Kanguva: ರಾಷ್ಟ್ರ ಪ್ರಶಸ್ತಿ ವಿಜೇತ ತಮಿಳು ನಟ ಸೂರ್ಯ(Surya) ಅಭಿನಯದ ‘ಕಂಗುವಾ’(Kanguva) ಸಿನಿಮಾದತ್ತ ಎಲ್ಲರ ದೃಷ್ಟಿ ನೆಟ್ಟಿದೆ. ಸದಾ ಭಿನ್ನ ವಿಭಿನ್ನ ಸಿನಿಮಾಗಳ ಭಾಗವಾಗುವ ಸೂರ್ಯ ಕಂಗುವಾ ಅವತಾರ ಅಭಿಮಾನಿ ಬಳಗದಲ್ಲಿ ಕ್ಯೂರಿಯಾಸಿಟಿ ಹೆಚ್ಚಿಸಿದೆ. ಇದೀಗ ಚಿತ್ರತಂಡ ರಿಲೀಸ್ ಮಾಡಿರೋ ನಯಾ ಪೋಸ್ಟರ್ ನೋಡುಗರ ಕಿಕ್ಕೇರಿಸಿದೆ.
‘ಕಂಗುವಾ’(Kanguva) ನಟ ಸೂರ್ಯ(Surya) ಅಭಿನಯದ ಬಹು ನಿರೀಕ್ಷಿತ ಸಿನಿಮಾ. ʼಸೂರರೈ ಪೋಟ್ರುʼ, ʼಜೈ ಭೀಮ್ʼ ಸಿನಿಮಾ ನಂತರ ಸೂರ್ಯ ಖ್ಯಾತಿ ಹೆಚ್ಚಿದೆ. ಸೂರರೈ ಪೋಟ್ರು ಚಿತ್ರದ ಅದ್ಭುತ ಅಭಿನಯಕ್ಕೆ ನ್ಯಾಶನಲ್ ಅವಾರ್ಡ್ಗೂ ಮುತ್ತಿಕ್ಕಿರುವ ಸೂರ್ಯ ಸಿನಿಮಾಗಳ ಆಯ್ಕೆ, ಲುಕ್ ಎಲ್ಲದರಲ್ಲೂ ವಿಭಿನ್ನತೆ ಕಾಯ್ದುಕೊಂಡಿದ್ದಾರೆ. ಸದ್ಯ ಕಂಗುವಾ ಚಿತ್ರದ ಹೊಸ ಪೋಸ್ಟರ್ ವೈರಲ್ ಆಗಿದ್ದು, ಸೂರ್ಯ ಡ್ಯುಯೆಲ್ ಶೇಡ್, ಲುಕ್ ಕಿಕ್ಕೇರುವಂತೆ ಮಾಡಿದೆ. ಒಂದು ಕಡೆ ಉಗ್ರ ಅವತಾರ ತಾಳಿ, ಶೂರನಂತೆ ನಿಂತರೆ, ಮತ್ತೊಂದು ಕಡೆ ಸ್ಟೈಲಿಶ್ ಅವತಾರದಲ್ಲಿ ಗನ್ ಹಿಡಿದು ರಗಡ್ ನೋಟ ಬೀರಿದ್ದಾರೆ ಸೂರ್ಯ. ಎರಡು ವಿಭಿನ್ನ ಅವತಾರದಲ್ಲಿ ಎದುರು ಬದುರಾದ ಕಂಗುವಾ(Kanguva) ಪೋಸ್ಟರ್ಗೆ ವ್ಹಾರೆವಾ ಎನ್ನುತ್ತಿದ್ದಾರೆ ಅಭಿಮಾನಿಗಳು.
ನಯಾ ಪೋಸ್ಟರ್ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟು ಮಾಡಿದೆ. ಜೊತೆಗೆ ನಿರ್ದೇಶಕ ಶಿವ(Shiva), ಸೂರ್ಯ(Surya) ಕಾಂಬಿನೇಶನ್ ನೋಡುಗರಿಗೆ ಸಖತ್ ಥ್ರಿಲ್ಲ್ ನೀಡಲಿದೆ ಎನ್ನುವು ಸುಳಿವು ಸಿಕ್ಕಿದೆ. ಹಿಂದೆಂದೂ ಕಾಣದ ಅವತಾರ ತಾಳಿರುವ ಸೂರ್ಯ ಪಕ್ಕಾ ಗಲ್ಲಾ ಪೆಟ್ಟಿಗೆಯಲ್ಲಿ ರೆಕಾರ್ಡ್ ಬರೆಯಲಿದ್ದಾರೆ ಅನ್ನೋದು ಪೋಸ್ಟರ್ ನೋಡಿದವರ ಉವಾಚ. ‘ಕಂಗುವಾ’(Kanguva)ದಲ್ಲಿ ಬಿಟೌನ್ ಬೆಡಗಿ ದಿಶಾ ಪಟಾನಿ(Disha Patani) ನಾಯಕಿಯಾಗಿ ನಟಿಸುತ್ತಿದ್ದಾರೆ. ರಾಕ್ಸ್ಟಾರ್ ಖ್ಯಾತಿಯ ಡಿಎಸ್ಪಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಅಕ್ಟೋಬರ್ನಲ್ಲಿ ‘ಕಂಗುವಾ’ ಬಿಡುಗಡೆಯಾಗುತ್ತಿದೆ.