯಕ್ಕೆ ಇದು ಅಂತೆಕಂತೆ ಮ್ಯಾಟರ್ ಆದರೂ ಕೂಡ ಪ್ಯಾನ್ ಇಂಡಿಯಾ ನಟರೆಲ್ಲಾ ಆಕಾಶ ನೋಡುವಂತೆ ಮಾಡಿದೆ. ಸಂಭಾವನೆ ವಿಚಾರದಲ್ಲಿ ಈಗಾಗಲೇ ಜಾಕಿಚಾನ್ರನ್ನೂ ಮೀರಿಸಿರೋ ಶಿವಾಜಿ ಈಗ ಮತ್ತೊಮ್ಮೆ 250 ಕೋಟಿ ಜೇಬಿಗಿಳಿಸೋ ಸುದ್ದಿ ಮೂಲಕ ಏಷಿಯಾದ ಹೈಯೆಸ್ಟ್ ಪೇಯ್ಡ್ ಆ್ಯಕ್ಟರ್ ಕಿರೀಟಕ್ಕೆ ಭಾಜನರಾಗಿದ್ದಾರೆ. ಏಜ್ ಈಸ್ ಜಸ್ಟ್ ಎ ನಂಬರ್ ಅನ್ನೋದನ್ನ ಪ್ರೂ ಮಾಡುತ್ತಾ ಬೆಳ್ಳಿತೆರೆ ಮೇಲೆ ನಾಗಾಲೋಟ ಮುಂದುವರೆಸಿದ್ದಾರೆ. ಪಡೆಯಪ್ಪನ್ನ ಹಿಂದ್ಯಾರು ತೋರಿಸಿರದ ಲೆವೆಲ್ಗೆ ತೋರಿಸಬೇಕು ಅಂತ ನಿರ್ದೇಶಕ ಲೋಕೇಶ್ ಕನಗರಾಜ್ 6 ತಿಂಗಳು ಸ್ಕ್ರಿಪ್ಟ್ ಮೇಲೆ ವರ್ಕ್ ಮಾಡೋದಕ್ಕೆ ಫಿಕ್ಸ್ ಆಗಿದ್ದಾರಂತೆ. ಎಲ್ಸಿಯೂ ಕಾನ್ಸೆಪ್ಟ್ನಲ್ಲಿ ತಲೈವರ್-171 ತೆಗಿತೀನಿ ಎಂದಿರೋ ಲೋಕೇಶ್, ಸಿನಿಮಾ ಪ್ರೇಮಿಗಳು ಈಗಿಂದಲೇ ಕುತೂಹಲದಿಂದ ಕಾಯುವಂತೆ ಮಾಡಿದ್ದಾರೆ. ಮಾಸ್ಟರ್, ಖೈದಿ, ವಿಕ್ರಮ್ ಸಾರಥಿಯ ಕಲ್ಪನೆಯಲ್ಲಿ ಬಾಷಾ ಬಾಸ್ ಹೇಗೆ ಕಾಣ್ತಾರೆ? ಇನ್ಯಾರು ತಿಂಗಳು ಕಾದುನೋಡಬೇಕು ಅಷ್ಟೇ.