Kanguva: ಶಿವ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಕಂಗುವಾ(Kanguva). ಟೀಸರ್ ಮೂಲಕ ಧೂಳ್ ಧಮಾಕ ಎಬ್ಬಿಸಿರುವ ಈ ಸಿನಿಮಾ ಇದೇ ವರ್ಷ ವರ್ಲ್ ವೈಡ್ ಕಮಾಲ್ ಮಾಡಲಿದೆ. ಕಾಲಿವುಡ್ ಸ್ಟಾರ್ ನಟ ಸೂರ್ಯ(Surya) ನಟನೆಯ ಬಿಗ್ ಪ್ರಾಜೆಕ್ಟ್ ಇದಾಗಿದ್ದು, ಸಿನಿಮಾದ ನಯಾ ಸುದ್ದಿಯೊಂದು ಬಾಯ್ ಮೇಲೆ ಬೆರಳಿಡುವಂತೆ ಮಾಡಿದೆ.
ಕಂಗುವಾ(Kanguva) ಸಿನಿಮಾ ಫೈಟಿಂಗ್ ಸೀನ್ ಒಂದಕ್ಕೆ ಚಿತ್ರತಂಡ ಕೋಟಿ ಕೋಟಿ ಖರ್ಚು ಮಾಡಲು ರೆಡಿಯಾಗಿದೆ. ಬಾಬಿ ಡಿಯೋಲ್ ಹಾಗೂ ಸೂರ್ಯ(Surya) ಮುಖಾಮುಖಿಯಾಗಲಿರೋ ಹೈ ವೋಲ್ಟೇಜ್ ಫೈಟಿಂಗ್ ಸೀನ್‌ಗೆ ಹತ್ತು ಸಾವಿರ ಜನರು ಭಾಗಿಯಾಗಲಿದ್ದಾರಂತೆ. ಮ್ಯಾಸಿವ್ ಫೈಟ್ ಸೀನ್ ಇದಾಗಿದ್ದು ಸ್ಟುಡಿಯೋ ಗ್ರೀನ್ ನಿರ್ಮಾಣ ಸಂಸ್ಥೆ ಇದಕ್ಕಾಗಿ ಕೋಟಿ ಕೋಟಿ ಖರ್ಚು ಮಾಡಲು ರೆಡಿಯಾಗಿದೆ.
ಒಂದು ವೇಳೆ ಈ ಫೈಟ್ ಸೀನ್ ಚಿತ್ರತಂಡ ಅಂದುಕೊಂಡಂತೆ ಶೂಟ್ ಮಾಡಿದ್ರೆ ಅತ್ಯಂತ ದುಬಾರಿ ಫೈಟಿಂಗ್ ಸೀನ್ ಇದಾಗಲಿದೆ. ಈಗಾಗಲೇ ದುಬಾರಿ ಪೈಟಿಂಗ್ ಸೀನ್ ಚಿತ್ರಿಸಿರುವ ರೆಕಾರ್ಡ್ ಪ್ರಭಾಸ್(Prabhas) ನಟನೆಯ ಸಾಹೋ ಖಾತೆಯಲ್ಲಿದೆ. ಚೇಸಿಂಗ್ ಸೀನ್ ಒಂದಕ್ಕೆ ಸಾಹೋ ಚಿತ್ರತಂಡ 80 ಕೋಟಿ ಖರ್ಚು ಮಾಡಿತ್ತು. ಈ ದಾಖಲೆಯನ್ನು ಯಾವ ಸಿನಿಮಾ ಕೂಡ ಮುರಿದಿಲ್ಲ. ಕಂಗುವಾ(Kanguva) ಆ ದಾಖಲೇ ಮುರಿಯುತ್ತಾ ಎನ್ನುವ ಲೆಕ್ಕಾಚಾರ ಚಾಲ್ತಿಯಲ್ಲಿದೆ.