Surya: ಕಾಲಿವುಡ್ ಅಂಗಳದ ಕ್ಯೂಟೆಸ್ಟ್ ಕಪಲ್‌ಗಳಂದ್ರೆ ನಟ ಸೂರ್ಯ(Surya) ಹಾಗೂ ಜ್ಯೋತಿಕಾ(Jyotika). ಈ ಜೋಡಿ ಕಂಡು ಗಂಡ-ಹೆಂಡತಿ ಎಂದರೆ ಹೀಗಿರಬೇಕು ಅನ್ನೋ ಮಂದಿಗೇನು ಕಮ್ಮಿಯಿಲ್ಲ. ಅಷ್ಟೊಂದು ಅನ್ಯೋನ್ಯವಾಗಿದೆ ಇವರಿಬ್ಬರ ಬಂಧ. ಸೋಶಿಯಲ್ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರೋ ಈ ಕ್ಯೂಟ್ ಕಪಲ್ಸ್ ಮತ್ತೆ ವೈರಲ್ ಆಗಿದ್ದಾರೆ.
ಜೊತೆ ಜೊತೆಯಲಿ, ಪ್ರೀತಿ ಜೊತೆಯಲಿ ಅನ್ನೋತರ, ಹೋದಲೆಲ್ಲಾ ಈ ಜೋಡಿ ಒಟ್ಟಾಗಿ ಕಾಣಿಸಿಕೊಳ್ತಾರೆ. ಇಬ್ಬರನ್ನು ಜೊತೆಗೆ ನೋಡೋದೆ ಇಬ್ಬರ ಫ್ಯಾನ್ಸ್ ಕಣ್ಣಿಗೆ ಹಬ್ಬ. ಇದೀಗ ಜಿಮ್‌ನಲ್ಲಿ ಒಟ್ಟಾಗಿ ಕಾಣಿಸಿಕೊಂಡು ಮತ್ತೆ ಸುದ್ದಿಯಲ್ಲಿದ್ದಾರೆ ಸ್ಟಾರ್ ಕಪಲ್ಸ್. ಸೂರ್ಯ(Surya) ಮತ್ತು ಜ್ಯೋತಿಕಾ(Jyotika). ಇಬ್ಬರು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವೀಡಿಯೋ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಹಾಗೂ ಡೈಹಾರ್ಡ್ ಫ್ಯಾನ್ಸ್ ವಾವ್ ಎನ್ನುತ್ತಿದ್ದಾರೆ.
ನಟ ಸೂರ್ಯ(Surya) ಫಿಟ್ನೆಸ್ ಫ್ರೀಕ್ ಅನ್ನೋದು ಗೊತ್ತಿರೋ ವಿಷ್ಯ, ಹಲವು ಸಿನಿಮಾಗಳಲ್ಲಿ ಸಿಕ್ಸ್ ಪ್ಯಾಕ್‌ನಲ್ಲಿ ಮಿಂಚಿದ್ದಾರೆ ಕೂಡ. ಫಿಟ್ನೆಸ್ ಕಡೆ ಹೆಚ್ಚು ಗಮನ ಹರಿಸೋ ಇವರು ಈ ವಿಚಾರದಲ್ಲಿ ರಾಜೀ಼ ಆಗೋ ಮಾತೇ ಇಲ್ಲ. ಸದ್ಯ ʻಕಂಗುವಾʼ(Kanguva) ಸಿನಿಮಾ ಬಿಡುಗಡೆಗೆ ಕಾಯುತ್ತಿರುವ ಸೂರ್ಯ, ಕಾರ್ತಿಕ್ ಸುಬ್ಬರಾಜು ಜೊತೆ ಹೊಸ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಜ್ಯೋತಿಕಾ(Jyotika). ಕೂಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ತೆರೆಕಂಡ ʻಶೈತಾನ್ʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಕ್ಸಸ್ ಕಂಡಿದೆ. ಸಿನಿಮಾ ಎಂದ ಮೇಲೆ ಫಿಟ್ನೆಸ್ ಇರಲೇಬೇಕು. ಅದಕ್ಕಾಗಿ ಪತಿಯ ಜೊತೆ ಜ್ಯೋತಿಕಾ ಕೂಡ ಜಿಮ್‌ನಲ್ಲಿ ಕಸರತ್ತು ಮಾಡಲು ಆರಂಭಿಸಿದ್ದಾರೆ.